Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಿಗ್‌ಬಾಸ್‌ಗೆ ಬೀಗ ಮುಂದೇನು? ಗೊಂದಲದ ನಡುವೆಯೇ ಹೊರಬಂತು ಪ್ರೋಮೋ!
Bigg Boss Kannada: ಬಿಗ್‌ಬಾಸ್ ಸೀಸನ್ 12ಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. 10 ದಿನಗಳ ಷೋ ಪ್ರಸಾರದ ಬಳಿಕ ಈಗ ಬೀಗ ಬಿದ್ದಿದೆ. ಅತ್ಯಂತ ದೊಡ್ಡ ಮನೆಯಾಗಿದ್ದ ಬಿಗ್‌ಬಾಸ್ ಮನೆ ಈಗ ಜನರಿಲ್ಲದೆ, ಸ್ಪಧಿಗಳಿಲ್ಲದೆ ಖಾಲಿಯಾಗಿದೆ. ನಿನ್ನೆ ರಾತ್ರಿ ಪೊಲೀಸರು ಹಾಗೂ ಸಿಬ್ಬಂದಿಯ ನೇತೃತ್ವದಲ್ಲಿ ಮನೆಗೆ ಬೀಗ ಹಾಕಲಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸದ್ಯ ಬಿಗ್ ಬಾಸ್ ಅಭಿಮಾನಿಗಳಲ್ಲಿ ಷೋ ಮುಂದುವರೆಯಲಿದ್ಯಾ? ಅಥವಾ ಅರ್ಧಕ್ಕೆ ನಿಲ್ಲಲಿದ್ಯಾ ಎಂಬ ಗೊಂದಲ ಮೂಡಿದೆ. ತಡರಾತ್ರಿ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ. ಹೀಗಾಗಿ ಹೊಸ ಎಪಿಸೋಡ್‌ಗಳು ಶೂಟ್ ಹೇಗೆ ಮಾಡಲಾಗುತ್ತಿದೆ ಎಂಬ ಕುತೂಹಲದವಿದೆ. ಆದ್ರೆ ಬಿಗ್ ಬಾಸ್ ಮತ್ತೆ ಆರಂಭಗಾಗುವುದು ಕಷ್ಟಕರವಾಗಿದೆ.

ಈಗಾಗಲೇ ಕೋರ್ಟ್ ಮೆಟ್ಟಿಲೇರಲಾಗಿದೆ. ಜಾಲಿವುಡ್ ಸ್ಟುಡಿಯೋ ಪರಿಸರ ಇಲಾಖೆಯ ನಿಯಮಗಳ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಸ್ಫರ್ಧಿಗಳೆಲ್ಲರು ಈಗಲ್ ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಹಾಗೆ 12ಕ್ಕೂ ಹೆಚ್ಚು ರೂಮ್‌ಗಳು ಬುಕ್ ಆಗಿವೆ ಎಂದು ವರದಿಯಾಗಿದೆ. ಬಿಗ್ ಬಾಸ್ ಮನೆಗೆ ಬೀಗ ಬೀಳುತ್ತಿದ್ದಂತೆ ವೀಕ್ಷಕರಿಗೆ ಶಾಕ್ ಆಗಿತ್ತು. ಹಾಗೆ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂದು ಕಲರ್ಸ್ ಕನ್ನಡ ವಿಷಾದ ವ್ಯಕ್ತಪಡಿಸಿದೆ.
ಆದ್ರೆ ಈಗ ಷೋ ಮತ್ತೆ ಮುಂದುವರೆಯಲಿದ್ಯಾ? ಅಥವಾ ಅಂತ್ಯವಾಗಲಿದ್ಯಾ ಎಂಬ ಕುತೂಹಲದ ಜೊತೆಗೆ ಪ್ರಶ್ನೆಗಳು ಕೂಡ ಎದುರಾಗಿವೆ. ಈ ವಿಚಾರವಾಗಿ ಜಾಲಿವುಡ್ ಸ್ಟುಡಿಯೋಸ್ ಕೋರ್ಟ್ ಮೆಟ್ಟಿಲೇರಿದೆ. ಅಲ್ಲಿನ ನಿರ್ಧಾರದ ಮೇಲೆ ಬಿಗ್‌ಬಾಸ್ ಭವಿಷ್ಯ ನಿರ್ಧಾರವಾಗಲಿದೆ.
ವಿವಾದದ ನಡುವೆ ಬಂತು ಪ್ರೋಮೋ
ನಿನ್ನೆ ಮನೆಗೆ ಬೀಗ ಬಿದ್ದಿದೆ. ಸ್ಪರ್ಧಿಗಳು ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿದ್ದಾರೆ. ಆದ್ರೆ ಕಲರ್ಸ್ ಕನ್ನಡ ಈ ದಿನದ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದೆ. ಈ ಮೂಲಕ ಬಿಗ್‌ಬಾಸ್ ಎಂದಿನಂತೆ ಮುಂದುವರೆಯಲಿದೆ ಎಂಬ ಸೂಚನೆ ನೀಡಿದೆ. ಇದರಿಂದ ಶೋ ಅಂತ್ಯವಾಗಲಿದೆ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ. ಶೋ ನಿಲ್ಲಿಸುವುದಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.
ಪ್ರೋಮೋದಲ್ಲಿ ಮತ್ತೆ ಊಟದ ವಿಚಾರವಾಗಿ ಗಲಾಟೆ ಆಗಿರುವುದನ್ನು ತೋರಿಸಲಾಗಿದೆ. ಕಿಚನ್ ವಿಚಾರವಾಗಿ ಹಾಗೆ ಊಟದ ವಿಷಯದಲ್ಲಿ ರಕ್ಷಿತಾ ಶೆಟ್ಟಿ ಗಲಾಟೆ ಮಾಡುತ್ತಿರುವುದು ಪ್ರೋಮೋದಲ್ಲಿದೆ. ಇದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ. ಈ ವಾರ ಕೂಡ ಬಿಗ್ ಬಾಸ್ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ಹೇಳಲಾಗಿದೆ.
ಸದ್ಯ ಈಗ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿರುವ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಡಳಿತದ ನೋಟಿಸ್ ವಿರುದ್ಧವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಅರ್ಜಿಯ ಜೊತೆಗೆ ತುರ್ತು ವಿಚಾರಣೆಗೂ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಕೆಲ ದಿನದಲ್ಲಿ ಬಿಗ್‌ಬಾಸ್ ಪುನರ್ ಆರಂಭಿಸಲು ಅನುಮತಿ ಸಿಗದಿದ್ದರೆ ಶೋ ನಡೆಯಲು ಬೇರೊಂದು ಮಾರ್ಗ ಕಂಡುಕೊಳ್ಳಬೇಕಾಗುತ್ತದೆ. ಇಲ್ಲವೆ ಶೋ ಅನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು.



Click it and Unblock the Notifications

