Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..! ಇದು ಕಾಂಕ್ರೀಟ್ ಬರಡು ಭೂಮಿ ಬಿಕ್ಕಟ್ಟು..!
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯ ಜೊತೆಗೆ ಈಗ ನೀರಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ದಿನಬಳಕೆ ಕೆಲಸಕ್ಕೆ ಮಾತ್ರವಲ್ಲ ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯ ಬೆಂಗಳೂರಿಗರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಆದರೆ ಬೆಂಗಳೂರಿಗೆ ದಿನವೊಂದಕ್ಕೆ ಎಷ್ಟು ಲೀಟರ್ ನೀರಿನ ಅಗತ್ಯವಿದೆ ಎಂದು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತೆ. ಯಾಕಂದ್ರೆ ಬೆಂಗಳೂರಲ್ಲಿ ಒಂದು ದಿನ ಬಳಕೆಯಾಗುವ ನೀರಿನ ಪ್ರಮಾಣ ರಾಜ್ಯದ ಕೆಲವು ಹಳ್ಳಿ, ಗ್ರಾಮಗಳಿಗೆ ವರ್ಷಗಳಿಗೆ ಸಾಕಾಗುತ್ತದೆ. ಹೌದು ಬೆಂಗಳೂರಲ್ಲಿ ಜನಸಂಖ್ಯೆ ಮಿತಿಮೀರಿರುವ ಪರಿಣಾಮ ನಿತ್ಯ ಸಾವಿರಾರು ಲೀಟರ್ ನೀರು ಅಗತ್ಯವಿದೆ.

ಬೆಂಗಳೂರು ಪ್ರಾಥಮಿಕವಾಗಿ ಎರಡು ಮೂಲಗಳಿಂದ ನೀರು ಪಡೆಯುತ್ತದೆ. ಒಂದು ಕಾವೇರಿ ನದಿ ನೀರು ಮತ್ತೊಂದು ಬೋರ್‌ವೆಲ್ ನೀರು. ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ್ದ ಕಾರಣ ಜಲಾಶಯದಲ್ಲಿ ನೀರಿಲ್ಲದೆ ಇರುವುದು ಬೆಂಗಳೂರಿಗೆ ಅಗತ್ಯವಾಗಿ ಬೇಕಾದ ನೀರು ಸಿಗುತ್ತಿಲ್ಲ ಎಂಬುದು ತಿಳಿದಿರುವ ಸಂಗತಿ. ಆದರೆ ಬೋರ್‌ವೆಲ್ ವಾಟರ್ ಸಹ ಈ ಬಾರಿ ಕುಸಿತ ಕಂಡಿರುವುದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲು ಕಾರಣವಾಗಿದೆ.
ಬೆಂಗಳೂರಿಗೆ ಪ್ರತಿದಿನ 2,600-2,800 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ ಮತ್ತು ಪ್ರಸ್ತುತ ಪೂರೈಕೆಯು ಅಗತ್ಯಕ್ಕಿಂತ ಅರ್ಧದಷ್ಟು ಇದೆ ಎಂದು ತಿಳಿದುಬಂದಿದೆ.
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..?
ಬೆಂಗಳೂರು ಮಾತ್ರ ನೀರಿನ ಸಮಸ್ಯೆಯಿಂದ ಅಲುಗಾಡುತ್ತಿರುವುದಲ್ಲ. ಇದಕ್ಕೂ ಮೊದಲು ಸೌತ್ ಆಫ್ರಿಕಾದ ಕ್ಯಾಪಿಟಲ್ ಕೇಪ್ ಟೌನ್ ಸಹ ಈ ರೀತಿ ನೀರಿನ ಬವಣೆ ಎದುರಿಸಿತ್ತು. ಅಲ್ಲಿ ಕುಡಿಯುವ ನೀರಿಗಾಗಿ ಕಿ.ಮೀ ದೂರದ ಸಾಲು ನಿಲ್ಲಬೇಕಿತ್ತು. ಇದು ಒಂದೆರಡು ದಿನ ಮಾತ್ರವಲ್ಲ ತಿಂಗಳುಗಳ ಕಾಲ ಮುಂದುವರೆದಿತ್ತು.
ಕೇಪ್‌ಟೌನ್ ಸಿಟಿಗೂ ಬೆಂಗಳೂರಿನ ಇಂದಿನ ಪರಿಸ್ಥಿತಿಗೂ ತೀರ ಹೋಲಿಕೆ ಇದೆ. ಆದ್ರೆ ಅಲ್ಲಿ 2018ರಲ್ಲಿ 'ಡೇ ಜೀರೋ' ಎಂಬ ಬಿಕ್ಕಟ್ಟು ಸಹ ಹುಟ್ಟಿಕೊಂಡಿತ್ತು. ಹಾಗಾದರೆ ಏನಿದು ಡೇ ಜೀರೋ, ಬೆಂಗಳೂರಿಗೂ ಈ ರೀತಿ ಆಗುತ್ತಾ? ಡೇ ಜೀರೋ ಅಂದ್ರೆ ಎಲ್ಲಾ ಕೊಳಾಯಿಗಳು ಒಂದು ಹನಿ ನೀರಿಲ್ಲದೆ ಒಣಗುವುದು, ಅಂದ್ರೆ ಆ ಸಿಟಿಯಲ್ಲಿ ಎಲ್ಲಿಯೂ ನೀರಿಲ್ಲದ ಪರಿಸ್ಥಿತಿ. ಅಂದ್ರೆ ಅದೊಂದು ಕಾಂಕ್ರೀಟ್ ತುಂಬಿರುವ ಬರಡು ಭೂಮಿ.
ಕೇಪ್ ಟೌನ್ 2016ರಿಂದ 18ರ ವರೆಗೆ ಇದೇ ರೀತಿ ನೀರಿನ ಸಮಸ್ಯೆಗೆ ಒಳಗಾಗಿತ್ತು. ಅಲ್ಲಿ ಒಂದು ಹನಿ ನೀರಿರಲಿಲ್ಲ. ಬಹುತೇಕ ಎಲ್ಲಾ ನದಿಗಳು, ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಸರ್ಕಾರ ಬೇರೆ ಕಡೆಗಳಿಂದ ಟ್ಯಾಂಕರ್ ನೀರು ತಂದು ಜನರಿಗೆ ನೀಡಬೇಕಿತ್ತು. ಅದಕ್ಕೂ ನೂರಾರು ನಿಯಮಗಳ ಹೇರಲಾಗಿತ್ತು.
ನಿಮಗೀಗ ಅರ್ಥವಾಗಿರಬಹುದು, ಬೆಂಗಳೂರಲ್ಲೂ ಇದೇ ರೀತಿ ದಿನಗಳಿಗೆ ಸಾಗುತ್ತಿದ್ದೇವೆ. ಡೇ ಜೀರೋ ಕ್ರೈಸಿಸ್ ಉಂಟಾದರೆ ಅದರಿಂದ ಹೊರಬರುವುದು ಕಷ್ಟ ಸಾಧ್ಯ. ಬೆಂಗಳೂರಲ್ಲೂ ಎಲ್ಲಾ ನೀರನ ಮೂಲಗಳು ಬರಿದಾಗುತ್ತಿವೆ. ಬೋರ್‌ವೆಲ್ ನೀರು ಸಹ ಬತ್ತಿ ಹೋಗುತ್ತಿವೆ. ಇದು ಆತಂಕ ಹೆಚ್ಚಾಗಲು ಕಾರಣವಾಗುದೆ.
ನೀರಿನ ಸಮಸ್ಯೆಗೆ ಪರಿಹಾರವೇನು?
ನೀರಿನ ಸಮಸ್ಯೆಗೆ ಒಂದೇ ಪರಿಹಾರ ಅದು ಮಳೆ. ಕೇಪ್‌ಟೌನ್ ನಗರ ಸಹ ಇಂತಹ ಸಮಸ್ಯೆ ಎದುರಿಸಿದಾಗ ಮಳೆ ಬಂದ ನಂತರವೇ ಸಹಜ ಸ್ಥಿತಿಗೆ ಮರಳಿತ್ತು. ಬೆಂಗಳೂರಿನಲ್ಲೂ ಸಹ ಮಳೆಯಾದರೆ ನೀರಿನ ಸಮಸ್ಯೆ ದೂರಾಗಲಿದೆ. ಆದರೆ ಸೂಕ್ತ ಸಮಯಕ್ಕೆ ಮಳೆಯಾಗದಿದ್ದರೆ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನು ಹೊರತುಪಡಿಸಿ ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರಿದ್ದಾಗ ಎತ್ತೇಚ್ಚವಾಗಿ ಬಳಸುವುದು, ನೀರನ್ನು ಪೋಲು ಮಾಡುವುದು, ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕಾದ ಸಮಯ ಈಗ ಬಂದೊದಗಿದೆ.



Click it and Unblock the Notifications
