Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
₹100 ಕೋಟಿ ಒಡೆಯ ಹಥ್ರಾಸ್‌ನ 'ಭೋಲೆ ಬಾಬಾ' ನಾಪತ್ತೆ..! ಈ ಬಾಬಾ ಯಾರು ಗೊತ್ತಾ?
ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ನಡೆದಿರುವ ಭೀಕರ ಘಟನೆ ನಿಮಗೆ ತಿಳಿದಿರಬಹುದು. ಕಳೆದ ಮಂಗಳವಾರ ಸತ್ಸಂಗ ಕಾರ್ಯಕ್ರಮದ ವೇಳೆ ಕಾಲ್ತುಳಿತ ಉಂಟಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ ಸುಮಾರು 123 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸಹ ಇದೆ. ಸದ್ಯ ಈ ಘಟನೆಗೆ ಕಾರಣರಾದವರ ಮೇಲೆ ಪ್ರಕರಣ ದಾಖಲಾಗಿದ್ದು, ಆತ ಈಗ ತಲೆ ಮರೆಸಿಕೊಂಡಿದ್ದಾನೆ.

ಭೋಲೆ ಬಾಬಾ ಅಥವಾ ನಾರಾಯಣ ಹರಿ ಸಕರ್ ಎಂದು ಕರೆಯಲ್ಪಡುವ ವ್ಯಕ್ತಿ ಈ ಕಾರ್ಯಕ್ರಮದ ಪ್ರಮುಖ ರುವಾರಿಯಾಗಿದ್ದ. ನಿಗದಿತ ಜಾಗದಲ್ಲಿ ಅತೀ ಹೆಚ್ಚು ಜನ ಸೇರಿದ್ದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. 200 ರಿಂದ 300 ಜನ ಸೇರಿಸುವಷ್ಟು ಜಾಗವಿದ್ದ ಕಡೆ ಬರೋಬ್ಬರಿ 1500ಕ್ಕೂ ಅಧಿಕ ಮಂದಿ ಸೇರಿದ್ದರು ಎನ್ನಲಾಗಿದೆ.
ಯಾರು ಈ ಭೋಲೆ ಬಾಬಾ?
ಭೋಲೆ ಬಾಬಾ ಅಥವಾ ನಾರಾಯಣ ಹರಿ ಸಕರ್ ಎಂದು ಎಂದು ಕರೆಯಲ್ಪಡುವ ಬಾಬಾ ಈ ಊರಿನಲ್ಲಿ ತುಂಬಾನೆ ಫೇಮಸ್ ಅಂತೆ. ಆತ ಧಾರ್ಮಿಕ ಹಿತವಚನ ನಡೆಸಿಕೊಂಡು ಬಂದಿರುತ್ತಾನೆ. ಆದ್ರೆ ನೀವಂದುಕೊಂಡಂತೆ ಆತ ಬರೀ ಬಾಬಾ ಮಾತ್ರವಲ್ಲ ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿ.
ಹೌದು ವರದಿಗಳ ಪ್ರಕಾರ ಆತನ ಬಳಿ ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾನೆ. ಜೊತೆಗೆ ಶ್ರೀ ನಾರಾಯಣ ಹರಿ ಸಕರ್ ಚಾರಿಟೇಬಲ್ ಟ್ರಸ್ಟ್ ಸಹ ಇದ್ದು, ಕೋಟಿ ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಖಾವಿ ಧರಿಸಲ್ಲ ಈ ಬಾಬಾ!
ಈತ ಐಚಾರಾಮಿ ಬದುಕು ನಡೆಸುತ್ತಿದ್ದು, ಖಾವಿ ಬಟ್ಟೆ ಧರಿಸುವುದಿಲ್ಲವಂತೆ. ಭೋಲೆ ಬಾಬಾ ತನ್ನ ಭಕ್ತರ ಮುಂದೆ ಬರುವಾಗ ಬಿಳಿಯ ಬಟ್ಟೆ ಕಪ್ಪು ಕನ್ನಡಕ ಟೈ ಮತ್ತು ಫ್ಯಾಶನ್ ಚಪ್ಪಲಿ ಧರಿಸಿರುತ್ತಾರೆ. ಜೊತೆಗೆ ಹಿಂದೆ ಮುಂದೆ ಆತನಿಗೆ ಭದ್ರತಾ ಸಿಬ್ಬಂದಿ ಇರುತ್ತಾರೆ.
ಅದರಲ್ಲಿ 16 ಕಮಾಂಡೋಗಳು ಕಪ್ಪು ಬಟ್ಟೆ ಧರಿಸಿ ಆತನ ಕಾವಲಿಗಿರುತ್ತಾರೆ. 15 ರಿಂದ 30 ಕಾರುಗಳ ಬೆಂಗಾವಲು, ಬೈಕ್‌ಗಳ ಮೂಲಕ ಅವರನ್ನು ಫಾಲೋ ಮಾಡುತ್ತಿರುತ್ತಾರೆ. ಅಚ್ಚರಿ ಎಂದರೆ ಅವರು ಬಳಸುವ ಕಾರುಗಳು ಬಿಳಿ ಬಣ್ಣ ಹಾಗೂ ಕಾರಿನ ಒಳಗಿನ ಎಲ್ಲಾ ವಸ್ತುಗಳು ಬಿಳಿ ಬಣ್ಣದಿಂದಲೇ ಕೂಡಿರುತ್ತವೆ ಎಂದು ತಿಳಿದುಬಂದಿದೆ.
ಬಿಚುವಾದಲ್ಲಿರುವ ಮೈನ್‌ಪುರಿ ಆಶ್ರಮ ಇವರ ಆಸ್ತಿಯಲ್ಲಿ ಒಂದಾಗಿದೆ. ಇದು 21 ಬಿಘಾ ಭೂಮಿಯಲ್ಲಿ ಹರಡಿದೆ ಮತ್ತು ಹರಿ ನಗರ ಎಂದು ಹೆಸರಿಸಲಾಗಿದೆ. ಈ ವಿಸ್ತಾರವಾದ ಎಸ್ಟೇಟ್‌ನಲ್ಲಿ ಆರು ಕೊಠಡಿಗಳು ಆತನಿಗೆ ಮತ್ತು ಅವನ ಹೆಂಡತಿಗೆ ಪ್ರತ್ಯೇಕವಾಗಿ ಮೀಸಲಾಗಿದೆ. ಅವರ ಮೈನ್‌ಪುರಿ ಆಶ್ರಮದ ಪ್ರವೇಶದ್ವಾರದಲ್ಲಿ, ಬೋರ್ಡ್‌ನಲ್ಲಿ ಕನಿಷ್ಠ ₹10,000 ರಿಂದ ಗರಿಷ್ಠ ₹2.5 ಲಕ್ಷದವರೆಗಿನ ಮೊತ್ತವನ್ನು ಕೊಡುಗೆ ನೀಡಿದ 200 ದಾನಿಗಳ ಹೆಸರು ಕೆತ್ತನೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಇವರಿಗೆ ಸೇರಿರುವ ಸುಮಾರು 24 ಆಶ್ರಮಗಳಿವೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಈ ಹತ್ರಾಸ್ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಮಂದಿ ಆಗಮಿಸಿದ್ದು ಈ ಘಟನೆಗೆ ಕಾರಣವಾಗಿದೆ ಎಂದು ಅವರ ಅನುಯಾಯಿಯೊಬ್ಬರು ಹೇಳಿಕೊಂಡಿದ್ದಾರೆ. ಸದ್ಯ ಬಾಬಾರ ಕೆಲವು ಅನುಯಾಯಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.



Click it and Unblock the Notifications

