Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೆಂಗಳೂರು 2ನೇ ವಿಮಾನ ನಿಲ್ದಾಣ: ಮೂರು ಸ್ಥಳಗಳಲ್ಲಿ ಸವಾಲು, ಕಾರ್ಯಾಚರಣೆ ಅನುಮಾನ?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ ಪ್ರಕ್ರಿಯೆಗಾಗಿ ಸರ್ವೇ ಕಾರ್ಯ ಆರಂಭಿಸಿ ಮೂರು ಸ್ಥಳಗಳನ್ನು ಸೂಚಿಸಿತ್ತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಸ್ಥಳಗಳಲ್ಲಿ ಈಗಾಗಲೇ ಪರಿಶಿಲನೆ ಕೂಡ ನಡೆದಿದೆ. ಸದ್ಯ ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ವರದಿಯನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಅಲ್ಲದೆ ಸರ್ಕಾರ ಸೂಚಿಸಿದ್ದ ಮೂರು ಸ್ಥಳದಲ್ಲಿ ಯಾವುದನ್ನು ಪುರಸ್ಕರಿಸಿಲ್ಲ ಎಂದು ವರದಿಯಾಗಿದೆ.

ಕನಕಪುರ ರಸ್ತೆಯ 2 ಸ್ಥಳಗಳು ಹಾಗೂ ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳದಲ್ಲಿ ಬೆಂಗಳೂರಿನ 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಸವಾಲುಗಳಿರುವ ಕುರಿತಾಗಿ ವರದಿಯಲ್ಲಿ ಹೇಳಲಾಗಿದೆ. ಚೂಡಹಳ್ಳಿ (ಹಾರೋಹಳ್ಳಿ ಬಳಿ)ಸೋಮನಹಳ್ಳಿ (ಹಾರೋಹಳ್ಳಿ ಬಳಿ) ನೆಲಮಂಗಲ (ಕುಣಿಗಲ್ ರಸ್ತೆಯಲ್ಲಿ) ಸೂಚಿಸಿದ್ದ ಸ್ಥಳದಲ್ಲಿ ವಾಯುಮಾರ್ಗದ ಅಪಾಯ ಕುರಿತು ವರದಿಯಲ್ಲಿ ಹೇಳಲಾಗಿದೆ.
ಏಪ್ರಿಲ್‌ನಲ್ಲಿಯೇ ಪ್ರಾಧಿಕಾರವು ಸ್ಥಳಗಳ ಕುರಿತು ಪರಿಶೀಲನೆ ನಡೆಸಿದ್ದರು. ಆದ್ರೆ ಈ ಮೂರು ಸ್ಥಳಗಳನ್ನು ಅನುಮೋದಿಸಿಲ್ಲ. ಹಾಗಾದ್ರೆ ವಿಮಾಣ ನಿಲ್ದಾಣಕ್ಕೆ ಸೂಚಿಸಿದ್ದ ಸ್ಥಳದಲ್ಲಿ ಇರುವ ಸಮಸ್ಯೆ ಏನು? ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ಆಗೋದು ಅನುಮಾನ ಹುಟ್ಟಿಸಿರುವುದು ಏಕೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ವರದಿಯ ಪ್ರಕಾರ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಯೋಜನೆಯು ಹಲವು ಅಡ್ಡಿಗಳ ಎದುರಿಸುತ್ತಿದೆ. ಈ ಮೂರು ಪ್ರಸ್ತಾವಿತ ಸ್ಥಳಗಳು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಹಳ ಹತ್ತಿರವಾಗಿವೆ. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಕಾರ್ಯಾಚರಣೆಯ ಹಲವು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವಿವರಿಸಲಾಗಿದೆ.
ಇನ್ನು ಈ ಪ್ರದೇಶಗಳು ಸಮತಟ್ಟಾದ ಪ್ರದೇಶದಲ್ಲಿಲ್ಲ. ಬದಲಿಗೆ ಈ ಪ್ರದೇಶದಲ್ಲಿ ಬಂಡೆ ಕಲ್ಲುಗಳು, ಇಳಿಜಾರು ಪ್ರದೇಶ ನೋಡಬಹುದು. ಇದು ನಿರ್ಮಾಣ ಕಾಮಗಾರಿಯ ಉದ್ದೇಶಿತ ವೆಚ್ಚವನ್ನು ಹೆಚ್ಚು ಮಾಡುವಂತಹ ಆತಂಕವಿದೆ. ಹಾಗೆ ಈ ಪ್ರಸ್ತಾಪಿತ ಸ್ಥಳದಲ್ಲಿ ಬಹುತೇಕ ಭಾಗವು ಹಾಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ವಾಯುಪ್ರದೇಶದೊಳಗೆ ಬರಲಿದೆ. ಹೀಗಾಗಿ ಇದು ಹೊಸ ಒಪ್ಪಂದಗಳ ಮೂಲಕ ಮುಂದುವರೆಯಬೇಕಾಗುತ್ತದೆ. ಹೀಗಾಗಿ ಈಗ ಪ್ರಸ್ತಾಪಿತ ಮೂರು ಸ್ಥಳಗಳನ್ನು ಪ್ರಾಧಿಕಾರ ತಿರಸ್ಕರಿಸದೇ ಇದ್ದರೂ ಯಾವುದೇ ಸ್ಥಳವನ್ನೂ ಸಹ ಅನುಮೋದಿಸಿಲ್ಲ. ಆದ್ರೆ ಎರಡನೇ ವಿಮಾಣ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎಂಬುದು ಇನ್ನೂ ಚರ್ಚಾ ವಿಷಯವಾಗಿಯೇ ಉಳಿದಿದೆ.
ಸದ್ಯ ಈಗ ಎರಡನೇ ವಿಮಾನ ನಿಲ್ದಾಣದ ಕಾರ್ಯ ಆರಂಭದಲ್ಲೇ ಹಲವು ವಿಘ್ನಗಳು ಎದುರಾಗುತ್ತಿವೆ. ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನೀಡಿರುವ ಹಲವು ಸೂಚನೆಗಳನ್ನು ಮತ್ತೆ ರಾಜ್ಯ ಸರ್ಕಾರ ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರ ಮಾರ್ಗಗಳ ಸೂಚಿಸಬೇಕಿದೆ. ಬಳಿಕ 3 ಸ್ಥಳಗಳ ಪೈಕಿ ಒಂದು ಸ್ಥಳವನ್ನು ಅಂತಿಮಗೊಳಿಸಬೇಕು. ಆ ಸ್ಥಳದಲ್ಲಿ ಸುಮಾರು 6-7 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಯಾವುದಾದರೂ ಖಾಸಗಿ ಕಂಪನಿ ಮುಂದೆ ಬರಬೇಕಿದೆ.
ಹಾಗೆ ಸ್ಥಳ ಅಂತಿಮವಾದ ಬಳಿಕ ರಾಜ್ಯ ಸರ್ಕಾರ ಶೇ.50ರಷ್ಟು ಜಂಟಿಯಾಗಿ ಹೂಡಿಕೆ ಮಾಡಲಿದೆ. ಅದ್ರಲ್ಲೂ ಸುಮಾರು 5 ಸಾವಿರ ಕೋಟಿ ರೂಪಾಯಿಯನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಮೀಸಲಿಡಬೇಕಾಗುತ್ತದೆ. ಸದ್ಯ ಈಗ ಜಾಗ ಅಂತಿಮಗೊಳಿಸುವ ಪ್ರಕ್ರಿಯೆಯೇ ಅಂತ್ಯವಾಗಿಲ್ಲ ಆದ್ರೆ 2033ರ ಒಳಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಕಾರ್ಯಾಚರಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.



Click it and Unblock the Notifications