Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ವರ್ಷದಲ್ಲಿ ಬೆಂಗಳೂರು ನಾಯಿಗಳ ಪಾಲಾಗಲಿದೆ..! ನಾನು ದೇಶ ಬಿಡಬೇಕೆ.? ಉದ್ಯಮಿ ಪ್ರಶ್ನೆ
ತಾಪಮಾನ ಏರಿಕೆ ಇಡೀ ಜಗತ್ತಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಭಾರತದಲ್ಲಿ ಈ ವರ್ಷ ಬೇಸಿಗೆಯ ಬಿಸಿ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಅಂದರೆ ಬಿರು ಬೇಸಿಗೆಯಲ್ಲಿ ಜನರು ಮನೆಯಿಂದ ಹೊರಬರಲಾಗದ ಸ್ಥಿತಿಗೆ ಬಂದಿದ್ದಾರೆ. ಇತ್ತ ಬೆಂಗಳೂರು ಕಥೆ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ನಿಮಗೇ ಗೊತ್ತಿದೆ.
ಬೆಂಗಳೂರು ಈ ಬಾರಿಯ ಬೇಸಿಗೆಯಲ್ಲಿ ಸುಡುವ ಸೂರ್ಯನಂತಾಗಿತ್ತು. ಮುಂಗಾರು ಪೂರ್ವ ಮಳೆಯಾಗದ ಕಾರಣ ಬೆಂಗಳೂರು ಅಕ್ಷರಶಃ ಕಾದ ಹಂಚಿನಂತಾಗಿದೆ. ಅದರ ನಡುವೆ ನೀರಿನ ಸಮಸ್ಯೆ ಬೆಂಗಳೂರು ಜನತೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಕುಡಿಯುವ ನೀಡಿನ ಸಮಸ್ಯೆ ತಲೆ ದೂರಿದ್ದು ನೀವು ನೆನೆಪು ಮಾಡಿಕೊಳ್ಳಬಹುದು.

ಒಂದು ಕಾಲದಲ್ಲಿ ಬೆಂಗಳೂರು ಆಹ್ಲಾದಕರ ವಾತಾವರಣಕ್ಕೆ ಹೆಸರಾಗಿತ್ತು. ಬೆಂಗಳೂರು ವಾತಾವರಣಕ್ಕೆ ಮರುಳಾಗದವರೇ ಇಲ್ಲ ಎಂಬಂತ್ತಿತ್ತು. ಬೆಂಗಳೂರು ಅಕ್ಷರಶಃ ಊಟಿಯ ಹವಾಮಾನಕ್ಕೆ ಸಮನಾದ ಹವಾಮಾನ ಹೊಂದಿದ್ದ ಸಿಟಿಯಾಗಿತ್ತು. ಆದರೆ ಇಂದು ಈ ಪರಿಸ್ಥಿತಿ ಬದಲಾಗಿದೆ. ಬೆಂಗಳೂರು ಈಗ ಉತ್ತರ ಭಾರತದಲ್ಲಿರುವ ಬೇಸಿಗೆ ನಗರಿಯಾಗಿ ಬದಲಾಗಿದೆ.
ಆದರೆ ಇಂತಹ ಸಮಸ್ಯೆಗಳ ನಡುವೆ ಇಲ್ಲೊಬ್ಬ ಬೆಂಗಳೂರು ತೊರೆಯುವುದಾಗಿ ಯುವ ಉದ್ಯಮಿಯೊಬ್ಬರು ಮಾಡಿರುವ ಟ್ವೀಟ್ (ಎಕ್ಸ್) ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಬೆಂಗಳೂರು ಸರಿಯಿಲ್ಲ ಎಂದು ಆರೋಪ ಮಾಡಿರುವ ಅವರು ನಾನು ದೇಶ ಬಿಟ್ಟು ತೆರಳಬೇಕಾ ಎಂಬ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಮೂಲದ ಕಂಪನಿಯೊಂದರ ಸಹ-ಸಂಸ್ಥಾಪಕ ಅನಂತ್ ಶರ್ಮಾ ಅವರು ನಗರದ ಮೂಲಸೌಕರ್ಯ, ಹವಾಮಾನ ಮತ್ತು ನೀರಿನ ಪರಿಸ್ಥಿತಿಯನ್ನು ಟೀಕಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಶರ್ಮಾ ಅವರು ತಾವು ಮುಂಬೈ ಅಥವಾ ಪುಣೆಗೆ ಸ್ಥಳಾಂತರವಾಗುವುದು ಯೋಗ್ಯವಾಗಿದೆಯೇ ಅಥವಾ ಭಾರತವನ್ನು ತೊರೆಯಬೇಕೇ ಎಂದು ಪ್ರಶ್ನೆ ಕೇಳಿದ್ದಾರೆ.
''ಬೆಂಗಳೂರು ಇನ್ನೂ 5 ವರ್ಷಗಳಲ್ಲಿ ಕೆಟ್ಟ ವಾತಾವರಣ ಮತ್ತು ಕೆಟ್ಟ ನೀರಿನಿಂದ ನಾಯಿಗಳ ಪಾಲಾಗಲಿದೆಯಂತೆ. ಮುಂಬೈ ಅಥವಾ ಪುಣೆಗೆ ಸ್ಥಳಾಂತರಿಸಲು ಯೋಗ್ಯವಾಗಿದೆಯೇ ಅಥವಾ ನಾನು ಭಾರತವನ್ನು ತೊರೆಯಬೇಕೇ?'' ಎಂದು ಟ್ವೀಟ್ ಮಾಡಿದ್ದಾರೆ.
ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವರು ಅವರ ವಿರುದ್ಧ ಟೀಕೆಗೆ ಇಳಿದರೆ ಇನ್ನೂ ಕೆಲವರು ಪರವಾಗಿದ್ದಾರೆ. ಮತ್ತೆ ಕೆಲವರು ಅವರ ಉದ್ಯಮ ಸ್ಥಾಪನೆಗೆ ಸೂಕ್ತ ಸ್ಥಳ ಯಾವುದು ಎಂಬುದನ್ನು ಶಿಫಾರಸ್ಸು ಮಾಡುತ್ತಿದ್ದಾರೆ.
ಒಬ್ಬ ಬಳಕೆದಾರರು, ''ಪ್ರತಿಯೊಂದು ನಗರಕ್ಕೂ ಸಮಸ್ಯೆಗಳಿವೆ. ಓಡುವುದನ್ನು ನಿಲ್ಲಿಸಿ, ಇದಕ್ಕೆಲ್ಲ ಕಾರಣವಾಗಿದ್ದು ಜನಸಂಖ್ಯೆ ಎನಿಸಿದರೆ ನೀವು ಆ ನಗರ ಬಿಟ್ಟು ಹೊರಗೆ ಹೋಗಿ'' ಎಂದಿದ್ದಾರೆ.
'ಬೆಂಗಳೂರಿನ ವ್ಯವಸ್ಥಿತ ಸಮಸ್ಯೆಯೆಂದರೆ ಜನರು ಅದನ್ನು ವಲಸೆ ನಗರವೆಂದು ಭಾವಿಸುತ್ತಾರೆ. ಇದು ವೋಟ್ ಬ್ಯಾಂಕ್ ಆಗದ ಹೊರತು, ನಗರವನ್ನು ಬದಲಾಯಿಸಲು ಯಾರೂ ಬಯಸುವುದಿಲ್ಲ. ಇಲ್ಲಿನ ಮತದಾರರು ಮತ ಹಾಕಲು ಬರುವುದಿಲ್ಲ. ಹೀಗಾದಾಗ ಪ್ರಶ್ನೆ ಹೇಗೆ ಮಾಡುತ್ತಾರೆ. ಅಧಿಕಾರಿಗಳಿಗೆ ಕೆಲಸ ಮಾಡುವಂತೆ ಹೇಳುವುದೇ ಈ ಸಮಸ್ಯೆಗಳ ಪರಿಹರಿಸಲು ಏಕೈಕ ಮಾರ್ಗವಾಗಿದೆ. ನಾವು ಅದನ್ನು ಮಾಡದಿರುವ ವರೆಗೂ ಈ ಸಮಸ್ಯೆ ನಮ್ಮ ನಡುವೆ ಇರಲಿದೆ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿಗೆ ಬರುವವರು ಮೊದಲು ಅದರ ವಾತಾವರಣ ನೋಡಿ ಮರುಳಾಗುತ್ತಾರೆ. ಆದ್ರೆ ಈ ವಾತಾವರಣ ಉಳಿಸಲು ಅವರು ಯಾವ ಕೊಡುಗೆ ನೀಡುತ್ತಾರೆ? ಏನು ನೀಡುವುದಿಲ್ಲ. ನಗರದಲ್ಲಿ ದುಡಿಯಲು ಬರುವವರು ಸಹ ಇದಕ್ಕಿಂತ ಹೊರತಲ್ಲ. ಅವರಿಗೆ ಇಲ್ಲಿನ ಮೂಲ ಸೌಕರ್ಯ ಮಾತ್ರ ಬೇಕಿದೆ ಆದರೆ ನಗರದ ಸೌಂದರ್ಯ ಬೇಡವೆಂದರೆ ಹೇಗೆ? ಎಂದು ಮತ್ತೊಬ್ಬರು ಪ್ರಶ್ನೆ ಎತ್ತಿದ್ದಾರೆ.



Click it and Unblock the Notifications


