Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಕಾರಿನ ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ..! ಆನ್‌ಲೈನ್‌ನಲ್ಲಿ ₹6 ಲಕ್ಷ ಕಳೆದುಕೊಂಡ!
ಇತ್ತೀಚಿಗೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅನಾಮಿಕ ಸಂದೇಶಗಳು, ನಕಲಿ ವೆಬ್‌ಸೈಟ್‌ಗಳು, ನಕಲಿ ಜಾಹೀರಾತುಗಳು ಹೀಗೆ ಹತ್ತಾರು ಬಗೆಯಲ್ಲಿ ಜನರನ್ನು ಲೂಟಿ ಮಾಡಲು ಸೈಬರ್ ವಂಚಕರು ಕಾದು ಕುಳಿತಿರುತ್ತಾರೆ. ಈ ಸೈಬರ್ ವಂಚನೆ ಕುರಿತು ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ನಿತ್ಯ ಸಾವಿರಾರು ಮಂದಿ ಈ ಜಾಲಕ್ಕೆ ಬೀಳುತ್ತಿದ್ದಾರೆ.
ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬನ ಕಥೆಯಲ್ಲೂ ಇದೇ ಆಗಿದೆ. ಆತ ಶಿಕ್ಷಣವಂತನಾಗಿದ್ದರು ಈ ಜಾಲಕ್ಕೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೋಗಿ 6 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾನೆ.

ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದ ಸಿಎ
ತನ್ನ ಆರ್ಥಿಕ ಸಮಸ್ಯೆಗೆ ಮುಕ್ತಿ ಪಡೆಯಲು ಆತ ತನ್ನ ಕಿಡ್ನಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗಿದ್ದ. ಆದರೆ ವಂಚಕರ ಜಾಲ ಆತನ ಹಣ ಎಗರಿಸಿದ್ದಾರೆ. ನಕಲಿ ವೆಬ್‌ಸೈಟ್ ನಂಬಿದ ಆತ ಇದ್ದ ಬದ್ದ ಹಣವನ್ನೇಲ್ಲಾ ಅವರಿಗೆ ಕೊಟ್ಟು ಈಗ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಕಿಡ್ನಿ ಮಾರಲು ಹೊರಟವನಿಗೆ ಆಗಿದ್ದೇನು?
ತನ್ನ ಕಾರಿನ ಸಾಲ ತೀರಿಸಲು ಹಾಗೂ ಕೆಲವು ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳು ಆತ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಡಿದಾಗ ಒಂದು ವೆಬ್‌ಸೈಟ್ ಕಣ್ಣಿಗೆ ಬಿದ್ದಿದೆ. ಅದನ್ನು ತೆರೆದು ತನ್ನ ಮಾಹಿತಿ ಹಾಕಿದ್ದಾನೆ. ಅತ್ತ ಕಡೆಯಿಂದ ವಂಚಕ ನೇರವಾಗಿ ಕರೆ ಮಾಡಿ ಮಾಹಿತಿ ಕೇಳಿದ್ದಾನೆ. ಬಳಿಕ ವಾಟ್ಸಾಪ್ ಮೂಲಕ ವ್ಯವಹಾರ ಮುಂದುವರೆದಿದೆ.
ಮೊದಲು ಕಿಡ್ನಿಗೆ 2 ಕೋಟಿ ನೀಡುವುದಾಗಿ ತಿಳಿಸಿದ್ದು, ಇದನ್ನು ನಂಬಿದ ವ್ಯಕ್ತಿ ಹಂತ ಹಂತವಾಗಿ ಅವರಿಗೆ ಹಣ ಸಂದಾಯ ಮಾಡಿದ್ದಾನೆ. ಮೊದಲು ರಿಜಿಸ್ಟ್ರೇಷನ್ ಹಾಗೂ ಜಿಎಸ್‌ಟಿ, ಎನ್ಒಸಿ ಎಂದು ಒಂದೂವರೆ ಲಕ್ಷ ಪಡೆದಿದ್ದಾರೆ. ಬಳಿಕ ತರಿಗೆ ಕ್ಲಿಯರೆನ್ಸ್‌ಗಾಗಿ 5 ಲಕ್ಷ ರೂಪಾಯಿ ಪಾವತಿಸಲು ಹೇಳಿದ್ದಾರೆ. ಹಣವನ್ನು ಖಾತೆಗೆ ವರ್ಗಾಯಿಸಲು ಹೇಳಿದ್ದಾರೆ. ಅದರಂತೆ ಮಾತು ನಂಬಿದ ವ್ಯಕ್ತಿ ಅವರು ಕೇಳಿದಷ್ಟು ಹಣ ಹಾಕಿದ್ದಾರೆ.
ಇದಾದ ಬಳಿಕ ಮಾದಕ ದ್ರವ್ಯ ವಿರೋಧಿ ಕ್ಲಿಯರೆನ್ಸ್ ಪಡೆಯಲು ಹೆಚ್ಚುವರಿಯಾಗಿ 7.6 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದಾರೆ. ಈ ವೇಳೆ ಅನುಮಾನ ಮೂಡಿ ಆತ ಎಲ್ಲರ ಬಳಿ ಈ ಕುರಿತು ವಿಚಾರಿಸಿದ್ದಾರೆ. ಆದರೆ ಆತನಿಗೆ ತಾನು ಮೋಸ ಹೋಗಿರುವುದು ತಿಳಿದು ತಕ್ಷಣ ಸೈಬರ್ ಕೇಂದ್ರ ಸಂಪರ್ಕಿಸಿದ್ದಾರೆ.
ಅಲ್ಲದೆ ಆ ವೆಬ್‌ಸೈಟ್ ಸಹ ನಕಲಿ ಎಂದು ತಿಳಿದುಬಂದಿದೆ. ಅವರು ಸೈಬರ್ ಠಾಣೆಯ ಮೆಟ್ಟಿಲೇರಿದ ಬಳಿಕ ವಂಚಕರ ಮೊಬೈಲ್ ನಂಬರ್‌ಗಳು ಸೇರಿದಂತೆ ಯಾವುದೇ ದೂರವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿಲ್ಲ. ಸದ್ಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು IPC ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಿಡ್ನಿ ಮಾರಾಟ ಸಹ ಅಪರಾಧ
ಇನ್ನು ಕಾನೂನು ಬಾಹಿರವಾಗಿ ಕಿಡ್ನಿ ಮಾರಲು ಮುಂದಾಗುವುದು ಸಹ ಅಪರಾಧವಾಗಿದೆ. ಭಾರತದಲ್ಲಿ ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನುಗಳಿವೆ. ಈ ರೀತಿ ಅಡ್ಡದಾರಿಯಲ್ಲಿ ಕಿಡ್ನಿ ಮಾರಾಟ ಮಾಡುವುದು ಅಪರಾಧವಾಗಿದೆ. ಸದ್ಯ ಆತ ಕಿಡ್ನಿ ಮಾರಾಟ ಕಾನೂನು ಬಾಹಿರ ಎಂದು ತಿಳಿಯದೆ ಈ ರೀತಿ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿರುವುದಾಗಿ ವರದಿಯಾಗಿದೆ.



Click it and Unblock the Notifications
