Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಗ್‌ಬಾಸ್‌ನಿಂದ ಹೊರ ಬರಲು ಇದೇ ನಿಜವಾದ ಕಾರಣ ಎಂದು ತಿಳಿಸಿದ ಗೋಲ್ಡ್ ಸುರೇಶ್
ಬಿಗ್‌ಬಾಸ್ 11ರ ಸ್ಪರ್ಧಿಗಳಲ್ಲಿ ಪ್ರಮುಖ ಸ್ಪರ್ಧಿಗಳಾಗಿ ಗುರುತಿಸಿಕೊಂಡವರಲ್ಲೊಬ್ಬರು ಗೋಲ್ಡ್ ಸುರೇಶ್. ತಮ್ಮದೇ ವಿಭಿನ್ನ ಶೈಲಿಯ ಆಟದ ಮೂಲಕ ಗಮನ ಸೆಳೆದಿದ್ದರು. ಎಷ್ಟೋ ಬಾರಿ ನಾಮಿನೇಷನ್‌ಗೆ ಬಂದಿದ್ದರೂ ಎಲಿಮಿನೇಷನ್‌ನಿಂದ ಪಾರಾಗಿದ್ದರು, ಇದು ಗೋಲ್ಡ್ ಸುರೇಶ್ ಅವರಿಗೆ ವೀಕ್ಷಕರ ಬೆಂಬಲವೂ ಸಿಕ್ಕಿದೆ ಎಂಬುವುದಕ್ಕೆ ಸಾಕ್ಷಿಯಾಗಿತ್ತು.

ಮನೆಯೊಳಗಡೆ ಕುತಂತ್ರ ಮಾಡುತ್ತಾರೆ ಎಂದು ಹೇಳಿಸಿಕೊಂಡಿದ್ದರೂ ಅದೇ ಮನೆಯವರಿಂದ ಉತ್ತಮ ಕೂಡ ಗಳಿಸಿದ್ದರು, ಒಟ್ಟಿನಲ್ಲಿ ಬಿಗ್‌ಬಾಸ್ ಆಟವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಗ ತುರ್ತು ಪರಿಸ್ಥಿತಿಯಿಂದಾಗಿ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಿಂದ ಹೊರಡಬೇಕಾಗಿದೆ ಎಂದು ಬಿಗ್‌ಬಾಸ್ ತಿಳಿಸಿದಾಗ ಬಿಗ್‌ಬಾಸ್ ಮನೆಯವರಿಗೆ ಶಾಕ್, ಗೋಲ್ಡ್ ಸುರೇಶ್‌ಗೂ ಹೊರಗಡೆ ಏನಾಯ್ತಪ್ಪಾ ಎಂಬ ಆತಂಕ ಉಂಟಾಗಿತ್ತು, ಹೀಗೆ ಅನಿವಾರ್ಯ ಕಾರಣದಿಂದ ಬಿಗ್‌ಬಾಸ್‌ನಿಂದ ಹೊರಬಂದ ಗೋಲ್ಡ್ ಸುರೇಶ್ ಯಾವ ಕಾರಣಕ್ಕೆ ಹೊರ ಬಂದಿದ್ದಾರೆ ಎಂದು ಬಿಗ್‌ಬಾಸ್ ಹೇಳಿರಲಿಲ್ಲ, ಗೋಲ್ಡ್ ಸುರೇಶ್ ಕೂಡ ಹೇಳಿರಲಿಲ್ಲ, ಹೀಗಾಗಿ ನಾನಾ ಕಾರಣಗಳ ಊಹಾ ಪೋಹಾ ಹರಡಲಾರಂಭಿಸಿತು.
ಬಿಗ್‌ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಎಂಬುವುದನ್ನು ಸ್ವತಃ ತಿಳಿಸಿದ ಗೋಲ್ಡ್ ಸುರೇಶ್
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಗೋಲ್ಡ್ ಸುರೇಶ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಅವರ ತಂದೆಗೆ ಹುಷಾರಿಲ್ಲ ಎಂಬ ವದಂತಿ ಕೂಡ ಹಬ್ಬಿತ್ತು, ಅದಕ್ಕೆ ಅವರ ತಂದೆ ನಾನು ಚೆನ್ನಾಗಿದ್ದೇನೆ ಎಂದು ಹೇಳುವ ಮೂಲಕ ಆ ಊಹಾಪೋಹಾಗಳಿಗೆ ತೆರೆ ಎಳೆದರು. ಅದಾದ ಬಳಿಕ ಅವರು ಸಿಕ್ಕಾಪಟ್ಟೆ ಸಾಲ ಮಾಡಿದ್ದಾರೆ ಎಂಬ ರೂಮರ್ ವೇಗವಾಗಿ ಹರಡಿತು. ಇದೀಗ ಲೈವ್‌ಗೆ ಬಂದ ಗೋಲ್ಡ್ ಸುರೇಶ್ ನಾನು ಆರ್ಥಿಕ ಕಾರಣಗಳಿಂದಾಗಿ ಮನೆಯಿಂದ ಹೊರಬಂದೆ ಎಂಬುವುದನ್ನು ಸ್ಪಷ್ಟಪಡಿಸಿದ್ದು ಆದರೆ ಎಲ್ಲರೂ ಅಂದುಕೊಂಡಂತೆ ಸಾಲದ ಕಾರಣದಿಂದ ಅಲ್ಲ ಎಂಬುವುದನ್ನು ಸ್ಪಷ್ಟ ಪಡಿಸಿದ್ದಾರೆ.
ಗೋಲ್ಡ್ ಸುರೇಶ್ ಬ್ಯುಸ್‌ನೆಸ್ ವ್ಯಕ್ತಿ ಎಂಬುವುದು ಗೊತ್ತಿರುವ ವಿಷಯ, ಅವರ ಬ್ಯುಸ್‌ನೆಸ್ ಅವರು ನಡೆಸಿಕೊಂಡು ಹೋಗುತ್ತಿದ್ದರು, ಅವರಿಗೆ ಬಿಗ್‌ಬಾಸ್ ಆಫರ್ ಬಂದಾಗ ಆ ಬ್ಯುಸ್‌ನೆಸ್ ನಿಭಾಯಿಸಲು ಬೇರೆಯವರಿಗೆ ಹೇಳಿ ಹೋಗಿರುತ್ತಾರೆ, ಆ ವ್ಯಕ್ತಿಗೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗದೇ ಇದ್ದಾಗ, ಇದರಿಂದ ತುಂಬಾನೇ ಆರ್ಥಿಕ ಹೊಡೆತ ಬೀಳುತ್ತದೆ ಎಂದು ಮನಗಂಡ ಅವರ ಪತ್ನಿ ಬಿಗ್‌ಬಾಸ್ ಟೀಂಗೆ ಹೇಳಿ ಮನೆಯಿಂದ ಹೊರಗಡೆ ಕರೆಸಿಕೊಂಡಿದ್ದಾರೆ.
ಬಿಗ್‌ಬಾಸ್ ಆಟಕ್ಕಿಂತ ತಾವು ಬೆಳೆಸಿದ ಸಾಮ್ರಾಜ್ಯ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು
ಬಿಗ್‌ಬಾಸ್ ಎಂಬುವುದು ಆಟ, ಆದರೆ ಅದುವೇ ಜೀವನವಲ್ಲ, ಆದರೆ ಗೋಲ್ಡ್ ಸುರೇಶ್ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣ ಅವರ ಶ್ರಮ, ಬುದ್ಧಿವಂತಿಕೆ, ವ್ಯಾಪಾರ ತಂತ್ರಗಾರಿಕೆ. ಬಿಗ್‌ಬಾಸ್‌ಗೆ ಗೋಲ್ಡ್ ಸುರೇಶ್ ಕೆಜಿಗಟ್ಟಲೆ ಚಿನ್ನ ಹಾಕಿ ಬಂದಾಗ ಅವರ ಅಪ್ಪ ತುಂಬಾ ಆಸ್ತಿಮಾಡಿರಬಹುದು ಎಂದು ಅಂದುಕೊಂಡಿದ್ದರು, ಆದರೆ ನಂತರ ಅವರೇ ಅವರ ಕತೆ ಹೇಳಿದಾಗ ಕ ದಶಕದ ಹಿಂದೆ ಖಾಲಿ ಹೊಟ್ಟೆಯಲ್ಲಿ ಮೆಜೆಸ್ಟಿಕ್‌ನಲ್ಲಿ ಕಳೆದ ವ್ಯಕ್ತಿ ಇಂದು ಕೆಜಿಗಟ್ಟಲೆ ಚಿನ್ನ ಹಾಕಿಕೊಳ್ಳುವಷ್ಟು ದೊಡ್ಡ ಮಟ್ಟಿಗೆ ಬೆಳೆದಿದ್ದಾರೆ.
ಬ್ಯುಸ್‌ನೆಸ್ ಎಂಬುವುದು ಎಲ್ಲರೂ ಮಾಡಕ್ಕಾಗಲ್ಲ, ಕೆಲವರಿಗಷ್ಟೇ ಬ್ಯುಸ್‌ನೆಸ್ ಹೇಗೆ ಬೆಳೆಸಿಕೊಂಡು ಹೋಗುವುದು ಎಂಬ ತಂತ್ರಗಾರಿಕೆ ಗೊತ್ತಿರುತ್ತದೆ, ಇಲ್ಲದಿದ್ದರೆ ಎಲ್ಲರೂ ಬ್ಯುಸ್‌ನೆಸ್ ಮಾಡ್ತಾ ಇದ್ದರು ಅಲ್ವಾ? ಅವರ ನಡೆಸುತ್ತಿರು ಬ್ಯುಸಸ್‌ನೆಸ್ ಬೇರೆಯವರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಇವರು ಬರದಿದ್ದರೆ ತುಂಬಾನೇ ಗೊಂಲಗಳು ಉಂಟಾಗುತ್ತಿತ್ತು ಈ ಕಾರಣಕ್ಕೆ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್‌ಬಾಸ್‌ನಲ್ಲಿ ಫಿನಾಲೆಯವರೆಗೆ ಇರಲು ಸಾಧ್ಯವಾಗದೆ ಇದ್ದರೂ ಈ ಶೋ ಮೂಲಕ ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಾಗಿದೆ....



Click it and Unblock the Notifications