Bakrid 2025: ಬಲಿಗೂ ಮುನ್ನ ಮೇಕೆ ಹಲ್ಲು ಎಣಿಸೋದು ಯಾಕೆ? ಎರಡು ಹಲ್ಲು ಏಕೆ ಮುಖ್ಯ? ತಿಳಿದ್ರೆ ಅಚ್ಚರಿ ಪಡ್ತೀರಾ!

ಬಕ್ರೀದ್‌ ಹಬ್ಬದ ದಿನ ಮೇಕೆಯನ್ನು ಬಲಿಕೊಡುವುದು ಸಂಪ್ರದಾಯ. ಆದರೆ, ಬಲಿಕೊಡುವ ಮೊದಲು ಮೇಕೆಯ ಅಥವಾ ಆಡಿನ ಹಲ್ಲುಗಳನ್ನು ಎಣಿಸಲಾಗುತ್ತದೆ. ಬಹುತೇಕ ಜನರಿಗೆ ಈ ವಿಷಯ ಅಷ್ಟಾಗಿ ಗೊತ್ತಿಲ್ಲ ಬಿಡಿ. ಹೌದು, ಬಕ್ರೀದ್ ಹಬ್ಬದಂದು (Bakrid 2025) ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ. ಆದರೆ, ಕುರ್ಬಾನಿ (qurbani) ಕೊಡುವ ಮೇಕೆಗೆ ಎರಡು ಹಲ್ಲುಗಳು ಏಕೆ ಮುಖ್ಯ? ಇಸ್ಲಾಮಿಕ್ ನಿಯಮ ಏನು ಹೇಳುತ್ತೆ? ಇದರ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಬನ್ನಿ, ಬಲಿಕೊಡುವ ಮೇಕೆ (Goat) ಹೇಗಿರಬೇಕು, ಬಲಿದಾನ ಯಾವಾಗ ಮಾಡಲಾಗುತ್ತದೆ ಮತ್ತು ಯಾರು ಕಡ್ಡಾಯವಾಗಿ ಬಲಿದಾನ ಮಾಡಬೇಕು? ಎಂಬ ಬಗ್ಗೆ ತಿಳಿಯೋಣ.

ಈದ್-ಉಲ್-ಅಧಾ (Eid al-Adha 2025) ಎಂದೂ ಕರೆಯಲ್ಪಡುವ ಬಕ್ರೀದ್, ಇಸ್ಲಾಂನ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ತ್ಯಾಗ, ಸಮರ್ಪಣೆ ಮತ್ತು ಭಕ್ತಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಈದ್ ಉಲ್-ಫಿತರ್ ನಂತರ ಎರಡು ತಿಂಗಳು ಮತ್ತು ಒಂಬತ್ತು ದಿನಗಳ ಬಳಿಕ, ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಜಿಲ್-ಹಿಜ್ಜಾ ತಿಂಗಳ 10ನೇ ತಾರೀಖಿನಂದು ಬಕ್ರೀದ್ ಆಚರಿಸಲಾಗುತ್ತದೆ. ಈ ವರ್ಷ ಇಂದು (ಜೂನ್ 7 ರಂದು) ಬಕ್ರೀದ್ ಆಚರಿಸಲಾಗುವುದು. ಚಂದ್ರನ ದರ್ಶನದ ನಂತರ ದಿನಾಂಕವನ್ನು ಖಚಿತಪಡಿಸಲಾಗಿದೆ.

Bakrid 2025

ಮೇಕೆಯ ಹಲ್ಲುಗಳನ್ನು ಏಕೆ ಎಣಿಸುತ್ತಾರೆ?

ಬಹುತೇಕ ಎಲ್ಲರಿಗೂ ಬಕ್ರೀದ್ ಹಬ್ಬದಂದು ಪ್ರಾಣಿಗಳನ್ನು ಬಲಿ ಕೊಡುವ ವಿಷಯ ತಿಳಿದಿದೆ. ಆದರೆ, ಬಲಿಕೊಡುವ ಮೊದಲು ಮೇಕೆ ಅಥವಾ ಆಡಿನ ಹಲ್ಲುಗಳನ್ನು ಎಣಿಸಲಾಗುತ್ತದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಬಲಿಕೊಡುವ ಮೊದಲು ಮೇಕೆಯ ಹಲ್ಲುಗಳನ್ನು ಸರಿಯಾಗಿ ಎಣಿಸಲಾಗುತ್ತದೆ. ಈ ಮೂಲಕ ಅದರ ವಯಸ್ಸನ್ನು ಸರಿಯಾಗಿ ತಿಳಿಯಬಹುದು. ಹೀಗೆ ಮಾಡಲು ಹಲವು ಕಾರಣಗಳಿವೆ.

ಬಲಿಕೊಡಲು ಮೇಕೆಗೆ ಕನಿಷ್ಠ ಒಂದು ವರ್ಷ ವಯಸ್ಸಾಗಿರಬೇಕು. ಒಂದು ವರ್ಷದ ಮೇಕೆಗೆ 4 ರಿಂದ 6 ಹಲ್ಲುಗಳಿರುತ್ತವೆ. ಇದಕ್ಕಿಂತ ಕಡಿಮೆ ಹಲ್ಲುಗಳಿದ್ದರೆ, ಮೇಕೆ ಇನ್ನೂ ಅಪ್ರಾಪ್ತ ವಯಸ್ಕವಾಗಿದೆ ಮತ್ತು ಅದರ ಬಲಿಯನ್ನು ಅನುಮತಿಸಲಾಗುವುದಿಲ್ಲ ಎಂದು ನಂಬಲಾಗಿದೆ. ಮತ್ತೊಂದೆಡೆ, ಎಲ್ಲಾ ಹಲ್ಲುಗಳು ಉದುರಿಹೋಗಿದ್ದರೆ ಮತ್ತು ಮೇಕೆಗೆ ತುಂಬಾ ವಯಸ್ಸಾಗಿದ್ದರೆ, ಅದರ ಬಲಿಯನ್ನು ಸಹ ಅರ್ಹವಲ್ಲ (ಅಮಾನ್ಯ) ಎಂದು ಪರಿಗಣಿಸಲಾಗುತ್ತದೆ. ಅಂದರೆ, ನವಜಾತ ಶಿಶು ಅಥವಾ ವಯಸ್ಸಾದ ಮೇಕೆಯನ್ನು ಬಕ್ರೀದ್ ದಿನದಂದು ಬಲಿಕೊಡುವುದಿಲ್ಲ.

Take a Poll

ತ್ಯಾಗದ ನಿಜವಾದ ಉದ್ದೇಶ ಏನು?

ಕುರಾನ್ ಪ್ರಕಾರ, ತ್ಯಾಗದ ನಿಜವಾದ ಉದ್ದೇಶ, ದೇವರಿಗೆ ಭಕ್ತಿ ಮತ್ತು ಉದ್ದೇಶವನ್ನು ಪ್ರದರ್ಶಿಸುವುದಾಗಿದೆ. 'ಅವುಗಳ (ಪ್ರಾಣಿಗಳು) ಮಾಂಸವಾಗಲಿ ಅಥವಾ ರಕ್ತವಾಗಲಿ ಅಲ್ಲಾಹನನ್ನು ತಲುಪುವುದಿಲ್ಲ. ಆದರೆ, ನಿಮ್ಮ ಧರ್ಮನಿಷ್ಠೆ (ಧಾರ್ಮಿಕ ಭಾವನೆ) ಮಾತ್ರ ಅವನನ್ನು ತಲುಪುತ್ತದೆ' ಎಂದು ಸೂರಾ ಹಜ್ (22:37) ಹೇಳುತ್ತದೆ. ಇದರರ್ಥ ಏನೆಂದರೆ, 'ಅಲ್ಲಾಹನ ಆಸ್ಥಾನದಲ್ಲಿ, ಪ್ರಾಣಿ ಬಲಿಗಿಂತ ನಮ್ಮ ಉದ್ದೇಶಗಳು ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ' ಎಂಬುದಾಗಿದೆ.

ಬಲಿಕೊಡುವ ಮೇಕೆ ಹೇಗಿರಬೇಕು?

ಇಸ್ಲಾಮಿಕ್ ಶರಿಯಾ ಪ್ರಕಾರ, ಮೇಕೆಯನ್ನು ಆರಿಸುವಾಗ ಕೆಲವು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವು ಈ ಕೆಳಗಿನಂತಿವೆ.

ಮೇಕೆಯ ವಯಸ್ಸು

ಮೇಕೆ ಅಥವಾ ಆಡಿನ ವಯಸ್ಸು ಕನಿಷ್ಠ ಒಂದು ವರ್ಷವಾಗಿರಬೇಕು. ಅದಕ್ಕಿಂತ ಚಿಕ್ಕ ವಯಸ್ಸಿನ ಮೇಕೆ ಬಲಿ ನೀಡಲು ಅರ್ಹವಲ್ಲ.

ಮೇಕೆಯ ಆರೋಗ್ಯ

ಮೇಕೆ ಸಂಪೂರ್ಣವಾಗಿ ಆರೋಗ್ಯಕರವಾಗಿರಬೇಕು. ಅನಾರೋಗ್ಯ ಪೀಡಿತ, ತುಂಬಾ ತೆಳ್ಳಗಿನ, ಕುರುಡು ಅಥವಾ ಕುಂಟ ಮೇಕೆ ಬಲಿಗೆ ಯೋಗ್ಯವಲ್ಲ.

ದೈಹಿಕ ದೋಷಗಳು

ಮೇಕೆಗೆ ಕೊಂಬುಗಳು ಮುರಿದಿರಬಾದರು. ಕಣ್ಣು ಅಥವಾ ಕಿವಿಗಳಿಲ್ಲದಿರುವುದು, ಬಾಲ ಕತ್ತರಿಸಿರುವುದು ಮುಂತಾದ ಯಾವುದೇ ಪ್ರಮುಖ ದೈಹಿಕ ದೋಷಗಳು ಇರಬಾರದು. ಒಂದು ವೇಳೆ ದೈಹಿಕ ದೋಷವಿದ್ದರೆ, ಅದರ ಬಲಿ ಅಮಾನ್ಯ ಅಥವಾ ಅದು ಬಲಿಗೆ ಅರ್ಹವಲ್ಲ.

ಬೀಜ ಕೊಳೆತ ಮೇಕೆ

ಷರಿಯತ್ ಪ್ರಕಾರ, ಬೀಜ ಕೊಳೆತ ಮೇಕೆಯನ್ನು ಬಲಿ ನೀಡಲು ಅನುಮತಿ ಇದೆ. ಏಕೆಂದರೆ, ಅದರ ಮಾಂಸವು ಹೆಚ್ಚು ರುಚಿಕರವಾಗಿರುತ್ತದೆ.

ಮೇಕೆಯ ಹಲ್ಲುಗಳು

ಮೇಕೆಯ ಹಲ್ಲುಗಳು ಬಲವಾಗಿರಬೇಕು, ಪೂರ್ಣವಾಗಿರಬೇಕು ಮತ್ತು ಆರೋಗ್ಯಕರವಾಗಿರಬೇಕು. ಮೇಕೆ ಮೇವು ತಿನ್ನಲು ಸಾಧ್ಯವಾಗದಿದ್ದರೆ ಅಥವಾ ಅದರ ಎಲ್ಲಾ ಹಲ್ಲುಗಳು ಮುರಿದಿದ್ದರೆ, ಅದು ಬಲಿಗೆ ಯೋಗ್ಯವಲ್ಲ.

ಬಲಿದಾನ ಯಾವಾಗ ಮಾಡಲಾಗುತ್ತದೆ?

ಈದ್-ಉಲ್-ಅಧಾ ಪ್ರಾರ್ಥನೆಯ ಬಳಿಕ ಪ್ರಾಣಿಯ ಬಲಿದಾನ ಮಾಡಲಾಗುತ್ತದೆ. ಮತ್ತು ಇದನ್ನು ಜಿಲ್‌ಹಿಜ್ಜಾ ತಿಂಗಳ 10, 11 ಮತ್ತು 12 ರಂದು ಮಾಡಬಹುದು. ಆದರೆ, ಹಬ್ಬದ ಮೊದಲ ದಿನದ ಬಲಿದಾನವನ್ನು ಅತ್ಯಂತ ಐಶ್ವರ್ಯಯುತ ಎಂದು ಪರಿಗಣಿಸಲಾಗುತ್ತದೆ.

ಯಾರೆಲ್ಲಾ ಕಡ್ಡಾಯವಾಗಿ ಬಲಿದಾನ ಮಾಡಬಹುದು?

ಕುರ್ಬಾನಿಯನ್ನು ಎಲ್ಲಾ ಮುಸ್ಲಿಮರು ಕಡ್ಡಾಯ ಎಂದು ಪರಿಗಣಿಸಲಾಗುತ್ತದೆ.

- ವಯಸ್ಕರು
- ಆರ್ಥಿಕವಾಗಿ ಸಬಲರು
- ನಿಸಾಬ್‌ಗೆ (ಶರೈ ಸಂಪತ್ತು ಮಿತಿ) ಸಮಾನವಾದವರು. ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವವರು.

English summary

bakrid 2025: Why Are Two Teeth Important for a Qurbani Goat; know the islamic rules

bakrid 2025: Why Are Two Teeth Important for a Qurbani Goat; know the islamic rules
Story first published: Saturday, June 7, 2025, 10:35 [IST]
X
Desktop Bottom Promotion