Latest Updates
-
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ
ಬಿಗ್‌ಬಾಸ್: ಕೊನೆಯ ವಾರದಲ್ಲಿ ಕಾರ್ತಿಕ್‌ಗೆ ಪ್ಲಸ್ ಆದ ಸಂಗೀತಾಗೆ ಮೈನಸ್ ಆದ ಸಂಗತಿಗಳಿವು
ಕನ್ನಡ ಬಿಗ್‌ಬಾಸ್ 10ಗೆ ತೆರೆಬಿದ್ದಿದೆ. ಕಾರ್ತಿಕ್ ವಿನ್ನರ್ ಹಾಗೂ ಪ್ರತಾಪ್ ಫಸ್ಟ್ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ, ಆದರೆ ವಿನ್ ಆಗಬಹುದೆಂಬ ಸಂಗೀತಾ ಶೃಂಗೇರಿ 2ನೇ ರನ್ನರ್‌ಅಪ್ ಆಗಿದ್ದ ಬಹುತೇಕ ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ಆಗಿದೆ.
ಟಾಪ್ 3ಯಲ್ಲಿ ಸಂಗೀತಾ, ವಿನಯ್ ಇದ್ದೇ ಇರುತ್ತಾರೆ, ಮತ್ತೊಬ್ಬರು ಒಂದೋ ಕಾರ್ತಿಕ್ ಅಥವಾ ಡ್ರೋನ್ ಪ್ರತಾಪ್ ಎಂಬ ಲೆಕ್ಕಚಾರ ಇತ್ತು, ಆದರೆ ಆ ಲೆಕ್ಕಚಾರವೆಲ್ಲಾ ಉಲ್ಟಾ ಆಗಿದ್ದನ್ನು ನೋಡಿ ವಿನಯ್, ಸಂಗೀತಾರವರ ಅಭಿಮಾನಿಗಳ ಹೃದಯ ಒಡೆದು ಹೋಗಿದೆ.

ಲೆಕ್ಕಚಾರ ತಪ್ಪಿದ್ದೆಲ್ಲಿ?
ನೆನ್ನೆಯ ಎಪಿಸೋಡ್ ನೋಡಿದಾಗ ಫೈನಲ್‌ಗೆ ಬಂದ ಸ್ಪರ್ಧಿಗಳ ಲೆಕ್ಕಚಾರ ಉಲ್ಟಾ ಹೊಡೆದಿದೆ. ಸಂಗೀತಾ, ವಿನಯ್‌ಗಿಂತ ತಾನು ಟಾಪ್‌ನಲ್ಲಿ ಇರುತ್ತೇನೆ ಎಂದು ಸ್ವತಃ ಪ್ರತಾಪ್ ಅಂದುಕೊಂಡಿರಲಿಲ್ಲ, ತಾವುಗಳು ಟಾಪ್ 2 ನಲ್ಲಿ ಇದ್ದೇ ಇರುತ್ತೇವೆ ಎಂಬ ಆತ್ಮವಿಶ್ವಾಸದಿಂದ ವಿನಯ್, ಸಂಗೀತಾಗೆ ತುಂಬಾನೆ ನಿರಾಸೆಯಾಗಿದೆ, ಕಾರ್ತಿಕ್‌ಗೆ ಆತ್ಮವಿಶ್ವಾಸವಿತ್ತು, ಆದರೆ ವಿನಯ್, ಸಂಗೀತಾವನ್ನು ಮೀರಿ ಸುದೀಪ್ ಅವರ ಒಂದು ಕೈಯಲ್ಲಿ ನಾನು ಮತ್ತೊಂದು ಕೈಯಲ್ಲಿ ವಿನಯ್ ಅಥವಾ ಸಂಗೀತಾ ಇರಬಹುದು ಎಂದು ಭಾವಿಸಿದ್ದರು, ಆದರೆ ಅವರ ಪಕ್ಕ ನಿಂತಿದ್ದು ಪ್ರತಾಪ್, ಹೀಗೆ ಎಲ್ಲರ ಲೆಕ್ಕಚಾರ ಉಲ್ಟಾ ಆಗಿತ್ತು. ಈ ಎಲ್ಲಾ ಸ್ಪರ್ಧಿಗಳು ಒಳ್ಳೆಯ ಫೈಟ್ ನೀಡಿದ್ದರು ಆದ್ದರಿಂದ ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕಷ್ಟವಾಗುತ್ತಿತ್ತು.
ಕಾರ್ತಿಕ್‌ಗೆ ಪ್ಲಸ್ ಆದ ಸಂಗೀತಾಗೆ ಮೈನಸ್ ಆದ ಕಡೆಯ ವಾರ
ಈ ಕೊನೆಯ ವಾರ ಕಾರ್ತಿಕ್‌ಗೆ ತುಂಬಾ ಪ್ಲಸ್ ಆಗಿ ಸಂಗೀತಾಗೆ ಮೈನಸ್ ಆಗಿದೆ, ಹೌದು ಸಂಗೀತಾ ಮಾಡಿಕೊಂಡ ಚಿಕ್ಕ ಎಡವಟ್ಟು ಅವರ ಗೆಲುವಿಗೆ ಹಿಂದೇಟು ಹಾಕಿದೆ ಎಂದನಿಸುವುದು. ಬಿಗ್‌ಬಾಸ್ ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ತಮ್ಮ ಆಸೆಗಳನ್ನು ಹೇಳಿಕೊಂಡರೆ ಸಾಧ್ಯವಾದರೆ ನೆರವೇರಿಸುವುದು ಎಂದು ಬಿಗ್‌ಬಾಸ್ ಹೇಳಿತ್ತು, ಅಲ್ಲಿ ಸಂಗೀತಾ ಎಡವಿದರು, ತುಂಬಾ ಸ್ವಾರ್ಥಿಯಾಗಿ ಕಂಡರು.
ತನ್ನ ಗೆಲುವಿಗೆ ಸಹಾಯವಾಗಲು ಸೆಲೆಬ್ರಿಟಿಗಳ ಹೆಸರು ಹೇಳಿದ ಸಂಗೀತಾ
ಸಂಗೀತಾ ಅವರು ನಮಗೆ ಯಶ್ ಹಾಗೂ ರಾಧಿಕಾ ವಿಶ್ ಮಾಡಿದರೆ ಒಳ್ಳೆಯದಿತ್ತು, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರ ಕಡೆಯಿಂದ ವಿಶ್ ಬೇಕಾಗಿತ್ತು ಎಂದು ಕೇಳಿಕೊಂಡರು, ಅಲ್ಲಿ ಅವರಿಗೆ ತುಂಬಾನೇ ಮೈನಸ್ ಆಯ್ತು, ಈ ದೊಡ್ಡ ಸೆಲೆಬ್ರಿಟಿಗಳು ನನಗೆ ವಿಶ್ ಮಾಡಿದರೆ ಅವರ ಫ್ಯಾನ್‌ಸ ಸಪೋರ್ಟ್ ಕೂಡ ಸಿಕ್ಕು ಗೆಲ್ಲುತ್ತೇನೆ ಎಂಬ ಲೆಕ್ಕಚಾರದಿಂದ ಸಂಗೀತಾ ಹೀಗೆ ಹೇಳಿದರು ಎಂದು ತುಂಬಾನೇ ನೆಗೆಟಿವ್ ಟ್ರೋಲ್‌ಗಳು ಬಂತು.
ಕಾರ್ತಿಕ್‌ಗೆ ಪ್ಲಸ್ ಆದ ತಂಗಿಯ ವಿಶ್
ಕಾರ್ತಿಕ್ ಅವರ ಪುಟ್ಟ ಅಳಿಯನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದರು, ಅದರಂತೆ ವೀಡಿಯೋ ಕಾಲ್ ಕನೆಕ್ಟ್ ಆಗಿತ್ತು, ಅವರ ತಂಗಿ ಮಾತನಾಡಿದರು, ಆದರೆ ಜನರ ಗಮನ ಸೆಳೆದಿದ್ದು ಅವರ ತಂಗಿಯಿದ್ದ ಮನೆ, ಮಧ್ಯಮವರ್ಗದ ಮನೆಯನ್ನು ನೋಡಿದವರು ಬಡವರ ಮಗ ಬೆಳೆಯಬೇಕೆಂಬ ಅಭಿಯಾನ ಶುರು ಮಾಡಿದರು. ಇವರು ಗೆದ್ದರೆ ಇವರ ತಂಗಿಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಾರ್ತಿಕ್ ಪರ ಬ್ಯಾಟಿಂಗ್ ಶುರುವಾಯಿತು. ಇದೇ ಕಾರ್ತಿಕ್ ಅವರಿಗೆ ಪ್ಲಸ್ ಆಗಿದ್ದು. ಅವರು ಆರ್ಥಿಕ ಸ್ಥಿತಿ ದುರ್ಬಲವಾಗಿದೆ ಅವರು ಗೆಲ್ಲಬೇಕೆಂದು ಜನರು ಯೋಚಿಸಿದರು. ನಮ್ಮ ಕನ್ನಡಿಗರು ಬೇರೆಯವರ ಕಷ್ಟ ನೋಡಿದರೆ ಬೇಗನೆ ಮರಗುತ್ತಾರೆ, ಕಾರ್ತಿಕ್ ಮನೆಯ ಸ್ಥಿತಿ ನೋಡಿ ಅವರಿಗೆ ಅಪಾರ ವೋಟ್‌ಗಳು ಬಂದಿರಬಹುದು.
ಮತ್ತೆ ಸ್ಟಾರ್ ಡ್ರೋನ್ ಪ್ರತಾಪ್
ಚಿಕ್ಕ ಪ್ರಾಯದಲ್ಲಿಯೇ ಡ್ರೋನ್ ಮೂಲಕ ಸೆಲೆಬ್ರಿಟಿಯಾದ ಪ್ರತಾಪ್ ಅವರು ನಂತರ ಕೆಲವು ತಪ್ಪುಗಳಿಂದಾಗಿ ಆ ಸ್ಥಾನ ಕಳೆದುಕೊಮಡರು, ಆದರೆ ಬಿಗ್‌ಬಾಸ್ ಅವರ ಪಾಲಿಗೆ ಪ್ಲಸ್ ಆಯ್ತು. ಮೈಂಡ್ ಗೇಮ್‌ನಲ್ಲಿ ಸೂಪರ್ ಆಗಿದ್ದ ಡ್ರೋನ್ ಪ್ರತಾಪ್ ಮತ್ತೆ ಸೆಲೆಬ್ರಿಟಿ ಸ್ಟೇಟಸ್ ಪಡೆದಿದ್ದರೆ. ಅದನ್ನು ಉಳಿಸಿಕೊಮಡು ಹೋಗುವ ಜವಾಬ್ದಾರಿ ಅವರ ಮೇಲಿರಲಿದೆ.



Click it and Unblock the Notifications

