Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸ್ಟ್ರಾಂಗ್ ಸ್ಟ್ರಾಂಗ್ ಅಂತ ಈ ಗುಣಗಳಿಂದಲೇ ವೀಕ್ ಆಗುತ್ತಿದ್ದಾರೆಯೇ ವಿನಯ್?
ಆನೆ..... ಆನೆ ಎಂಬ ಭ್ರಮೆಯಲ್ಲಿಯೇ ವಿನಯ್ ಕಳೆದುಹೋಗುತ್ತಿದ್ದಾರೆಯೇ? ಇಂಥದ್ದೊಂದು ಸಂಶಯ ಬಿಗ್‌ಬಾಸ್ ವೀಕ್ಷಕರನ್ನು ಕಾಡುತ್ತಿದೆ. ದೈಹಿಕವಾಗಿ ಸಮರ್ಥವಾಗಿರುವ ವಿನಯ್ ತಮ್ಮ ವರ್ತನೆಯ ಮೂಲಕ ದುರ್ಬಲ ಸ್ಪರ್ಧಿಯಾಗುತ್ತಿದ್ದಾರೆಯೇ? ವಿನಯ್ ಆಟವನ್ನು ಇಷ್ಟಪಡದವರ ಸಂಖ್ಯೆ ಹೆಚ್ಚಾಗುತ್ತಿದೆಯೇ? ಹೀಗೊಂದು ಡೌಟು ಸಾಮಾಜಿಕ ತಾಣದಲ್ಲಿ ಬರುತ್ತಿರುವ ಕಮೆಂಟ್‌ಗಳನ್ನು ನೋಡಿದಾಗ ಯಾರಿಗಾದರೂ ಅನಿಸುವುದು.

ಹೆಣ್ಣು ಮಕ್ಕಳೆಂದರೆ ವಿನಯ್‌ಗೆ ಅಷ್ಟೊಂದು ಸದರವೇ?
ವಿನಯ್ ವರ್ತನೆ ನೋಡಿದಾಗ ಅವರಿಗೆ ಹೆಣ್ಣೆಂದರೆ ದುರ್ಬಲಳು ಎಂಬ ಭಾವನೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ, ಅವರಾಡುವ ಒಂದೊಂದು ಮಾತು ಕೂಡ ಹೆಣ್ಣನ್ನು ಹೀಯಾಳಿಸಿ ಹೇಳುವಂತಿದೆ. ವಿನಯ್ ಮಾತನಾಡಿರುವ ಬಳೆ ಮಾತುಗಳು ವೀಕ್ಷಕರಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಬಳೆ ಹಾಕುವವರು ಎಂದರೆ ಅಷ್ಟೊಂದು ದುರ್ಬಲರೇ, ಅಲ್ಲದೆ ಪ್ರತಿಸ್ಪರ್ಧಿ ಕಾರ್ತಿಕ್‌ಗೆ ಹೆಣ್ಮಕ್ಕಳಂತೆ ಸ್ಟ್ರಾಂಗ್ ಅಲ್ಲ ಎಂಬರ್ಥದ ಮಾತುಗಳನ್ನು ಹೇಳುವ ಮೂಲಕ ಹೆಣ್ಮಕ್ಕಳಿಗೆ ಅವಮಾನ ಮಾಡುತ್ತಿದ್ದಾರೆ.
ಆನೆ, ಆನೆ ಎಂದು ಹೇಳುತ್ತಲೇ ಸೋಲುತ್ತಿದ್ದಾರೆ
ತಾನು ತುಂಬಾ ಬಲಶಾಲಿ ಎಂಬ ಅಹಂಕಾರ ವಿನಯ್‌ಗೆ ತುಂಬಾನೇ ಇದೆ ಎಂಬುವುದು ಅವರ ವರ್ತನೆಯಿಂದಲೇ ತಿಳಿಯುತ್ತದೆ, ಆದರೆ ಬಲಶಾಲಿ ಎಂದು ಎಲ್ಲಾ ಆಟಗಳನ್ನು ಸೋಲುತ್ತಿದ್ದರೂ ತನ್ನ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ವೀಕೆಂಡ್‌ನಲ್ಲೂ ಈ ಬಗ್ಗೆ ವಿನಯ್ ಅವರಿಗೆ ಯಾವುದೇ ವಾರ್ನಿಂಗ್ ಸಿಕ್ಕಿಲ್ಲ, ಆದ್ದರಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪ್ರೇಕ್ಷಕರು ವಿನಯ್ ಅವರಿಗೆ ಮಾತ್ರ ಏಕೆ ಏನೂ ಹೇಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಈ ವಾರ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರೆ ಒಳ್ಳೆಯದು ಎಂಬ ನಿರೀಕ್ಷೆ ಪ್ರೇಕ್ಷಕರದಲ್ಲಿದೆ.
ಗಂಡಸು... ಗಂಡಸು ಎಂಬ ಪದ ಅಸಹ್ಯ ಮೂಡಿಸುತ್ತಿದೆ
ಬಿಗ್‌ಬಾಸ್‌ನಲ್ಲಿ ಇಷ್ಟು ಸೀಸನ್‌ನಲ್ಲಿ ಈ ರೀತಿ ಲಿಂಗ ತಾರತಮ್ಯದ ಮಾತುಗಳು ಕೇಳುತ್ತಿರಲಿಲ್ಲ, ಆದರೆ ಈ ಸೀಸನ್ ಈ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಗಂಡಸು ಮಾತ್ರ ಈ ಬಿಗ್ ಬಾಸ್ ಕಪ್ ಗೆಲ್ಲಲು ಸಾಧ್ಯವೇ ಎಂಬರ್ಥದ ಮಾತುಗಳನ್ನಾಡುತ್ತಿದ್ದಾರೆಯೇ? ಹಾಗಾದರೆ ಈ ಬಿಗ್‌ಬಾಸ್ ಸೀಸನ್‌ಗೆ ಹೆಣ್ಮಕ್ಕಳು ಏಕೆ ಬರಬೇಕು, ಅವರೇನು ಕಪ್ ಗೆಲ್ಲಲು ಸಾಧ್ಯವಾಗದಷ್ಟು ಅಸಮರ್ಥರೇ? ... ವಿನಯ್ ಅವರು ತಮ್ಮ ಮಾತುಗಳ ಮೂಲಕ ಲಕ್ಷಾಂತರ ವೀಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ?
ಸೆಲೆಬ್ರೆಟಿಗಳಾದ ಇವರು ನಡೆದುಕೊಳ್ಳುವ ರೀತಿ ಎಷ್ಟು ಸರಿ?
ಸೆಲೆಬ್ರಿಟಿಗಳಿಗೆ ಒಂದಿಷ್ಟು ಅಭಿಮಾನಿಗಳಿರುತ್ತಾರೆ, ತಮ್ಮ ಸೆಲೆಬ್ರಿಟಿಯಂತೆಯೇ ಇರಬೇಕೆಂದು ಕೆಲವರು ಬಯಸುತ್ತಾರೆ,ಆದರೆ ಈ ಬಾರಿ ಬಿಗ್‌ಬಾಸ್‌ನಲ್ಲಿ ಇವರ ವರ್ತನೆಗಳು ನೋಡುವಾಗ ಇವರನ್ನಾ ಸೆಲೆಬ್ರಿಟಿಗಳೆಂದು ಮೆರೆಸಿದ್ದು ಎಂದನಿಸುವ ಮಟ್ಟಿಗೆ ವರ್ತಿಸುತ್ತಿದ್ದಾರೆ.
ಬಿಗ್‌ಬಾಸ್ ಅಂದರೆ ಬರೀ ಕಿತ್ತಾಟ, ಅರಚಾಟ ಮಾತ್ರವೇ?
ಈ ಬಾರಿ ಬಿಗ್‌ಬಾಸ್‌ನಲ್ಲಿ ಬರೀ ಕಿರುಚಾಟ, ಅರಚಾಟ ಬೀಪ್ ಹಾಕಿಸುವ ಪದಗಳನ್ನು ಬಿಟ್ಟರೆ ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದಿದ್ದಾರೆ ಸ್ಪರ್ಧಿಗಳು. ಇನ್ನಾದರೂ ಬಿಗ್‌ಬಾಸ್ ಇವರನ್ನು ಎಚ್ಚರಿಸಿ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟಬಹುದೇ ಕಾದು ನೋಡೋಣ....



Click it and Unblock the Notifications
