Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಆಯುಧ ಪೂಜೆ: ಈ ವರ್ಷ ಆಯುಧ ಪೂಜೆ 11ಕ್ಕಾ 12ಕ್ಕಾ? ವಿಜಯ ಮುಹೂರ್ತ ಸಮಯ ಯಾವಾಗ?
ನವರಾತ್ರಿಯ 9ನೆ ದಿನಕ್ಕೆ ಸಿದ್ಧಿದಾತ್ರಿ ದೇವಿಯ ಪೂಜೆ ಮಾಡಲಾಗುವುದು. ಈ ದಿನದಂದು ಆಯುಧ ಪೂಜೆ ಆಚರಿಸಲಾಗುವುದು. ಆಯುದ್ಧ ಪೂಜೆಯನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಮನೆ-ಮನೆಗಳಲ್ಲಿ, ಆಫೀಸ್‌ಗಳಲ್ಲಿ ಆಯುಧ ಪೂಜೆಯ ಸಂಭ್ರಮವಿರುತ್ತದೆ. ನಾವು ನಮ್ಮ ವೃತ್ತಿಗೆ ಬಳಸುವ ವಸ್ತುಗಳನ್ನು ಆ ದಿನ ಪೂಜಿಸುತ್ತೇವೆ. ಲ್ಯಾಪ್‌ಟ್ಯಾಪ್, ಕೋವಿ, ಗುದ್ದಲಿ, ಕತ್ತಿ, ಗಾಡಿಗಳು ಹೀಗೆ ಕೃಷಿಗೆ ಬಳಸುವ, ತಾಂತ್ರಿಕ ಕೆಲಸಕ್ಕೆ ಬಳಸುವ ಎಲ್ಲಾ ವಸ್ತುಗಳನ್ನು ಪೂಜಿಸುತ್ತೇವೆ.

ನವರಾತ್ರಿಯಲ್ಲಿ ಆಯುಧ ಪೂಜೆಗೆ ಶುಭ ಮುಹೂರ್ತ ಯಾವಾಗ? ನವಮಿ ತಿಥಿ ಪ್ರಾರಂಭ ಯಾವಾಗ?
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 11 ಮಧ್ಯಾಹ್ನ 12:06ಕ್ಕೆ
ನವಮಿ ತಿಥಿ ಮುಕ್ತಾಯ : ಅಕ್ಟೋಬರ್ 12 ಬೆಳಗ್ಗೆ 10:58ಕ್ಕೆ
ಆಯುಧ ಪೂಜೆಯನ್ನು ಶನಿವಾರ ಆಚರಿಸಲಾಗುವುದು
ಆಯಧ ಪೂಜೆ ವಿಜಯ ಮುಹೂರ್ತ: ಮಧ್ಯಾಹ್ನ 02:05ರಿಂದ 02:52ರೊಳಗೆ ಪೂಜೆ ಸಲ್ಲಿಸಿ
ಆಯುಧ ಪೂಜೆಗೆ 48 ನಿಮಿಷಗಳು ಸಿಗುತ್ತದೆ.
ಅಕ್ಟೋಬರ್ 12 ಪಂಚಾಂಗ
ತಿಥಿ ನವಮಿ
ನಕ್ಷತ್ರ: ಶ್ರವಣ
ಬ್ರಹ್ಮ ಮುಹೂರ್ತ: ಬೆಳಗ್ಗೆ 04:33ರಿಂದ 05:21
ಗೋಧೂಳಿ ಮುಹೂರ್ತ: ಸಂಜೆ 06:02-06:26ರವರೆಗೆ ಇದೆ
ಇಡೀ ದಿನ ರವಿಯೋಗವಿದೆ
ವಿಜಯ ಮುಹೂರ್ತ: ಮಧ್ಯಾಹ್ನ 02:05ರಿಂದ 02:25ರವರೆಗೆ ಇದೆ
ರಾಹುಕಾಲ: ಬೆಳಗ್ಗೆ 09:08ರಿಂದ 10:37ರವರೆಗೆ ಇದೆ.
ಆಯುಧ ಪೂಜೆಯ ಹಿಂದಿರುವ ಪೌರಾಣಿಕ ಹಿನ್ನೆಲೆಯೇನು?
ತಾಯು ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ಮೇಲೆ ಆಯುಧವನ್ನು ಭೂಮಿಯಲ್ಲಿಯೇ ಬಿಟ್ಟು ಹೋಗುತ್ತಾಳೆ, ಆ ಆಯುಧವನ್ನು ಪೂಜಿಸಲಾಗುವುದು, ಅಲ್ಲಿಂದ ಆಯುಧ ಪುಜೆ ಜಾರಿಗೆ ಬಂತು ಎಂದು ಹೇಳಲಾಗುವುದು.
ಆಯುಧ ಪೂಜೆಯ ಪೂಜಾ ವಿಧಿಗಳೇನು?
ಈ ದಿನ ಮನೆ, ಆಫೀಸ್ ಸ್ವಚ್ಛಗೊಳಿಸಲಾಗುವುದು. ನಂತರ ತಳಿರು-ತೋರಣಗಳಿಂದ ಸಿಂಗರಿಸಲಾಗುವುದು
ಬಳಿಕ ಆಯುಧಗಳು, ಗಾಡಿ ಇವುಗಳನ್ನೆಲ್ಲಾ ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧಪಡಿಸಲಾಗುವುದು.
ಬೂದು ಕುಂಬಳಕಾಯಿಗೆ ಕುಂಕು ಹಾಗೂ ನಾಣ್ಯ ಹಾಕಲಾಗುವುದು
ಬಳಿಕ ಕುಂಬಳಕಾಯಿ ಮೇಲೆ ಕರ್ಪೂರ ಹಚ್ಚಿ ಆರತಿ ಮಾಡಿ ಅದನ್ನು ಒಡೆಯಲಾಗುವುದು, ತಯಾರಿಸಿಟ್ಟ ಪ್ರಸಾದವನ್ನು ಹಂಚಿ ಆಯುಧ ಪೂಜೆಯನ್ನು ಮಾಡಲಾಗುವುದು.
ಆಯುಧಗಳನ್ನು ಪೂಜೆ ಮಾಡುವಾಗ ನಮ್ಮ ಕೆಲಸದಲ್ಲಿ ಪ್ರಗತಿ ನೀಡು ಎಂದು ನವದುರ್ಗೆಯರ ಬಳಿ ಆಶೀರ್ವಾದ ಕೇಳಲಾಗುವುದು.
ಆಯುಧಗಳಿಗೆ ಪೂಜೆ ಮಾಡುವಾಗ ಮನಸ್ಸಿನಲ್ಲಿ ಒಂದಿಷ್ಟೂ ದುರಾಸೆ ಇರಬಾರದು, ಒಳಿತನ್ನು ಬೇಡಿ ಪೂಜೆ ಸಲ್ಲಿಸಿ.
ಆಯುಧ ಪೂಜೆ ಬರಿ ಒಂದು ಆಚರಣೆಯಲ್ಲ, ಈ ಪೂಜೆ ಭಾವನಾತ್ಮಕವಾಗಿಯೂ ನಮ್ಮನ್ನು ನಮ್ಮ ವೃತ್ತಿಯೊಂದಿಗೆ ಬೆಸೆಯುವ ಹಬ್ಬವಾಗಿದೆ
ಈ ದಿನ ನಾವು ಯಾವ ವೃತ್ತಿಯಲ್ಲಿ ಇದ್ದೇವೋ ಅದಕ್ಕೆ ಬಳಸುವ ವಸ್ತುಗಳನ್ನು ಪೂಜಿಸುತ್ತೇವೆ. ಗಾಡಿಯನ್ನು ಎಲ್ಲರೂ ಪೂಜಿಸುತ್ತೇವೆ, ಅದೇ ಡ್ರೈವರ್ ವೃತ್ತಿಯಲ್ಲಿರುವವರು ಗಾಡಿಯನ್ನು ಸಾಕ್ಷಾತ್ ದೇಚರ ರೂಪದಲ್ಲಿ ಕಂಡು ಆರಾಧಿಸುತ್ತಾರೆ, ಇದನ್ನು ನೋಡುವುದೇ ಕಣ್ಣಿಗೆ ಹಬ್ಬ, ತಮ್ಮ ಗಾಡಿಗೆ ಅಲಂಕರಿಸಲು ಅವರು ಆ ವಾರದ ದುಡಿಮೆ ಹಾಕಲು ಹಿಂದೆ ಮುಮದೆ ನೋಡಲ್ಲ. ಕೃಷಿಕರು ತಮ್ಮ ಕೃಷಿ ಕೆಲಸಕ್ಕೆ ಬಳಸುವ ವಸ್ತುವನ್ನು ಇಟ್ಟು ಪೂಜಿಸುತ್ತಾರೆ, ಐಟಿ ಕ್ಷೇತ್ರದಲ್ಲಿ ಇರುವವರಿಗೆ ಲ್ಯಾಪ್‌ಟ್ಯಾಪ್ ಅವರ ಅಸ್ತ್ರ ಹೀಗೆ ತಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಭಕ್ತಿ-ಆರಾಧನೆಯಿಂದ ಆಚರಿಸುತ್ತಾರೆ.
ಆ ದೇವಿ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಎಲ್ಲವೂ ಪ್ರಗತಿ ತರಲಿ, ಆಯುಧ ಪೂಜೆಯ ಶುಭಾಶಯಗಳು....



Click it and Unblock the Notifications