Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ದುರಂತದಲ್ಲಿ ಮಡಿದವರ ಒಬ್ಬೊಬ್ಬರದ್ದು ಒಂದೊಂದು ಕಥೆ..! ಆಗಸದಲ್ಲೇ ಕಮರಿದ ಕನಸುಗಳು!!
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತವು ದೇಶ ಮಾತ್ರವಲ್ಲ ವಿಶ್ವಕ್ಕೆ ಆಘಾತ ನೀಡಿದೆ. ದಶಕಗಳ ಬಳಿಕ ಭಾರತದಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ ಎಂಬುದಾಗಿ ಕರೆಯಲಾಗಿದೆ. ಅಪಘಾತದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಟೇಕ್ ಆಫ್ ಆ ಕೆಲವೇ ಸೆಕೆಂಡ್‌ನಲ್ಲಿ ಇಡಿ ವಿಮಾನ ಹೊತ್ತು ಉರಿದಿದೆ. ಹೀಗಾಗಿ ಏಕೈಕ ವ್ಯಕ್ತಿ ಹೊರತುಪಡಿಸಿ ಉಳಿದವರು ಪ್ರಾಣ ಕಳೆದುಕೊಂಡಿದ್ದಾರೆ.
ನೂರಾರು ಕನಸುಗಳ ಹೊತ್ತ ಮಂದಿ ಈ ವಿಮಾಣದಲ್ಲಿ ತೆರರಳುತ್ತಿದ್ದರು. ಪ್ರತಿಯೊಬ್ಬರದ್ದು ಒಂದೊಂದು ಕನಸು, ಗುರಿ ಹೊಂದಿದ್ದವರು. ಅದರಲ್ಲೂ ಕೆಲವರಿಗೆ ಇದು ಮೊದಲ ವಿಮಾನ ಪ್ರಯಾಣವೂ ಆಗಿತ್ತು. ಆದ್ರೆ ಕ್ಷಣದಲ್ಲಿ ಎಲ್ಲವೂ ಕಮರಿತ್ತು, ಕುಳಿತಲ್ಲೇ ಎಲ್ಲರು ಪ್ರಾಣ ಕಳೆದುಕೊಂಡರು. ಹೀಗೆ ದುರಂತದಲ್ಲಿ ಮಡಿದವರಲ್ಲಿ ಒಬ್ಬಬ್ಬರ ಕಥೆಯೂ ಕಣ್ಣೀರು ತರಿಸುತ್ತಿದೆ.

ಭಾರತಕ್ಕೆ ಅಕ್ಕರೆಯ ವಿದಾಯ ಹೇಳಿದ್ದ ವಿದೇಶಿಗರು
ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಕುಳಿದ್ದ ಬ್ರಟೀಷ್ ಪ್ರಜೆಗಳಾಗಿದ್ದ ಫಿಯೋಂಗಲ್ ಗ್ರೀನ್‌ಲಾ ಮೀಕ್ ಹಾಗೂ ಜೇಮೀ ಮೀಕ್ ಭಾರತಕ್ಕೆ ಗುಡ್ ಬೈ ಹೇಳಿದ್ರು. ಕೊನೆಯದಾಗಿ ಭಾರತದಿಂದ ಹೊರಡುತ್ತಿರುವ ಕುರಿತು ಇಬ್ಬರು ವಿಡಿಯೋ ಹಂಚಿಕೊಂಡಿದ್ದರು. ಇಬ್ಬರು ಆಧ್ಯಾತ್ಮದಲ್ಲಿ ಒಲವು ಹೊಂದಿದ್ದ ಕಾರಣ ಭಾರತದಲ್ಲಿ ವಿಚಾರ ಸಂಕೀರಣದಲ್ಲಿ ಭಾಗಿಯಾಗಲು ಬಂದಿದ್ದರು ಎನ್ನಲಾಗಿದೆ. ಹೋಟೆಲ್‌ನಲ್ಲಿ ಕಳೆದ ಕ್ಷಣಗಳ ನೆನೆದ ಅವರು ಭಾರತಕ್ಕೆ ಶುಭ ವಿದಾಯ ಎಂದಿದ್ದರು. ಆದ್ರೆ ಇದು ಅಂತಿಮ ಘಳಿಗೆಯಾಗಿತ್ತು.
ಲಂಡನ್‌ನಲ್ಲಿ ನೆಲೆಸಲು ಹೊರಟಿದ ವೈದ್ಯ ಕುಟುಂಬ
ಲಂಡನ್‌ನಲ್ಲಿ ನೆಲೆಸುವ ಉದ್ದೇಶದಿಂದ ವರ್ಷಗಳಿಗೂ ಹೆಚ್ಚು ಕಾಲ ಶ್ರಮಿಸಿ ಎಲ್ಲಾ ದಾಖಲೆ ಪತ್ರಗಳ ಸಮೇತವಾಗಿ ಒಂದು ಕುಟುಂಬ ವಿಮಾನ ಏರಿತ್ತು.
ವೈದ್ಯ ದಂಪತಿಗಳಾದ ಡಾ. ಪ್ರತೀಕ್ ಜೋಶಿ, ಪತ್ನಿ ಡಾ. ಕೋಮಿ ವ್ಯಾಸ್ ಮತ್ತು ಮಗಳು ಮಿರಯಾ ಮತ್ತು ಪುತ್ರರಾದ ಪ್ರದ್ಯುತ್ ಮತ್ತು ನಕುಲ್ - ಲಂಡನ್‌ನಲ್ಲಿ ನೆಲೆಸಲು ಹೊರಟಿದ್ದರು. ಭಾರತದಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹೊಸ ಬದುಕು ಕಟ್ಟಿಕೊಳ್ಳಲು ತೆರಳುತ್ತಿದ್ದರು.
ಪತ್ನಿ ಮಗಳ ನೋಡಲು ತೆರಳುತ್ತಿದ್ದ ಮಾಜಿ ಸಿಎಂ
ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ತಮ್ಮ ಪತ್ನಿ ಹಾಗೂ ಮಗಳ ಭೇಟಿಯಾಗಿ ಲಂಡನ್‌ಗೆ ತೆರಳುತ್ತಿದ್ದರು. ಆದ್ರೆ ಇದು ಅವರ ಕೊನೆಯ ವಿಮಾನ ಪ್ರಯಾಣ ಆಗಿರಲಿದೆ ಎಂದು ಅಂದುಕೊಂಡಿರಲಿಲ್ಲ. ಅವರ ಕೊನೆಯ ಸೆಲ್ಫಿ ಕೂಡ ಬಹಳ ವೈರಲ್ ಆಗುತ್ತಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ಏಕೆಂದರೆ ಮಾಜಿ ಸಿಎಂ ಶವ ಗುರುತು ಹಿಡಿಯುವುದು ಕೂಡ ಕಷ್ಟವಾಗಿತ್ತು.
ಮೊದಲ ಬಾರಿಗೆ ಒತ್ನಿ ನೋಡಲು ಹೊರಟ್ಟಿದ್ದ ಪತ್ನಿ
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ವಿಮಾನದಲ್ಲಿ ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್ಪುರೋಹಿತ್ ಎಂಬಾಕೆ ಕೂಡ ತೆರಳುತ್ತಿದ್ದಳು. ವರ್ಷದ ಜನವರಿಯಲ್ಲಿ ಮನ್ಫೂಲ್ ಸಿಂಗ್ ಜೊತೆ ವಿವಾಹವಾಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್‌ನ ನಲ್ಲಿ ವ್ಯಾಸಾಂಗ ಮಾಡುತ್ತಿದ್ದರಂತೆ. ಹೀಗಾಗಿ ಆಕೆ ಮೊದಲ ಬಾರಿಗೆ ಭೇಟಿಯಾಗಲು ಈ ವಿಮಾನ ಏರಿದ್ದರು, ಆಕೆ ತಂದೆಯೊಂದಿಗೆ ಕೊನೆಯ ಫೋಟೋ ಕೂಡ ಕ್ಲಿಕ್ಕಿಸಿದ್ದರು.
ಜೀವ ಉಳಿಸಿದ ಟ್ರಾಫಿಕ್ ಜಾಮ್
ಅಹಮದಾಬಾದ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ವಿಮಾನ ನಿಲ್ದಾಣಕ್ಕೆ ಬರಲಾಗದ ಕಾರಣ ಮಹಿಳೆಯೊಬ್ಬರು ಬದುಕುಳಿದಿದ್ದಾರೆ. ಭೂಮಿ ಚೌಹಾಣ್ ಇದೇ ವಿಮಾನದಲ್ಲಿ ಲಂಡನ್ ತೆರಳಬೇಕಿತ್ತು, ಆದ್ರೆ ಟ್ರಾಫಿಕ್‌ನಿಂದ ಬರಲಾಗದೆ ವಿಮಾನ ಮಿಸ್ ಆಗಿತ್ತು.
ಹಾಗೆ ಮಣಿಪುರದ ಇಬ್ಬರು ಕ್ಯಾಬಿನ್ ಸಿಬ್ಬಂದಿ, ಕರ್ನಾಟಕ ಮೂಲದವರು ಎನ್ನಲಾದ ಓರ್ವ ಪೈಲಟ್ ಹಾಗೆ ಮತ್ತೋರ್ವ ಸೀನಿಯರ್ ಪೈಲಟ್ ಸೇರಿ 12 ಮಂದಿ ವಿಮಾನ ಸಿಬ್ಬಂದಿ ಕೂಡ ಈ ಘಟನೆಯಲ್ಲಿ ಅಸುನೀಗಿದ್ದಾರೆ.



Click it and Unblock the Notifications
