Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Ayudha Pooja 2025: ಆಯುಧ ಪೂಜೆ ಮಾಡುವ ಸರಿಯಾದ ವಿಧಾನ ಮತ್ತು ಆರ್ಥಿಕ ಸಮಸ್ಯೆ ನಿವಾರಿಸುವ ಮಂತ್ರಗಳು
ಆಯುಧ ಪೂಜೆ ಮಾಡುವ ಸರಿಯಾದ ವಿಧಾನ ಮತ್ತು ಪಠಿಸಬೇಕಾದ ಮಂತ್ರಗಳಿವು! ನವರಾತ್ರಿ ಎಂದರೆ ಕೇವಲ ಒಂಬತ್ತು ದಿನಗಳ ಆಚರಣೆ ಮಾತ್ರವಲ್ಲ. ಅದು ತನು-ಮನಗಳನ್ನು ಭಕ್ತಿಭಾವದಲ್ಲಿ ಮುಳುಗಿಸುವ ಪವಿತ್ರ ಸಮಯ. ದುರ್ಗಾ ದೇವಿಗೆ ಸಮರ್ಪಿತವಾದ ಈ ಹಬ್ಬದಲ್ಲಿ, ಭಕ್ತರು ರಾತ್ರಿಯ ವೇಳೆ ವಿಶೇಷ ವ್ರತಗಳನ್ನು ಕೈಗೊಳ್ಳುತ್ತಾರೆ. ದೇವಿಯ ಆರಾಧನೆಯಿಂದ ಬಯಸಿದ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜಾ ವಿಧಾನವೂ ಮಂತ್ರಗಳು, ಸ್ತೋತ್ರಗಳು ಮತ್ತು ಹಾಡುಗಳ ಮೂಲಕ ಸಂಪನ್ನಗೊಳ್ಳುತ್ತದೆ.
ಆಯುಧ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು (Mantas To Chant On Ayuda Puja) ಜಪಿಸಿ, ದೇವಿಯ ಕೃಪೆಗೆ ಪಾತ್ರರಾಗಬಹುದು. ದೇವಿಯ ಆರಾಧನೆಯ ಸಂದರ್ಭದಲ್ಲಿ ಧ್ಯಾನ, ಪೂಜೆ, ಮತ್ತು ಮಂತ್ರಗಳ ಪಠಣವು ಮಾನಸಿಕ ನೆಮ್ಮದಿ ಹಾಗೂ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಅವುಗಳಲ್ಲಿ ಒಂದು ಪ್ರಮುಖ ದಿನ ಆಯುಧ ಪೂಜೆ.

ಆಯುಧ ಪೂಜೆಯ (Ayudha Pooja) ದಿನ ಮನೆ ಹಾಗೂ ಉದ್ಯೋಗ ಸ್ಥಳಗಳಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ವಸ್ತುಗಳಲ್ಲಿ ದೈವಿಕ ಶಕ್ತಿಯನ್ನು ಕಾಣುವುದು, ಈ ಪೂಜೆಯ ಹಿಂದಿನ ಆಶಯವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಪುಸ್ತಕಗಳು, ಕಚೇರಿಯ ಕಂಪ್ಯೂಟರ್‌ಗಳು, ಆಯುಧಗಳು, ವಾಹನಗಳು, ಯಂತ್ರೋಪಕರಣಗಳು ಹೀಗೆ ನಮ್ಮ ಬದುಕಿನ ಅವಶ್ಯಕ ವಸ್ತುಗಳೆಲ್ಲವನ್ನೂ ಪೂಜಿಸಿ, ಅವುಗಳ ಮೂಲಕ ಯಶಸ್ಸು ದೊರೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಗುತ್ತದೆ. ಇದರ ಜೊತೆಗೆ, ಸೂಕ್ತವಾದ ಮಂತ್ರಗಳನ್ನು ಪಠಿಸಲಾಗುತ್ತದೆ.
ಯಾವ ದಿಕ್ಕಿನಲ್ಲಿ ಪೂಜೆಗೆ ಕುಳಿತುಕೊಳ್ಳಬೇಕು
ಪೂಜೆಗೆ ಕುಳಿತುಕೊಳ್ಳುವಾಗ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತುಕೊಳ್ಳಬೇಕು. ದೇವರ ಮಂಟಪ ಪಶ್ಚಿಮಾಭಿಮುಖವಾಗಿದ್ದರೆ, ಅದರ ಎದುರಿಗೆ ಪಶ್ಚಿಮಾಭಿಮುಖವಾಗಿ ಕುಳಿತುಕೊಳ್ಳಬೇಕು. ಆದರೆ, ದೇವರ ಮಂಟಪ ಪೂರ್ವ ಅಥವಾ ಉತ್ತರಾಭಿಮುಖವಾಗಿರುವುದು ಸೂಕ್ತ, ಇದರಿಂದ ಪೂಜೆಗೆ ಅನುಕೂಲವಾಗುತ್ತದೆ. ಯಮಧರ್ಮನ ಲೋಕದ ದಿಕ್ಕಾದ ಕಾರಣ ದಕ್ಷಿಣಕ್ಕೆ ಮುಖ ಮಾಡಿ ಪೂಜೆ ಮಾಡುವ ಕ್ರಮವಿಲ್ಲ.
ಹೀಗೆ ಪ್ರಾರ್ಥಿಸಬೇಕು
• ಹೇ ಶ್ರೀ ದುರ್ಗಾದೇವಿ, ನನಗೆ ಸದ್ಬುದ್ಧಿ ಕೊಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು.
• ಹೇ ದುರ್ಗಾಮಾತೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಸೇವೆಯನ್ನು ನಾನು ಸಾಧನೆಯೆಂದು ಮಾಡುವಂತಾಗಲಿ.
ದುರ್ಗಾ ಪೂಜೆ ಆರಂಭಿಸುವಾಗ
• ಹೇ ಶ್ರೀ ದುರ್ಗಾದೇವಿ, ಈ ಪೂಜಾವಿಧಿಯ ಮೂಲಕ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ.
• ಈ ಪೂಜಾವಿಧಿಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ನಾನು ಹೆಚ್ಚೆಚ್ಚು ಗ್ರಹಿಸುವಂತೆ ಕೃಪೆ ಮಾಡು.
• ಹೇ ಶ್ರೀ ದುರ್ಗಾದೇವಿ, ನವರಾತ್ರ್ಯೋತ್ಸವದ ಕಾಲದಲ್ಲಿ ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ವದಿಂದ ನನಗೆ ಹೆಚ್ಚೆಚ್ಚು ಲಾಭವಾಗಲಿ" ಎಂದು ಕೇಳಿಕೊಳ್ಳಬೇಕು.
ದುರ್ಗಾ ಸ್ತೋತ್ರ
• "ದೇವನೇ ಕೇಳು, ಕಲಿಯಲ್ಲಿ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಅಂಬಾಸ್ತುತಿಯನ್ನು ನಾನು ನಿನ್ನ ಮೇಲಿನ ಪ್ರೀತಿಯಿಂದ ಪ್ರಕಾಶಪಡಿಸುತ್ತೇನೆ."
ಓಂ ಅಸ್ಯ ಶ್ರೀ ದುರ್ಗಾ ಸಪ್ತಶ್ಲೋಕೀ ಸ್ತೋತ್ರ ಮಂತ್ರಸ್ಯ ನಾರಾಯಣ ಋಷಿ: ಅನುಷ್ಟುಪ್ ಛಂದ: ಶ್ರೀ ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತ್ಯೋ ದೇವತಾ: ಶ್ರೀ ದುರ್ಗಾ ಪ್ರೀತ್ಯರ್ಥೇ ಸಪ್ತಶ್ಲೋಕೀ ದುರ್ಗಾ ಪಾಠೇ ವಿನಿಯೋಗ: |
ಓಂ ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ ||೧|| ದುರ್ಗೇ ಸ್ಮೃತಾ ಹರಸಿಭೀತಿಮಶೇಷ ಜನ್ತೋ: ಸ್ವಸ್ಥೈ: ಸ್ಮೃತಾ ಮತಿ ಮತೀವ ಶುಭಾಂ ದದಾಸಿ ದಾರಿದ್ರ್ಯ ದು:ಖ ಭಯ ಹಾರಿಣಿ ಕಾ ತ್ವದನ್ಯಾ ಸರ್ವೋಪಕಾರ ಕರಣಾಯ ಸದಾರ್ದ್ರ ಚಿತ್ತಾ ||೨||
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣಿ ನಮೋಽಸ್ತುತೇ ||೩|| ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋಽಸ್ತುತೇ ||೪||
ಸರ್ವಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತುತೇ ||೫|| ರೋಗಾನ ಶೇಷಾ ನಪಹಂಸಿ ತುಷ್ಟಾ ರುಷ್ಟಾ ತು ಕಾಮಾನ್ ಸಕಲಾನ ಭೀಷ್ಟಾನ್ | ತ್ವಾಮಾಶ್ರಿತಾನಾಂ ನ ವಿಪನ್ ನರಾಣಾಂ ತ್ವಾಮಾಶ್ರಿತಾ ಹ್ಯಾ ಶ್ರಯತಾಂ ಪ್ರಯಾಂತಿ ||೬||
ಸರ್ವಾ ಬಾಧಾ ಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ ಏಕಮೇವ ತ್ವಯಾ ಕಾರ್ಯಮಸ್ಮದ್ ವೈರಿ ವಿನಾಶನಂ ||೭|| ಇತಿ ಸಪ್ತಶ್ಲೋಕೀ ದುರ್ಗಾಸ್ತೋತ್ರ ಸಂಪೂರ್ಣ ||



Click it and Unblock the Notifications