Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ವೈದಿಕ ಶಾಸ್ತ್ರ ಪ್ರಕಾರ ಬೆಳ್ಳಿ ಆಭರಣ ಧರಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಬೆಳ್ಳಿ ಆಭರಣ ಇಲ್ಲ ಎಂದು ಹೇಳುವವರು ತುಂಬಾನೇ ವಿರಳ, ಬೆಳ್ಳಿಯ ಆಭರಣಗಳು ನಮ್ಮ ದಿನನಿತ್ಯದ ಜೀವನದಲ್ಲಿ ಒಂದು ಭಾಗವೇ ಆಗಿದೆ. ಕಾಲುಂಗುರ, ಕಾಲ್ಗೆಜ್ಜೆ ಅಂತ ಬೆಳ್ಳಿಯ ಆಭರಣಗಳನ್ನು ಬಳಸುತ್ತೇವೆ. ಕೆಲವೊಮ್ಮೆ ಬೆಳ್ಳಿಯ ಆಭರಣಕ್ಕೆ ದುಬಾರಿ ಚಿನ್ನನೂ ಮ್ಯಾಚ್ ಆಗಲ್ಲ. ಉದಾಹರಣೆಗೆ ಮಕ್ಕಳ ಕಾಲಿಗೆ ಕಾಲ್ಗೆಜ್ಜೆ, ಬೆಳ್ಳಿ ಕಾಲುಂಗುರ ಇವೆಲ್ಲಾ ಚಿನ್ನಕ್ಕಿಂತ ಬೆಳ್ಳಿಯದ್ದೇ ಆಕರ್ಷಕ ಹೌದಲ್ವಾ?
ಬೆಳ್ಳಿಯ ಆಭರಣ ಧರಿಸುವುದು ಒಳ್ಳೆಯದು ಎಂದು ವೈದಿಕ ಶಾಸ್ತ್ರ ಕೂಡ ಹೇಳುತ್ತದೆ. ಈ ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸುತ್ತದೆ
ಬಳ್ಳಿಯ ಆಭರಣ ಧರಿಸುವುದರಿಂದ ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗುವುದು ಅಲ್ಲದೆ ಚಂದ್ರ ದುರ್ಬಲವಾಗಿದ್ದರೆ ಚಂದ್ರನ ಸ್ಥಾನ ಕೂಡ ಬಲವಾಗುತ್ತದೆ.
ಆದ್ದರಿಂದ ಬೆಳ್ಳಿ ಧರಿಸುವುದರಿಂದ ವ್ಯಕ್ತಿಗೆ ಶುಭ ಉಂಟಾಗುವುದು ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಲಕ್ಷ್ಮಿ ಪೂಜೆಯಲ್ಲಿ ಬೆಳ್ಳಿ ಬಳಸಿದರೆ ಒಳ್ಳೆಯದು.
ಬೆಳ್ಳಿ ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ.
ಚಂದ್ರ ಮತ್ತು ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ ನಮ್ಮ ಮನಸ್ಸಿನಲ್ಲಿ ಅನೇಕ ಆತಂಕ, ಒತ್ತಡಗಳು ಎದುರಾಗುವುದು. ಆದರೆ ಬೆಳ್ಳಿಯನ್ನು ಧರಿಸುವುದರಿಂದ ಇವುಗಳ ಸ್ಥಾನ ಬಲವಾಗುವುದರಿಂದ ಅನಗತ್ಯ ಚಿಂತೆಗಳಿಂದ ಮುಕ್ತರಾಗುತ್ತೀರಿ. ನಿಮ್ಮ ಬುದ್ಧಿವಂತಿಕೆಯ ಮಟ್ಟವು ಹೆಚ್ಚಾಗುತ್ತದೆ. ಬೆಳ್ಳಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತದೆ.
ಶುಭ ಕಾರ್ಯಗಳಲ್ಲಿ ಬೆಳ್ಳಿ
ನಾವು ಅನೇಕ ಶುಭ ಕಾರ್ಯಗಳಲ್ಲಿ ಬೆಳ್ಳಿಯನ್ನು ಬಳಸುತ್ತೇವೆ. ದೇವರಿಗೆ ಬೆಳ್ಳಿ ದೀಪದಲ್ಲಿ ತುಪ್ಪ ಹಾಕಿ ದೀಪ ಹಚ್ಚಿದರೆ ಶ್ರೇಷ್ಠ ಎಂದು ಹೇಳಲಾಗುವುದು. ಇನ್ನು ಕೆಲವರು ದೇವರಿಗೆ ಪ್ರಸಾದವನ್ನು ಬೆಳ್ಳಿ ಪಾತ್ರೆಯಲ್ಲಿ ಅರ್ಪಿಸುತ್ತಾರೆ. ಶುಭ ಕಾರ್ಯಗಳಲ್ಲಿ ಬೆಳ್ಳಿ ದೀಪ, ತಟ್ಟೆ ಇವುಗಳನ್ನು ಬಳಸುವುದು ಶ್ರೇಷ್ಠ.
ಹೆಬ್ಬೆರಳಿಗೆ ಬೆಳ್ಳಿಯ ಉಂಗುರ ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುವುದು
ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯ, ಚಂದ್ರ, ಶುಕ್ರ, ಶನಿ ಮತ್ತು ರಾಹು ಸ್ಥಾನ ಬಲವಾಗುವುದು. ಅಲ್ಲದೆ ಬೆಳ್ಳಿಯ ಉಂಗುರವು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ, ದೇಹಕ್ಕೆ ಧನಾತ್ಮಕತೆ ತುಂಬುವುದು. ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಹುಡುಗರು ಬಲಗೈಯ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಬೇಕೆಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಹೆಣ್ಣುಮಕ್ಕಳು ಎಡಗೈಯ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸುವುದು ಮಂಗಳಕರ ಎಂದು ಹೇಳಲಾಗುವುದು.
ವಾಸ್ತು ಶಾಸ್ತ್ರ ಏನು ಹೇಳುತ್ತದೆ?
* ವಾಸ್ತು ಶಾಸ್ತ್ರ ಕೂಡ ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳುತ್ತದೆ. ಬೆಳ್ಳಿಯ ಆಭರಣ ಧರಿಸುವುದರಿಂದ ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿ ದೂರಾಗುವುದು ಎಂದು ಹೇಳಲಾಗುವುದು, ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನಾವು ಲವಲವಿಕೆಯಿಂದ ಇರುತ್ತೇವೆ ಎಂದು ಹೇಳಲಾಗುವುದು.
* ವಾಸ್ತು ಶಾಸ್ತ್ರ ಪ್ರಕಾರ ಬೆಳ್ಳಿ ಉಂಗುರು ಧರಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಬೆಳ್ಳಿಯ ಕಿವಿಯೋಲೆ ಧರಿಸುವುದರಿಂದ ರಾಹು ಮತ್ತು ಕೇತುಗಳ ದುಷ್ಪಾರಿಣಾಮ ಕಡಿಮೆಯಾಗುವುದು.
ರಾಹು ಮತ್ತು ಕೇತುಗಳನ್ನು ಅಶುಭ ಗ್ರಹಗಳೆಂದು ಪರಿಗಣಿಸಲಾಗುವುದು. ಈ ಎರಡೂ ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ಕೆಟ್ಟ ಸ್ಥಿತಿಯಲ್ಲಿದ್ದರೆ ಅಶುಭ ಎಂದು ಹೇಳಲಾಗುವುದು. ರಾಹು-ಕೇತುಗಳ ಸ್ಥಾನ ಸರಿಯಿಲ್ಲದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು. ರಾಹು, ಕೇತು ಸ್ಥಾನ ಸರಿಯಿಲ್ಲದಿದ್ದರೆ ಕಿವಿಗೆ ಬೆಳ್ಳಿಯ ಓಲೆ ಧರಿಸಿದರೆ ಈ ಬೆಳ್ಳಿಯ ಅಂಶ ರಾಹು ಮತ್ತು ಕೇತುಗಳ ದುಷ್ಪರಿಣಾಮಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯದಲ್ಲಿ ಬೆಳ್ಳಿ ಕೆಲವರಿಗೆ ಶುಭವಲ್ಲವೆಂದು ಹೇಳಲಾಗಿದೆ
ಮೇಷ, ಸಿಂಹ, ಧನು ರಾಶಿಯವರಿಗೆ ಬೆಳ್ಳಿ ಒಳ್ಳೆಯದಲ್ಲ. ಇವರು ಚಿನ್ನದ ಆಭರಣ ಧರಿಸಿದರೆ ಒಳ್ಳೆಯದು, ಇತರ ರಾಶಿಗಳಿಗೆ ಬೆಳ್ಳಿ ಶುಭವೆಂದು ಹೇಳಲಾಗುವುದು.
ಬೆಳ್ಳಿಯನ್ನು ಯಾವ ದಿನ ಧರಿಸಬೇಕು?
ನೀವು ಬೆಳ್ಳಿಯ ಆಭರಣವನ್ನು ಮಂಗಳವಾರ ಹಾಗೂ ಶುಕ್ರವಾರ ಧರಿಸಿದರೆ ಹೆಚ್ಚಿನ ಶುಭ ಫಲ ದೊರೆಯುವುದು ಎಂಬ ನಂಬಿಕೆ ಇದೆ.
ವೈಜ್ಞಾನಿಕ ದೃಷ್ಟಿಯಿಂದಲೂ ಬೆಳ್ಳಿ ಧರಿಸುವುದು ಒಳ್ಳೆಯದು
ವೈದಿಕ ಶಾಸ್ತ್ರದಲ್ಲಿ ಮಾತ್ರವಲ್ಲಿ ವೈಜ್ಞಾನಿಕವಾಗಿ ಕೂಡ ಬೆಳ್ಳಿ ಧರಿಸುವುದು ತುಂಬಾನೇ ಒಳ್ಳೆಯದು.



Click it and Unblock the Notifications












