Latest Updates
-
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ
ವೈದಿಕ ಶಾಸ್ತ್ರದ ಪ್ರಕಾರ ಯಾರು ರಾಜಕೀಯದಲ್ಲಿ ಯಶಸ್ಸು ಕಾಣುತ್ತಾರೆ?
ರಾಜಕೀಯದಲ್ಲಿ ಬೆಳೆಯಬೇಕೆಂದರೆ ಅವನು ಉತ್ತಮ ನಾಯಕನಾಯಕನಾಗಬೇಕು, ಉತ್ತಮ ನಾಯಕಬೇಕೆಂದರೆ ಅವನಲ್ಲಿ ನಾಯಕತ್ವದ ಗುಣಗಳಿರಬೇಕು, ಸಂವಹನದ ಕೌಶಲ್ಯ ಇರಬೇಕು ಅದರ ಯೋಗವೂ ಇರಬೇಕು. ಈ ಯೋಗ ಎಂಬುವುದನ್ನು ಜನ್ಮಕುಂಡಲಿಯಲ್ಲಿರುವ ಗ್ರಹಗಳ ಸ್ಥಾನ ನಿರ್ಧರಿಸುತ್ತದೆ ಎನ್ನುತ್ತದೆ ವೈದಿಕ ಶಾಸ್ತ್ರ.
ಒಬ್ಬ ರಾಜಕಾರಣಿ ಜನರಿಗೆ ಹತ್ತಿರವಾಗಬೇಕೆಂದರೆ ಜನರಿಗೆ ಸ್ಪಂದಿಸುವ ಗುಣಗಳಿರಬೇಕು, ಮಾನವೀಯತೆ ಇರಬೇಕು. ಕಷ್ಟಕರ ಸಂದರ್ಭಗಳನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣಗಳಿರಬೇಕು , ಆತ ಜನಗಳಿಗೆ ಸೇವಕನಾಗಿರಬೇಕು, ಆದರೆ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ.

ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನ ನಮ್ಮ ವೃತ್ತಿ ಬದುಕಿನ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ರಾಜಕೀಯದಲ್ಲಿ ಬೆಳೆಯಬೇಕೆಂದರೆ ನಮ್ಮ ಜಾತಕದಲ್ಲಿ ಈ ಗ್ರಹಗಳು ಅನುಕೂಲಕರ ಸ್ಥಾನದಲ್ಲಿರಬೇಕು:
ಸೂರ್ಯ: ಸೂರ್ಯನ ಸ್ಥಾನ ರಾಜಕೀಯ ಬದುಕಿನ ಮೇಲೆ ತುಂಬಾನೇ ಪ್ರಭಾವ ಬೀರುವುದು, ಸೂರ್ಯ ಶಕ್ತಿ ಮತ್ತು ನಾಯಕತ್ವವನ್ನು ಪ್ರನಿಧಿಸುವುದು.
ಮಂಗಳ: ಮಂಗಳ ಗ್ರಹದ ಶುಭ ಫಲದಿಂದ ರಾಜಕೀಯ ಜೀವನದಲ್ಲಿ ಬೆಳವಣಿಗೆ ಉಂಟಾಗುವುದು. ತಮ್ಮ ವ್ಯಕ್ತಿತ್ವದ ಮೂಲಕ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
ಗುರು: ಗುರು ಒಂದು ಗುರಿಯನ್ನು ನೀಡುತ್ತದೆ ಅಲ್ಲದೆ ಆ ಗುರಿ ಮುಟ್ಟು ಆತ್ಮವಿಶ್ವಾಸ ನೀಡುತ್ತದೆ, ಆದ್ದರಿಂದ ವೃತ್ತಿ ಜೀವನದ ಯಶಸ್ವಿಗೆ ಗುರುಗ್ರಹದ ಸ್ಥಾನವೂ ತುಂಬಾನೇ ಮುಖ್ಯವಾಗಿರುತ್ತದೆ.
ಶನಿ: ಶನಿ ಗ್ರಹವು ಬದುಕಿನಲ್ಲಿ ಶಿಸ್ತನ್ನು ಕಲಿಸುತ್ತದೆ. ಶನಿಯ ಅನುಗ್ರಹ ಚೆನ್ನಾಗಿದ್ದರೆ ಆ ವ್ಯಕ್ತಿ ರಾಜಕೀಯದಲ್ಲಿ ಬೆಳೆಯುತ್ತಾನೆ.
ಬುಧ: ಬುಧ ಬುದ್ಧಿವಂತಿಕೆ, ಸಂವಹನಕ್ಕೆ ಸಂಬಂಧಿಸಿದ ಗ್ರಹವಾಗಿದೆ. ರಾಜಕೀಯ ಜೀವನದಲ್ಲಿ ತಂತ್ರಕ್ಕೆ ಪ್ರತಿತಂತ್ರ ಮಾಡುವ ಗುಣವೂ ಇರಬೇಕು, ಸಂವಹನ ಶೈಲಿಯೂ ಚೆನ್ನಾಗಿ ಇರಬೇಕು. ಹೀಗಾಗಿ ಬುಧನ ಸ್ಥಾನ ಕೂಡ ತುಂಬಾನೇ ಮುಖ್ಯವಾಗುತ್ತದೆ.
ಈ ಗ್ರಹಗಳ ಸ್ಥಾನ ಯಾವ ಮನೆಯಲ್ಲಿದ್ದರೆ ಒಳ್ಳೆಯದು
ಲಗ್ನ ಮನೆಯಲ್ಲಿ: ಗ್ರಹಗಳ ಸ್ಥಾನ ಮೊದಲಿನ ಮನೆಯಲ್ಲಿದ್ದಾಗ ವ್ಯಕ್ತಿಯಲ್ಲಿ ನಾಯಕತ್ವದ ಗುಣಗಳು ತುಂಬಾ ಚೆನ್ನಾಗಿರುತ್ತದೆ.
10ನೇ ಮನೆ: 10ನೇ ಮನೆ ವೃತ್ತಿ ಜೀವನ ಹಾಗೂ ಜನಪ್ರಿಯತೆಯನ್ನು ಪ್ರತಿನಿಧಿಸುತ್ತದೆ. ಈ ಮನೆಯಲ್ಲಿ ಗ್ರಹಗಳ ಸ್ಥಾನವಿದ್ದರೆ ರಾಜಕೀಯ ಜೀವನಕ್ಕೆ ಒಳ್ಳೆಯದು.
11ನೇ ಮನೆ: 11ನೇ ಮನೆ ಸಾಮಾಜಿಕ ಹಾಗೂ ರಾಜಕೀಯ ನೆಟ್‌ವರ್ಕ್ ಬೆಸೆಯಲು ಸಹಕಾರಿ. ಈ ಮನೆಯಲ್ಲಿ ಗ್ರಹಗಳ ಸ್ಥಾನ ರಾಜಕೀಯ ರಾಜಕೀಯ ವೃತ್ತಿ ಜೀವನದಲ್ಲಿ ಏಳಿಗೆ ನೀಡುತ್ತದೆ.
7ನೇ ಮನೆ: 7ನೇ ಮನೆ ಪಾಲಿದಾರಿಕೆ ಮತ್ತು ಸಂಧಾನ ಸೂಚಿಸುತ್ತದೆ. ಈ ಮನೆಯಲ್ಲಿ ಗ್ರಹಗಳ ಸ್ಥಾನ ರಾಜಕೀಯ ವ್ಯಕ್ತಿಗಳ ಜೊತೆ ಬೆರೆತು ಮತ್ತಷ್ಟು ಬೆಳೆಯಲು ಸಹಾಯ ಮಾಡುತ್ತದೆ.
ಯಾವೆಲ್ಲಾ ಯೋಗಗಗಳು ರಾಜಕೀಯ ವೃತ್ತಿಜೀವನಕ್ಕೆ ಒಳ್ಳೆಯದು?
ರಾಜಯೋಗ: ವೈದಿಕ ಶಾಸ್ತ್ರದ ಪ್ರಕಾರ ಇದು ತುಂಬಾನೇ ಶುಭ ಯೋಗವಾಗಿದೆ. ರಾಜಕೀಯದಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಲು ಈ ರಾಜಯೋಗದ ಬೆಂಬಲ ತುಂಬಾನೇ ಅವಶ್ಯಕವಾಗಿದೆ. ಈ ರಾಜಯೋಗ ಕೆಲವೇ ಕೆಲವು ಜನರ ಕುಂಡಲಿಯಲ್ಲಿ ಉಂಟಾಗುತ್ತದೆ. ಒಂಭತ್ತು ಹಾಗೂ 10ನೇ ಮನೆಯ ಅಧಿಪತಿ ಒಂದೇ ಆದಾಗ ಕೂಡ ವಿಶೇಷ ರಾಜಯೋಗ ಉಂಟಾಗುವುದು.
ಚಂದ್ರ-ಮಂಗಳ ಯೋಗ: ಲಗ್ನ ಮನೆಯಲ್ಲಿ ಚಂದ್ರ ಹಾಗೂ ಮಂಗಳದ ಸಂಯೋಗವಾದಾಗ ಈ ಯೋಗ ಏರ್ಪಡುವುದು.
ನೀಚ ಭಂಗ ರಾಜಯೋಗ: ಈ ಸಮಯದಲ್ಲಿ ವ್ಯಕ್ತಿ ರಾಜಕೀಯ ಜೀವನದಲ್ಲಿ ತುಂಬಾನೇ ಉತ್ತುಂಗ ಸ್ಥಾನಕ್ಕೇರುತ್ತಾರೆ.
ಸೂರ್ಯ-ಮಂಗಳ ಯೋಗ: ಲಗ್ನ ಮನೆಯಲ್ಲಿ ಸೂರ್ಯ ಮತ್ತು ಮಂಗಳ ಗ್ರಹದ ಸಂಯೋಗ ಉಂಟಾದಾಗ ಈ ರೀತಿ ಉಂಟಾಗುವುದು. ಈ ಯೋಗ ನಿಮ್ಮ ರಾಶಿಯಲ್ಲಿ ಉಂಟಾದರೆ ರಾಜಕೀಯ ಜೀವನದಲ್ಲಿ ಯಶಸ್ಸು ಕಾಣುವಿರಿ.
ನರೇಂದ್ರ ಮೋದಿಯರ ಕುಂಡಲಿಯಲ್ಲಿ ಗ್ರಹಗಳ ಸ್ಥಾನ
ನರೇಂದ್ರ ಮೋದಿಯವರ ಕುಂಡಲಿಯಲ್ಲಿ ಸೂರ್ಯ, ಮಂಗಳ, ಗುರು ಅನುಕೂಲಕರವಾದ ಸ್ಥಾನದಲ್ಲಿದ್ದು ಅಬರ ಜಾತಕದಲ್ಲಿ ರಾಜ ಯೋಗ ಹಾಗೂ ವಿಪರೀತ ರಾಜಯೋಗವಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರಿಗೆ ಈಗ 53 ವರ್ಷ, ಅವರಿಗೆ 55 ವರ್ಷವಾದಾಗ ರಾಜಕೀಯದಲ್ಲಿ ಸದೃಢರಾಗುತ್ತಾರೆ. ಆದರೆ ಅವರು ರಾಜತಾಂತ್ರಿಕನಲ್ಲ. ಪರಿಣಾಮವಾಗಿ, ಈ ರಾಜಕೀಯದ ಹಾದಿಯಲ್ಲಿ ಅವರು ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅವರು ತಮ್ಮ 53ನೇ ವಯಸ್ಸಿನಲ್ಲಿರುವುದರಿಂದ ರಾಜಕೀಯ ಪರಿಸ್ಥಿತಿ ಮತ್ತು ಅವರ ಪಕ್ಷವು ತುಂಬಾ ಪ್ರಬಲವಾಗುವುದು ಎಂದು ಹೇಳಲಾಗುವುದು.
ರಾಜಕೀಯದಲ್ಲಿ ಬೆಳೆಯಲು ಲಾಲ್ ಕಿತಾಬ್ ಪರಿಹಾರ
* ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಕುತ್ತಿಗೆಗೆ ಚಿನ್ನದ ಚೈನ್ ಧರಿಸಿ
* ಕೆಂಪು ಕರವಸ್ತ್ರ ಜೊತೆಯಲ್ಲಿಯೇ ಇಟ್ಟುಕೊಳ್ಳಿ
* ಬೆಳ್ಳಿಯ ಚಿಕ್ಕ ಬಾಲ್ ನಿಮ್ಮ ಪರ್ಸ್‌ನಲ್ಲಿರಲಿ
* ಪ್ರತಿಸೋಮವಾರ ಶಿವನಿಗೆ ಹಾಲಾಭಿಷೇಕ ಮಾಡಿಸಿ
* ಸ್ಪಟಿಕದ ಹಾರ ಧರಿಸಿ
* ಹಸಿಗಳಿಗೆ ಬೆಲ್ಲ ಮಿಕ್ಸ್ ಮಾಡಿದ ಹಿಟ್ಟು ತಿನ್ನಿಸಿ
* ಆಫೀಸ್‌ನಲ್ಲಿ ಆನೆಯ ಮೂರ್ತಿ ಇಡಿ.



Click it and Unblock the Notifications












