Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Bigg Boss : ಬಳೆ ವಿಚಾರ ಮಾತ್ರವಲ್ಲ, ಚಾರಿತ್ರ್ಯವಧೆ ಬಗ್ಗೆಯೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರೆಯೇ?
ಬಿಗ್‌ಬಾಸ್ ವೀಕ್ಷಕರು ಈ ವಾರ ಕಿಚ್ಚನ ವಾರದ ಪಂಚಾಯಿತಿಯನ್ನು ತುಂಬಾನೇ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ, ಏಕೆಂದರೆ ಈ ವಾರ ಕಿಚ್ಚ ಸುದೀಪ್‌ರವರು ಬಿಗ್‌ಬಾಸ್ ಸ್ಪರ್ಧಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ, ಅದರಲ್ಲೂ ವಿನಯ್ ಅವರಿಗೆ ತಕ್ಕ ಬುದ್ಧಿ ಮಾತು ಹೇಳಬೇಕು ಎಂದು ಜನರು ನಿರೀಕ್ಷೆ ಮಾಡುತ್ತಿದ್ದಾರೆ, ಅದರಲ್ಲೂ ಬಳೆ ವಿಷಯದ ಜೊತೆಗೆ ಮತ್ತೊಂದು ವಿಷಯವನ್ನು ಚರ್ಚಿಸಲೇಬೇಕು, ಇಲ್ಲದಿದ್ದರೆ ಈ ವಾರದ ಪಂಚಾಯಿತಿ ವೀಕ್ಷಕರಿಗೆ ತುಂಬಾನೇ ನಿರಾಸೆ ಉಂಟು ಮಾಡುತ್ತದೆ.
ಬಿಗ್‌ಬಾಸ್ ಕನ್ನಡ ಎಂದರೆ ಕಿಚ್ಚ ಸುದೀಪ್, ಅಲ್ಲಿ ಯಾವುದೇ ಸ್ಪರ್ಧಿಗಳು ಬರಲಿ, ಸ್ಪರ್ಧಿಗಳಿಗಿಂತ ವೀಕ್ಷಕರನ್ನು ಸೆಳೆಯುತ್ತಿರುವವರು ಕಿಚ್ಚ ಸುದೀಪ್, ವಿಕೆಂಡ್‌ನಲ್ಲಿ ಕಿಚ್ಚ ಸುದೀಪ್ ಬಂದು ನಯವಾಗಿ ಮನೆ ಮಂದಿಯ ಕಿವಿಯಿಂಡಿ, ತಪ್ಪು -ಸರಿಯನ್ನು ಎತ್ತಿ ತೋರಿಸುವ ಅವರ ನಿರೂಪಣೆ ಶೈಲಿಗೆ ಫಿದಾ ಆಗದವರೇ ಇರಲ್ಲ. ಸುದೀಪ್ ಬಿಟ್ಟರೆ ಇನ್ಯಾರು ಈ ಕಾರ್ಯಕ್ರಮ ನಡೆಸಿಕೊಡಬಹುದು ಎಂದು ಯೋಚಿಸಿದರೆ ಸುದೀಪ್ ಅವರಿಗೆ ಪರ್ಯಾಯ ಸುದೀಪ್‌ರವರು ಮಾತ್ರ, ಅಷ್ಟೊಂದು ಚೆನ್ನಾಗಿರುತ್ತೆ ಅವರು ನಡೆಸು ಕೊಡುತ್ತಿರುವ ಬಿಗ್‌ಬಾಸ್ ನ್ಯಾಯ ಪಂಚಾಯಿತಿ.

ಸುದೀಪ್‌ರವರ ಒಂದೊಂದು ಮಾತುಗಳಿಗೆ ತುಂಬಾನೇ ಅರ್ಥವಿರುತ್ತದೆ. ಬದುಕಿನಲ್ಲಿ ಕೆಟ್ಟದ್ದು, ಒಳ್ಳೆಯದ್ದನ್ನು ಅನುಭವಿಸಿರುವುದರಿಂದ ಯಾವುದು ತಪ್ಪು ಯಾವುದು ಸರಿ ಎಂಬ ಅವರ ನಿರ್ಧಾರ ಎಲ್ಲರಿಗೂ ಮೆಚ್ಚುಗೆಯಾಗುವುದು. ಮನೆಯೊಳಗಿನ ಸ್ಪರ್ಧಿಗಳಿಗೂ ಅಷ್ಟೇ ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ಅರೆತು ಸರಿಯಾದ ಟ್ರ್ಯಾಕ್‌ನಲ್ಲಿ ಹೋಗಲು ಇವರ ಸಲಹೆ ತುಂಬಾನೇ ಸಹಾಯ ಮಾಡುತ್ತದೆ. ಈ ಬಾರಿಯ ಸೀಸನ್‌ನಲ್ಲಿ ಕಿಚ್ಚ ಸುದೀಪ್‌ರವರು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ, ಆದರೆ ವಿನಯ್ ಅವರಿಗೆ ಮಾತ್ರ ಸರಿಯಾಗಿ ಕ್ಲಾಸ್ ತೆಗೆದುಕೊಂಡಿಲ್ಲ, ಕಾರಣದಿಂದಲೇ ಅವರ ವರ್ತನೆ ಈ ಮಟ್ಟಿಗೆ ಅತಿರೇಕಕ್ಕೆ ಹೋಗಿದೆ ಎಂಬುವುದು ವೀಕ್ಷಕರ ಆರೋಪ. ವಿನಯ್‌ರವರ ವರ್ತನೆಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂಬ ಕೂಗು ಈ ವಾರ ತುಂಬಾನೇ ಜಾಸ್ತಿಯಾಗಿದೆ, ಅದರಲ್ಲೂ ವಿನಯ್ ಹೇಳಿರುವ ಬಳೆ ಮಾತು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಲರ್ಸ್ ಕನ್ನಡ ಇಂದು ಬಿಟ್ಟಿರುವ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಬಳೆಯ ವಿಚಾರ ಮಾತನಾಡುತ್ತಾರೆ ಎಂಬ ಸುಳಿವು ಸಿಕ್ಕಿದೆ.
ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ ವೀಕ್ಷಕರು
ವಿನಯ್ ಅವರು ನಮ್ಮನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ ಎಂಬುವುದನ್ನು ಮರೆತ್ತಿರುವಂತೆ ಮಾತನಾಡುತ್ತಾರೆ. ಅವರ ದೃಷ್ಟಿಯಲ್ಲಿ ಹೆಣ್ಣೆಂದರೆ ದುರ್ಬಲಳು, ಕೈಲಾಗದವಳು ಎಂಬುವುದು ಅವರ ಮಾತಿನಲ್ಲಿಯೇ ಗೊತ್ತಾಗುತ್ತಿದೆ. ಈ ಕುರಿತು ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿರುವ ಪ್ರೊಮೋ ನೋಡಿ ವೀಕ್ಷಕರು ತುಂಬಾನೇ ಖುಷಿಯಾಗಿದೆ.
ಸುದೀಪ್ ಅವರು ಈ ವಿಷಯದ ಬಗೆ ಕೂಡ ಮಾತನಾಡಬೇಕಾಗಿದೆ
ಚಾರಿತ್ರ್ಯ ವಧೆ: ಇದು ಎಷ್ಟೊಂದು ಘೋರ ಗೊತ್ತಾ? ವ್ಯಕ್ತಿಯನ್ನೇ ನಾಶ ಮಾಡಿ ಬಿಡುತ್ತದೆ. ಚಾರಿತ್ರ್ಯೆ ವಧೆ ಮಾಡಿದರೆ ಒಬ್ಬ ವ್ಯಕ್ತಿ ಬದುಕಿನಲ್ಲಿ ಕುಗ್ಗಿ ಹೋಗುತ್ತಾನೆ. ಎಂಥ ಅವಮಾನ ಬೇಕಾದರೂ ಸಹಿಸಬಹುದು, ಆದರೆ ಚಾರಿತ್ರ್ಯ ವಧೆ ಮಾಡಲು ಹೋಗಬಾರದು, ಅದನ್ನು ವಿನಯ್ ಅವರು ಮಾಡಿದ್ದಾರೆ. ಬಿಗ್‌ಬಾಸ್ ಅಮಥ ವೇದಿಕೆಯಲ್ಲಿ ಡ್ರೋನ್ ಪ್ರತಾಪ್ ಹೆಣ್ಮಕ್ಕಳನ್ನು ನೋಡುವ ದೃಷ್ಟಿಯೇ ಚೆನ್ನಾಗಿಯಿಲ್ಲವೆಂದು ಆರೋಪಿಸಿದ್ದಾರೆ, ಅದು ಚಿಕ್ಕ ಆರೋಪ ಅಲ್ವೇ ಅಲ್ಲ. ಅಷ್ಟು ದೊಡ್ಡ ಶೋ, ಅಷ್ಟು ಕ್ಯಾಮೆರಾ ಕಣ್ಣುಗಳಿರುವ ಶೋದಲ್ಲಿ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಅದನ್ನು ಆ ಕ್ಯಾಮರಾ ಕಣ್ಣುಗಳು ಸೆರೆಹಿಡಿಯುತ್ತದೆ. ಕ್ಯಾಮರಾ ಕಣ್ಣುಗಳಿಗಿಂತ ಪಾಸ್ಟ್ ಹೆಣ್ಮಕ್ಕಳ ಗಮನ. ಯಾರಾದರೂ ನಮ್ಮನ್ನು ನೋಡುವ ದೃಷ್ಟಿ ಸರಿಯಿಲ್ಲ ಎಂದು ಗೊತ್ತಾದರೆ ಅವಳಿಗೆ ಅದು ತಕ್ಷಣವೇ ಗೊತ್ತಾಗುತ್ತದೆ, ಆದರೆ ಇಲ್ಲಿ ಹೆಣ್ಮಕ್ಕಳು ಇದರ ಬಗ್ಗೆ ಮೊದಲು ಹೇಳಿಲ್ಲ, ವಿನಯ್ ಉಪ್ಪು-ಖಾರ ಹಾಕಿ ಹೇಳಿದಾಗ ವಿನಯ್ ಗುಂಪಿನ ಮಹಿಳೆಯರು ಧ್ವನಿಗೂಡಿಸುವ ಪ್ರಯತ್ನ ಮಾಡಿ ಎಲ್ಲರೂ ಜನರ ಕಣ್ಮುಂದೆ ತಮ್ಮ ವ್ಯಕ್ತಿತ್ವದಲ್ಲಿ ಸಣ್ಣವರಾಗಿದ್ದಾರೆ. ಇದರ ಬಗ್ಗೆ ಕೂಡ ಸುದೀಪ್ ಅವರು ವಿನಯ್ &ಟೀಂಗೆ ಕ್ಲಾಸ್ ತೆಗೆದುಕೊಳ್ಳಬೇಕೆಂದು ವೀಕ್ಷಕರು ನಿರೀಕ್ಷೆ ಮಾಡಿದ್ದಾರೆ.
ಹೀಗಾಗಿ ಈ ವಾರದ ಕಿಚ್ಚನ ಪಂಚಾಯಿತಿ ಸಕತ್ ಬಿಸಿಯಾಗಿರಲಿದೆ, ವೀಕ್ಷಕರು ಕೂಡ ಇವತ್ತಿನ ಎಪಿಸೋಡ್ ಮಿಸ್ ಮಾಡಲೇಬಾರದು ಎಂದು ಕಾಯುತ್ತಿದ್ದಾರೆ, ಬಿಗ್‌ಬಾಸ್‌ನಲ್ಲಿ ಗೆಲ್ಲುವುದಕ್ಕೆ ಕಿರುಚಾಟ ಮಾತ್ರ ಸಾಲದು ಎಂಬುವುದನ್ನು ಕಿಚ್ಚ ತಮ್ಮದೇ ಶೈಲಿಯಲ್ಲಿ ಸ್ಪರ್ಧಿಗಳಿಗೆ ಅರ್ಥ ಮಾಡಿಸುತ್ತಾರೆ ಎನ್ನುವುದರಲ್ಲಿ ನೋ ಡೌಟ್....



Click it and Unblock the Notifications