Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳನ ಮೇಲೆ ಯುದ್ಧ-ನಗರಗಳ ಮುಳುಗಡೆ: ಮುಂದಿನ ವರ್ಷದ ಬಾಬಾ ವಂಗಾ ಭವಿಷ್ಯ!
ನೀವು ಬಾಬಾ ವಂಗಾ ಹೆಸರು ಕೇಳಿರಬಹುದು, ಆಕೆ ನುಡಿದಿರುವ ಭವಿಷ್ಯಗಳು ನಿಜವಾಗುತ್ತಿರುವುದನ್ನು ಸಹ ನೀವು ಗಮನಿಸಿರಬಹುದು. ಆಕೆಯ ಭವಿಷ್ಯವಾಣಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಏಕೆಂದರೆ ಆಕೆ ನುಡಿದ ಭವಿಷ್ಯಗಳು ನಿಜವಾಗುತ್ತವೆ ಎಂದು ನಂಬಲಾಗಿದೆ. ಜನವರಿ 31, 1911 ರಂದು ಒಟ್ಟೋಮನ್ ಸಾಮ್ರಾಜ್ಯದಲ್ಲಿ (ಈಗಿನ ಆಧುನಿಕ ಮ್ಯಾಸಿಡೋನಿಯಾ) ಜನಿಸಿದರು ಮತ್ತು ಅವರು ಆಗಸ್ಟ್ 11, 1996 ರಂದು ಬಲ್ಗೇರಿಯಾದಲ್ಲಿ ನಿಧನರಾದರು. ಬಾಬಾ ವಂಗಾ ಅವರನ್ನು "ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್" ಎಂದು ಕರೆಯಲಾಗುತ್ತದೆ.
ಆಕೆ ಸುಮಾರು 5 ಸಾವಿರ ವರ್ಷಗಳ ಮುಂದೆ ಸಂಭವಿಸಬಹುದಾದ ಆಗು ಹೋಗುಗಳ ಕುರಿತಂತೆಯೂ ಭವಿಷ್ಯ ನುಡಿದಿದ್ದಾಳೆ. ಈಗ ಈ ಭವಿಷ್ಯವಾಣಿಗಳ ಕುರಿತು ಜನರ ದೃಷ್ಟಿ ಬಿದ್ದಿದ್ದು, ಆಕೆ ಮಂಗಳನಲ್ಲಿ ಯುದ್ಧ ಸಂಭವಿಸಲಿದೆ ಎಂದಿದ್ದಾಳೆ. ಹಾಗಾದ್ರೆ ಮುಂಬರುವ ದಿನಗಳಲ್ಲಿ ಏನೆಲ್ಲಾ ಸಂಭವಿಸಲಿದೆ? ಆಕೆ ನುಡಿದಿರುವ ಭವಿಷ್ಯ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬಾಬಾ ವಂಗಾ ಎಂದು ಕರೆಯಲ್ಪಡುವ ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಕಣ್ಣುಗಳ ಕಳೆದುಕೊಂಡ ಬಳಿಕ ಅತೀಂದ್ರ ಶಕ್ತಿ ಪಡೆದಿರುವುದಾಗಿ ಹೆಸರಾದಳು. ಆಕೆಗೆ ಮುಂದೆ ಸಂಭವಿಸಬಹುದಾದ ದೊಡ್ಡ ದೊಡ್ಡ ದುರಂತಗಳ ಮೊದಲೇ ತಿಳಿಸುವ ಶಕ್ತಿ ಇತ್ತು ಎಂದು ನಂಬಲಾಗಿದೆ. ಆಕೆ ನುಡಿದಿರುವ ಹಲವು ಭವಿಷ್ಯಗಳು ಬಹುಪಾಲು ನಿಜವಾಗಿವೆ.
ಆಕೆ ಅಮೆರಿಕದ ಮೇಲೆ ತಾಲಿಬಾನ್ ನಡೆಸಿದ್ದ ವೈಮಾನಿಕ ದಾಳಿಯಾಗಿದ್ದ ಟ್ವಿನ್ ಟವರ್ ದುರಂತವನ್ನ ಮೊದಲೇ ಭವಿಷ್ಯ ನುಡಿದಿದ್ದಳು, ಎರಡು ಲೋಹದ ಹಕ್ಕಿಗಳು ಅಮೆರಿಕದ ಸಹೋದರರ ಮೇಲೆ ದಾಳಿ ಮಾಡಲಿದೆ ಎಂದಿದ್ದಳು. ಆದರೆ ಆ ವೇಳೆಗೆ ಇದು ಯಾವ ಹಕ್ಕಿ, ಯಾವ ಸಹೋದರರು ಎಂಬುದು ತಿಳಿದಿರಲಿಲ್ಲ. ಅಲ್ಲದೆ ತೋಳಗಳು ಪೊದೆಯೊಳಗಿಂದ ನುಗ್ಗಿ ದಾಳಿ ಮಾಡುತ್ತವೆ ಅಮಾಯಕರ ರಕ್ತ ಹರಿಯುತ್ತದೆ ಎಂದಿದ್ದಳು. ಈ ಘಟನೆ ಸಂಭವಿಸಿದ ಬಳಿಕವಷ್ಟೇ ಇದರ ಗೂಡಾರ್ಥ ತಿಳಿದಿತ್ತು.
ಇನ್ನು ಅವರ ಪ್ರಕಾರ 5079ರಲ್ಲಿ ಇಡಿ ಪ್ರಪಂಚ ಅಂತ್ಯವಾಗಲಿದೆಯಂತೆ. ಇದು ಸಹ ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಯಾಗಿದೆ. ಆದರೆ ಇದಕ್ಕೂ ಮೊದಲೇ ಹಲವು ರೀತಿಯ ಘಟನೆಗಳು ನಡೆಯಲಿದೆ ಎಂದು ಆಕೆ ಭವಿಷ್ಯ ನುಡಿದಿದ್ದಾಳೆ.
2025 ಅಂದರೆ ಮುಂದಿನ ವರ್ಷದಲ್ಲಿ ಯೂರೋಪ ಖಂಡದಲ್ಲಿ ಜನಸಂಖ್ಯೆಯೂ ಗಣನೀಯ ರೀತಿಯಲ್ಲಿ ಇಳಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾಳೆ. ಇದಕ್ಕೆ ಯೂರೋಪ್‌ನಲ್ಲಿ ಸಂಭವಿಸಲಿರುವ ಹಲವು ಸಂಘರ್ಷಗಳು ಕಾರಣವಾಗಲಿದೆಯಂತೆ.
ಭೂಮಿಯ ಮೇಲೆ ಶಕ್ತಿಯ ಮೂಲಗಳು ಮುಗಿದು ಹೋಗುವ ಹಂತ ತಲುಪಲಿದದ್ದು 2028ರ ಹೊತ್ತಿಗೆ ಮಾನವ ಶುಕ್ರನ ಮೇಲೆ ಇಳಿಯಲಿದ್ದಾನಂತೆ. ಅಲ್ಲಿ ನವೀಕರಿಸಲು ಸಾಧ್ಯವಿಲ್ಲದ ಇಂಧನಗಳ ಮೂಲ ಹುಡುಕಲು ಮಾನವ ಮುಂದಾಗಲಿದ್ದಾನೆ ಎಂಬುದು ಇದರ ಅರ್ಥವಾಗಿದೆ.
ಈಗಾಗಲೇ ಸಮುದ್ರ ಮಟ್ಟ ಏರಿಕೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿರುವಾಗ 2033ರಲ್ಲಿ ಮಂಜುಗಡ್ಡೆಗಳ ಕರಗುವಿಕೆಯಿಂದ ಸಮುದ್ರ ಮಟ್ಟದಲ್ಲಿ ಭಾರೀ ಏರಿಕೆಯಾಗಲಿದೆ ಎಂದು ನುಡಿದಿದ್ದರು. ಇದು ಸಮುದ್ರ ತೀರದ ನಗರಗಳಿಗೆ ಅಪಾಯ ತಂದೊಡ್ಡಲಿದೆ ಎಂಬುದು ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯಾಗಿದೆ.
ಇನ್ನು 2076ರ ವೇಳೆಗೆ ಇಡೀ ಜಗತ್ತಿನಲ್ಲಿ ಕಮ್ಯೂನಿಸಂ ಮರುಕಳಿಸಲಿದೆಯಂತೆ. ಕೆಲವು ಖಂಡದಲ್ಲಿ ಈಗಾಗಲೇ ಕಮ್ಯೂನಿಸಂ ಮತ್ತೆ ಆಡಳಿತದ ಹಾದಿಯಲ್ಲಿದೆ. ಜೊತೆಗೆ 2130ರ ವೇಳೆ ನಾವು ಮತ್ತೊಂದು ಗ್ರಹದ ನಾಗರೀಕತೆಯೊಂದಿಗೆ ಸಂಪರ್ಕ ಸಾಧಿಸಲಿದ್ದೇವೆ ಎಂದಿದ್ದಾಳೆ. 2170ರಲ್ಲಿ ಜಾಗತಿಕ ಮಟ್ಟದ ಬರ ಕಾನಿಸಿಕೊಳ್ಳಲಿ.
ಬಹಳ ಮುಖ್ಯವಾದ ಆಕೆಯ ಭವಿಷ್ಯ ಎಂದರೆ 3005ರಲ್ಲಿ ಮಂಗಳನ ಮೇಲೆ ಮೊದಲ ಯುದ್ಧವೇ ನಡೆಯಲಿದೆ ಎಂದಿದ್ದಾಳೆ. ಈಗಾಗಲೇ ಮಂಗಳನ ಮೇಲೆ ಹಿಡಿತ ಸಾಧಿಸಲು ಹಲವು ರಾಷ್ಟ್ರಗಳು ಮುಂದಾಗಿರುವುದು ನಮಗೆಲ್ಲ ತಿಳಿದಿರುವ ವಿಚಾರ.



Click it and Unblock the Notifications



