Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಜುಲೈ 9ಕ್ಕೆ ಭಾರತ್ ಬಂದ್: 25 ಕೋಟಿ ಕಾರ್ಮಿಕರ ಬೆಂಬಲ, ಯಾವೆಲ್ಲಾ ಸೇವೆ ಇರಲ್ಲ..!
ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ ಭಾರತ್ ಬಂದ್‌ಗೆ ಕರೆ ನೀಡಿವೆ. ಬರೋಬ್ಬರಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಬಂದ್‌ಗೆ ಬೆಂಬಲ ನೀಡಲಿದ್ದು, ಇದು ಅತೀ ದೊಡ್ಡ ಬಂದ್ ಕರೆ ಆಗಿರಲಿದೆ. ಈಗಾಗಲೇ ಇಡೀ ಭಾರತದಲ್ಲಿ ಬಂದ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ, ಮತ್ತು ರಾಷ್ಟ್ರ ವಿರೋಧಿ ಕರ್ಪೋರೇಟ್ ಪರ ನೀತಿಗಳ ವಿರೋಧಿಸಿ ಸುಮಾರು 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಅವುಗಳ ಬೆಂಬಲ ಸಂಘಟನೆಗಳು ಬಂದ್‌ಗೆ ಕರೆ ನೀಡಿದೆ. ಹಾಗೆ ಗ್ರಾಮೀಣ ಮಟ್ಟದಲ್ಲೂ ಬಂದ್ ಆಚರಿಸುವಂತೆ ಮನವಿ ಮಾಡಿವೆ.

ದಿನಾಂಕ ಜುಲೈ 9ರಂದು ಭಾರತ್ ಬಂದ್ ಯಶಸ್ವಿಗೊಳಿಸಲು ಹಲವು ಸಂಘಟನೆಗಳು ಸಿದ್ದತೆಯಲ್ಲಿವೆ. ಇದಕ್ಕಾಗಿ ಔಪಚಾರಿಕೆ ಹಾಗೆ ಅನೌಪಚಾರಿಕ ಸಂಘಟನೆಗಳು ಕೂಡ ಸಿದ್ಧತೆ ನಡೆಸಿವೆ ಎಂದು ತಿಳಿದುಬಂದಿದೆ. 25 ಕೋಟಿಗೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಪ್ರತಿಭಟನೆಯಲ್ಲಿ ಸೇರುತ್ತಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ತಿಳಿಸಿದೆ.
ಮುಷ್ಕರರಿಂದ ಯಾವೆಲ್ಲಾ ಸೇವೆಯಲ್ಲಿ ವ್ಯತ್ಯಯ ನೋಡಿ
ಈ ಮುಷ್ಕರದಿಂದಾಗಿ ಬ್ಯಾಂಕಿಂಗ್, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು ಮತ್ತು ರಾಜ್ಯ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿಂದ್ ಮಜ್ದೂರ್ ಸಭಾ ತಿಳಿಸಿದೆ. ಹಾಗೆ ರೈಲ್ವೆ ವಲಯ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ. ಕಳೆದ ವರ್ಷವೇ 17 ಬೇಡಿಕೆಗಳನ್ನು ಸರ್ಕಾರದ ಮುಂಡಿಸಲಾಗಿದ್ದು, ಆ ಕುರಿತಾದ ಖಚಿತ ಭರವಸೆಗೆ ಪಟ್ಟು ಹಿಡಿಯಲಾಗಿದೆ.
ಕಳೆದ 10 ವರ್ಷಗಳಿಂದ ಸರ್ಕಾರ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ನಡೆಸುತ್ತಿಲ್ಲ ಮತ್ತು ಕಾರ್ಮಿಕ ಬಲದ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಹೊಸ ನೀತಿಗಳು, ಕನಿಷ್ಠ ಬೆಂಬಲ ದರ ಹೀಗೆ ಹಲವು ಬೇಡಿಕೆಗಳ ಮುಂದಿಡಲಾಗಿದೆ ಎಂದು ತಿಳಿದುಬಂದಿದೆ.
ಆರ್ಥಿಕ ನೀತಿಗಳು ನಿರುದ್ಯೋಗ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವೇತನ ಇಳಿಕೆ, ಶಿಕ್ಷಣ, ಆರೋಗ್ಯ, ಮೂಲಭೂತ ನಾಗರಿಕ ಸೌಲಭ್ಯಗಳಲ್ಲಿ ಸಾಮಾಜಿಕ ವಲಯದ ವೆಚ್ಚದಲ್ಲಿ ಕಡಿತಕ್ಕೆ ಕಾರಣವಾಗುತ್ತಿವೆ. ಮಧ್ಯಮ ವರ್ಗ ಶ್ರೀಮಂತರ ನಡುವಿನ ಅಸಾಮಾನತೆ, ಕಾರ್ಪೋರೇಟ್ ಹಿತಾಸಕ್ತಿಯಂತಹ ವಿಚಾರಗಳು ಪ್ರತಿಭಟನೆಯ ಉದ್ದೇಶವಾಗಿರಲಿದೆಯಂತೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತಷ್ಟು ನಿರುದ್ಯೋಗಕ್ಕೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ, ವೇತನ ಇಳಿಕೆಗೆ, ಸಾಮಾಜಿಕ ವಲಯಗಳ ಮೇಲಿನ ವೆಚ್ಚ ಇಳಿಕೆಗೆ ಕಾರಣವಾಗುತ್ತಿವೆ. ಇವೆಲ್ಲವೂ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ ಎಂದು ಸಂಘಟನೆಗಳು ಹೇಳಿವೆ. ಕಾರ್ಮಿಕ ಸಂಘಗಳು ಈ ಹಿಂದೆ 2020 ರ ನವೆಂಬರ್ 26, 2022 ರ ಮಾರ್ಚ್ 28-29 ಮತ್ತು ಕಳೆದ ವರ್ಷ ಫೆಬ್ರವರಿ 16 ರಂದು ಕೂಡ ಇದೇ ರೀತಿ ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಿದ್ದವು.
ಈಗ ಭಾರತ್ ಬಂದ್‌ಗೆ AITUC, HMS, CITU, INTUC, AIUTUC, TUCC, SEWA, AICCTU, LPF ಮತ್ತು UTUC ಸೇರಿದಂತೆ ಒಟ್ಟು 10 ಕೇಂದ್ರೀಯ ಸಂಘಟನೆಗಳು ಹಾಗೂ ಮಿತ್ರ ಸಂಘಗಳು ಕರೆ ನೀಡಿವೆ. ಭಾರತೀಯ ಮಜ್ದೂರ್ ಸಂಘ ಈ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ಹೇಳಿಕೊಂಡಿದೆ. ಸದ್ಯ ಈ ಬಂದ್‌ನಿಂದಾಗಿ ಸಾರ್ವಜನಿಕರ ಸಿಗಬೇಕಾಗಿದ್ದ ಕೆಲವು ಸೇವೆಗಳಲ್ಲಿ ವ್ಯತ್ಯಯ ಆಗುವುದು ಖಚಿತ, ಹಾಗೆ ಪ್ರತಿಭಟನೆಯ ಕಾವು ಪ್ರಾದೇಶಿಕವಾಗಿ ಪರಿಣಾಮದಲ್ಲಿ ವ್ಯತ್ಯಾಸ ಗಮನಿಸಬಹುದಾಗಿದೆ.



Click it and Unblock the Notifications
