Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿಚ್ಚನ ಕ್ಲಾಸ್ ಲುಕ್, ತೆಗೆದುಕೊಂಡ ಕ್ಲಾಸ್.... ವಾವ್!
ವೀಕೆಂಡ್‌ನಲ್ಲಿ ಬಿಗ್‌ಬಾಸ್ ಮನೆಮಂದಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಎಲ್ಲಾ ವೀಕ್ಷಕರು ನಿರೀಕ್ಷೆ ಮಾಡಿದ್ದರು, ಆದರೆ ಇಷ್ಟು ಸೂಪರ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ, ಒಬ್ಬೊಬ್ಬರಿಗೆ ಅವರು ತೆಗೆದುಕೊಂಡ ಕ್ಲಾಸ್ ಸೂಪರ್ ಆಗಿತ್ತು. ಈ ವಾರ ಕಿಚ್ಚನ ಲುಕ್‌ಗೆ , ಕಿಚ್ಚನ ಕ್ಲಾಸ್‌ಗೆ ವೀಕ್ಷಕರು ಫುಲ್ ಖುಷ್.
ಒಂದೊಂದು ಮಾತು ತುಂಬಾನೇ ಪವರ್‌ಫುಲ್ ಆಗಿತ್ತು
ಸುದೀಪ್ ಅವರು ಮಾತನಾಡುವಾಗ ತುಂಬಾನೇ ಬುದ್ಧಿವಂತಿಕೆ, ಅದಕ್ಕೆ ಹಾಸ್ಯ ಬೆರೆಸಿ ಮಾತನಾಡುತ್ತಾರೆ, ಆದರೆ ಈ ವೀಕೆಂಡ್‌ನಲ್ಲಿ ಹೆಡ್ ಮಾಸ್ಟರ್ ರೀತಿ ಫುಲ್ ಸ್ಟ್ರಿಕ್ಟ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಖದರ್‌ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಂತೂ ಸುಳ್ಳಲ್ಲ, ಅದರಲ್ಲೂ ನಮ್ರತಾ, ತುಕಾಲಿ ಸಂತೋಷ್, ವಿನಯ್, ಸ್ನೇಹಿತ್ ಅವರಿಗೆ ತೆಗೆದುಕೊಂಡ ಕ್ಲಾಸ್ ತುಂಬಾನೇ ಅದ್ಭುತವಾಗಿತ್ತು.

ಈ ವಾರವೂ ನಮ್ರತಾ ಚಮಚದಿಂದ ಹೊರಬರಲೇ ಎಂದು ತಿಳಿಸಿದ ಕಿಚ್ಚ
ನಮ್ರತಾ ಬಿಗ್‌ಬಾಸ್ ಮನೆಯಲ್ಲಿ ತಮ್ಮದೇ ಆದ ಯಾವ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿಲ್ಲ, ವಿನಯ್ ಹೇಳಿದ್ದೇ ಸರಿ, ಸ್ವಂತ ಬುದ್ಧಿಯಿಂದ ಆಡುತ್ತಿಲ್ಲ ಎಂಬ ಕಾರಣಕ್ಕೆ ವೀಕ್ಷಕರು ಅವರಿಗೆ ಚಮಚ ನೀಡಿದ್ದರು, ಆದರೂ ನಮ್ರತಾ ಅವರಿಗೆ ನನ್ನ ಯಾವ ವರ್ತನೆಗೆ ಚಮಚ ಸಿಕ್ಕಿದೆ ಎಂದು ಅರ್ಥವಾಗಿರಲಿಲ್ಲ, ಈ ವಾರ ಸುದೀಪ್ ಅವರು ತುಂಬಾನೇ ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ತಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುವುದು ಈ ವಾರ ನಮ್ರತಾಗೆ ಗೊತ್ತಾಗಿದೆ, ಮುಂದೆ ಅವರ ಆಟದ ವೈಖರಿ ಬದಲಾಗಬಹುದು.
ವೀಕೆಂಡ್‌ನಲ್ಲಿ ಬದಲಾಯ್ತು ಉತ್ತಮ ಪಟ್ಟ
ಮನೆಯ ಉತ್ತಮ ಯಾರು, ಕಳಪೆ ಯಾರು ಎಂದು ಕೊಡುವಾಗ ವಿನಯ್‌ಗೆ ಕೊಟ್ಟಿದ್ದರು. ಆದರೆ ವೀಕೆಂಡ್‌ನಲ್ಲಿ ಆ ಗೇಮ್ ಬದಲಾಯ್ತು, ಸುದೀಪ್ ಅವರು ಈ ವಾರ ಕ್ಯಾಪ್ಟನ್ ಯಾರಾಗಬೇಕು ಎಂದು ಕೇಳಿದಾಗ ಬಹುಮತ ಸ್ನೇಹಿತ್‌ಗೆ ಬಿತ್ತು, ಅದರಂತೆ ವಿನಯ್ ತಂದು ಉತ್ತಮ ಪದಕವನ್ನು ಉತ್ತಮ ಎಂದು ಸ್ನೇಹಿತ್ ಅವರ ಕುತ್ತಿಗೆಗೆ ಹಾಕಲಾಯ್ತು.
ತುಕಾಲಿಗೆ ಸಕತ್ ಕ್ಲಾಸ್
ತುಕಾಲಿ ಜೋಕ್ ಹೇಳುತ್ತಿದ್ದೇನೆ ಎಂದು ಹೇಳುವುದೆಲ್ಲಾ ಜೋಕ್ ಅಲ್ಲ ಎಂಬುವುದನ್ನು ಸುದೀಪ್ ಅವರು ತುಂಬಾನೇ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ತುಕಾಲಿ ಅವರು ನನಗೆ ಮಾವನ ಪಾತ್ರ ಕೊಟ್ಟರು ಎಂದಾಗ ನೀವು ಇರುವುದೇ ಹಾಗೇ ಎಂಬುವುದಾಗಿ ಹೇಳುವ ಮೂಲಕ ನಿಮ್ಮ ಶೈಲಿ ಬದಲಾಯಿಸಿ ಎಂಬ ಸೂಚನೆ ಕೊಟ್ಟಿದ್ದಾರೆ.
ಕನ್ನಡಿಗರ ಕ್ಷಮೆ ಕೇಳಿದ ವಿನಯ್
ಸುದೀಪ್ ವಿನಯ್ ಅವರಿಗೆ ತೆಗದುಕೊಂಡ ಕ್ಲಾಸ್ ವೀಕ್ಷಕರಿಗೆ ತುಂಬಾ ಖಿಷಿ ಕೊಟ್ಟಿದೆ, ಕೊನೆಗೆ ವಿನಯ್ ಅವರು ಕರ್ನಾಟಕ ಜನತೆಯ ಕ್ಷಮೆ ಕೇಳಿದ್ದಾರೆ.
ಕಿಚ್ಚಳ ಚಪ್ಪಾಳೆ ಪಡೆದ ಸಂಗೀತ
ವಿನಯ್ ಬಳೆ ಬಗ್ಗೆ ಮಾತನಾಡಿದ್ದಕ್ಕೆ ಬಳೆ ತೊಟ್ಟು ವಿನಯ್ ಅವರ ವರ್ತನೆ ವಿರೋಧಿಸಿದ ಸಂಗೀತಗೆ ಕಿಚ್ಚನ ಚಪ್ಪಾಳೆ ತಟ್ಟಿದೆ.
ಶನಿವಾರದ ಪಂಚಾಯಿತಿಯಲ್ಲಿ ಮನೆಯಲ್ಲಿದ್ದ ಗುಂಪುಗಳನ್ನು ಒಡೆದಿದ್ದಾರೆ, ಎಲ್ಲರೂ ಸ್ವಂತಿಕೆಯಿಂದ ಆಡುವುದು ಎಷ್ಟು ಮುಖ್ಯ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ, ಇನ್ನು ಬಿಗ್‌ಬಾಸ್ ಸ್ಪರ್ಧಿಗಳ ಆಟದ ವೈಖರಿ ಬದಲಾಗುವ ಎಲ್ಲಾ ಲಕ್ಷಣಗಳಿವೆ....



Click it and Unblock the Notifications
