Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರಸ್ತೆ ಗುಂಡಿಗೂ ರೇಟಿಂಗ್ ನೀಡಲು ಅಪ್ಲಿಕೇಷನ್..! ಬೆಂಗಳೂರು ವ್ಯಕ್ತಿಯ ಹೊಸ ಅನ್ವೇಷಣೆ!
ಭಾರತದ ಯಾವುದೇ ರಾಜ್ಯಕ್ಕೆ ನೀವು ಹೋದರು ಅಲ್ಲಿ ರಸ್ತೆಗಳ ಪರಿಸ್ಥಿತಿ ಒಂದೇ ಎನ್ನಬಹುದು. ಹೊಂಡ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡದೆ ಇರುವುದು ಬಲು ಅಪರೂಪ. ಏಕೆಂದರೆ ಭಾರತದ ಹಲವು ಕಡೆ ರಸ್ತೆಗಳ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತೆ ಅಂದ್ರೆ ಗುಂಡಿಗಳ ಬಿಟ್ಟು ಬೇರೇನು ಕಾಣಿಸುವುದಿಲ್ಲ. ಹಾಗೆ ದಶಕಗಳು ಕಳೆದರು ಆ ರಸ್ತೆ ರಿಪೇರಿ ಆಗುವುದೇ ಇಲ್ಲ.
ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಬೆಂಗಳೂರು ವಿಚಾರಗಳು ಬಂದಾಗಲೆಲ್ಲ ಹೊಂಡ ಗುಂಡಿಗಳು ಸುದ್ದಿಯಾಗುತ್ತವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿರುತ್ತವೆ. ಹತ್ತಾರು ಅಪಘಾತಗಳು, ಪ್ರಾಣ ಹಾನಿಗೂ ಕೂಡ ಈ ರಸ್ತೆ ಗುಂಡಿಗಳು ಕಾರಣವಾಗುತ್ತಿರುತ್ತವೆ. ಹೀಗಾಗಿ ಗುಂಡಿಗಳಿರುವ ರಸ್ತೆಯಲ್ಲಿ ಪ್ರಯಾಣ ಅಂದ್ರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.

ಬಿಬಿಎಂಪಿ ಹಲವು ವರ್ಷಗಳಿಂದ ರಸ್ತೆ ಗುಂಡಿ ಮುಚ್ಚುವ ಕುರಿತು ಹೊಸ ಯೋಜನೆಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಲೇ ಇದೆ. ಹಾಗೆ ಹೈಕೋರ್ಟ್ ಈ ಗುಂಡಿಗಳ ಮುಚ್ಚಲು ಹೊಸ ಗಡುವು ನೀಡುತ್ತಲೇ ಇದೆ. ಇಷ್ಟಾದರೂ ಗುಂಡಿಗಳಿಂದ ರಸ್ತೆಗಳು ಮುಕ್ತಿ ಪಡದೇ ಇಲ್ಲ. ಈಗಲೂ ವಾಹನ ಸವಾರರು ಶಾಪ ಹಾಕಿಕೊಂಡು ಚಲಿಸಬೇಕಾಗಿದೆ.
ಆದ್ರೆ ರಸ್ತೆ ಗುಂಡಿಗಳ ಕುರಿತು ಜನರೇ ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಕೆಲವು ಕಡೆ ಜನರೇ ಸೇರಿ ಗುಂಡಿಗಳ ಮುಚ್ಚುವ ಕಾರ್ಯ ಮಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಗುಂಡಿಗಳನ್ನು ಸ್ವಲ್ಪ ತಮಾಷೆಯಾಗಿ ಪ್ರತಿಭಟಿಸುವ ಮೂಲಕ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ತೋರಿಸಲು ಉಂದಾಗಿದ್ದಾನೆ.
ಆನ್‌ಲೈನ್ ಅಪ್ಲಿಕೇಷನ್ ರಚಿಸಿ ಅದರಲ್ಲಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ವ್ಯವಸ್ಥೆ ಜಾರಿ ಮಾಡಿದ್ದಾನೆ. ಫೈಲ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಟಿಒ ಆಗಿರುವ ಶಿವರಾಮ ಕೃಷ್ಣನ್ ನಾರಾಯಣ್ ಎಂಬಾತ ಈ ರೀತಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ಅಪ್ಲಿಕೇಷನ್ ಹೊರತಂದಿದ್ದಾರೆ. ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನೀವು ಈ ಗುಂಡಿಗಳ ಫೋಟೋ ತೆಗೆದು ಹಾಕಿ ಅದಕ್ಕೆ ರೇಟಿಂಗ್ ನೀಡಬಹುದು. ಇದು ಬೆಂಗಳೂರು ಮಾತ್ರವಲ್ಲ ಇಡೀ ದೇಶದ ಯಾವುದೇ ಮೂಲೆಯ ರಸ್ತೆ ಗುಂಡಿಯನ್ನು ಅಪ್‌ಲೋಡ್ ಮಾಡಬಹುದು, ಹಾಗೆ ಅದಕ್ಕೊಂದು ಐಡಿಯನ್ನು ನೀಡಬೇಕು. ದೆಹಲಿ ಆಗಿದ್ದರೆ D110001_P00001 ಎಂದು ಮುಂಬೈ ಆಗಿದ್ದರೆ M400001_G000001 ಎಂದು ಹಾಗೆ ಬೆಂಗಳೂರಿನ ಗುಂಡಿಗಳನ್ನು ಕೂಡ ಹಂಚಿಕೊಳ್ಳಬಹುದು.
ಈ ರೀತಿ ಮಾಡುವುದರಿಂದ ಆ ಗುಂಡಿ ಎಷ್ಟು ವರ್ಷಗಳಿಂದ ಹಾಗೆಯೇ ಇದೆ. ಅದನ್ನು ರಿಪೇರಿ ಮಾಡಲಾಗಿದೆಯೇ? ಮತ್ತೆ ಅಲ್ಲಿಯೇ ಹೊಸದಾಗಿ ಗುಂಡಿ ಬಿದ್ದಿದೆಯಾ ಎಂಬುದನ್ನು ಪತ್ತೆ ಮಾಡಬಹುದಂತೆ. ಈ ಐಡಿಯಾ ನೋಡಿದ ಮಂದಿ ಅಚ್ಚರಿಯ ಜೊತೆಗೆ ನಗೆಗಡಲಲ್ಲಿ ಮುಳುಗಿದ್ದಾರೆ. ಜನರಿಗೆ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ರಸ್ತೆ ಗುಂಡಿಗೆ ಅಪ್ಲಿಕೇಷನ್ ಮಾಡುವ ಅನಿವಾರ್ಯತೆ ಏನಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನೀವು ಇದೇ ಬುದ್ದಿವಂತಿಕೆಯನ್ನು ಜನರಿಗೆ ಸಹಾಯವಾಗುವ ರೀತಿ ಬಳಸಬಹುದಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದು ನಿಜವಾಗಿಯೂ ಅದ್ಭುತ ಪರಿಕಲ್ಪನೆಯಾಗಿದೆ. ನಮ್ಮ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ಇವರು ಮಾಡಿದ್ದಾರೆ. ಇನ್ನು ಮುಂದೆ ಗುಂಡಿಗಳ ಮಾಹಿತಿ ಆನ್‌ಲೈನ್‌ನಲ್ಲಿ ನೋಡಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications
