Latest Updates
-
ಸೋಶಿಯಲ್ ಮೀಡಿಯಾ ಕಿರಿಕಿರಿ: ನಿಮ್ಮ ಸಂಬಂಧವನ್ನು ವದಂತಿಗಳಿಂದ ರಕ್ಷಿಸಿ ನೆಮ್ಮದಿಯಾಗಿರಲು ದಂಪತಿಗಳು ಪಾಲಿಸಬೇಕಾದ ಸೀಕ್ರೆಟ್ ಟಿಪ್ಸ್ -
ದಿಢೀರ್ ಬಿರುಗಾಳಿ ಮತ್ತು ಬಿಸಿಲಿನಿಂದ ನಿಮ್ಮ ಬಾಲ್ಕನಿ ಹಾಳಾಗುತ್ತಿದೆಯೇ? ಮನೆಯನ್ನು ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ ಸ್ಟ್ರೋಕ್ ತಡೆಯಲು ಈ ತಂಪು ಆಹಾರಗಳೇ ನಿಮಗೆ ಮದ್ದು! -
ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೀರಾ? ನಿಮ್ಮ ಜೇಬಿಗೆ ಹೊರೆಯಾಗದಂತೆ ಇಂಧನ ಉಳಿಸಲು ಇಲ್ಲಿವೆ ನೋಡಿ ಬೆಸ್ಟ್ ಟಿಪ್ಸ್! -
ಡೇಟಿಂಗ್ ಆಪ್ ಬಳಸುವ ಮುನ್ನ ಎಚ್ಚರ: ನಿಮ್ಮನ್ನು ಬಲಿಪಶು ಮಾಡುವ ಹನಿಟ್ರ್ಯಾಪ್ ಜಾಲದ ಅಸಲಿ ಮುಖ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ಮತ್ತು ಗಿಡಗಳನ್ನು ರಕ್ಷಿಸುವುದು ಹೇಗೆ? ತಾಪಮಾನ ಏರಿಕೆಯ ನಡುವೆ ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ!
ಸ್ವಾತಂತ್ರ್ಯ ದಿನಾಚರಣೆ 2020: ಸ್ವಾತಂತ್ರ ದಿನಾಚರಣೆ: ದೇಶಭಕ್ತಿ ಸಾರುವ ಧಿರಿಸಿಗೆ ಕೆಲವು ಸಲಹೆ
ಭಾರತದ 74ನೇ ಸ್ವಾತಂತ್ರ ದಿನಾಚರಣೆಗೆ ಎಲ್ಲೆಡೆ ದೇಶಭಕ್ತಿಯ ಸಡಗರ ಆರಂಭವಾಗಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಭಾವ ಇರುತ್ತಾದರೂ ಅದನ್ನು ವ್ಯಕ್ತಪಡಿಸುವ ಪರಿ ಅವರ ಮನೋಧರ್ಮಕ್ಕೆ ತಕ್ಕಂತೆ ಭಿನ್ನವಿರುತ್ತದೆ. ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವವರು ದೇಶಭಕ್ತಿ ಸಾರುವಂಥ ಉಡಪುಗಳನ್ನು ಧರಿಸುವ ಮೂಲಕ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ.

ಹಾಗಿದ್ದರೆ ಸ್ವಾತಂತ್ರೋತ್ಸವದ ವಿಶೇಷ ಯಾವ ರೀತಿ ಆಕರ್ಷಕ, ವಿಭಿನ್ನ ಉಡುಪುಗಳನ್ನು ಧರಿಸಬೇಕು, ಎಂಥಹ ಉಡುಪುಗಳು ಸೂಕ್ತವೆನಿಸುತ್ತದೆ ಇಲ್ಲಿದೆ ಕೆಲವು ಸಲಹೆಗಳು.

ಖಾದಿ ಉಡುಪು
ಸ್ವದೇಶಿ ನಿರ್ಮಿತ ಖಾದಿ ಉಡುಪು ಸ್ವಾತಂತ್ರ್ಯ ದಿನಕ್ಕೆ ಅತ್ಯಂತ ಸೂಕ್ತ ಧಿರಿಸು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ದೇಶಭಕ್ತರು ಸಹ ಇದೇ ಉಡುಪನ್ನು ಹೆಚ್ಚಾಗಿ ಧರಿಸುತ್ತಿದ್ದರು. ಸರಳತೆ, ನೈತಿಕ ಪರಿಶುದ್ಧತೆ ಹಾಗೂ ಗೌರವದ ಸಂಕೇತವಾಗಿ ಖಾದಿ ಉಡುಪು ಮಹತ್ವ ಪಡೆದಿದೆ.

ತ್ರಿವರ್ಣದ ಟಿ-ಶರ್ಟ್ ಅಥವಾ ಕುರ್ತಾ
ಟ್ರೆಂಡಿಯಾದ ಉಡುಪನ್ನು ಇಷ್ಟಪಡುವವರು ಜೀನ್ಸ್ ಪ್ಯಾಂಟ್ ಗೆ ತ್ರಿವರ್ಣದ ವಿನ್ಯಾಸ ಇರುವ ಟಿ-ಶರ್ಟ್ಸ ಗಳನ್ನು ಅಥವಾ ಕುರ್ತಾಗಳನ್ನು ಧರಿಸಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಐ ಲವ್ ಇಂಡಿಯಾ, ತ್ರಿವರ್ಣದ ಟಿ-ಶರ್ಟ್ಸ, ಕುರ್ತಾಗಳು ಗಳು ಲಭ್ಯವಿದೆ.

ತ್ರಿವರ್ಣದ ಯಾವುದೇ ಬಣ್ಣದ ಧಿರಿಸು
ರಾಷ್ಟ್ರಧ್ವಜದಲ್ಲಿರುವ ಯಾವುದೇ ಒಂದು ಬಣ್ಣವನ್ನು ಎತ್ತಿತೋರಿಸುವಂಥ ಧಿರಿಸು ಈ ದಿನಕ್ಕೆ ಸೂಕ್ತವೆನಿಸುತ್ತದೆ. ಕೇಸರಿ, ಬಿಳಿ, ಹಸಿರು, ನೀಲಿ ಯಾವುದೇ ಬಣ್ಣದ ಉಡುಪು ಸಿಂಪಲ್ ಲುಕ್ ನೀಡುತ್ತದೆ ಅಲ್ಲದೇ ದೇಶಭಕ್ತಿಯ ಪ್ರತೀಕವಾಗಿ ಕಾಣುತ್ತದೆ.

ತಿರಂಗದ ಪೇಟ
ಮೂರುಬಣ್ಣಗಳಿರುವ ಪೇಟ ಅತ್ಯಾಕರ್ಷಕ ಧಿರಿಸಾಗಿದೆ. ನಮ್ಮ ಸಂಪೂರ್ಣ ಲುಕ್ ಅನ್ನೇ ಬದಲಾಯಿಸುತ್ತದೆ ಅಲ್ಲದೇ ಎಲ್ಲರ ಚಿತ್ತ ಸೆಳೆಯುವಂತೆ ಮಾಡುತ್ತದೆ. ಇದನ್ನು ಪುರುಷರಂತೆ ಮಹಿಳೆಯರು ಸಹ ಧರಿಸಬಹುದಾಗಿದೆ. ಸಿದ್ಧ ಪೇಟವೂ ಲಭ್ಯವಿದ್ದು, ದುಪಟ್ಟ ಅಥವಾ ಸೀರೆಯಲ್ಲಿ ಪೇಟವನ್ನು ಕಟ್ಟಿಕೊಳ್ಳಬಹುದಾಗಿದೆ.

ಸೀರೆ
ಸ್ವಾತಂತ್ರ ದಿನಾಚರಣೆಗೆ ಅತ್ಯಂತ ಸೂಕ್ತ ಧಿರಿಸು ಸೀರೆ. ಸಾಂಪ್ರದಾಯಿಕವಾಗಿ ಕಾಣಲು ಇಚ್ಚಿಸುವವರು ಸಣ್ಣ ಅಂಚಿನ ರೇಷ್ಮೆ ಸೀರೆ, ಮುಡಿಗೆ ಬಿಳಿ ಹೂ ಮುಡಿದರೆ ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೇ ಸೀರೆಗಳಲ್ಲೂ ತ್ರಿವರ್ಣ ವಿನ್ಯಾಸದ ಸೀರೆಗಳು ಲಭ್ಯವಿದ್ದು, ಬಿಳಿ ಸೀರೆ ನಡುವೆ ತಿರಂಗ ಅಥವಾ ರಾಜಸ್ತಾನದ ಲೆಹೆರಿಯಾ ವಿನ್ಯಾಸದ ಸೀರೆಗಳನ್ನು ಉಟ್ಟು, ಸೂಕ್ತ ಆಭರಣಗಳನ್ನು ತೊಟ್ಟರೆ ಟ್ರೆಂಡಿಯಾಗಿ ಕಾಣಬಹುದು.



Click it and Unblock the Notifications