Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಬೀದರ್‌ನಲ್ಲಿ ಹಾಡಹಗಲೇ ಎಟಿಎಂಗೆ ತುಂಬಲು ತಂದಿದ್ದ 90 ಲಕ್ಷ ಹಣ ದರೋಡೆ: ಬೆಚ್ಚಿ ಬೀಳಿಸುತ್ತೆ ಈ ದುಷ್ಕರ್ಮಿಗಳ ಕ್ರೌರ್ಯ
ಹಾಡಹಗಲೇ ಭೀಕರ ದರೋಡೆ ನಡೆದಿದ್ದು ಇದನ್ನು ನೋಡಿದ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ, ಈ ರೀತಿಯಾದರೆ ಜನರಿಗೆ ಸುರಕ್ಷತೆ ಇದೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಆ ದರೋಡೆಯ ದೃಶ್ಯ. ಬೀದರ್‌ನಲ್ಲಿ ನಡೆದಿರುವ ಈ ದರೋಡೆಯನ್ನು ಆ ಸ್ಥಳದಲ್ಲಿದ್ದವರು ವೀಡಿಯೋ ಮಾಡಿದ್ದು ಆ ವೀಡಿಯೋಗಳು ವೈರಲ್ ಆಗಿವೆ. ಸಿನಿಮೀಯ ಶೈಲಿಯಲ್ಲಿ ಎಟಿಎಂ ಹಣ ಎಗರಿಸಿಕೊಂಡು ಹೋಗಿದ್ದು ಮಾತ್ರವಲ್ಲ ಬ್ಯಾಂಕ್ ಸಿಬ್ಬಂದಿಯೊಬ್ಬರ ಪ್ರಾಣ ಹೋಗಿದೆ, ಮತ್ತೊಬ್ಬರು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹಾಡಹಗಲೇ ಇಷ್ಟೊಂದು ರಾಜಾರೋಷವಾಗಿ ಬ್ಯಾಂಕ್ ಹಣ ದರೋಡೆಯಾಗುತ್ತಿದೆ ಎಂದಾದರೆ ಸಾಮಾನ್ಯ ಜನರಿಗೆ ಸುರಕ್ಷತೆಯೇನಿದೆ?
ಎಟಿಎಂನಲ್ಲಿ ಹಣ ತುಂಬಲು ಹೋಗುವಾಗ ವ್ಯಾನ್‌ನಲ್ಲಿ ಗನ್‌ಮ್ಯಾನ್ ಕೂಡ ಇರುತ್ತಾರೆ, ಆದರೆ ಇಂದು ಈ ಘಟನೆ ನಡೆಯುವಾಗ ಗನ್‌ಮ್ಯಾನ್ ಇರಲಿಲ್ಲ, ಚಾಲಕ ಹಾಗೂ ಬ್ಯಾಂಕ್‌ನ ಇಬ್ಬರು ಸಿಬ್ಬಂದಿಯಷ್ಟೇ ಬಂದಿದ್ದರು, ವ್ಯಾನ್ ನಿಲ್ಲಿಸಿ, ಹಣದ ಬಾಕ್ಸ್ ತೆಗೆದು ಎಟಿಎಂಗೆ ತುಂಬಲು ಹೋಗಬೇಕು ಅಷ್ಟರಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಸಿಬ್ಬಂದಿಗೆ ಖಾರದಪುಡಿ ಎರಚಿದ್ದಾರೆ, ಹಣದ ಪೆಟ್ಟಿಗೆ ನಿರಾಕರಿಸಿದ್ದಕ್ಕೆ ಗುಂಡಿನ ಮಳೆ ಸುರಿಸಿ, ಹಣ ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ಇಷ್ಟೆಲ್ಲಾ ಘಟನೆ ನಡೆದಿರುವುದು ಜನನಿಬಿಡ ಪ್ರದೇಶದಲ್ಲಿ!
ಯಾವುದೋ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿಲ್ಲ, ಆ ವೀಡಿಯೋದಲ್ಲಿ ಕಾಣಬಹುದು ಸುತ್ತ ಜನ ನಿಂತು ಈ ಘಟನೆಯನ್ನು ನೋಡುತ್ತಿದ್ದಾರೆ, ಗಾಡಿಗಳು ರಸ್ತೆಯಲ್ಲಿ ಓಡಾಡುತ್ತಿವೆ, ಆ ಇಬ್ಬರು ದರೋಡೆಕೋರರಿಗೆ ಮಾತ್ರ ಒಂದಿಷ್ಟೂ ಆತಂಕ ಇದ್ದಂತೆ ಇಲ್ಲ, ಹಣವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಇಷ್ಟು ದಿನ ಇಂಥ ದೃಶ್ಯ ಸಿನಿಮಾಗಳಲ್ಲಿ ನೋಡುತ್ತಿದ್ದೇವೆ, ಆದರೆ ಇಂದು ನಡೆದ ದರೋಡೆ ನೋಡಿ ಸ್ವಲ್ಪ ದೊಡ್ಡ ಮೊತ್ತದ ಹಣ ಸಾಗಿಸಲು ಭಯ ಪಡುವಂತೆ ಮಾಡಿದೆ.
90 ಲಕ್ಷದ ಹಣ ದರೋಡೆ
ಪ್ರಾಥಮಿಕ ವರದಿ ಪ್ರಕಾರ ಆ ಪೆಟ್ಟಿಗೆಯಲ್ಲಿ 90 ಲಕ್ಷ ರುಪಾಯಿ ಇತ್ತು ಎಂದು ತಿಳಿದು ಬಂದಿದೆ, ಎಸ್‌ಬಿಐನ ಪ್ರಮುಖ ಕಚೇರಿಯಲ್ಲಿರುವ ಎಟಿಎಂಗೆ ಹಣ ತುಂಬಲು ಯಾವುದೇ ಗನ್‌ಮ್ಯಾನ್ ಇಲ್ಲದೆ ಹಣವನ್ನು ತರಲಾಗಿತ್ತು. ಇದೆಲ್ಲದರ ಮಾಹಿತಿ ಆ ದರೋಡೆಕೋರರಿಗೆ ಸ್ಪಷ್ಟವಾಗಿ ಇದ್ದಂತಿದೆ, ಹೀಗಾಗಿ ಪ್ಲ್ಯಾನ್ ಮಾಡಿ ದರೋಡೆಕೋರರು ಹಣ ಎಗರಿಸುವ ಪ್ಲ್ಯಾನ್ ಮಾಡಿದ್ದಾರೆ. ವೀಡಿಯೋದಲ್ಲಿ ಗಮನಿಸಬಹುದು, ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ, ಒಂದು ರ್ಕಿನ್ ಹಾಕಿದ್ದಾರೆ, ಅದೂ ಬೈಕ್‌ನಲ್ಲಿ ಬಂದು ಹಣ ಎಗರಿಸಿ ಅಲ್ಲಿಂದ ಸಲೀಸಾಗಿ ಹೋಗಿದ್ದಾರೆ. ಅಷ್ಟೊಂದು ಜನ ಈ ದೃಶ್ಯ ಕಣ್ಣಾರೆ ನೋಡುತ್ತಿದ್ದರು ಅವರಿಗೆ ಏನೂ ಮಾಡೋಕೆ ಸಾಧ್ಯವಾಗಿರಲಿಲ್ಲ, ಏಕೆಂದರೆ ಆ ದರೋಡೆಕೋರರ ಕೈಯಲ್ಲಿ ಪಿಸ್ತೂಲು ಇತ್ತು, ಆದರೆ ಗನ್‌ಮ್ಯಾನ್ ಇದ್ದಿದ್ದರೆ ಇಂಥ ಘಟನೆ ತಪ್ಪಿಸಬಹುದಿತ್ತು. ಎಟಿಎಂಗೆ ಹಣ ತುಂಬಿಸಲು ಹೋಗುವಾಗ ಬ್ಯಾಂಕ್ ಕೆಲವೊಂದು ಪ್ರೋಟೋಕಾಲ್ ಪಾಲಿಸಬೇಕು, ಆದರೆ ಆ ಬಗ್ಗೆ ನಿರ್ಲಕ್ಷ್ಯ ಮಾಡಿರುವುದು ಈ ಘಟನೆ ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ.
ಎಷ್ಟು ಹಣವಿತ್ತು ಎಂಬ ಮಾಹಿತಿ ನನಗೆ ಇರಲಿಲ್ಲ ಎಂದು ಚಾಲಕ
ಹಣದ ಹೊತ್ತು ತರಲು ಬಳಸಿದ್ದ ವ್ಯಾನ್‌ನ ಮಾಲೀಕ ಪೆಟ್ಟಿಗೆಯಲ್ಲಿ ಎಷ್ಟು ಹಣ ಇತ್ತು ಎಂಬ ಮಾಹಿತಿ ಇರಲಿಲ್ಲ ಎಂಬುವುದಾಗಿ ಹೇಳಿದ್ದಾರೆ. ಈ ಘಟನೆ ನೋಡಿದಾಗ ಇದಕ್ಕಾಗಿ ದುಷ್ಕರ್ಮಿಗಳು ಪ್ರೀಪ್ಲ್ಯಾನ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ, ಅವರು ಖಾರದ ಪುಡಿ ಎರಚಿ ಸುಲಭವಾಗಿ ಹಣ ಎಗರಿಸಬಹುದು ಎಂದು ಆಲೋಚನೆ ಮಾಡಿರುವಂತಿದೆ, ಪ್ರತರೋಧ ವ್ಯಕ್ತವಾದಾಗ ಗುಂಡು ಹಾರಿಸಿ ಹಣದ ಪೆಟ್ಟಿಗೆ ಪಡೆದು ಅಲ್ಲಿಂದ ಹೋಗಿದ್ದಾರೆ, ಗನ್‌ಮ್ಯಾನ್ ಏಕಿರಲಿಲ್ಲ, ಹಣದ ವ್ಯಾನ್ ಬರುವ ಬಗ್ಗೆ ಇವರಿಗೆ ಯಾರಾದರು ಮಾಹಿತಿ ನೀಡಿದ್ರಾ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತದೆ.
ಎಟಿಎಂ ಲೂಟಿಯಾಗಿರುವ ಅನೇಕ ಘಟನೆಗಳು ನಡೆದಿವೆ, ಆದರೆ ಈ ರೀತಿಯಾಗಿರುವುದು ಇದೇ ಮೊದಲು
ಎಟಿಎಂ ಹಣ ಅನೇಕ ಬಾರಿ ಲೂಟಿಯಾಗಗಿರುವ ಘಟನೆಗಳು ಸಾಕಷ್ಟು ನಡೆದಿದೆ, ಆದರೆ ಹಣ ತರುವಾಗ ಅದರಲ್ಲಿಯೂ ಜನರು ಓಡಾಡುತ್ತಿರುವ ರಸ್ತೆಯಲ್ಲಿ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿರುವುದು ಇದೇ ಮೊದಲು ಅನ್ನಬಹುದು. ಯಾರ ಕೈಗೂ ಸಿಕ್ಕದೆ ಪರಾರಿಯಾಗಿರುವ ಅವರನ್ನು ಹಿಡಿಯಲು ಬಲೆ ಬೀಸಲಾಗಿದೆ.



Click it and Unblock the Notifications