Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಾದ್ರಪದ ಮಾಸ ಯಾವಾಗ ಶುರು: ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಭಾದ್ರಪದ ಮಾಸ ನಮಗೆಲ್ಲಾ ಸಡಗರದ ಮಾಸ, ಏಕೆಂದರೆ ಈ ಮಾಸದಲ್ಲಿ ತಾನೆ ಗಣಪ ಮನೆ ಮನೆಗೆ ಬರುವುದು, ಈ ಭಾದ್ರಪದ ಮಾಸ ಮೂರ್ತಿ ಸಂಭ್ರಮವೋ ಸಂಭ್ರಮ, ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ರಿಂದ ಶುರುವಾದರೆ ಕರ್ನಾಟಕದಲ್ಲಿ ಸೆಪ್ಟೆಂಬರ್ 4ರಿಂದ ಶುರುವಾಗುವುದು.
ಭಾದ್ರಪದ ಮಾಸ ಎಲ್ಲಿಂದ ಎಲ್ಲಿಯವರೆಗೆ ಇರಲಿದೆ? ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು ಹಾಗೂ ವ್ರತ ನಿಯಮಗಳೇನು ಎಂದು ನೋಡೋಣ ಬನ್ನಿ:

ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳುಗಳು ಹಾಗೂ ಶುಭ ದಿನಗಳು
ಸೆಪ್ಟೆಂಬರ್ 5: ಬಲರಾಮ ಜಯಂತಿ, ಧನ್ವಂತರಿ ಜಯಂತಿ
ಸೆಪ್ಟೆಮಬರ್ 6: ವರಹ ಜಯಂತಿ
ಸೆಪ್ಟೆಂಬರ್ 6: ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 7: ಗಣೇಶ ಚತುರ್ಥಿ
ಸೆಪ್ಟೆಂಬರ್ 8: ರಿಷಿ ಪಂಚಮಿ
ಸೆಪ್ಟೆಂಬರ್ 15: ವಾಮನ ಜಯಂತಿ
ಸೆಪ್ಟೆಂಬರ್ 17: ಅನಂತ ಚತುರ್ದಶಿ
ಸೆಪ್ಟೆಂಬರ್ 18-ಅಕ್ಟೋಬರ್ 2ರವರೆಗೆ ಪಿತೃಪಕ್ಷ
ಸೆಪ್ಟೆಂಬರ್ 24: ಕಾಲಾಷ್ಟಮಿ
ಅಕ್ಟೋಬರ್ 14: ಮಹಾಲಯ ಶ್ರಾದ್ಧ
ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಚತುರ್ಥಿ
ಸೆಪ್ಟೆಂಬರ್ 21ರಂದು ಆಚರಿಸಲಾಗುವುದು.
ಚಂದ್ರೋದಯ ಸಮಯ: ರಾತ್ರಿ 8:43
ಭಾದ್ರಪದದಲ್ಲಿ ಏಕಾದಶಿ ದಿನಗಳು
ಪರಿವರ್ತನಿ ಏಕಾದಶಿ: ಸೆಪ್ಟೆಂಬರ್ 14
ಇಂದಿರಾ ಏಕಾದಶಿ: ಸೆಪ್ಟೆಂಬರ್ 28
ಭಾದ್ರಪದ ಮಾಸದಲ್ಲಿ ಪ್ರದೋಷ ವ್ರತದ ದಿನಗಳು
ಸೆಪ್ಟೆಂಬರ್ 15, ಸೆಪ್ಟೆಂಬರ್ 30
ಭಾದ್ರಪದ ಮಾಸದ ಮಹತ್ವ
ಭಾದ್ರಪದ ಮಾಸವೆಂದರೆ ಗಣಪತಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲು ಇರುವ ಮಾಸವಾಗಿದೆ. ಭಾದ್ರಪದ ಮಾಸದಲ್ಲಿ ಪೂಜೆ ಮತ್ತು ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಭಾದ್ರಪದ ಮಾಸದಲ್ಲಿ ದಾನಕ್ಕೆ ತುಂಬಾನೇ ಮಹತ್ವವಿದೆ
ಈ ಮಾಸದಲ್ಲಿ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಬಡವರಿಗೆ ದಾನ ಮಾಡಬೇಕು, ಗೋಧಿ, ಅಕ್ಕಿ, ಬೇಳೆಕಾಳು ಇತ್ಯಾದಿಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆಹಾರವಸ್ತುಗಳನ್ನು, ಬಟ್ಟೆಗಳನ್ನು ದಾನ ಮಾಡುವುದರಿಂದ ಶ್ರೀ ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಶ್ರೀ ಗಣೇಶನ ಕೃಪೆಯಿದ್ದರೆ ಬದುಕಿನಲ್ಲಿನ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗಿದೆ.
ಓಂ ಗಮ್ ಗಣಪತಯೇ ನಮಃ
ಈ ಬೀಜ ಮಂತ್ರ ಪ್ರತಿದಿನ ಪಠಿಸಿ
ಓಂ ಶ್ರೀ ಗಣೇಶಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications
