Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಿಕ್ಷುಕ ಕುಟುಂಬ ಅವರ ಅಜ್ಜಿಯ ತಿಥಿಗೆ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತಾ?
ಭಿಕ್ಷುಕ ಕುಟುಂಬ ಆಯೋಜಿಸಿದ ಔತಣಕೂಟ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಔಚತಣಕೂಟದ ಬಳಿಕ ಎಲ್ಲರೂ ಇದೇ ಭಿಕ್ಷುಕ ಸಮುದಾಯ ಸೇರಲು ಬಯಸುತ್ತಿದ್ದಾರೆ. ಈ ಔತಣಕೂಟದಲ್ಲಿತ್ತು ಹಲವು ವಿಶೇಷತೆ.
ಬರೋಬ್ಬರಿ 20,000 ಮಂದಿ, ಅತಿಥಿಗಳಿಗೆ ಬಂದು ಹೋಗಲು 2,000 ವಾಹನ ವ್ಯವಸ್ಥೆ. ಇನ್ನು ಡ್ರೈ ಫ್ರೂಟ್ಸ್ ಸೇರಿದಂತೆ 100ಕ್ಕೂ ಹೆಚ್ಚು ಖಾದ್ಯಗಳು. ಇದು ಭಿಕ್ಷುಕ ಸಮುದಾಯ ಆಯೋಜಿಸಿದ ಅದ್ಧೂರಿ ಔತಣಕೂಟದ ವಿವರ. ಹೌದು, ಭಿಕ್ಷುಕ ಸಮುದಾಯ ಬರೋಬ್ಬರಿ 1.25 ಕೋಟಿ ರೂಪಾಯಿ ಖರ್ಚು ಮಾಡಿ ಈ ಔತಣಕೂಟ ಆಯೋಜಿಸಿದೆ. ಇದೀಗ ಈ ಅದ್ಧೂರಿ ಔತಣಕೂಟದ ವಿಡಿಯೋಗಳು ಹೊರಬರುತ್ತದ್ದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಭಿಕ್ಷುಕ ಸಮುದಾಯ ಸೇರಲು ಹಲವರು ಬಯಸಿದ್ದಾರೆ.

ಅಷ್ಟಕ್ಕೂ ಈ ಭಿಕ್ಷುಕರ ಔತಣಕೂಟ ಆಯೋಜಿಸಿದ್ದು ಪಾಕಿಸ್ತಾನದ ಗುಜ್ರನ್‌ವಾಲದಲ್ಲಿ. ಭಿಕ್ಷುಕ ಕುಟುಂಬದ ಅಜ್ಜಿಯ ಸವಿನೆನಪಿಗಾಗಿ ಈ ಔತಣಕೂಟ ಆಯೋಜಿಸಲಾಗಿತ್ತು. ಭಿಕ್ಷೆ ಬೇಡಿ ಪ್ರೀತಿಯಿಂದ ಸಾಕಿದ ಅಜ್ಜಿ ಮೃತಪಟ್ಟು ಹಲವು ದಿನಗಳೇ ಉರುಳಿತ್ತು. ಆದರೆ ಅಜ್ಜಿ ತೋರಿದ ಮಾರ್ಗದಿಂದ ಇಡಿ ಭಿಕ್ಷುಕ ಸಮುದಾಯ ಅಕ್ಷರಶಃ ಶ್ರೀಮಂತವಾಗಿದೆ. ಈ ಅಜ್ಜಿಯ ಸವಿನೆನಪಿಗೆ ಔತಣಕೂಟ ಆಯೋಜಿಸಲಾಗಿತ್ತು. ಪಾಕಿಸ್ತಾನದ ಬಹುತೇಕ ಭಾಗಗಳಿಂದ ಭಿಕ್ಷುಕರು ಆಗಮಿಸಿದ್ದರು. ಹಲವರಿಗೆ ಅಧಿಕೃತ ಅಹ್ವಾನ ನೀಡಲಾಗಿತ್ತು.
ಔತಣಕೂಟಕ್ಕೆ ಆಗಮಿಸಲು ಅತಿಥಿಗಳಿಗೆ 2,000 ವಾಹನಗಳನ್ನು ನಿಯೋಜಿಸಲಾಗಿತ್ತು. ಔತಣಕೂಟ ಸ್ಥಳದಿಂದ ಕೆಲ ದೂರದಲ್ಲಿದ್ದ ರಾಹ್‌ವಾಲಿ ರೈಲು ನಿಲ್ದಾಣದಿಂದ ಔತಣಕೂಟಕ್ಕೆ ಆಗಮಿಸಲು ಹಾಗೂ ಬಳಿಕ ರೈಲು ನಿಲ್ದಾಣಕ್ಕೆ ಡ್ರಾಪ್ ಮಾಡಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಈ ಔತಣಕೂಟದ ಖಾದ್ಯಗಳು ಅಷ್ಟೇ ಉತ್ತಮವಾಗಿತ್ತು ಅನ್ನೋದು ಪಾಲ್ಗೊಂಡವರ ಅಭಿಪ್ರಾಯ. ಪಾಕಿಸ್ತಾನದ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗಿತ್ತು. ಸಿರಿ ಪಾಯೆ, ಮುರಾಬ್ಬ, ಮಟನ್, ನಾನ್ ಮಟರ್ ಗಂಜ್, ಹಲವು ಸಿಹಿ ತಿಂಡಿಗಳುನ್ನು ಬಡಿಸಲಾಗಿತ್ತು. ಔತಣಕೂಟಕ್ಕೆ 250 ಮೇಕೆಯನ್ನು ಬಳಸಲಾಗಿದೆ.
ಭಿಕ್ಷುಕರ ಈ ಔತಣಕೂಟ ಇದೀಗ ಪಾಕಿಸ್ತಾನ ಮಾತ್ರವಲ್ಲ, ವಿಶ್ವದಲ್ಲೇ ಭಾರಿ ಸದ್ದು ಮಾಡಿದೆ. ಭಿಕ್ಷುಕರ ನಿಜಕ್ಕೂ ಬಡವರೇ? ನಿರ್ಗತಿಕರಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಭಾರತದಲ್ಲಿಯೂ ಶ್ರೀಮಂತ ಭಿಕ್ಷುಕರ ಕತೆಗಳಿವೆ, 2019ರಲ್ಲಿ ಮುಂಬೈನಲ್ಲಿ ಬುರ್ಜು ಚಂದ್ರ ಅಜಾದ್ ಎಂಬ ಭಿಕ್ಷಕರ ಸತ್ತು ಹೋದ, ನಂತರ ಆತನ ಮನೆ ಪರಿಶೀಲಿಸಿದಗ ಆತ 8.77 ಲಕ್ಷ ರುಪಾಯಿ ಡಿಪಾಸಿಟ್ ಇಟ್ಟಿದ್ದ, 1.5 ಲಕ್ಷ ಕ್ಯಾಶ್ಕೂಡ ಆತನ ಮನೆಯಲ್ಲಿ ಸಿಕ್ಕಿತ್ತು.
ಇನ್ನು ವಿಶ್ವದ ಶ್ರೀಮಂತ ಭಿಕ್ಷುಕನ ಕತೆ ಕೇಳಿದರೆ ಭಿಕ್ಷುಕರು ಅವರಾ ಇಲ್ಲ ನಾವಾ ಎಂಬ ಡೌಟು ಶುರುವಾಗುತ್ತೆ. ಆತನ ಹೆಸರು ಭಾರತ್ ಜೈನ್, ಆತ ವಿಶ್ವದಲ್ಲಿಯೇ ಶ್ರೀಮಂತ ಭಿಕ್ಷುಕ, ಆತನ ಬಳಿ ರು.7.5 ಕೋಟಿ ಆಸ್ತಿ ಇದೆ ಎಂದು ಹೇಳಲಾಗಿತ್ತು, ಈಗ ಆ ಆಸ್ತಿ ಇನ್ನೂ ಹೆಚ್ಚಾಗಿರಬಹುದು, ಈತ ಮುಂಬೈ ನಿವಾಸಿ. ಈತ ಛತ್ರಪತಿ ಶಿವಾಜಿ ರೈಲ್ವೆ ಸ್ಟೇಷನ್‌ನಲ್ಲಿ ಭಿಕ್ಷೆ ಬೇಡುತ್ತಾನೆ. ದಿನದಲ್ಲಿ 10-12 ಗಂಟೆ ಭಿಕ್ಷೆ ಬೇಡುತ್ತಾನಂತೆ.
ಇದೆಲ್ಲಾ ಕೇಳಿದಾಗ ನೀವು ಇನ್ಮುಂದೆ ಭಿಕ್ಷುಕರಿಗೆ ಹಣ ಹಾಕಲು ಖಂಡಿತ ಯೋಚಿಸುತ್ತೀರಿ. ಈತನಿಗೆ ಥಾಣೆಯಲ್ಲಿ ಶಾಪ್ ಇದೆ, ಇದರ ಬಾಡಿಗೆ ತಿಂಗಳಿಗೆ ರುಪಾಯಿ 30, 000, ಆತನ ಕುಟುಂಬದವರು ಭಿಕ್ಷೆ ಕೇಳಬೇಡ ಎಂದು ಕೇಳಿದರೂ ಭಿಕ್ಷೆ ಬೇಡುತ್ತಾನೆ. ಈತ ದೇವಾಲಯಗಳಿಗೆ, ಚಾರಿಟಿಗಳಿಗೆ ದಾನವನ್ನೂ ಮಾಡ್ತಾರಂತೆ.
ಹಾಗಾಗಿ ಇನ್ಮುಂದೆ ಭಿಕ್ಷೆ ಬೇಡುವವರು ನಿಮ್ಮ ಮುಂದೆ ಬಂದಾಗ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆಎಂದ ನೋಡುವುದು ಒಳ್ಳೆಯದು.



Click it and Unblock the Notifications