Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೈಲಿನಲ್ಲಿ ಒಣಕೊಬ್ಬರಿ ತೆಗೆದುಕೊಂಡು ಹೋದರೆ ಜೈಲು ಫಿಕ್ಸ್!! ಈ ನಿಯಮ ಏಕಿದೆ ಗೊತ್ತಾ?
ವಿಶ್ವದ ಅತಿದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಪ್ರಯಾಣಿಕರ ಹೊತ್ತು ಸಾಗುತ್ತದೆ. ಭಾರತದ ಬಹುತೇಕ ಕಡೆಗಳಿಗೆ ಈಗ ರೈಲ್ಬೆ ಸಂಪರ್ಕವಿದೆ. ಅದ್ರಲ್ಲೂ ಭಾರತದ ಹಲವು ಭಾಗದಲ್ಲಿ ರೈಲು ಬಿಟ್ಟು ಬೇರೆ ಯಾವುದೇ ಸಂಪರ್ಕ ಸೇತುವೆಗಳಿಲ್ಲ. ಹೀಗಾಗಿ ಭಾರತೀಯ ರೈಲ್ವೆಯು ಜನರ ಜೀವಾಳವಾಗಿದೆ. ಇನ್ನು ಬಹುತೇಕ ಎಲ್ಲಾ ನಗರಗಳಲ್ಲಿ ಹಾದು ಹೋಗುವ ರೈಲು ಮಾರ್ಗ ಜನರ ನಿತ್ಯದ ಬದುಕು ಕಟ್ಟಿಕೊಡುತ್ತದೆ.
ಹಾಗೆ ಈಗ ಆಧುನಿಕರಣಗೊಳ್ಳುತ್ತಿರುವ ರೈಲ್ವೆಯು ಹೊಸ ನಿಯಮಗಳು, ಸುರಕ್ಷತಾ ವಿಧಾನಗಳ ಜಾರಿ ಮಾಡುವುದು ನೋಡಬಹುದು. ರೈಲು ಅಪಘಾತಗಳ ತಡೆಯಲು ತಂತ್ರಜ್ಞಾನಗಳು, ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆ, ಸೂಕ್ತ ತರಬೇತಿಯಂತಹ ಕ್ರಮಕ್ಕೂ ಅದು ಮುಂದಾಗುವುದು ನೋಡಬಹುದು. ಇನ್ನು ಈ ಸಮಯದಲ್ಲಿ ಅಪಘಾತ ತಡೆಯಲು ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮುಖ್ಯ.

ಹಾಗೆ ಭಾರತೀಯ ರೈಲ್ವೆಯು ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ರೈಲು ಪ್ರಯಾಣದ ವೇಳೆ ಬಳಸದಂತೆ ಸೂಚಿಸುತ್ತದೆ. ಮತ್ತೆ ಕೆಲವು ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗುವುದು ನಿಷಿದ್ಧಗೊಂಡಿದ್ದು, ದಂಡಕ್ಕೂ ಇದು ದಾರಿಯಾಗುತ್ತದೆ. ಅಂತಹ ಕೆಲವು ವಸ್ತುಗಳಲ್ಲಿ ಒಣ ಕೊಬ್ಬರಿ ಕೂಡ ಒಂದಾಗಿದೆ. ಕೊಬ್ಬರಿಯು ಅಪಾಯಗಳ ತರಬಹುದು ಎಂಬ ಕಾರಣದಿಂದ ಸಾಗಾಟ ನಿಷೇಧಿಸಲಾಗಿದೆ.
ನಿಮಗೆ ಅಚ್ಚರಿಯಾಗಬಹುದು ಭಾರತೀಯ ರೈಲ್ಬೆಯು ಪ್ರಯಾಣಿಕರು ಒಣ ಕೊಬ್ಬರಿಯನ್ನು ರೈಲಿನಲ್ಲಿ ಸಾಗಿಸುವುದನ್ನು ನಿಷೇಧಿಸುತ್ತದೆ. ರೈಲ್ವೆ ನಿಯಮಗಳ ಪ್ರಕಾರ ಈ ರೀತಿಯ ಒಣ ಕೊಬ್ಬರಿಯನ್ನು ತೆಗೆದುಕೊಂಡು ಹೋಗುವುದು ಅಪಾಯಕಾರಿ ಎಂದು ಹೇಳಿದೆ. ರೈಲ್ವೆಯ ಪ್ರಮುಖ ನಿಯಮಗಳ ಪ್ರಕಾರ ಸ್ಟೌವ್‌ಗಳು, ಗ್ಯಾಸ್ ಸಿಲಿಂಡರ್‌ಗಳು, ರಾಸಾಯನಿಕಗಳು, ಪಟಾಕಿ, ಚರ್ಮ ಅಥವಾ ಒದ್ದೆಯಾದ ಚರ್ಮ, ಗ್ರೀಸ್, ಸಿಗರೇಟ್ ಮತ್ತು ಸ್ಫೋಟಕಗಳಂತಹ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಬಾರದು.
ಅದರಲ್ಲೂ ಒಣ ಕೊಬ್ಬರಿಯು ಅದರ ಸುತ್ತಲೂ ಒಣಗಿರುವ ನಾರಿನ ಪದಾರ್ಥ ಹೊಂದಿರಲಿದೆ. ಒಮ್ಮೆ ಇದಕ್ಕೆ ಬೆಂಕಿ ತಗುಲಿದರೆ ಅದರನ್ನು ನಂದಿಸುವುದು ಬಹಳ ಕಷ್ಟ, ಹೀಗಾಗಿ ಒಣ ಕೊಬ್ಬರಿಯನ್ನ ತೆಗೆದುಕೊಂಡು ಹೋಗುವುದು ನಿಷೇಧವಾಗಿದೆ. ಯಾವುದೇ ಪ್ರಯಾಣಿಕನು ರೈಲಿನಲ್ಲಿ ನಿಷೇಧಿತ ವಸ್ತುಗಳೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ರೈಲ್ವೆ ಅವನ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ಪ್ರಯಾಣಿಕನಿಗೆ 1,000 ರೂ. ದಂಡ ಇಲ್ಲವೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಇಲ್ಲವೆ ಎರಡನ್ನೂ ವಿಧಿಸುವ ಅಧಿಕಾರ ಹೊಂದಿದೆ. ಹಾಗೆ ಈ ವಸ್ತುಗಳ ತೆಗೆದುಕೊಂಡು ಹೋಗುವಾಗ ಅಹಿತಕರ ಘಟನೆಗಳು ಸಂಭವಿಸಿದರೆ, ರೈಲ್ವೆಗೆ ಹಾನಿಯಾದರೆ ಆ ನಷ್ಟ ಕೂಡ ಪ್ರಯಾಣಿಕರೆ ಭರಿಸಬೇಕಾಗುತ್ತದೆ. ಇನ್ನು ಹಸಿ ತೆಂಗಿನಕಾಯಿಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಹುದು.
ಹಾಗೆ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ರೈಲು ಪ್ರಯಾಣದ ವೇಳೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಕೂಡ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ವೈದ್ಯಕೀಯ ತುರ್ತು ಪರಿಸ್ಥಿತಿ, ಹಾಗೆ ಕೆಲವು ಮಾರ್ಗಸೂಚಿಗಳ ಅನುಸರಿಸುವ ಮೂಲಕ ತೆಗೆದುಕೊಂಡು ಹೋಗಬಹುದು. ಹಾಗೆ ಯಾವುದೇ ಪ್ರಯಾಣಿಕರು ರೈಲು ಅಥವಾ ರೈಲ್ವೆ ಆವರಣದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿದರೆ ದಂಡ ವಿಧಿಸಲಾಗುತ್ತದೆ.
ಮದ್ಯಪಾನ ಮಾಡಿದ ನಂತರದಲ್ಲಿ ಅಥವಾ ಮದ್ಯದ ಬಾಟಲಿಯೊಂದಿಗೆ ರೈಲು ಪ್ರಯಾಣದಲ್ಲಿ ತೊಡಗುವಂತಿಲ್ಲ. ಹೀಗೆ ಮದ್ಯದೊಂದಿಗೆ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರೆ 6 ತಿಂಗಳ ಜೈಲು ಶಿಕ್ಷೆ ಹಾಗೂ 500 ರೂಪಾಯಿ ದಂಡ ವಿಧಿಸಬಹುದು. ಹಾಗೆ ಅಸಭ್ಯ ವರ್ತನೆ, ಕಿರುಕುಳ, ಸಕಾರಾತ್ಮಕ ಉದ್ದೇಶವಿಲ್ಲದೆ ಚೈನ್ ಪುಲ್ಲಿಂಗ್, ಟಿಟಿಯೊಂದಿಗೆ ಸಹಕರಿಸದಿದ್ದರೂ ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬಹುದು.



Click it and Unblock the Notifications

