Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಉತ್ತರದವರು ಬೆಂಗಳೂರು ತೊರೆದರೆ ನಗರ ಖಾಲಿಯಾಗುತ್ತೆ ಎಂದ ಯುವತಿ..! ಜಾಗ ಖಾಲಿ ಮಾಡಿ ಎಂದ ನೆಟ್ಟಿಗರು
ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲು ಸದ್ದು ಮಾಡುವ ವಿಚಾರ ಅಂದರೆ ಅಂದು ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಎರಡು ಟಾಪಿಕ್‌ಗಳು, ಅದರಲ್ಲೂ ಬೆಂಗಳೂರು ಹಾಗೂ ಕನ್ನಡಿಗರು ಮತ್ತು ಹಿಂದಿ ವಿಚಾರವಾಗಿ ಯಾವಾಗಲು ಒಂದಲ್ಲಾ ಒಂದು ಘಟನೆ ವರದಿಯಾಗುತ್ತಲೇ ಇರುತ್ತೆ.
ಇತ್ತೀಚಿಗೆ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಹೆಚ್ಚಾಗುತ್ತಿದ್ದರೆ ಬೆಂಗಳೂರಲ್ಲಿ ನೆಲೆಸಿರುವ ಉತ್ತರ ಭಾರತೀಯರು ಈ ನಡೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುವುದು, ಇಡೀ ಕನ್ನಡಿಗರನ್ನು ತೆಗಳುವುದು ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆಯಾಗಿ ನಿತ್ಯವೂ ಹತ್ತಾರು ಘಟನೆಗಳು ನಡೆಯುತ್ತಿರುತ್ತವೆ.

ಹಾಗೆ ಇಲ್ಲೊಬ್ಬಾಕೆ ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ಬಹುದಿನಗಳಿಂದ ಆಕೆ ಬೆಂಗಳೂರು ಕುರಿತಂತೆ ಹಲವು ವಿಡಿಯೋಗಳ ಹಂಚಿಕೊಂಡಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.
ಆಕೆಯ ಪ್ರಕಾರ ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಬೆಂಗಳೂರು ನಗರ ಖಾಲಿಯಾಗಲಿದೆಯಂತೆ, ಹಾಗೆ ಪಿಜಿಗಳು ಮೊದಲು ಖಾಲಿಯಾಗುತ್ತವೆ ಎಂದು ಆಕೆ ಹೇಳುತ್ತಿದ್ದಾಳೆ. ಹೀಗಾಗಿ ಮಾತನಾಡುವಾಗ ಸ್ವಲ್ಪ ಆಲೋಚನೆ ಮಾಡಿ ಮಾತನಾಡಿ ಎಂದು ಆಕೆ ಹೇಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಸುಗಂಧ್ ಶರ್ಮಾ ಎಂಬಾಕೆ ವಿಡಿಯೋದಲ್ಲಿ ಬೆಂಗಳೂರಿನ ಕೋರಮಂಗಲದ ಪಬ್‌ಗಳ ಉದಾಹರಣೆಯಾಗಿ ನೀಡಿದ್ದಾರೆ. ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ಪಾವತಿಸುವ ಅತಿಥಿ ವಸತಿಗಳು (ಪಿಜಿಗಳು) ಖಾಲಿಯಾಗುತ್ತವೆ . ಕೋರಮಂಗಲದ ನೂರಾರು ಪಬ್‌ಗಳು ಖಾಲಿಯಾಗುತ್ತವೆ. ಪಬ್‌ಗಳಿಗೆ ಸುಂದರ ಹುಡುಗಿಯರು ನೋಡಲು ಸಿಗಲ್ಲ, ಅಲ್ಲಿ ಹುಡುಗಿಯರು ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡುವುದು ನೋಡಲು ಸಿಗಲ್ಲ. ಹೀಗಾಗಿ ನೀವು ಮಾತನಾಡುವಾಗ ಸ್ವಲ್ಪ ಆಲೋಚಿಸಿ ಮಾತನಾಡಿ ಎಂದು ಏಕೆ ಹೇಳುತ್ತಿದ್ದಾಳೆ.
ಆಕೆಯ ವಿಡಿಯೋ ವಿವಾದ ಹುಟ್ಟುಹಾಕಿದೆ, ಹಾಗೆ ಹಲವರು ಆಕೆಯ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ, ಇದು ಹಿಂದು ಹಾಗೂ ಕನ್ನಡ ಹಾಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂದು ನಡೆಯುತ್ತಿರುವ ಚರ್ಚಯ ಬೆಂಕಿಗೆ ಮತ್ತಷ್ಟು ತುಪ್ಪಸುರಿದಿದೆ. ಹೀಗಾಗಿ ಆಕೆಯ ವಿಡಿಯೋ ಕೆಳಗೆ ಕನ್ನಡಿಗರು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ನೀವು ಹೇಳುತ್ತಿರುವುದನ್ನು ಕೇಳಲು ಇಷ್ಟೊಂದು ಚೆನ್ನಾಗಿದೆ, ದಯವಿಟ್ಟು ನೀವೆಲ್ಲಾ ಯಾವಾಗ ಬೆಂಗಳೂರು ತೊರೆಯುತ್ತೀರಿ ಎಂಬುದನ್ನು ಖಚಿತ ಪಡಿಸಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿರುವುದು ನೋಡಬಹುದು. ಈ ಕಮೆಂಟ್‌ಗೆ ಅತ್ಯಧಿಕ ಲೈಕ್ಸ್ ಸಹ ಬಂದಿದೆ.
ನೀವು ಹುಟ್ಟುವ ಮುನ್ನವೇ ಬೆಂಗಳೂರು ನಗರವಿತ್ತು, ನೀವು ಇಲ್ಲಿಂದ ಬಿಟ್ಟು ಹೋದರು ಬೆಂಗಳೂರು ನಗರ ಇರಲಿದೆ. ಭ್ರಮೆಯಲ್ಲಿ ಬದುಕಬೇಡಿ, ಆದಷ್ಟು ಬೇಗ ನಮ್ಮ ನಗರ ಬಿಟ್ಟು ಹೊರಡಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಕನ್ನಡ ಅಣಕಿಸಿ ಪೊಲೀಸರ ಕಣ್ಣಿಗೆ ಬಿದ್ದ
ಇನ್ನೋರ್ವ ಯುವಕ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕನ್ನಡಿಗರ ಅವಮಾನಿಸುವಂತಹ ವಿಡಿಯೋ ಹಂಚಿಕೊಂಡು ಪೊಲೀಸರ ಕಣ್ಣಿಗೂ ಬಿದ್ದಿದ್ದಾನೆ, ಆತನ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಆತ ಮಗುವೊಂದು ಹಿಂದಿಯಲ್ಲಿ ಮಾತನಾಡುತ್ತಿದೆ ಎಂದು ಇದು ಕರ್ನಾಟಕ ಕನ್ನಡದಲ್ಲಿ ಮಾತನಾಡು ಎಂದು ಹೇಳಿ ಗೊಂಬೆಯನ್ನು ಹೊರಗೆ ಎಸೆಯುವ ವಿಡಿಯೋ ಮಾಡಿದ್ದಾನೆ.
ಸದ್ಯ ಇದು ಆನ್‌ಲೈನ್‌ನಲ್ಲಿ ಕನ್ನಡಿಗರ ಕೆಣಕಿದೆ. ರೀಜನಲ್ ಸೆಂಟಿಮೆಂಟ್ ಹಾಗೂ ಕನ್ನಡಿಗರನ್ನು ಪ್ರವೋಕ್ ಮಾಡುತ್ತಿರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು ವಿಡಿಯೋ ನೋಡಿದ ಬೆಂಗಳೂರು ಪೊಲೀಸರು ಆತನ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಇಂತಹ ಹತ್ತಾರು ವಿಡಿಯೋಗಳು ಹರಿದಾಡುತ್ತಿದ್ದು, ಕನ್ನಡಿಗರು ಹಾಗೂ ಬೆಂಗಳೂರನ್ನು ತೆಗಳುವ ಮೂಲಕ ಒಂದಿಷ್ಟು ಮಂದಿ ವಿವಾದ ಹುಟ್ಟುಹಾಕುತ್ತಿದ್ದಾರೆ.



Click it and Unblock the Notifications
