Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಗ್‌ಬಾಸ್ ಮನೆಯವರಿಂದ ಕಳಪೆ ಎಂದು ಕರೆಸಿಕೊಂಡ ಸಂಗೀತಾಗೆ ಪ್ರೇಕ್ಷಕರು ಏನು ಹೇಳುತ್ತಿದ್ದಾರೆ?
ಕಳೆದ ಎಲ್ಲಾ ಸೀಸನ್‌ಗಿಂತ ಈ ಬಾರಿಯ ಸೀಸನ್ ಭಿನ್ನವಾಗಿ ಗಮನ ಸೆಳೆಯುತ್ತಿದೆ, ಈ ಸೀಸನ್‌ನ ಸ್ಪರ್ಧಿಗಳು ಮನರಂಜನೆ ವಿಷಯಕ್ಕಿಂತ ಬೀದಿ ಜಗಳದಲ್ಲಿ ಕೆಟ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಸ್ಪರ್ಧಿಗಳ ವರ್ತನೆ ಅದರಲ್ಲೂ ವಿನಯ್ ವರ್ತನೆ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿನಯ್ ಇತರ ಸ್ಪರ್ಧಿಗಳನ್ನು ಹೀಯಾಳಿಸಿ ಮಾತನಾಡುತ್ತಾರೆ. ಅಲ್ಲದೆ ಹೆಣ್ಮಕ್ಕಳು ದುರ್ಬಲರು ಎಂಬರ್ಥದಲ್ಲಿ ಬಳೆ ಶಬ್ದ ಬಳಕೆ ಮಾಡಿರುವುದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್‌ಬಾಸ್ ಇವತ್ತಿನ ಎಪಿಸೋಡ್ ಪ್ರೊಮೋಬಿಟ್ಟಿದೆ, ಅದರಲ್ಲಿ ಸಂಗೀತಾಗೆ ಕಳೆಪೆ ಸಿಕ್ಕಿರುವುದು ಗೊತ್ತಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಇರುವವರು ಸಂಗೀತಾಗೆ ಕಳೆ ಕೊಟ್ಟರೂ ವೀಕ್ಷಕರು ಸಂಗೀತಾಗೆ ಉತ್ತಮ ಎಂಬ ಪಟ್ಟಿ ನೀಡುತ್ತಿದ್ದಾರೆ, ಅದಕ್ಕೆ ಕಾರಣ ಆ ಮನೆಯಲ್ಲಿ ವಿನಯ್ ಅವರನ್ನು ಸಂಗೀತ ಸಮರ್ಥವಾಗಿ ಎದುರಿಸಿರುವ ಪರಿ. ಬಿಗ್‌ಬಾಸ್ ಮನೆಯಲ್ಲಿ ಬಹುತೇಕರು ತಾವು ಸ್ಪರ್ಧಿಯಾಗಿ ಬಂದಿದ್ದೇನೆ ಎಂಬುವುದನ್ನು ಮರೆತು ವಿನಯ್‌ಗೆ ಬೆಂಬಲಿಗರಾಗಿ ಬಂದಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಕಳೆದ ವಾರ ಸುದೀಪ್ ಅವರು ಈ ಬಗ್ಗೆ ಹೇಳಿದ ಮೇಲೆ ಕಾರ್ತಿಕ್, ಪ್ರತಾಪ್ ವಿನಯ್ ಮಾತಿಗೆ ಎದುರೇಟು ನೀಡಿದ್ದಾರೆ, ಆದರೆ ಬಿಗ್‌ಬಾಸ್ ಶುರುವಾದಾಗಿನಿಂದ ವಿನಯ್‌ಗೆ ಕಟ್ಟಾ ಸ್ಪರ್ಧಿಯಾಗಿ ಕಾಣಿಸುತ್ತಿರುವವರು ಎಂದರೆ ಸಂಗೀತಾ.
ಈ ವಾರದಲ್ಲಿ ವಿನಯ್‌ಗೆ ಸಕತ್ ಆಗಿ ಠಕ್ಕರ್ ನೀಡಿದ್ದರು ಸಂಗೀತಾ
ವಿನಯ್ ವರ್ತನೆ-ಸಂಗೀತಾ ವರ್ತನೆ ನೋಡಿದಾಗ ಇಬ್ಬರದ್ದೂ ಅತಿಯಾಯ್ತು ಎಂದನಿಸಿದರೂ ವಿನಯ್ ವರ್ತನೆಯಿಂದಾಗಿ ಸಂಗೀತಾ ಆ ರೀತಿ ವರ್ತಿಸಬೇಕಾಯಿತು ಎಂಬುವುದು ತೋರುತ್ತಿತ್ತು, ಅಲ್ಲದೆ ಅಷ್ಟೇ ಧೈರ್ಯವಾಗಿ ನಿಲ್ಲುವ ಮೂಲಕ ವಿನಯ್ ಅಹಂಕಾರಕ್ಕೆ ತಕ್ಕ ಉತ್ತರ ನೀಡುವ ಕೆಲಸ ಮಾಡಿದ್ದರು.
ಯಾರಿಗೆ ಕಳಪೆ ನೀಡಬೇಕು ಎಂಬ ಸ್ಟ್ರಾಟಜಿಯನ್ನು ವಿನಯ್ ಅವರೇ ಮಾಡಿದ್ದರು
ಈ ಹಿಂದಿನ ಎಪಿಸೋಡ್‌ನಲ್ಲಿ ಯಾರಿಗೆ ಕಳಪೆ ನೀಡಬೇಕು, ನಮ್ಮ ಕಡೆ ಬಹುಮತ ಬರಲು ಏನು ಮಾಡಬೇಕು ಎಂದು ಮೊದಲೇ ಪ್ಲ್ಯಾನ್ ಮಾಡಿದ್ದರು. ಅದರಂತೆಯೇ ಸಂಗೀತಾಗೆ ಒಂದು ಗುಂಪಿನವರು ಕಳಪೆ ನೀಡಿದ್ದಾರೆ, ಆದರೆ ಈ ಕಳಪೆಯನ್ನು ಯಾರೂ ತಮ್ಮ ಸ್ವಂತ ನಿರ್ಧಾರದಿಂದ ಮಾಡಿಲ್ಲ, ಒಂದು ರೀತಿ ವಿನಯ್ ಪ್ರಭಾವಕ್ಕೆ ಒಳಗಾಗಿ ಮಾಡಿದ್ದಾರೆ, ಏಕೆಂದರೆ ಈ ಕುರಿತು ಮೊನ್ನೆಯ ಎಪಿಸೋಡ್‌ನಲ್ಲಿಯೇ ವೀಕ್ಷಕರಿಗೆ ಮನವರಿಕೆಯಾಗಿದೆ, ಹಾಗಾಗಿ ಬಿಗ್‌ಬಾಸ್ ಪ್ರೊಮೋ ಹೊರಬರುತ್ತಿದ್ದಂತೆ ಸಂಗೀತ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ ವೀಕ್ಷಕರು.
ಮಕ್ಕಳ ಎದುರಿನಲ್ಲಿ ಬಿಗ್‌ಬಾಸ್ ನೋಡಬೇಡಿ ಎಂದ ಮಾಜಿ ಬಿಗ್‌ಬಾಸ್ ಸ್ಪರ್ಧಿ
ಅವರು ತಮ್ಮ ಪೋಸ್ಟ್‌ನಲ್ಲಿ ಈ ಸಲದ ಕನ್ನಡ ಬಿಗ್‌ಬಾಸ್ ಸೀಸನ್ ನಿಜಕ್ಕೂ ಬೇಸರ ತಂದಿದೆ, ಶೋನಲ್ಲಿ ಉಳಿಯೋಭರದಲ್ಲಿ ಅವಾಚ್ಯ ಶಬ್ದಗಳ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣು ಮಕ್ಕಳ ಮೇಲೆ ಏಕವಚನ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ ತಾಯಂದಿರು ದಯವಿಟ್ಟು ಇಂತಹ ಕಾರಗಯಕ್ರಮಗಳನ್ನು ಮಕ್ಕಳ ಎದುರಿಗೆ ನೋಡದಿರಿ. ಇದು ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪ್ರಭಾವ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.



Click it and Unblock the Notifications
