Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರೂಮಿಗೆ ಬಂದ ಚಿರತೆಯನ್ನೇ ಕೂಡಿ ಹಾಕಿದ ಬಾಲಕ..! ಆಮೇಲೆ ಆಗಿದ್ದೇನು ನೋಡಿ..?
ಕಾಡು ಪ್ರಾಣಿಗಳು ಆಹಾರ ಹುಡುಕಿ ನಗರಗಳತ್ತ ಬರುವುದು ಸಾಮಾನ್ಯ ಎನ್ನುವಂತಾಗಿದೆ. ದಶಕಗಳಿಂದ ಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಣಿಗಳು ಹಾಗೂ ಮಾನವರು ಸಾವಿಗೀಡಾಗುತ್ತಾರೆ. ಅದರಲ್ಲೂ ಚಿರತೆ ದಾಳಿಯಿಂದ ಭಾರತದಲ್ಲಿ ಅಸುನೀಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆ ಚಿರತೆಗಳು ನಗರಗಳತ್ತ ಬಂದು ದಾಂಧಲೆ ನಡೆಸುವುದು ಸಹ ಹೆಚ್ಚುತ್ತಿದೆ.
ಚಿರತೆಗಳು ನಗರಗಳತ್ತ ಬಂದಾಗ ಜನ ಮನೆಯಿಂದ ಹೊರಬರದೆ ಬಾಗಿಲು ಭದ್ರ ಮಾಡಿಕೊಳ್ಳುತ್ತಾರೆ. ನೀವಿದ್ದ ಜಾಗಕ್ಕೆ ಚಿರತೆ ಬಂದಿದೆ ಎಂದು ತಿಳಿದರೆ ನೀವು ಭಯ ಭೀತರಾಗಿ ರೂಮಿನೊಳಗೆ ಉಳಿದುಬಿಡುತ್ತೀರಿ. ಇನ್ನೂ ನಿಮ್ಮ ಎದುರಿಗೆ ಬಂದು ಬಿಟ್ಟರೆ ಹೇಗಾಗುತ್ತದೆ.? ಚಿರತೆ ಎದುರು ಬಂದರೆ ಕಿರುಚಾಡಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತೇವೆ. ಆದ್ರೆ ಇಲ್ಲೊಬ್ಬ ಹುಡುಗ ಚಿರತೆ ಬಂದಾಗ ಹೆದರದೆ, ಭಯ ಬೀಳದೆ ಚಿರತೆಗೇ ಬುದ್ಧಿ ಕಲಿಸಿದ್ದಾನೆ.
ಹೌದು ಮಹಾರಾಷ್ಟ್ರದ ಈ 12 ವರ್ಷದ ಹುಡುಗ ರೂಮಿನೊಳಗೆ ಬಂದ ಚಿರತೆಯನ್ನು ಅಲ್ಲಿಯೇ ಕೂಡಿ ಹಾಕಿ ಆಗಬಹುದಾದ ದೊಡ್ಡ ಅನಾಹುತವೊಂದನ್ನು ತಪ್ಪಿಸಿ ಸುದ್ದಿಯಾಗಿದ್ದಾನೆ. ಮಹಾರಾಷ್ಟ್ರದ ಮಾಲೆಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಮಾತುಗಳು ಕೇಳಿಬಂದಿದೆ.

ಅಲ್ಲಿ ನಡೆದಿದ್ದೇನು..?
12 ವರ್ಷದ ಬಾಲಕ ಮೋಹಿತ್ ಅಹಿರೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕುಳಿತಿರುವಾಗ ಎಲ್ಲಿಂದಲೋ ಬಂದ ಚಿರತೆಯೊಂದು ಸೀದಾ ರೂಮಿನೊಳಗೆ ನುಗ್ಗಿಬಿಟ್ಟಿದೆ. ಆ ಬಾಲಕ ಅದೃಷ್ಟ ಚೆನ್ನಾಗಿದ್ದ ಕಾರಣ ಚಿರತೆಯ ಕಣ್ಣಿಗೆ ಆತ ಬೀಳಲೆ ಇಲ್ಲ. ಆದರೆ ಚಿರತೆ ಬರುವುದನ್ನು ಕಂಡ ಬಾಲಕ ಒಂದು ಸ್ವಲ್ಪವೂ ಭಯ ಬೀಳದೆ, ವಿಚಲಿತನಾಗದೆ ಬುದ್ಧಿಗೆ ಕೆಲಸ ಕೊಟ್ಟಿದ್ದಾನೆ.
ಚಿರತೆ ಮುಂದೆ ಹೋಗಿದ್ದನ್ನು ಕಂಡ ಆತ ನಿಧಾನಕ್ಕೆ ಮೊಬೈಲ್ ಕೆಳಗಿಟ್ಟು ರೂಮಿನ ಬಾಗಿಲು ಹಾಕಿ ಅಲ್ಲಿಂದ ಓಡಿದ್ದಾನೆ. ಆಹಾರ ಹುಡುಕಿ ಬಂದಿದ್ದ ಚಿರತೆ ರೂಮಿನಲ್ಲಿ ಬಂಧಿಯಾಗಿದೆ. ಒಂದು ವೇಳೆ ಚಿರತೆ ಬಾಲಕನ ನೋಡಿದ್ದರೆ ಅಲ್ಲೊಂದು ಅನಾಹುತ ನಡೆಯುತ್ತಿತ್ತು. ಇಲ್ಲವೇ ಚಿರತೆ ನೋಡಿದ ಭಯದಲ್ಲಿ ಬಾಲಕ ಚೀರಿಕೊಂಡು ಓಡಿ ಹೋಗಿದ್ದರೂ ಚಿರತೆ ಪರಾರಿಯಾಗಿ ದಾಳಿ ಮಾಡುತ್ತಿತ್ತು. ಇಲ್ಲವೆ ಸಿಕ್ಕ ಸಿಕ್ಕವರ ಮೇಲೆ ಎರಗಿ ಒಂದಿಷ್ಟು ರಂಪ ಮಾಡುತ್ತಿತ್ತು. ಆದ್ರೆ ಬಾಲಕನ ಧೈರ್ಯ ಮತ್ತು ಬುದ್ಧಿವಂತಿಕೆಗೆ ಚಿರತೆ ಸಿಲುಕಿ ಲಾಕ್ ಆಗಿತ್ತು.
ರೂಮಿಯಲ್ಲಿ ಯಾರಿದ್ದರು..?
ರೂಮಿನಲ್ಲಿ ಚಿರತೆ ಕೂಡಿ ಹಾಕುವಾಗ ಹಲವರಿಗೆ ಅನಿಸಿರಬಹುದು ರೂಮಿನಲ್ಲಿದ್ದ ಬೇರೆಯವರ ಕಥೆ ಏನಾಗಿದೆ ಎಂದು. ಆದ್ರೆ ಈ ರೂಮಿನಲ್ಲಿ ಬೇರೆ ಯಾರು ಇರಲೇ ಇಲ್ಲ. ಆ ಬಾಲಕನೊಬ್ಬನೇ ಅಲ್ಲಿ ಕುಳಿತು ಮೊಬೈಲ್ ಬಳಸುತ್ತಿದ್ದ. ಅಸಲಿಗೆ ಇದೊಂದು ಮದುವೆ ಹಾಲ್ ಪಕ್ಕದಲ್ಲಿದ್ದ ಸೆಕ್ಯೂರಿಟಿ ಲಾಕ್ ರೂಮ್ ಆಗಿತ್ತು. ಅಲ್ಲಿ ಈ ಬಾಲಕನ ತಂದೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ರೂಮಿನಲ್ಲಿ ಯಾರು ಇಲ್ಲದನ್ನು ಅರಿತುಕೊಂಡೇ ಬಾಲಕ ಈ ಚಾಣಾಕ್ಯ ನಡೆ ಇಟ್ಟಿದ್ದ.
ಬಳಿಕ ಚಿರತೆ ಏನಾಯಿತು?
ಆಹಾರ ಹುಡುಕಿ ಬಂದು ರೂಮಿನಲ್ಲಿ ಸಿಲುಕಿದ ಚಿರತೆ ಅತ್ತಿತ್ತ ತಿರುಗಾಡಿದೆ. ಹೊರ ಹೋಗಲು ದಾರಿ ಹುಡುಕಿದೆ. ಆದರೆ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು 5 ವರ್ಷದ ಈ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಆ ಬಾಲಕನ ಕಾರ್ಯದಿಂದ ದೊಡ್ಡ ಅನಾಹುತವೇ ತಪ್ಪಿದಂತಾಯಿತು.



Click it and Unblock the Notifications
