Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆ ಗೇಟ್ ಹಾರಿ ಒಳಬಂದ ಕರಿಚಿರತೆ..! ವಿಡಿಯೋ ನೋಡಿ ನೆಟ್ಟಿಗರು ಶಾಕ್..!
ನಾವು ಕರಿ ಚರತೆಯನ್ನು ಮೊದಲು ಜಂಗಲ್ ಬುಕ್ ಸರಣಿಯ ಸಿನಿಮಾದಲ್ಲೋ ಇಲ್ಲ ಕಾರ್ಟೂನ್‌ನಲ್ಲೋ ನೋಡಿದ್ದೆವು. ಆದ್ರೆ ಇತ್ತೀಚಿಗೆ ರಾಜ್ಯದ ನಾಗರಹೊಳೆ ನ್ಯಾಷನಲ್ ಪಾರ್ಕ್‌ನಲ್ಲಿ ಕಂಡು ಇಡೀ ದೇಶ ರಾಜ್ಯದತ್ತ ತಿರುಗಿ ನೋಡಿತ್ತು. ಕರಿ ಚಿರತೆ ಎಷ್ಟು ಸುಂದರವಾಗಿ ಕಂಡಿತೆಂದರೆ ನೋಡುಗರ ಮನ ಸೆಳೆದಿತ್ತು. ಇದಾದ ಬಳಿಕ ಹಲವು ರಾಜ್ಯದಲ್ಲೂ ಕರಿ ಚಿರತೆಗಳು ಕಂಡುಬಂದಿದ್ದವು.
ಆದರೆ ಭಾರತದ ಮಟ್ಟಿಗೆ ಕರಿ ಚಿರತೆಗಳು ಬಲು ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳಾಗಿವೆ. ಇವುಗಳ ಸಂಖ್ಯೆ ಸಹ ಕೇವಲ ಬೆರಳೆಣಿಯಷ್ಟೇ ಇವೆ. ಹೀಗಾಗಿ ಇವು ಕಂಡರೆ ಪರಿಸರ ಪ್ರೇಮಿಗಳು, ಸಂಶೋದಕರು ಅವುಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಆದ್ರೆ ಇಲ್ಲೊಂದು ಕಡೆ ಕರಿ ಚಿರತೆಯೊಂದು ಮನೆಯ ಗೇಟ್ ಹಾರಿ ಒಳಗೆ ಬಂದುಬಿಟ್ಟಿದೆ. ಹೌದು ಸಾಮಾನ್ಯವಾಗಿ ಕಂದು ಬಣ್ಣದ ಚಿರತೆಗಳು ಆಗಾಗ ನಗರ ಪ್ರದೇಶಗಳಿಗೆ ದಾಳಿ ಇಟ್ಟು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಕರಿ ಚಿರತೆಯೊಂದು ಆಹಾರ ಹುಡುಕಿ ನಗರದತ್ತ ಬಂದಿರುವುದು ಬಲು ಅಪರೂಪದ ಘಟನೆಯಾಗಿದೆ.
ತಮಿಳುನಾಡಿನ ನೀಲಗಿರಿಯ ಕೂನೂರ್ ಬಳಿಯ ದೃಶ್ಯ ಇದಾಗಿದ್ದು ವಿಡಿಯೋದಲ್ಲಿ ಕರಿ ಚಿರತೆಯೊಂದು ಗೇಟ್ ಹಾರಿ ಒಳಬರುತ್ತಿರುವುದನ್ನು ನೋಡಬಹುದು. ಈ ಕರಿಚಿರತೆಯು ಮಧ್ಯಮ ವಯಸ್ಸಿನಂತೆ ಕಂಡುಬರುತ್ತಿದ್ದು, ಗಾತ್ರದಲ್ಲಿ ದೊಡ್ಡದಾಗಿದೆ. ಆಹಾರ ಹುಡುಕಿ ಅದು ಮನೆಯ ಗೇಟ್ ಹಾರಿ ಬರುತ್ತಿರುವುದು ವಿಡಿಯೋದಲ್ಲಿ ಸರೆಯಾಗಿದೆ.

ಎಕ್ಸ್ ಬಳಕೆದಾರ ಕಿಶೋರ್ ಚಂದ್ರನ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನೀಲಗಿರಿಯ ಕೂನೂರ್ ಬಳಿಯ ಮನೆಗೆ ಯಾರು ಮೌನವಾಗಿ ಪ್ರವೇಶಿಸುತ್ತಿದ್ದಾರೆಂದು ನೋಡಿ" ಎಂದು ಅವರು ಕ್ಲಿಪ್ ಅನ್ನು ಪೋಸ್ಟ್ ಮಾಡುವಾಗ ಬರೆದುಕೊಂಡಿದ್ದಾರೆ. ಮನೆಯ ಅಂಗಳದಲ್ಲಿ ಕರಿ ಚಿರತೆ ಓಡಾಡುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ನೋಡುಗರ ಅಚ್ಚರಿಯ ಜೊತೆಗೆ ಭಯಕ್ಕೂ ಕಾರಣವಾಗಿದೆ.
ಕರಿಚಿರತೆ ನೋಡಲೆಂದು ದೂರದ ಊರಿನಿಂದ ರಾಷ್ಟ್ರೀಯ ಉದ್ಯಾನವನಗಳಿಗೆ ಸಫಾರಿಗೆ ಬರುತ್ತಾರೆ. ಹೀಗೆ ಬಂದರೂ ಕರಿ ಚಿರತೆ ಕಣ್ಣಿಗೆ ಬೀಳುವುದು ಬಲು ಅಪರೂಪ. ಒಂದು ವೇಳೆ ಕರಿ ಚಿರತೆ ಕಂಡರೆ ಅವರೇ ಅದೃಷ್ಟವಂತರು. ಆದ್ರೆ ಇಲ್ಲಿ ಮನೆ ಅಂಗಳಕ್ಕೆ ಕರಿ ಚಿರತೆ ಅತಿಥಿಯಂತೆ ಆಗಮಿಸಿದೆ. ಈ ವಿದ್ಯಮಾನ ಕಂಡು ನೆಟ್ಟಿಗರು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಹಂಚಿಕೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವೆ ಗಂಟೆಯಲ್ಲಿ ಈ ವಿಡಿಯೋ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಕರಿ ಚಿರತೆ ಕಂಡ ನೆಟ್ಟಿಗರು ಸಂತಸದ ಜೊತೆ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಜಂಗಲ್‌ಬುಕ್‌ನಲ್ಲಿ ಕಾಣುವ ಬಘೀರಾನಂತೆ ಗಾಂಭೀರ್ಯ ಹೆಜ್ಜೆ ಹಾಕಿರುವ ಕರಿ ಚಿರತೆಗೆ ಮನಸೋತಿದ್ದಾರೆ.
ರಾಜ್ಯದಲ್ಲೇ ಹೆಚ್ಚಿವೆ ಕರಿ ಚಿರತೆ
ಇನ್ನು ನಮ್ಮ ರಾಜ್ಯದಲ್ಲಿ ಕರಿ ಚಿರತೆಗಳ ಸಂಖ್ಯೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ತಜ್ಞರ ಪ್ರಕಾರ ದಾಂಡೇಲಿ ಅರಣ್ಯದಲ್ಲೇ ಸುಮಾರು 10ಕ್ಕೂ ಹೆಚ್ಚು ಕರಿ ಚಿರತೆಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಹೊರತುಪಡಿಸಿ ನಾಗರಹೊಳೆ, ಬಂಡೀಪುರ, ಕಬಿನಿ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲೂ ಇವೆ ಎಂದು ನಂಬಲಾಗಿದೆ. ಆದರೆ ನಿಖರ ಸಂಖ್ಯೆಗಳು ಮಾತ್ರ ಲಭ್ಯವಾಗಿಲ್ಲ.
ಕಳೆದ ಏಪ್ರಿಲ್‌ನಲ್ಲಿ ಸೆರೆಯಾಗಿತ್ತು ಕರಿ ಚಿರತೆ
ಕಳೆದ ವರ್ಷ ಏಪ್ರಿಲ್‌ನಲ್ಲಿ ಹೊನ್ನಾವರದಲ್ಲಿ ಕರಿ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸರೆಹಿಡಿದಿದ್ದರು. ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಕರಿ ಚಿರತೆಯನ್ನು ಹಿಡಿದು ಬಳಿಕ ಅರಣ್ಯಕ್ಕೆ ಬಿಡಲಾಗಿತ್ತು. ಈ ಚಿರತೆ ಆಹಾರಕ್ಕಾಗಿ ಸಾಕು ನಾಯಿ, ಹಸುಗಳ ಮೇಲೆ ದಾಳಿ ಮಾಡುತ್ತಿತ್ತು. ಬರೋಬ್ಬರಿ 3 ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಇದು ಕಾರಣವಾಗಿತ್ತು.



Click it and Unblock the Notifications
