ವರ್ತೂರ್‌ ಸಂತೋಷ್‌ ಮನವೊಲಿಸಲು ಬಿಗ್‌ಬಾಸ್‌ ಅಷ್ಟೊಂದು ಪ್ರಯತ್ನಿಸುತ್ತಿರುವುದಕ್ಕೆ ಬರೀ ವೋಟ್‌ ಮಾತ್ರ ಕಾರಣವಲ್ಲ!

ನೆನ್ನೆಯಿಂದ ಬಿಗ್‌ಬಾಸ್‌ನಲ್ಲಿ ತುಂಬಾನೇ ಗಮನಸೆಳೆಯುತ್ತಿರುವ ಸ್ಪರ್ಧಿಯೆಂದರೆ ಅದು ವರ್ತೂರ್ ಸಂತೋಷ್. ಎಲಿಮಿನೇಷನ್ ಲಿಸ್ಟ್‌ನಲ್ಲಿದ್ದ ಸಂತೋಷ್ ಅವರಿಗೆ ಸುದೀಪ್ ಅವರು ಈ ವಾರ ನೀವು ಸೇಫ್‌ ಎಂದು ಹೇಳುತ್ತಿದ್ದಂತೆ ಸುದೀಪ್‌, ಬಿಗ್‌ಬಾಸ್‌ ಯಾರೂ ಊಹಿಸಿರದ ಘಟನೆ ನಡೆಯಿತು. ವರ್ತೂರ್ ಅವರು ನನಗೆ ಈ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಹೊರಗಡೆಯಾದ ಘಟನೆಯಿಂದಾಗಿ ಆಟದ ಕಡೆ ಮನಸ್ಸು ಕೊಡಲಾಗುತ್ತಿಲ್ಲ ಎಂದಾಗ ಸುದೀಪ್ ಅವರು ವರ್ತೂರ್ ಅವರ ಮನವೊಲಿಸಲು ಪ್ರಯತ್ನಿಸಿದರು.

Biggboss Season 10 Kannada

8ನೇ ಸೀಸನ್‌ನಲ್ಲೂ ಸ್ಪರ್ಧಿಯೊಬ್ಬರು ನಾನು ಮನೆಯಿಂದ ಹೊರಗಡೆ ಹೋಗಬೇಕೆಂದು ಇಚ್ಚಿಸುತ್ತೇನೆ ಎಂದಾಗ ಅವರಿಗೆ ಅವರು ಮಾಡುತ್ತಿರುವುದು ತಪ್ಪು ಎಂದು ತಿಳಿಸಿ ನಂತರ ಅವರನ್ನು ಕಳುಹಿಸಿಕೊಡಲಾಗಿತ್ತು, ಆದರೆ ಈ ಸೀಸನ್‌ನಲ್ಲಿ ವರ್ತೂರ್‌ ಅವರು ನಾನು ಹೊರಗಡೆ ಹೋಗಬೇಕೆಂದಾಗ ಸುದೀಪ್‌ ಅವರು ನಿಮ್ಮನ್ನು ಜನರು ಎಷ್ಟೊಂದು ಇಷ್ಟಪಡುತ್ತಿದ್ದಾರೆ ಎಂದು ತಿಳಿಸಲು ಒಂದೇ ದಿನದಲ್ಲಿ ಅವರಿಗೆ ಬಂದ ಒಟ್ಟು ವೋಟ್‌ ಸಂಖ್ಯೆ ಕೂಡ ಹೇಳಿದರು. ಆ ಸಂಖ್ಯೆ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿತ್ತು, ಅಲ್ಲದೆ ನೀವಂದುಕೊಂಡತೆ ಹೊರಗಡೆ ಏನೂ ನಡೆಯುತ್ತಿಲ್ಲ, ಆರಾಮವಾಗಿ ಆಡಿ, ನಿಮ್ಮ ಮನೆಯವರ ಜೊತೆಗೆ ಬಿಗ್‌ಬಾಸ್‌ ಟೀಂ ಟಚ್‌ನಲ್ಲಿದ್ದಾರೆ, ನಿಮ್ಮ ಕಡೆಯವರು ಎಲ್ಲರೂ ಚೆನ್ನಾಗಿಯೇ ಇದ್ದಾರೆ ಎಂದು ಹೇಳಿ ವರ್ತೂರ್‌ ಅವರಿಗೆ ಸಮಧಾನ ಮಾಡಲು ಪ್ರಯತ್ನಿಸಿದರು.

ಬಿಗ್‌ಬಾಸ್‌ ಸ್ಪರ್ಧಿಗಳು ಹೇಳಿದರೂ ಮನೆಬಿಟ್ಟು ಹೋಗುತ್ತೇನೆ ಎಂದು ಕುಳಿತಿರುವ ಮನವೊಲಿಸಲು ಭಾಗ್ಯರನ್ನು ಕಳುಹಿಸಿದ ಬಿಗ್‌ಬಾಸ್‌
ಇಂದಿನ ಪ್ರೊಮೋದಲ್ಲಿ ಭಾಗ್ಯಾಳಾಗಿ ಈಗ ಮನೆಮಾತಾಗಿರುವ ಸೀರಿಯಲ್ ನಟಿ ಸುಷ್ಮಿತಾ ಅವರನ್ನು ಕೂಡ ಮನೆಯೊಳಗಡೆ ಕಳುಹಿಸಿದ್ದಾರೆ. ಅವರು ಬಂದು ವರ್ತೂರ್‌ ಅವರಿಗೆ ಮನವೊಲಿಸುವ ಪ್ರಯತ್ನ ಮಾಡುವುದನ್ನು ಕಾಣಬಹುದು.

ವರ್ತೂರ್ ಸಂತೋಷ್‌ ಅಮ್ಮ ಬಿಗ್‌ಬಾಸ್‌ ಮನೆಯಲ್ಲಿ!
ಯಾರು ಹೇಳಿದರೂ ಏನನ್ನೂ ಕೇಳುವ ಸ್ಥಿತಿಯಲ್ಲಿ ವರ್ತೂರ್ ಸಂತೋಷ್ ಇಲ್ಲ, ಮನಸ್ಸಿನಲ್ಲಿ ಅವರು ತುಂಬಾ ಕುಗ್ಗಿ ಹೋಗಿದ್ದಾರೆ ಎಂದರ್ಥ ಬಿಗ್‌ಬಾಸ್ ಅವರ ತಾಯಿಯನ್ನೇ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಹಬ್ಬಕ್ಕೆ ಎಲ್ಲಾ ಸ್ಪರ್ಧಿಗಳ ಮನೆಯಿಂದ ಅಡುಗೆ ಕಳುಹಿಸಿಕೊಡಲಾಗಿತ್ತು, ಆದರೆ ವರ್ತೂರ್ ಸಂತೋಷ್‌ ಅವರಿಗೆ ಬಾಕ್ಸ್ ಬಂದಿರುವುದಿಲ್ಲ, ಮೊದಲೇ ದುಃಖದಲ್ಲಿದ್ದ ಸಂತೋಷ್ ಅಳಲಾರಂಭಿಸುತ್ತಾರೆ, ಆವಾಗ ಡೋರ್ ಓಪನ್ ಆಗುತ್ತೆ, ನೋಡಿದರೆ ಸಂತೋಷ್ ಅವರ ತಾಯಿ, ಇದನ್ನು ನೋಡಿ ವರ್ತೂರ್ ಅವರಿಗೆ ತುಂಬಾನೇ ಖುಷಿಯಾಗುತ್ತದೆ. 'ನನ್ನ ಆಸೆ ನೆರವೇರಿಸುತ್ತಾನೆ ನನ್ನ ಮಗ, ನಾನು ಅದೊಂದು ರಿಕ್ವೆಸ್ಟ್ ಮಾಡುತ್ತಿದ್ದೇನೆ, ನನ್ನ ಮಗನನ್ನ' ಎಂಬ ಮಾತನ್ನು ಆಡುತ್ತಾರೆ, ಇಷ್ಟೆಲ್ಲಾ ಆದ ಮೇಲೆ ವರ್ತೂರ್ ಅವರು ಮನೆಯಿಂದ ಹೊರನಡೆಯವ ಮನಸ್ಸು ಮಾಡಲ್ಲ ಎಂದು ವೀಕ್ಷಕರು ಭಾವಿಸುತ್ತಿದ್ದಾರೆ.

ವರ್ತೂರ್‌ ಅವರನ್ನು ಮನೆಯಲ್ಲಿ ಇರಿಸಲು ಬಿಗ್‌ಬಾಸ್‌ ಇಷ್ಟೊಂದು ಪ್ರಯತ್ನಿಸುತ್ತಿರುವುದೇಕೆ?
ರೈತನ ಮಗ ವರ್ತೂರ್ ಸಂತೋಷ್‌ ಮನೆಯೊಳಗಡೆಯೇ ಇರಬೇಕೆಂಬ ಆಸೆ ವೀಕ್ಷಕರಿಗೂ ಇದೆ, ಅದಕ್ಕೆ ಅವರಿಗೆ ಸಿಕ್ಕ ವೋಟ್‌ಗಳೇ ಸಾಕ್ಷಿ, ಆದರೆ ಬಿಗ್‌ಬಾಸ್‌ ಕೂಡ ಈ ವಾರ ಸಂತೋಷ್‌ ಅವರನ್ನು ಕಳುಹಿಸಿಕೊಡಲು ಇಷ್ಟಪಡುತ್ತಿಲ್ಲ, ಅದಕ್ಕೆ ಸುದೀಪ್‌ ಅವರು ಕೊಟ್ಟ ಕಾರಣ ಇಷ್ಟೊಂದು ಲಕ್ಷ ಜನ ನಿಮಗೆ ವೋಟ್‌ ಹಾಕಿದಾಗ ಅವರ ಅಭಿಪ್ರಾಯ ತಿರಸ್ಕರಿಸಲು ನಮಗೆ ಆಗಲ್ಲ ಎಂಬುವುದಾಗಿತ್ತು, ಒಂದು ಕಡೆಯಿಂದ ಅದು ಸತ್ಯವಾದರೂ ವೀಕ್ಷಕರು ಅಷ್ಟೇ ಅಲ್ಲ ಬಿಗ್‌ಬಾಸ್‌ಗೂ ವರ್ತೂರ್‌ ಅವರನ್ನು ಉಳಿಸಿಕೊಳ್ಳುವ ಇಚ್ಛೆ ತುಂಬಾನೇ ಇದೆ , ಅದು ಅವರು ಮಾಡಿರುವ ಪ್ರಯತ್ನಗಳಿಂದಲೇ ತಿಳಿಯುತ್ತದೆ.

ಬಿಗ್‌ಬಾಸ್‌ಗೆ ಪಶ್ಚಾತಾಪವಾಗಿತ್ತೇ?
ಇದುವರೆಗೆ ಬಿಗ್‌ಬಾಸ್‌ ಇತಿಹಾಸದಲ್ಲಿಯೇ ನಡೆದಿರದ ಘಟನೆ ಕನ್ನಡ ಬಿಗ್‌ಬಾಸ್‌ನಲ್ಲಿ ನಡೆದಿತ್ತು. ವರ್ತೂರ್ ಸಂತೋಷ್ ಅವರು ಹುಲಿ ಉಗುರು ಬಳಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬಿಗ್‌ಬಾಸ್‌ ಮನೆಯಿಂದಲೇ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಲಾಯ್ತು. ಇದು ಬಿಗ್‌ಬಾಸ್‌ ಬಳಗಕ್ಕೆ, ಸುದೀಪ್ ಅವರಿಗೆ ಹಾಗೂ ವೀಕ್ಷಕರಿಗೆ ತುಂಬಾನೇ ಬೇಸರವಾಯ್ತು. ಜನರು ಕೂಡ ಸಂತೋಷ್‌ ಬಿಗ್‌ಬಾಸ್‌ ಮನೆಗೆ ಹೋಗಿರಲಿಲ್ಲ ಎಂದರೆ ಈ ಕೇಸ್‌ ಬೀಳುತ್ತಿರಲಿಲ್ಲ, ಎಷ್ಟೊಂದು ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಕಿಕಂಡಿದ್ದರು, ಆದರೆ ಪಾಪ ಇವರನ್ನು ಮಾತ್ರ ಅರೆಸ್ಟ್‌ ಮಾಡಲಾಯ್ತು ಅಂತ ಅನುಕಂಪ ತೋರಿಸಿದರು. ವರ್ತೂರ್‌ಗೆ ಈ ಸಂದರ್ಭದಲ್ಲಿ ಸಿಕ್ಕ ಜನಬೆಂಬಲದಿಂದಾಗಿ ಅರಣ್ಯ ಅಧಿಕಾರಿಗಳೇ ಪೇಚಿಗೆ ಸಿಲುಕಿಕೊಂಡರು... ಇತರರನ್ನು ಬಿಟ್ಟು ಬರೀ ಸಂತೋಷ್ ಅವರನ್ನು ಮಾತ್ರ ಅರೆಸ್ಟ್ ಮಾಡಿದ್ದಕ್ಕೆ ಸಾಕಷ್ಟು ಟ್ರೋಲ್‌ ಮಾಡಿ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದರು. ವರ್ತೂರ್ ಅವರನ್ನು ಜಾಮೀನು ಮೂಲಕ ಬಿಡಿಸಿಕೊಂಡು ಬಂದಾಗ ಮತ್ತೆ ಬಿಗ್‌ಬಾಸ್‌ಗೆ ಬರುವ ಅವಕಾಶ ನೀಡಲಾಯ್ತು.

ಬಿಗ್‌ಬಾಸ್‌ ನಿಯಮ ವರ್ತೂರ್‌ ಅವರ ಮೇಲೆ ಹಾಕಲಿಲ್ಲ
ಒಬ್ಬ ವ್ಯಕ್ತಿ ಬಿಗ್‌ಬಾಸ್‌ ಮನೆಯಿಂದ ಹೊರಹೋದ ಮೇಲೆ 24 ಗಂಟೆಯೊಳಗೆ ಮನೆಯೊಳಗಡೆ ಬರದಿದ್ದರೆ ಅವರಿಗೆ ಮತ್ತೆ ಬಿಗ್‌ಬಾಸ್‌ ಮನೆಗೆ ಬರುವ ಅವಕಾಶವಿಲ್ಲ ಎಂಬ ಬಿಗ್‌ಬಾಸ್‌ ನಿಯಮಿವಿದೆ, ಆದರೆ ವರ್ತೂರ್‌ ಅವರನ್ನು ಮನೆಯೊಳಗಡೆ ಬಿಡಲಾಯ್ತು, ನಮ್ಮ ಶೋಗೆ ಬಂದು ಒಬ್ಬ ವ್ಯಕ್ತಿ ಈ ರಿತಿ ಆಯ್ತಾಲ್ಲ ಎಂದು ಅವರಿಗೆ ಒಂದು ವಾರ ಹೊರಗಡೆ ಇದ್ದರೂ ಮನೆಯೊಳಗಡೆಗೆ ಅವಕಾಶ ನೀಡಲಾಯ್ತು.

ವರ್ತೂರ್‌ ಅವರಿಗೆ ಹೆಚ್ಚಾದ ಜನ ಬೆಂಬಲ
ಇದಿಗ ವರ್ತೂರ್‌ ಅವರನ್ನು ಮೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಅಲ್ಲದೆ ಈ ರೀತಿ ಕುಗ್ಗಿಹೋಗಿ ವರ್ತೂರ್ ಅವರು ಮನೆಯಿಂದ ಹೊರಗಡೆ ಹೋಗುವುದು ಬಿಗ್‌ಬಾಸ್‌ಗೆ ಇಷ್ಟವಿಲ್ಲ ಕಾಣುತ್ತೆ, ಹೀಗಾಗಿ ಅವರನ್ನು ಅಷ್ಟೊಂದು ಮನವೊಲಿಸುತ್ತಾ ಇರಬಹುದು.

English summary

Biggboss Season 10 Kannada: This This Reason Biggboss Is Forcing Varthur Santhosh To Stay Back At Biggboss

Biggboss Season 10 Kannada: These are the two reason biggboss is not letting Varthur Santhosh to go from biggboss, read on....
X
Desktop Bottom Promotion