Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜಪಾನ್ ಬಾಬಾ ವಂಗಾ ಹೇಳಿದ್ದ ಭವಿಷ್ಯ ನಿಜವಾಯ್ತು..! ಒಂದು ದಿನ ಮುನ್ನವೇ ಸುಳಿವು ಬಂದಿತ್ತು!
ಅತೀಂದ್ರಿಯ ಶಕ್ತಿ ಹೊಂದಿರುವ ಬಾಬಾ ವಂಗಾ ನುಡಿಯುವ ಭವಿಷ್ಯ ಕುರಿತು ನೀವು ಕೇಳಿರಬಹುದು. ಆಕೆ ಮುಂದೆ ನಡೆಯುವ ಬಹುದೊಡ್ಡ ದುರಂತಗಳನ್ನು ಮೊದಲೇ ಭವಿಷ್ಯ ನುಡಿದ್ದಾಳೆ. ಸದ್ಯ ಈಗ ರಷ್ಯಾ ದ್ವೀಪದಲ್ಲಿ ಸಂಭವಿಸಿದ 8.8ರ ತೀವ್ರತೆಯ ಭೂಕಂಪನ ಉಂಟಾಗಿರುವ ಕುರಿತಾಗಿ ಹಾಗೆ ಜಪಾನ್‌ನ ಸುನಾಮಿ ಕುರಿತು ಮೊದಲೇ ನುಡಿದಿರುವುದು ಅಚ್ಚರಿ ಮೂಡಿಸಿದೆ.
ಬುಧವಾರ ಮುಂಜಾನೆ ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ಜಪಾನ್‌ನ ಉತ್ತರ ದ್ವೀಪ ಹೊಕ್ಕೈಡೊ ಮತ್ತು ರಷ್ಯಾದ ಕುರಿಲ್ ದ್ವೀಪಗಳ ಮೇಲೆ ಸುನಾಮಿ ಅಲೆಗಳ ಎಬ್ಬಿಸಿತು. ಈ ಘಟನೆಗಳು ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬರುವಂತೆ ಮಾಡಿದೆ.

ಹಾಗೆ ಜಪಾನ್‌ನ ರಿಯೋ ಟುಟ್ಸುಕಿ ಹೇಳಿರುವ ಭವಿಷ್ಯವಾಣಿ ಕೂಡ ನಿಜವಾಗಿದೆ. ಆಕೆ ತನ್ನ 'ದಿ ಫ್ಯೂಚರ್ ಐ ಸಾ' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾಳೆ. ಆಕೆ ತನಗೆ ಬೀಳುವ ಕನಸುಗಳನ್ನು ಈ ಪುಸ್ತಕದಲ್ಲಿ ದಾಖಲು ಮಾಡಿದ್ದಾಳೆ. ಅದರ ಪ್ರಕಾರ ಆಕೆ ಜುಲೈ 5ರಂದು ಜಪಾನ್‌ನಲ್ಲಿ ದೊಡ್ಡ ನೈಸರ್ಗಿಕ ದುರಂತ ಸಂಭವಿಸಲಿದೆ ಎಂದಿದ್ದಳು.
ರಿಯೋ ಹೇಳಿದಂತೆ ಜುಲೈ 5ರಂದು ಈ ಘಟನೆ ನಡೆಯಲಿಲ್ಲ. ಆದ್ರೆ ಜುಲೈ 30ರಂದು ಸಂಭವಿಸಿದೆ. ಜುಲೈ 5ರಿಂದಲೂ ಈ ಕುರಿತಾದ ಭಯದ ವಾತಾವರಣ ಇದ್ದೇ ಇತ್ತು. ಆದ್ರೆ ಈಗ ಈ ಘಟನೆಯು ನಡೆದಿರುವುದು ಆಕೆಯ ಭವಿಷ್ಯವಾಣಿ ನಿಜವಾಗಿದ್ದರ ಸಂಕೇತವಾಗಿದೆ. ಹಾಗೆ ಆಕೆ ಈ ಮೊದಲು ನುಡಿದಿರುವ ಹಲವು ದುರಂತಗಳ ಕುರಿತ ಭವಿಷ್ಯ ಕೂಡ ನಿಜವಾಗಿವೆ.
ಆಕೆ ಹೇಳಿದ್ದ ಈ ಭವಿಷ್ಯ ಕೇಳಿ ಎಲ್ಲರಿಗೂ ಮೊದಲು ಶಾಕ್ ಆಗಿತ್ತು. ಜಪಾನ್‌ಗೆ ಪ್ರವಾಸಿಗರ ಬಿಸಿ ತಟ್ಟಿತ್ತು, ಹೋಟೆಲ್‌ಗಳು, ವಿಮಾನಗಳು ಖಾಲಿಯಾದವು. ಹಾಗೆ ಆಕೆಯ ಭವಿಷ್ಯವಾಣಿಯ ಕುರಿತು ತಜ್ಞರು ಅಲ್ಲಗೆಳೆದಿದ್ದರು. ಈ ಭವಿಷ್ಯವಾಣಿಗಳು ಯಾವುದು ನಿಜವಲ್ಲ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದರು.
ಟೋಕಿಯೊ ವಿಶ್ವವಿದ್ಯಾಲಯದ ಪ್ರೊಫೆಸರ್ ಸೆಕಿಯಾ ನವೋಯಾ ಸೇರಿ ಹಲವು ತಜ್ಞರು ಅಂತಹ ಭವಿಷ್ಯವಾಣಿಗಳನ್ನು ಅವೈಜ್ಞಾನಿಕವೆಂದು, ಈ ದುರಂತಗಳನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದಿದ್ದರು. ಇವು ಆಧಾರರಹಿತವಾಗಿದ್ದು, ಯಾರು ಕೂಡ ನಂಬದೆ ನಿರ್ಲಕ್ಷಿಸಬೇಕು ಎಂದಿದ್ದರು.
ಸುನಾಮಿಗೂ ಮುನ್ನ ದಡಕ್ಕೆ ಅಪ್ಪಳಿಸಿದ್ದವು ಬೆಲುಗಾ ಫಿಶ್
ರಷ್ಯಾದ ದ್ವೀಪದಲ್ಲಿ ಉಂಟಾದ ಭೂಕಂಪನವು ಇಡೀ ರಷ್ಯಾ ಹಾಗೆ ಜಪಾನ್‌ಗೆ ಆತಂಕ ಸೃಷ್ಟಿಸಿತ್ತು. ಆದ್ರೆ ಈ ಘಟನೆಗೂ ಮುನ್ನವೇ ಬೆಲುಗಾ ಫಿಶ್‌ಗಳ ಸಣ್ಣ ಗುಂಪು ಸಮುದ್ರದ ದಡದಲ್ಲಿ ಬಿದ್ದಿದ್ದವು. ಭೂಕಂಪನ ಸಂಭವಿಸುವ ಒಂದು ದಿನ ಮೊದಲು ಈ ಮೀನುಗಳು ದಡದಲ್ಲಿ ಪತ್ತೆಯಾದವು ಎಂದು ಹೇಳಲಾಗಿದೆ.
ಕೆಲವು ಮೀನುಗಾರರು ಈ ತಿಮಿಂಗಿಲ ಜಾತಿಯ ಬೆಲುಗಾ ಫಿಶ್‌ಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಮುಂದಾಗುತ್ತಿರುವ ವಿಡಿಯೋಗಳು ಹರಿದಾಡಿವೆ ಇದು ರಷ್ಯಾದ ಕಡಲ ತೀರದಲ್ಲಿ ಸೆರೆಹಿಡಿದ ದೃಶ್ಯ ಅಂತಲೂ ಹೇಳಲಾಗಿದೆ. ಒಟ್ಟಾರೆ 5 ಬೆಲುಗಾ ಮರಿಗಳು ಕಡಲ ತೀರಕ್ಕೆ ಬಂದಿದ್ದವು, ಆದ್ರೆ ಯಾವ ಕಾರಣಕ್ಕೆ ಇವು ದಡಕ್ಕೆ ಬಂದಿವೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಹಲವರು ಈ ಬೆಲುಗಾ ಮೀನಿಗಳು ಅಪಾಯದ ಮುನ್ಸೂಚನೆ ಸಿಕ್ಕಿರುವ ಕಾರಣದಿಂದಲೇ ಸಮುದ್ರ ದಡಕ್ಕೆ ಬಂದಿವೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಬಿಳಿ ತಿಮಿಂಗಿಲ ಎಂದೂ ಕರೆಯಲ್ಪಡುವ ಬೆಲುಗಾ, ಅದರ ಬಿಳಿಯ ಬಣ್ಣದ ಕಾರಣದಿಂದಾಗಿ ಇತರ ತಿಮಿಂಗಿಲಗಳಿಗಿಂತ ಭಿನ್ನವಾಗಿದೆ. ಬೆಲುಗಾ ಮರಿಗಳು ಬೂದು ಬಣ್ಣದಲ್ಲಿರಲಿದೆ. ಆದ್ರೆ ಬೆಳವಣಿಗೆಯಾದಂತೆ ಬಿಳಿ ಬಣ್ಣಕ್ಕೆ ತಿರುಗಲಿದೆ.



Click it and Unblock the Notifications
