Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕನ್ನಡಿಗರನ್ನು ಕೆಣಕಿದರೆ ಬಿಡುವುದುಂಟೇ: ಫೋನ್ ಪೇ ಸಿಇಒಗೆ ಮಾಡಿದ್ದುಣ್ಣೋ ಮಹರಾಯ ಪರಿಸ್ಥಿತಿ
ಕನ್ನಡಿಗರ ತಾಳ್ಮೆ ಎಂಬುವುದು ಭೂ ತಾಯಿ ರೀತಿ, ತುಂಬಾನೇ ಸಹನೆಯುಳ್ಳವರು ಕನ್ನಡಿಗರು, ಆದರೆ ಕೆರಳಿಸಿದರೆ ಸುಮ್ಮನೆ ಕೂರುವವರಲ್ಲ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಲು ಹೊರಟರೆ ತಕ್ಕ ಶಾಸ್ತಿಯನ್ನೇ ಮಾಡುತ್ತಾರೆ, ಈಗ ಫೋನ್‌ಪೇ ಸಿಇಒ ಸಮಿರ್ ನಿಗಮ್‌ಗೆ ಸರಿಯಾಗಿ ಪಾಠ ಕಲಿಸಿದ್ದಾರೆ, ಮಾಡಿದುಣ್ಣೋ ಮಹರಾಯ ಎಂಬಂತಾಗಿದೆ ಸಮೀರ್ ನಿಗಮ್ ಪರಿಸ್ಥಿತಿ.

ಕನ್ನಡಿಗರ ಮೊಬೈಲ್‌ನಿಂದ ಡಿಲೀಟ್ ಆಗುತ್ತಿದೆ ಫೋನ್‌ಪೇ
ಉದ್ಯಮಿಗಳಿಗೆ ಬೆಳೆಯಲು ಬೆಂಗಳೂರು ಬೇಕು, ಕನ್ನಡಿಗರು ಬೇಕು ಆದರೆ ಕನ್ನಡ ಭಾಷೆ, ಕನ್ನಡಿಗರು ಎಂದರೆ ಮಾತ್ರ ದಿವ್ಯ ನಿರ್ಲಕ್ಷ್ಯ. ಹೀಗಾಗಿಯೇ ಕರ್ನಾಟಕದಲ್ಲಿ ಇದ್ದು ಕನ್ನಡಿಗರು ಕನ್ನಡದ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿ ಬಂದಿದೆ.
ಕನ್ನಡಿಗರು ಈತನ ಮೇಲೆ ಕೋಪಗೊಂಡಿರುವುದೇಕೆ?
ಕನ್ನಡಿಗರಿಗೆ ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ತರಬೇಕು ಎಂದು ರಾಜ್ಯ ಸರ್ಕಾರ ಆಲೋಚನೆ ಮಾಡಿದಾಗ ಕರ್ನಾಟಕದ ಜನರು ಅದನ್ನು ಸ್ವಾಗತಿಸಿದರು, ಆದರೆ ಉದ್ಯಮಗಳ ಒತ್ತಡದಿಂದಾಗಿ ರಾಜ್ಯ ಸರ್ಕಾರ ಈ ಆಲೋಚನೆ ಕೈ ಬಿಟ್ಟಿದ್ದೆ, ಸರ್ಕಾರ ಕನ್ನಡಿಗರಿಗೆ ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ತರುತ್ತಿದೆ ಎಂದು ಕೇಳಿದಾಗ ಸಮೀರ್ ನಿಗಮ್ 'ನನಗೀಗ 46 ವಯಸ್ಸು, ಯಾವ ರಾಜ್ಯದದಲ್ಲಿಯೂ 15 ವರ್ಷಕ್ಕಿಂತ ಹೆಚ್ಚು ಸಮಯ ವಾಸವಾಗಿಲ್ಲ, ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿದ್ದಾರೆ, ಅವರನ್ನು ದೇಶದ ಬೇರೆ-ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದರು, ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ಹುಟ್ಟು ಹಾಕಿದ್ದೇನೆ , ಭಾರತದಾದ್ಯಂತ 25, 000ಕ್ಕೂ ಹೆಚ್ಚಿನ ಉದ್ಯೋಗಿಗಳು ನನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ನನ್ನ ಮಕ್ಕಳು ತವರು ನೆಲದಲ್ಲಿ ಉದ್ಯೊಗ ಪಡೆಯಲು ಅರ್ಹರಲ್ಲವೇ ಎಂದು ಪೋಸ್ಟ್ ಮಾಡಿದ್ದರು.
ಇವರ ಈ ಟ್ವೀಟ್ ಕನ್ನಡಿಗರ ಭಾವನೆಗೆ ನೋವುಂಟು ಮಾಡಿದೆ, ನಿಮ್ಮಿಂದ ನಾವು ಬೆಳೆದಿಲ್ಲ, ನಮ್ಮಿಂದ ನೀವು ಬೆಳೆಯುತ್ತಿದ್ದೀರಿ ಕನ್ನಡಿಗರು ಫೋನ್‌ಪೇ ಆ್ಯಪ್ ಡಿಲೀಟ್ ಮಾಡುತ್ತಿದ್ದಾರೆ.
ಇವರು ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಅದು ಕನ್ನಡಿಗರ ಭಾವನೆಗಳಿಗೆ ಮತ್ತಷ್ಟು ನೋವು ಕೊಟ್ಟಿದೆ. ಯಾರೂ ಇತರರಿಗೆ ಅವಕಾಶವೇ ಇಲ್ಲ ಎಂದು ಹೇಳಿರಲಿಲ್ಲ, ಆದರೆ ಕನ್ನಡಿಗರಿಗೆ ಮೀಸಲಾತಿ ಬೇಕು ಎಂದು ಕೇಳಿದ್ದರ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು ಆಗಿದೆ. ಕಂಪನಿಯ ಉನ್ನತ ಸ್ಥಾನದಲ್ಲಿ ಇರುವವರಲ್ಲಿ ಕೆಲವರಿಗಾದರೂ ಕನ್ನಡ ಭಾಷೆ ಓದಲು ಬರೆಯಲು ಗೊತ್ತಿರಬೇಕು ಎಂದು ಈ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ, ಈ ಕಾರಣದಿಂದ ಆದರೂ ಯುವ ಪೀಳಿಗೆ ಕನ್ನಡ ಕಲಿಕೆ ಕಡೆಗೆ ಆಸಕ್ತಿ ಬೆಳೆಸಬಹುದು.
ಕನ್ನಡಿಗರೇ ಆದರೂ ಕನ್ನಡ ಭಾಷೆ ಬಾರದ ಎಷ್ಟೋ ಮಕ್ಕಳಿದ್ದಾರೆ
ಹೌದು ಎಷ್ಟೋ ಮಕ್ಕಳಿಗೆ ಮಾತೃಭಾಷೆ ಕನ್ನಡವಾಗಿರುತ್ತದೆ, ಆದರೆ ಕನ್ನಡ ಒದಲು, ಬರೆಯಲು ಬರುವುದಿಲ್ಲ. ಮುಂದೆ ಒಳ್ಳೆಯ ಹುದ್ದೆಗೆ ಸೇರಲು ಕನ್ನಡ ಕಲಿಯಲೇಬೇಕೆಂಬ ಅನಿವಾರ್ಯತೆ ಇಲ್ಲ ಹಾಗಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಆದರೆ ಈ ಕಾನೂನು ಜಾರಿಗೆ ಬಂದಿದ್ದೇ ಆದರೆ ಕನ್ನಡ ಕಲಿಯಲು ಮಕ್ಕಳು ಆಸಕ್ತಿ ತೋರಿಸುತ್ತಾರೆ, ಪೋಷಕರು ಕಲಿಸುವ ಶ್ರಮ ಹಾಕುತ್ತಾರೆ, ಹೌದಲ್ವಾ? ಅಲ್ಲಾ ಈ ಮೀಸಲಾತಿ ಬರುತ್ತಿದೆ ಎಂದಾಗ ಈ ಉದ್ಯಮಿಗಳೇಕೆ ಹೀಗೆ ಬೊಬ್ಬೆ ಹಾಕುತ್ತಿದ್ದಾರೆ, ಕನ್ನಡಿಗರಲ್ಲಿ ಕೌಶಲ್ಯಕ್ಕೆ ಕೊರತೆಯೇ? ಸರ್ಕಾರ ಏನು ಮೀಸಲಾತಿ ಹೆಸರಿನಲ್ಲಿ ಕೌಶಲ್ಯ ಇಲ್ಲದವರನ್ನು ತಗೊಳ್ಳಿ ಎಂದು ಹೇಳುತ್ತಿಲ್ಲ, ನಮ್ಮಲ್ಲಿಯೂ ಪ್ರತಿಭಾವಂತರಿದ್ದಾರೆ, ಅವರ ಕೌಶಲ್ಯ ಪರೀಕ್ಷೆ ಮಾಡಿ ನಿಮಗೆ ಬೇಕಾದ ನಿಪುಣರನ್ನು ಆಯ್ಕೆ ಮಾಡಬಹುದು ಅಲ್ಲವೇ?
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ



Click it and Unblock the Notifications