Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
BBK11: ಸ್ವರ್ಗದಲ್ಲಿರುವವರಿಗೆ ನರಕವಾಗುತ್ತಿದೆ, ನರಕದಲ್ಲಿರುವವರಿಗೆ ನೆಮ್ಮದಿ ಇದೆ, ನಿಜ ಜೀವನಕ್ಕೂ ಲಿಂಕ್ ಆಗುತ್ತಿದೆ , ಹೇಗೆ?
ಬಿಗ್‌ಬಾಸ್ ಟೀಕಿಸುವವರು ಒಂದಿಷ್ಟು ಜನರು, ಅದನ್ನು ಇಷ್ಟಪಡುವವರು ಒಂದಿಷ್ಟು ವೀಕ್ಷಕರು, ಆದರೆ ಇವರಿಬ್ಬರಿಗೂ ಬಿಗ್‌ಬಾಸ್‌ನಲ್ಲಿ ಏನು ನಡೆಯುತ್ತದೆ ಎಂಬ ಕುತೂಹಲವಿರುತ್ತದೆ ಅಲ್ವಾ? ಈ ಬಾರಿಯಂತೂ ಸ್ವರ್ಗ-ನರಕದ ಕಾನ್ಸಪ್ಟ್ ಸಿಕ್ಕಾಪಟ್ಟೆ ವರ್ಕ್ ಆಗ್ತಾ ಇದೆ.
ಬಿಗ್‌ಬಾಸ್‌ನ ಸ್ವರ್ಗ-ನರಕದಲ್ಲಿ ನಡೆಯುತ್ತಿರುವ ಘಟನೆ ಎಲ್ಲೋ ಒಂದು ಕಡೆ ನಿಜ ಜೀವನಕ್ಕೂ ಲಿಂಕ್ ಆಗುತ್ತಿದೆಯೇ?

ಎಂಥ ಹುಚ್ಚು ಹೋಲಿಕೆ ಎಂದನಿಸಬಹುದು, ಆದರೆ ಅಲ್ಲಿ ನಡೆಯುತ್ತಿರುವ ವಿಷಯ ನೋಡಿದಾಗ ಎಲ್ಲೋ ನಮ್ಮೆಲ್ಲರ ನಿಜ ಜೀವನಕ್ಕೆ ಸ್ವಲ್ಪ ಲಿಂಕ್ ಆಗುತ್ತಿದೆ, ಹೇಗೆ ಅಂಥ ಕೇಳುತ್ತಿದ್ದೀರಾ?
ನರಕ ಎಂದರೆ ಕಷ್ಟ, ಸ್ವರ್ಗ ಎಂಬುವುದು ಸುಖ ಎಂಬುವುದು ಕಲ್ಪನೆ, ಆದರೆ ಆಗುತ್ತಿರುವುದೇನು?
ನರಕ ಎಂದರೆ ಅಲ್ಲಿ ಕಷ್ಟ ತಿನ್ನುವ ಆಹಾರಕ್ಕೂ ಕಷ್ಟಪಡಬೇಕು, ಅದರೆ ಸ್ವರ್ಗವೆಂದರೆ ಅಲ್ಲಿ ಎಲ್ಲವೂ ಸಿಗುವುದು, ಕೆಲಸಕ್ಕೆ ಆಳುಗಳಿರುತ್ತಾರೆ, ಲಕ್ಷುರಿಗೆ ಕೊರತೆ ಇರಲ್ಲ, ಆದರೆ ಸ್ವರ್ಗದಲ್ಲಿರುವವರನ್ನು ಗಮನಿಸಿ ನರಕದಲ್ಲಿ ಇರವವರ ಬಳಿ ಇರುವ ಒಗ್ಗಟ್ಟು, ಖುಷಿ, ನೆಮ್ಮದಿ ಸ್ವರ್ಗದಲ್ಲಿ ಇಲ್ಲ. ಇದೇ ತಾನೆ ಎಷ್ಟೋ ಜನರ ಜೀವನದಲ್ಲಿ ನಡೆಯುತ್ತಿರುವುದು.
ತುಂಬಾ ಕಷ್ಟಪಟ್ಟು ಮೇಲಕ್ಕೆ ಬರ್ತಾರೆ, ನಂತರ ಒಳ್ಳೆಯ ಮನೆ, ಕಾರು ಅಂತ ಎಲ್ಲಾ ಬರುತ್ತೆ, ಆವಾಗ ಅವರಿಗೆ ಎಲ್ಲೋ ಒಂದು ನಾನು ಮೊದಲು ಇದ್ದಷ್ಟು ಖುಷಿಯಾಗಿಲ್ಲ ಎಂದನಿಸಲಾರಂಭಿಸುತ್ತದೆ. ಆವಾಗ ಕಷ್ಟ ಇತ್ತು, ಆದರೆ ಮನಸ್ಸಿಗೆ ನೆಮ್ಮದಿ ಒತ್ತು, ಕಣ್ತುಂಬ ನಿದ್ದೆ ಇತ್ತು, ಈಗ ಸುಖ ಇದೆ ಆದರೆ ನೆಮ್ಮದಿಗಾಗಿ ಹುಡುಕುವವರು ತುಂಬಾ ಜನರ ನಮ್ಮ ನಡುವೆ ಇದ್ದಾರೆ, ಹಾಗಾಗಿಯೇ ಹೇಳಿದ್ದು ಈ ಸ್ವರ್ಗ ನಕರದ ಕಾನ್ಸೆಪ್ಟ್ ನಿಜ ಜೀವನಕ್ಕೂ ಲಿಂಕ್ ಆಗುತ್ತಿದೆಯೆಂದು ಅನಿಸುತ್ತಿದೆ ಅಲ್ವಾ?
ಬಿಗ್‌ಬಾಸ್ ಮನೆಯಲ್ಲಿ ನರಕದಲ್ಲಿರುವವರು ಖುಷಿಯಲ್ಲಿದ್ದಾರೆ, ಸ್ವರ್ಗದ ಮನೆ ಗೊಂದಲ ಗೂಡಾಗಿದೆ
ನರಕ ತುಂಬಾ ಕಷ್ಟವಾಗಿರುತ್ತದೆ, ಸ್ವರ್ಗ ಚೆನ್ನಾಗಿರುತ್ತದೆ ಎಂದು ಸ್ವರ್ಗವಾಸಿಗಳು ಅಂದುಕೊಂಡಿದ್ದರು, ಆದರೆ ನೋಡಿದರೆ ಸ್ವರ್ಗದಲ್ಲಿರುವ ಸ್ಪರ್ಧಿಗಳಲ್ಲಿ ಹೊಂದಾಣಿಕೆ, ಒಗ್ಗಟ್ಟು ಒಡೆದು ಹೋಗಿದೆ, ಅಲ್ಲಿ ಖುಷಿ ಇಲ್ಲ, ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.
ಅದೇ ನರಕ ವಾಸಿಗಳಿಗೆ ಕಷ್ಟವಿದೆ, ಆದರೆ ಒಟ್ಟಟ್ಟು ಇದೆ, ಸವಾಲುಗಳನ್ನು ಒಟ್ಟಾಗಿ ಬುದ್ಧಿವಂತಿಕೆ ಎದುರಿಸುವ ಚಾಣಾಕ್ಷವಿದೆ, ಅಲ್ಲದೆ ದೊಡ್ಡ ಜಗಳವಿಲ್ಲ, ಜಗಳ ಮಾಡಿದರೆ ಹೈಲೈಟ್ಸ್ ಆಗುತ್ತೇನೆ ಎಂಬ ಕಾರಣಕ್ಕೆ ಜಗಳ ಮಾಡುವವರು ಇದ್ದಾರೆ ಅಷ್ಟೇ, ಆದರೆ ನಿಜವಾಗಿಯೂ ಅಲ್ಲಿ ಸಮಸ್ಯೆಗಳಿಲ್ಲ, ಸಮಸ್ಯೆಗಳೆಲ್ಲಾ ಇರುವುದು ಸ್ವರ್ಗದಲ್ಲಿಯೇ.. ಸ್ವರ್ಗ ನರಕವಾಗಿದೆ, ನರಕ ಸ್ವರ್ಗವಾಗಿದೆ.
ಜಗಳ ಮಾಡಿದರೆ ಕ್ಯಾಮರಾ ಅಟೆಕ್ಷನ್ ಹೆಚ್ಚು ಸಿಗುತ್ತೆ ಎಂದು ಅಂದುಕೊಂಡವರೇ ಹೆಚ್ಚಿದ್ದಾರೆ
ಹತ್ತು ಸೀಸನ್ ಮುಗಿದಿದೆ, ಇದು 11ನೇ ಸೀಸನ್, ಇಷ್ಟು ಸೀಸನ್ ನೋಡಿಕೊಂಡು ಬಂದವರಿಗೆ ಜಗಳ ಮಾಡಿದರೆ ಹೇಗೆ ಹೈಲೈಟ್ಸ್ ಆಗುತ್ತಾರೆ ಎಂಬುವುದು ಗೊತ್ತಿದೆ, ಹಾಗಾಗಿಯೇ ಸುಮಾ ಸುಮ್ಮನೆ ಜಗಳ ಮಾಡ್ತಾ ಇದ್ದಾರೆ... ವೀಕ್ಷಕರು ಕೂಡ 10 ಸೀಸನ್ ನೋಡಿದ್ದಾರೆ... ಹಾಗಾಗಿ ಸ್ಪರ್ಧಿಗಳ ಈ ನಾಟಕ ನಂಬಲು ರೆಡಿಯಿಲ್ಲ, ಇಲ್ಲಿ ಪ್ರತಿಭೆ, ಬುದ್ಧಿವಂತಿಕೆ ಗಮನ ಸೆಳೆಯುತ್ತಿದೆ.
ಮಿಮಿಕ್ರಿ ಪ್ರತಿಭೆಯಿಂದ ಗಮನ ಸೆಳೆದ ಉಗ್ರಂ ಮಂಜು
ಕೆಲವರು ಜಗಳವಾಡಿ ಗಮನ ಸೆಳೆಯಬಹುದು ಎಂದು ನೋಡುತ್ತಿದ್ದರೆ ಉಗ್ರಂ ಮಂಜು ಮಿಮಿಕ್ರಿ ಮಾಡುವ ಮೂಲಕ ಬಿಗ್‌ಬಾಸ್ ಮನೆಮಂದಿ ಮಾತ್ರ, ವೀಕ್ಷಕರೂ ಹೊಟ್ಟೆ ಹುಣ್ಣಾಗುವಂತೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ಬಿಗ್‌ಬಾಸ್ ಟೀಂನವರು ಬಿಗ್‌ಬಾಸ್ ಥೀಮ್ ಹೊಸದಾಗಿದೆ ಅಂತಿದ್ದಾರೆ, ವೀಕ್ಷಕರು ಕೂಡ ಜಗಳ ಸಾಕು ನಾವು ಕೂಡ ಏನೋ ಹೊಸತನ ಹುಡುಕುತ್ತಿದ್ದೇವೆ ಅಂತಿದ್ದಾರೆ, ವೀಕ್ಷಕರ ನಿರೀಕ್ಷೆ ಯಾವೆಲ್ಲಾ ಸ್ಪರ್ಧಿಗಳು ತಲುಪಲಿದ್ದಾರೆ ಎಂಬುವುದು ಕಾದು ನೋಡಬೇಕಷ್ಟೇ..



Click it and Unblock the Notifications











