Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬಾಳೆಹಣ್ಣು ನಿಷೇಧಿಸಿದ ರಾಜ್ಯದ ದೇವಾಲಯ..! ಕಾರಣ ಕೇಳಿದ್ರೆ ನಿಮಗೂ ಸರಿ ಎನಿಸುತ್ತೆ..!!
ಬಾಳೆಹಣ್ಣು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ನಿತ್ಯ ಒಂದು ಬಾಳೆಹಣ್ಣು ಸವಿಯುವುದು ದೇಹಕ್ಕೆ ಬೇಕಾದ ಅಗತ್ಯ ಪ್ರೋಟಿನ್ ಹಾಗೂ ಕ್ಯಾಲೋರಿ ನೀಡಲು ಕಾರಣವಾಗುತ್ತದೆ. ಹಾಗೆ ಹಿಂದೂ ನಂಬಿಕೆಯಲ್ಲಿ ಬಾಳೆಹಣ್ಣು ಬಹಳ ಶ್ರೇಷ್ಠ ಹಣ್ಣಾಗಿದೆ. ಏಕೆಂದರೆ ಯಾವುದೇ ರೀತಿಯ ಪೂಜೆ ಇದ್ದರೂ ಬಾಳೆಹಣ್ಣುಗಳಿಲ್ಲದೆ ಆ ಪೂಜೆ ಪೂರ್ಣ ಆಗುವುದಿಲ್ಲ.
ಹೀಗಾಗಿ ಎಲ್ಲಾ ಶುಭ ಕಾರ್ಯದಲ್ಲಿ ಬಾಳೆಹಣ್ಣು ಇದ್ದೇ ಇರುತ್ತೆ. ಅದರಲ್ಲು ದೇವಾಲಯಕ್ಕೆ ನಾವು ಹೋಗುವಾಗ ಹಣ್ಣು ಕಾಯಿಯ ಜೊತೆಗೆ ಬಾಳೆಹಣ್ಣು ತೆಗೆದುಕೊಂಡು ಹೋಗುವುದು ಸಾಮಾನ್ಯ. ಹಾಗೆ ಪೂಜೆ ಸಮಯದಲ್ಲಿ ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಿ ಬಳಿಕ ಅದನ್ನು ಪ್ರಸಾದವಾಗಿ ನೀಡುವುದು ಕೂಡ ನೋಡಬಹುದು.

ಆದ್ರೆ ಈಗ ರಾಜ್ಯದ ಒಂದು ದೇವಾಲಯ ಈ ಬಾಳೆಹಣ್ಣನ್ನೇ ನಿಷೇಧ ಮಾಡಿಬಿಟ್ಟಿದೆ. ನಿಮಗಿದು ಅಚ್ಚರಿ ತರಿಸಬಹುದು. ದೇವಾಲಯವೇ ಬಾಳೆಹಣ್ಣನ್ನು ನಿಷೇಧಿಸಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅಚ್ಚರಿ ಎನಿಸಿದರು ಇದು ಸತ್ಯ, ಹಾಗೆ ಅದರ ಕಾರಣ ಕೇಳಿದ್ರೆ ನಿಮಗೂ ಸರಿ ಎನಿಸಬಹುದು.
ದೇವಾಯಗಳಿಗೆ ಬಾಳೆಹಣ್ಣು ತವರು ಭಕ್ತರು ಪೂಜೆಯ ಬಳಕ ಅದನ್ನು ದೇವಾಲಯದಲ್ಲಿತೇ ತಿನ್ನುತ್ತಾರೆ. ಇಲ್ಲವೆ ಅಲ್ಲಿರುವ ಕೋತಿಗಳಿಗೆ, ಹಸುಗಳಿಗೆ, ಆನೆಗೆ ನೀಡುವ ಕಾರ್ಯ ಮಾಡುತ್ತಾರೆ. ಇದು ಒಳ್ಳೆಯದು ಎಂದು ಕೆಲವರು ಹೇಳಬಹುದು, ಆದ್ರೆ ಇದರಿಂದ ಸಮಸ್ಯೆಗಳಿವೆ ಎಂಬುದು ನಿಮಗೆ ಗೊತ್ತಾ? ಇದೇ ಕಾರಣಕ್ಕೆ ಈ ದೇವಾಲಯ ಈಗ ಬಾಳೆಹಣ್ಣು ತರಬಾರದು ಎಂದು ಆದೇಶ ಹೊರಡಿಸಿದೆ.
ಹೌದು ಹಂಪಿಯ ಶಿವನ ದೇವಾಲಯ ಆಡಳಿತ ಮಂಡಳಿ ಈ ರೀತಿಯ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೂ ಇದೆ. 7ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಶಿವನ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಅಂದರೆ ಅಲ್ಲಿರುವ ಆನೆ.
ಈ ಆನೆ ನೋಡಲು ಬರುವವರು ಆನೆಗೆ ಬಾಳೆಹಣ್ಣು ತಿನ್ನಿಸಲು ಮುಂದೆ ಬೀಳುತ್ತಾರೆ, ಹಾಗೆ ಆನೆಗೆಂದು ತರವು ಬಾಳೆಹಣ್ಣಿನಲ್ಲಿ ಕೆಲವನ್ನು ಅವರೇ ತಿಂದು ಎಲ್ಲೆಂದರಲ್ಲಿ ಸಿಪ್ಪೆಯನ್ನು ಎಸೆಯುತ್ತಾರೆ ಎಂಬುದು ದೇವಾಲಯ ಆಡಳಿತ ಮಂಡಳಿತ ತಲೆನೋವಾಗಿತ್ತು. ಅಲ್ಲದೆ ಆನೆಗೆ ಬಾಳೆಹಣ್ಣು ನೀಡುವ ಭರದಲ್ಲಿ ಅಪಾಯಗಳ ತಂದುಕೊಳ್ಳುವುದು ಕೂಡ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಬಾಳೆಹಣ್ಣು ತರದಂತೆ ಸೂಚಿಸಲಾಗಿದೆ.
ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. 'ಭಕ್ತರು ಉತ್ಸಾಹದಿಂದ ಆನೆಗೆ ಅತಿಯಾಗಿ ಬಾಳೆಹಣ್ಣು ನೀಡುತ್ತಾರೆ. ಇದು ಅಲ್ಲಿನ ಸ್ಥಳವನ್ನು ಕೊಳಕು ಮಾಡುವ ಜೊತೆಗೆ ಆನೆಯ ಆರೋಗ್ಯಕ್ಕೂ ಹಾನಿಕಾರಕ. ಹಾಗೆ ಬಾಳೆಹಣ್ಣುಗಳ ತಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದು ಅದನ್ನು ವಿಲೇವಾರಿ ಮಾಡುವುದು ದೊಡ್ಡ ಕೆಲಸ ಎಂದು ದತ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವಸ್ಥಾನದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದರೂ. ಇದೊಂದು ಮಾದರಿ ನಡೆಯಾಗಿದೆ ಎಂದು ಹಲವರು ಸ್ವಾಗತಿಸಿದ್ದಾರೆ. ದೇವಾಲಯದ ಪರಿಸರ, ಆನೆಯ ಆರೋಗ್ಯ ಹಾಗು ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಿರುವುದು ಉತ್ತಮ ನಡೆ ಎಂಬ ಪ್ರಶಂಸೆ ಕೂಡ ಕೇಳಿಬಂದಿದೆ.



Click it and Unblock the Notifications