Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬಿಗ್‌ಬಾಸ್ ಸ್ಪರ್ಧಿಗಳು ರೆಸಾರ್ಟ್‌ಗೆ ಶಿಫ್ಟ್: ಅರ್ಧಕ್ಕೆ ಬಿಗ್‌ಬಾಸ್ ಬಾಗಿಲು ಹಾಕಿದ್ದು ಇದೇ ಮೊದಲಲ್ಲ!
ಕನ್ನಡ ಬಿಗ್‌ಬಾಸ್ ಆರಂಭಗೊಂಡು ವಾರಗಳು ಕಳೆದಿವೆ ಅದರ ನಡುವೆಯೇ ಈ ಸೀಸನ್ ಬಹಳಷ್ಟು ವಿಚಾರಗಳಿಂದ ವಿಶೇಷ ಎಂದು ಘೋಷಿಸಲಾಗಿತ್ತು. ಈಗ ಸೀಸನ್ 12 ಅರ್ಧದಲ್ಲಿಯೇ ಮನೆಗೆ ಬೀಗ ಬಿದ್ದಿದೆ. ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಜಿಲ್ಲಾಧಿಕಾರಿಯ ಸಮ್ಮುಖದಲ್ಲೇ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರ ಕಳುಹಿಸಲಾಗಿದ್ದು, ಮನೆಗೆ ಬೀಗ ಹಾಕಲಾಗಿದೆ. ಹಾಗೆ ವಾಹಿನಿ ಕೂಡ ಈ ಕುರಿತಾಗಿ ತಡವಾಗಿ ಸ್ಪಷ್ಟನೆ ನೀಡಿದೆ. ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದ್ದು, ವಾಹಿನಿಯ ಕಡೆಯಿಂದ ಕೋರ್ಟ್‌ಗೆ ತೆರಳುವ ಸೂಚನೆ ಸಿಕ್ಕಿದೆ.

ಆದ್ರೆ ಸದ್ಯಕ್ಕಂತು ಬಿಗ್ ಬಾಸ್ ಎಂಬ ದೊಡ್ಡ ಮನೆಗೆ ಬೀಗ ಬಿದ್ದಿದೆ. ಆದ್ರೆ ಸ್ಪರ್ಧಿಗಳನ್ನು ಬಿಡದಿಯಲ್ಲಿನ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಹೌದು ರಾಜಕಾರಣಿಗಳು, ಹಾಗೆ ಸಿನಿಮಾ ಮಂದಿಯ ಫೇವರಿಟ್ ಸ್ಪಾಟ್ ಎಂದೇ ಹೆಸರಾಗಿರುವ ಈಗಲ್ ಟನ್ ರೆಸಾರ್ಟ್‌ಗೆ ಎಲ್ಲಾ 17 ಸ್ಪರ್ಧಿಗಳು ಕೂಡ ಶಿಫ್ಟ್ ಮಾಡಲಾಗುತ್ತಿದೆ.
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ಹಾಗೆ ಈಗ ತಹಶೀಲ್ದಾರ್ಅ ವರ ಸಮ್ಮುಖದಲ್ಲಿ ಬೀಗ ಸಹ ಹಾಕಲಾಗಿದೆ.
ಈ ನೋಟಿಸ್ ನೀಡಿ ಒಂದು ವಾರವಾದರು ಯಾವುದೇ ಉತ್ತರ ಬಂದಿರಲಿಲ್ಲ ಎಂಬ ಆರೋಪ ಕೂಡ ಇದೆ. ಸದ್ಯಕ್ಕೆ ಸ್ಪರ್ಧಿಗಳನ್ನು ಪೊಲೀಸರ ಭದ್ರತೆಯಲ್ಲಿ ಈಗಲ್ ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಬಿಗ್‌ಬಾಸ್ ಅರ್ಧದಲ್ಲೇ ನಿಂತಿದ್ದು ಇದು ಮೊದಲಲ್ಲ!
ಬಿಗ್ ಬಾಸ್ ಆರಂಭಗೊಂಡು 12ನೇ ಸೀಸನ್ ನಡೆಯುತ್ತಿದೆ. ಆದ್ರೆ ಪ್ರತಿ ಬಾರಿ ಬಿಗ್ ಬಾಸ್ ಆರಂಭಗೊಂಡಾಗಲು ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಲೇ ಇರಲಿದೆ. ಈ ವಾರಿ 2 ವಾರಗಳ ಹತ್ತಿರದಲ್ಲೇ ಮನೆಗೆ ಬೀಗ ಬಿದ್ದಿದೆ. ಆದ್ರೆ ಇದಕ್ಕೂ ಮೊದಲು 70 ದಿನ ಪೂರೈಸಿದ್ದ ಬಿಗ್ ಬಾಸ್ ಅರ್ಧದಲ್ಲೇ ಷೋ ನಿಲ್ಲಿಸಿತ್ತು.
2021ರಲ್ಲಿ ಕೊರೊನಾ ಆರಂಭಗೊಂಡಾಗ ಈ ರೀತಿ ಮಾಡಲಾಗಿತ್ತು. ಕೊರೊನಾದಲ್ಲಿ ಲಾಕ್‌ಡೌನ್ ಘೋಷಣೆಗೂ ಮುನ್ನ ಬಿಗ್ ಬಾಸ್ ಆರಂಭಗೊಂಡಿತ್ತು, ಆದ್ರೆ ಮಧ್ಯದಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಷೋ ನಿಲ್ಲಿಸಬೇಕಾಯಿತು. ಸಮಯದಲ್ಲಿ ಸುಮಾರು 70 ದಿನಗಳ ಕಾಲ ಷೋ ನಡೆದಿತ್ತು. ಬಳಿಕ ಅರ್ಧದಲ್ಲೇ ಸ್ಪರ್ಧಿಗಳು ಹೊರಬರಬೇಕಾಯಿತು.
ಈಗಲ್ ಟನ್ ರೆಸಾರ್ಟ್ ಬಗ್ಗೆ
ಈ ಸೀಸನ್‌ನ ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ರೆಸಾರ್ಟ್‌ನಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬದಲಿಗೆ ಈ ಎಲ್ಲಾ ವಿವಾದಗಳು ಸರಿಯಾಗುವವರೆಗೂ ಸ್ಪರ್ಧಿಗಳು ಅಲ್ಲಿಯೇ ಉಳಿಯಲಿದ್ದಾರೆ. ಬಿಡದಿಯಲ್ಲಿರುವ ಈ ರೆಸಾರ್ಟ್ ರಾಜಕೀಯ ನಾಯಕರಿಂದಲೇ ಹೆಸರಾಗಿದೆ. ಆಪರೇಷನ್ ಕಾರಣಗಳಿಂದಾಗಿ ಈ ರೆಸಾರ್ಟ್ ಸುದ್ದಿಯಾಗುತ್ತೆ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಈ ರೆಸಾರ್ಟ್ ಬಹಳ ಸುದ್ದಿಯಾಗಿತ್ತು.
ಸರ್ಕಾರ ಬೀಳಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಲ್ ಟನ್ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದರು. ಆದ್ರೆ ಅಲ್ಲಿಯೂ ರೆಸಾರ್ಟ್ ಬೇರೆ ವಿಚಾರಗಳಿಂದ ಸುದ್ದಿಯಾಗಿತ್ತು, ಆಗ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.



Click it and Unblock the Notifications
