Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಪಂಚಮುಖಿ ಆಂಜನೇಯನ ಮಹತ್ವವೇನು ಗೊತ್ತೇ?
ರಾಮನ ಬಂಟನೇ ಹನುಮಂತ. ಈತನನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಹನುಮಂತ ಚಿರಂಜೀವಿ. ಎಂದರೆ ಆತನಿಗೆ ಸಾವಿಲ್ಲ. ಈ ಕಲಿಯುಗದಲ್ಲೂ ಕೂಡ ಆತನು ತನ್ನ ಭಕ್ತರನ್ನು ಪೊರೆಯುತ್ತಿದ್ದಾನಂತೆ. ಕಷ್ಟ ಎಂದು ನಂಬಿ ಬಂದವರ ಕೈ ಬಿಡೋದಿಲ್ಲ ಈ ರಾಮ ಭಕ್ತ. ಅಷ್ಟಕ್ಕೂ ಹನುಮಂತನನ್ನು 5 ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಹಾಗಾದ್ರೆ ಹನುಮಂತ ಆ ಐದು ರೂಪಗಳು ಯಾವುದು? ಇದರ ಹಿಂದಿರುವ ಕಥೆ ಏನು ಅನ್ನೋದನ್ನು ತಿಳಿಯೋಣ.
ಪಂಚಮುಖಿ ಆಂಜನೇಯನ ವಿಶೇಷತೆಯೇನು?
ಮಹಿರಾವಣನನ್ನು ಸಂಹಾರ ಮಾಡುವ ಸಲುವಾಗಿ ವಾಯುಪುತ್ರ ಹನುಮಂತನು ಪಂಚಮುಖಿ ಆಂಜನೇಯನಾಗಿ ಅವತರಿಸಿ ಬರುತ್ತಾನೆ. ಹಾಗೂ ರಾಮ ಲಕ್ಷ್ಮಣರನ್ನು ರಕ್ಷಿಸುತ್ತಾನೆ. ಪಂಚಮುಖಿ ಎಂದರೆ ಐದು ಮುಖ. ಆಂಜನೇಯನ ಪಂಚ ಮುಖಗಳು ಯಾವುದು ಅಂತ ನೋಡೋದಾದ್ರೆ ಮೊದಲನೇಯದ್ದು ಉತ್ತರ ಮುಖ ವರಾಹ. ಎರಡನೇಯದ್ದು ದಕ್ಷಿಣಾಭಿಮುಖ ನರ ಸಿಂಹ, ಮೂರನೇಯದ್ದು ಪಶ್ಚಿಮಾಭಿಮುಖ ಗರುಡ, ನಾಲ್ಕನೇಯದ್ದು ಹಯಗ್ರೀವ, ಐದನೇಯದ್ದು ಹನುಮಂತ.

ಯಾವ ಮನೆಯಲ್ಲಿ ಪಂಚಮುಖಿ ಆಂಜನೇಯನನ್ನು ಆರಾಧನೆ
ಮಾಡಲಾಗುತ್ತದೆಯೋ ಆ ಮನೆಯ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತೆ ಎನ್ನುವ ನಂಬಿಕೆಯಿದೆ. ಜೊತೆಯಲ್ಲಿ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತಂತೆ. ಇನ್ನೂ ಶನಿ ಧೋಷದಿಂದ ಉಂಟಾಗುವ ಕೆಟ್ಟ ಪ್ರಭಾವಗಳು ಕಡಿಮೆಯಾಗುತ್ತೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಜೀವನದಲ್ಲಿ ಅಡೆ-ತಡೆಗಳು ದೂರವಾಗಬೇಕೆಂದರೆ ಪಂಚಮುಖಿ ಆಂಜನೇಯನನ್ನು ಆರಾಧನೆ ಮಾಡಬೇಕು.
ವೀರ ಹನುಮಾನ್
ಈ ಹೆಸರೇ ಸೂಚಿಸುವಂತೆ ಯಾರು ವೀರ ಹನುಮಂತನನ್ನು ಪೂಜಿಸುತ್ತಾರೋ ಅವರು ವೀರರಾಗುತ್ತಾರಂತೆ. ಹನುಮಂತನ ಮೂರ್ತಿಯನ್ನು ಪೂಜಿಸುವುದರಿಂದ ಆ ವ್ಯಕ್ತಿಗೆ ಧೈರ್ಯ, ಶಕ್ತಿ, ಶೌರ್ಯ, ನಂಬಿಕೆ ಹೆಚ್ಚಾಗುತ್ತಂತೆ. ಅವರ ದೈನಂದಿನ ಕೆಲಸದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತೆ ಎನ್ನುವ ನಂಬಿಕೆಯಿದೆ.
ರಾಮನ ಬಂಟ ಹನುಮಂತ
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಶ್ರೀರಾಮನನ್ನು ಪೂಜಿಸುವ ಹನುಮಂತನ ವಿಗ್ರಹ ನಮಗೆ ಕಾಣ ಸಿಗುತ್ತದೆ. ಪುರಾಣಗಳ ಪ್ರಕಾರ ಶ್ರೀ ರಾಮನನ್ನು ಪೂಜಿಸುವ ಹನುಮಂತನ ಚಿತ್ರ ಅಥವಾ ವಿಗ್ರಹವನ್ನು ಪೂಜಿಸುವುದರಿಂದ ಜೀವನದ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಂತೆ. ವ್ಯಕ್ತಿಯು ಮಾಡುವ ಪ್ರತಿ ಕೆಲಸದಲ್ಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಹಾಗೂ ಅವನಿಗೆ ಆಂಜನೇಯ ಪ್ರೋತ್ಸಾಹ ತುಂಬುತ್ತಾನಂತೆ.
ಏಕಾದಶ ಹನುಮಾನ್
ಹನುಮಂತನನ್ನು ಶಿವನ ಹದಿನೈದನೆಯ ಅವತಾರವೆಂದು ಪರಿಗಣಿಸಲಾಗಿದೆ. ಹದಿನೈದು ಮುಖಗಳ ಭಯಂಕರ ಬಲಿಷ್ಠ ರಾಕ್ಷಸನಾದ ಕಲ್ಕರ್ಮುಖನನ್ನು ಕೊಲ್ಲುವ ಸಲುವಾಗಿ, ಹನುಮಂತನು ತನ್ನ ಸೈನ್ಯದೊಂದಿಗೆ ಚೈತ್ರ ಪೂರ್ಣಿಮೆಯ ದಿನದಂದು ಚಂದ್ರುಡಿಯ ಸೂಚನೆಯಂತೆ ಹದಿನೈದು ಮುಖಗಳ ರೂಪದಲ್ಲಿ ರಾಕ್ಷಸ ಕಲ್ಕರ್ಮುಖನನ್ನು ಕೊಲ್ಲುತ್ತಾನೆ. ಏಕಾದಶ, ಪಂಚಮುಖ ಹನುಮಂತನ ಆರಾಧನೆಯು ಸಕಲ ದೇವತೆಗಳನ್ನು ಪೂಜಿಸಿದ ಫಲವನ್ನು ನೀಡುತ್ತೆ ಎಂಬ ನಂಬಿಕೆಯಿದೆ.
ಸೂರ್ಯಮುಖ ಹನುಮಾನ್
ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಸೂರ್ಯ ದೇವರು ಹನುಮಂತನ ಗುರು. ಸೂರ್ಯನು ಪೂರ್ವದಲ್ಲಿ ಉದಯಿಸುವ ಮೂಲಕ ಜಗತ್ತನ್ನು ಬೆಳಗಿಸುತ್ತಾನೆ. ಸೂರ್ಯಮುಖ ಹನುಮಂತನ ಆರಾಧನೆಯಿಂದ ಜ್ಞಾನ, ವಿದ್ಯೆ, ಕೀರ್ತಿ, ಪ್ರಗತಿ, ಗೌರವ ಹೆಚ್ಚಾಗುತ್ತಂತೆ. ಸೂರ್ಯ ಮುಖದ ಹನುಮಂತನ್ನು ಪೂರ್ವ ಮುಖವಿರುವ ಹನುಮಂತ ಎಂತಲೂ ಕರೆಯಲಾಗುತ್ತದೆ.
ದಾಸಾಂಜನೇಯಸ್ವಾಮಿ
ಶ್ರೀ ರಾಮಚಂದ್ರಮೂರ್ತಿಯ ಪಾದದ ಮೇಲೆ ಕುಳಿತಿರುವ ಭಂಗಿಯನ್ನು ದಾಸಂಜನೇಯ ಸ್ವಾಮಿ ಎಂದು ಕರೆಯಲ್ಪಡುತ್ತದೆ. ಹನುಮಂತನು ಶ್ರೀ ರಾಮನ ಸೇವಕ. ಶ್ರೀ ರಾಮ ಚಂದ್ರ ಕಾಲಿನಲ್ಲಿ ತೋರಿಸಿದ್ದನ್ನು ತಲೆಯ ಮೇಲಿಟ್ಟು ಮಾಡುತ್ತಿದ್ದ ನಿಶ್ಕಲ್ಮಶ, ನಿಜಗುಣ ಭಕ್ತ ಆಂಜನೇಯ. ದಾಸಾಂಜನೇಯನ ಆರಾಧನೆ ಮಾಡೋದ್ರಿಂದ ಒರ್ವ ವ್ಯಕ್ತಿಯಲ್ಲಿ ಸೇವಾ ಮನೋಭಾವ, ಭಕ್ತಿಯನ್ನು ಮೈಗೂಡಿಸಲು ಸಾಧ್ಯವಾಗುತ್ತಂತೆ. ಧರ್ಮ ಕಾರ್ಯ, ಕೆಲಸ, ಸಂಬಂಧಗಳಿಗೆ ನಮ್ಮ ಸಮರ್ಪಣೆ ಹೆಚ್ಚುತ್ತಂತೆ. ಇನ್ನೂ ಸೇವೆ ಮಾಡುವುದರಿಂದ ಯಶಸ್ಸು ಸಿಗುತ್ತೆ ಎಂಬ ನಂಬಿಕೆಯಿದೆ.
ಪಂಚಮುಖಿ ಆಂಜನೇಯನನ್ನು ಪೂಜಿಸೋದ್ರಿಂದ ಸಕಲ ಸಂಕಷ್ಟಗಳು ದೂರವಾಗುತ್ತೆ ಅನ್ನೋ ನಂಬಿಕೆಯಿದೆ.



Click it and Unblock the Notifications

