Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಬಾ ರಾಮ್‌ದೇವ್ ಶರ್ಬತ್ ವಿವಾದ: ಶರ್ಬತ್ ಹಿಂದಿನ ಇತಿಹಾಸ ಏನ್ ಗೊತ್ತಾ?
ನೀವು ಶರ್ಬತ್ ಎಂಬ ಪದ ಕೇಳಿರಬಹುದು. ಹಣ್ಣು ಹಾಗೂ ಹೂವಿನ ಅತ್ಯಂತ ರುಚಿಕರ ಪಾನೀಯ ಇದು. ಹಿಂದೆ ಈ ಶರ್ಬತ್ ಕಂಪನಿಯ ಹೆಸರು ಎಷ್ಟು ಫೇಮಸ್ ಆಗಿತ್ತು ಅಂದ್ರೆ ಮುಂದೆ ಈ ಪಾನೀಯಗಳಿಗೆ ಶರ್ಬತ್ ಎಂದು ಕರೆಯಲಾಗಿದೆ. ಈಗ ಪತಂಜಲಿ ಸಂಸ್ಥೆ ಮುಖ್ಯಸ್ಥ ಬಾಬಾ ರಾಮ್‌ದೇವ್ ಶರ್ಬತ್ ಕುರಿತ ಹೇಳಿಕೆಯೊಂದು ವಿವಾದ ಹುಟ್ಟುಹಾಕಿದೆ.
ನಿರ್ದಿಷ್ಟ ಕಂಪನಿಯೊಂದು ಶರ್ಬತ್ ಮಾರಾಟದಿಂದ ಬಂದ ಹಣವನ್ನು ಮಸೀದಿ, ಮದರಸಾ ನಿರ್ಮಾಣಕ್ಕೆ ಬಳಸಿ ಶರಬತ್ ಜೆ*ಹಾದ್ನಲ್ಲಿ ತೊಡಗಿದೆ ಎಂದು ಬಾಬಾ ರಾಮ್‌ದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಳಿಕ ಭಾರಿ ಚರ್ಚೆ ಆರಂಭಗೊಂಡಿದೆ. ಹೊಸದಾಗಿ ಪತಂಜಲಿ ಸಂಸ್ಥೆಯು ಹೊರತಂದ ಶರ್ಬತ್ ಅನ್ನು ಪರಿಚಯಿಸುವಾಗ ರಾಮ್‌ದೇವ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಆದ್ರೆ ಈ ಶರ್ಬತ್ ಎಂಬುದು ಇಂದು ನಿನ್ನೆಯದಲ್ಲಾ ಇದರ ಇತಿಹಾಸ ಕುರಿತು ತೊಳಿದರೆ ನಿಮಗೂ ಅಚ್ಚರಿ ಆಗಬಹುದು, ಹಾಗೆ ಇದರ ಹಿಂದೆ ಇರುವ ದೊಡ್ಡ ಸಂಸ್ಥೆ ಹಾಗೆ ನೂರಾರು ಕುಟುಂಬಗಳ ಜೀವನಕ್ಕೆ ನೆರವಾಗಿರುವುದು ಕೂಡ ಇದೇ ಶರ್ಬತ್. ಹಾಗಾದ್ರೆ ಶರ್ಬತ್ ಆರಂಭಿಸಿದ್ದು ಯಾರು?, ಇದು ಆರಂಭಗೊಂಡಿದ್ದು ಹೇಗೆ?, ಶರ್ಬತ್ ಎಂಬ ಹೆಸರು ಇಟ್ಟಿದ್ಯಾಕೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವಿಶ್ವದ ಮೊಟ್ಟ ಮೊದಲ ತಂಪು ಪಾನೀಯ ಯಾವುದಾದರು ಇದ್ದರೆ ಅದರು ಈ ಶರ್ಬತ್ ಎಂದು ಹೇಳಲಾಗಿದೆ. ಶರ್ಬತ್ ಎಂಬುದು ಪರ್ಷಿಯನ್ ಪದವಾಗಿದೆ. ಅರೇಬಿಕ್‌ನಲ್ಲಿ ಶರಿಬಾ ಎಂದರೆ ಕುಡಿಯುವುದು ಎಂದರ್ಥ. ಹಾಗೆ ಸಕ್ಕರೆ ಹಾಗೂ ನೀರಿನ ಮಿಶ್ರಣದ ಪಾನೀಯ ಎಂದರ್ಥ. ಹಾಗೆ ಇದರ ಮೊದಲ ಉಲ್ಲೇಖ 12ನೇ ಶತಮಾನದಲ್ಲಿ ಪರ್ಷಿಯನ್ ವೈದ್ಯಕೀಯ ವಿಶ್ವಕೋಶದಲ್ಲಿ ನೋಡಬಹುದು.
ಹಾಗೆ 'ಶರಬ್' ಎಂಬ ಅರೇಬಿಕ್ ಪದವನ್ನು ಆಲ್ಕೊಹಾಲ್ ಯುಕ್ತ ಪಾನೀಯಗಳ ಉಲ್ಲೇಖಿಸಲು ಬಳಸುವುದು ಸಹ ನೋಡಬಹುದು. ನಂತರ ಶರ್ಬತ್ ಎಂಬ ಪದವು ಮಧ್ಯಯುಗದ ಸಮಯದಲ್ಲಿ ಸಿಹಿಯಾದ ಹಾಗೆ ಆಲ್ಕೋಹಾಲ್ ಇಲ್ಲದ ಪಾನೀಯವನ್ನು ಉಲ್ಲೇಖಿಸಲು ಬಳಸಲಾಯಿತು. ಮಧ್ಯ ಹಾಗೂ ದಕ್ಷಿಣ ಏಷ್ಯಾದ ಕೆಲವು ಭಾಗದಲ್ಲಿ ಶರ್ಬತ್ ಎಂದು ಹುಡಿಗಿಯರಿಗೆ ಹೆಸರು ಇಡುವುದು ಸಹ ನೋಡಬಹುದು.
ಅನಂತರ ಈ ಶರ್ಬತ್ ಅನ್ನು ಮೊಘಲರು ಭಾರತಕ್ಕೆ ಪರಿಚಯಿಸಿದರು ಎಂದು ಹೇಳಲಾಗಿದೆ. ಹೀಗಾಗಿ ಶರ್ಬತ್ ಸಂಸ್ಕೃತಿ ಹೆಚ್ಚಾಗಿ ಮುಸ್ಲಿಂ ಸಮುದಾಯದಲ್ಲಿ ನೋಡಬಹುದು. ಆರಂಭಿಕ ದಿನದಲ್ಲಿ ಹಣ್ಣುಗಳನ್ನು ಹಲವು ದಿನಗಳ ಕಾಲ ಇಡುವುದು ಕಷ್ಟವಾಗಿತ್ತು. ಹಾಗೆ ರಂಜಾನ್ ಸಮಯದಲ್ಲಿ ಹಣ್ಣುಗಳನ್ನು ಹೆಚ್ಚು ದಿನ ಹಾಳಾಗದಂತೆ ಇಡುವುದು ಕಷ್ಟವಾಗಿತ್ತು, ಬಳಿಕ ಶರ್ಬತ್ ಪಾನೀಯವನ್ನು ಬಳಸಲು ಮುಂದಾಗಲಾಗಿತ್ತು. ಇದು ಕೂಡ ಹಣ್ಣು ಹಾಗೂ ಹೂವಿನ ಸ್ವಾದದಲ್ಲಿ ಲಭ್ಯವಿತ್ತು.
ಶರ್ಬತ್ ಆರಂಭಗೊಂಡಿದ್ದು ಯಾವಾಗ?
1907ರ ಸಮಯದಲ್ಲಿ ಅದರಲ್ಲೂ ಶರ್ಬತ್ ಹೆಸರಿನ ಪಾನೀಯ ಆರಂಭಗೊಂಡಿತ್ತು. ಅಂದಿನ ದೆಹಲಿಯಲ್ಲಿ ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಎಂಬಾತ ಬಹಳ ಸಣ್ಣದಾಗಿ ಇದರ ಮಳಿಗೆ ಆರಂಭಿಸಿದ್ದರು. ಯುನಾನಿ ಔಷಧಿಗಳ ಮಾರಾಟ ಮಾಡುತ್ತಿದ್ದ ಅವರು ಈ ಪಾನೀಯ ಹೊರತಂದರು. ಈ ವರ್ಷದ ಅವರು ಶರ್ಬತ್ ರೂಹ್ ಅಫ್ಜಾ ಎಂಬ ಪಾನೀಯ ಮಾರುಕಟ್ಟೆಗೆ ತಂದರು, ಇದು ಮನೆ ಮಾತಾಯಿತು. ಎಲ್ಲರ ಮನೆಯಲ್ಲೂ ಕೆಂಪು ಬಣ್ಣದ ಜ್ಯೂಸ್ ಸಿಗುವಂತಾಯಿತು. ಇದು ಶರ್ಬತ್ ಎಂಬ ಹೆಸರಿನಿಂದ ಎಲ್ಲೆಡೆ ಫೇಮಸ್ ಆಯಿತು. ಮಜೀದ್ ಅವರ ನಿಧನದ ನಂತರ, ಅವರ ಪತ್ನಿ ಮತ್ತು ಇಬ್ಬರು ಪುತ್ರರು ಅವರ ಪರಂಪರೆಯನ್ನು ಮುಂದುವರೆಸಿದರು. 1947 ರಲ್ಲಿ ಭಾರತದ ವಿಭಜನೆಯೊಂದಿಗೆ ಒಬ್ಬ ಮಗ ದೆಹಲಿಯಲ್ಲಿ ಉಳಿದುಕೊಂಡರೆ, ಇನ್ನೊಬ್ಬ ಪಾಕಿಸ್ತಾನಕ್ಕೆ ವಲಸೆ ಹೋದನು.
ಆದ್ರೆ 1980ರ ಬಳಿಕ ಶರ್ಬತ್ ತನ್ನ ಪ್ರಸಿದ್ಧಿ ಕಳೆದುಕೊಂಡಿತು. ಹಲವು ತಂಪು ಪಾನೀಯ ಕಂಪನಿಗಳು ವಿಶ್ವದೆಲ್ಲೆಡೆ ಹರಡಲು ಆರಂಭಗೊಂಡವು. ಇದು ಶರ್ಬತ್ ಕೊನೆಯಾಗಲು ಕಾರಣವಾಯಿತು. ಸ್ಪರ್ಧೆಯಿಂದ ಹೊರಗುಳಿದ ಶರ್ಬತ್ ಮತ್ತೆಂದು ಮಾರುಕಟ್ಟೆಯಲ್ಲಿ ಹೋರಾಟಕ್ಕಿಳಿಯಲೇ ಇಲ್ಲ.



Click it and Unblock the Notifications


