Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲಿ ಯಾರಾದ್ರು ಮರಣ ಹೊಂದಿದ್ರೆ ತಡವಾಗಿ ಬರಬಹುದು ಅಪಘಾತವಾದ್ರೆ ಅಲ್ಲ: ಮ್ಯಾನೇಜರ್ ಮೆಸೇಜ್..!!
ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಕೆಲಸದ ಒತ್ತಡ ಸಂಬಂಧ ಹತ್ತು ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ಕೆಲಸದ ಸ್ಥಳದಲ್ಲಿನ ಒತ್ತಡ ಹಾಗೂ ರಜೆಗಾಗಿ ಕೆಲಸಗಾರರು ಮಾಡೋ ಸಾಹಸಗಳ ನಾವು ನೋಡಿದ್ದೇವೆ. ಇನ್ನೊಂದು ಕಡೆ ಲೇ ಆಫ್‌ಗಳ ಸುದ್ದಿ ಕೂಡ ನಾವು ಕೇಳುತ್ತಲೇ ಇದ್ದೇವೆ.
ಅದರಲ್ಲೂ ಕಾರ್ಪೋರೇಟ್ ಕಂಪನಿಗಳು 14 ಗಂಟೆ ಕೆಲಸ, ಭಾನುವಾರವೂ ಕೆಲಸದಂತಹ ವಿಪರೀತ ನಿಯಮಗಳ ರೂಪಿಸುವುದು. ರಜೆಯ ಸಮಯದಲ್ಲು ಮೀಟಿಂಗ್, ಮದುವೆಯುಲ್ಲೂ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿಸುವುದು ಇಂತಹ ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ.

ಈಗ ಇದೆ ರೀತಿ ಇನ್ನೊಂದು ಘಟನೆ ಎಲ್ಲರಲ್ಲೂ ಆಘಾತ ಮೂಡಿಸುತ್ತಿದೆ. ನೀವು ಆಫಿಸ್‌ಗೆ ತಡವಾಗಿ ಬರಲು ಒಂದು ಕಾರಣ ಇದ್ದೇ ಇರುತ್ತೆ. ಇಲ್ಲೊಬ್ಬ ಕೂಡ ಆಫಿಸ್‌ಗೆ ಬರುವಾಗ ಕಾರು ಅಪಘಾತವಾಗಿದೆ. ಹೀಗಾಗಿ ಆತ ಆಫಿಸ್‌ಗೆ ತಡವಾಗಿ ಬರುವುವುದಾಗಿ ತನ್ನ ಮ್ಯಾನೇಜರ್‌ಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾನೆ. ಆದ್ರೆ ಮ್ಯಾನೇಜರ್ ಇದೊಂದು ಕಾರಣದಿಂದ ತಡವಾಗಿ ಬರುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳದ್ದಾನೆ.
ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆತ ಮನೆಯಲ್ಲಿ ಯಾರಾದರಿ ಮರಣ ಹೊಂದಿದ್ದರೆ ಮಾತ್ರ ತಡವಾಗಿ ಆಫಿಸ್‌ಗೆ ಬರಬಹುದು ಎಂದು ಕಹಿಯಾಗಿ ಮೆಸೇಜ್ ಮಾಡಿದ್ದಾನೆ. ಈ ಸಂದೇಶವನ್ನು ಉದ್ಯೋಗಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಮ್ಯಾನೇಜರ್ ನಿಮಗೆ ಈ ರೀತಿ ಹೇಳಿದರೆ ನೀವು ಏನು ಮಾಡುತ್ತೀರಿ ಎಂದು ಎಕ್ಸ್ (ಟ್ವಿಟರ್)ನಲ್ಲಿ ಬರೆದು ಈ ಪೊಸ್ಟ್ ಹಂಚಿಕೊಳ್ಳಲಾಗಿದೆ.
ತಡವಾಗಿ ಬರಲು ಅಪಘಾತದ ಕಾರಣ ನೀಡುವಂತಿಲ್ಲ, ಮನೆಯಲ್ಲಿ ಯಾರಾದರು ಮರಣ ಹೊಂದಿದರೆ ಮಾತ್ರವೇ ನೀವು ತಡವಾಗಿ ಬರಬಹುದು ಎಂಬುದು ಆತನ ಸಂದೇಶದ ಸಾರಾಂಶವಾಗಿದೆ. ಇದನ್ನು ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಕಂಪನಿಗಳ ಇಷ್ಟೊಂದು ಕಠೋರ ಮಾತುಗಳು ನಿಜಕ್ಕೂ ಶಾಕಿಂಗ್ ಆಗಿದೆ.
ಈ ಪೋಸ್ಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ, ಕಾರ್ಪೋರೇಟ್ ಕಂಪನಿಗಳ ವರ್ಕ್ ಕಲ್ಚರ್ ಕುರಿತಂತೆ ದೊಡ್ಡ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಯಾರಾದರು ಮರಣ ಹೊಂದಿದ್ದರೂ ಈ ಕಂಪನಿಗಳು ಮುಂದೊಂದು ದಿನ ರಜೆ ನೀಡುವುದಿಲ್ಲ, ನೀಡಿದರೂ ಆ ದಿನದ ವೇತನ ಕಡಿತ ಮಾಡುವ ನಿಯಮ ಜಾರಿ ಮಾಡಿದರೂ ಮಾಡಿಯಾವು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಅಪಘಾತವಾದಾಗಲು ಒಂದು ದಿನ ರಜೆ ಕೊಡದಿರುವ ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದೇ ದೊಡ್ಡ ಅಪರಾಧ ನೀವು ಅಲ್ಲಿಂದ ಹೊರಬರುವುದು ಬಹಳ ಉತ್ತಮ, ನಾನಾಗಿದ್ದರೆ ರಾಜೀನಾಮೆ ಪತ್ರವನ್ನ ಅಂದೇ ಕಳುಹಿಸುತ್ತಿದ್ದ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಎಲ್ಲಾ ಕಂಪನಿಲ್ಲೂ ಒಂದೇ ರೀತಿಯ ಮ್ಯಾನೇಜರ್ ಇರುತ್ತಾರೆ ಎಂದೇನು ಇಲ್ಲ. ಕೆಲವರು ಎಲ್ಲವನ್ನೂ ತಿಳಿದು ಉದ್ಯೋಗಿಗಳ ಹಿತ ಕಾಪಾಡುತ್ತಾರೆ. ಆದ್ರೆ ಇಂತಹ ಕೆಟ್ಟ ಪರಿಸರದಲ್ಲಿ ಕೆಲಸ ಮಾಡುವುದಾದರು ಹೇಗೆ ಎಂದು ಮೂರನೇ ವ್ಯಕ್ತಿ ಬರೆದುಕೊಂಡಿದ್ದಾರೆ.



Click it and Unblock the Notifications
