Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಈ ದಿನಗಳಲ್ಲಿ ಸಾಲ ಕೊಟ್ಟರೆ ನಿಮ್ಮ ಕೈ ಖಾಲಿಯಾಗೋದು ಗ್ಯಾರಂಟಿ!
ಪ್ರತಿಯೊಬ್ಬರಿಗೂ ಸಾಲದ ಅವಶ್ಯಕತೆ ಇದ್ದೇ ಇರುತ್ತೆ. ಕೆಲವೊಂದು ಜನ ಬ್ಯಾಂಕ್ ನಲ್ಲಿ ಸಾಲ ಮಾಡುತ್ತಾರೆ, ಇನ್ನೂ ಕೆಲವರು ಬಡ್ಡಿಗೆ ಸಾಲ ಪಡೆಯುವವರು ಇದ್ದಾರೆ. ಮತ್ತೂ ಕೆಲವರು ತಮ್ಮ ಆಪ್ತ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಸಾಲ ಕೇಳಿ ತೆಗೆದುಕೊಳ್ಳುತ್ತಾರೆ. ನೀವೇನಾದರೂ ಈ ರೀತಿ ಸಾಲ ಕೊಡುವುದಾದರೆ ಕೆಲವೊಂದು ದಿನಗಳಲ್ಲಿ ಸಾಲ ಕೊಡಲೇಬಾರದು. ಈ ದಿನಗಳಲ್ಲಿ ಸಾಲ ಕೊಟ್ಟರೆ ಖಂಡಿತ ನೀವು ಕೊಟ್ಟಿರೋ ಸಾಲದ ಹಣ ವಾಪಾಸ್ಸ್ ಆಗೋದಿಲ್ಲ. ಅಷ್ಟಕ್ಕು ಯಾವ ದಿನಗಳಲ್ಲಿ ಸಾಲ ಕೊಡಲೇಬಾರದು ಅನ್ನೋದನ್ನು ತಿಳಿಯೋಣ.
ಮಂಗಳವಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಯಾರಿಂದಲೂ ಸಾಲ ಪಡೆಯಬಾರದು. ಮತ್ತೂ ಯಾರಿಗೂ ಸಾಲ ನೀಡಬಾರದಂತೆ. ಒಂದು ವೇಳೆ ಮಂಗಳವಾರ ನೀವು ಸಾಲ ಕೊಟ್ಟರೆ ಸಾಲದ ಹಣ ವಾಪಾಸ್ಸ್ ಆಗುವುದು ಅನುಮಾನವಂತೆ. ಅಷ್ಟೇ ಅಲ್ಲ, ಮಂಗಳವಾರ ನೀವು ಯಾರಿಂದಲಾದರೂ ಸಾಲ ಪಡೆದಿದ್ದರೂ ಆ ಸಾಲದ ಹಣದಿಂದ ನಿಮಗೆ ಯಾವುದೇ ರೀತಿ ಪ್ರಯೋಜನ ಆಗೋದಿಲ್ವಂತೆ.
ಮಂಗಳವಾರದ ದಿನ ಸಾಲವನ್ನು ತೆಗೆದುಕೊಳ್ಳುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಮಂಗಳವಾರ ಸಾಲ ಪಡೆಯುವ ಬದಲು ಹಳೆ ಸಾಲವಿದ್ದರೆ ಮರುಪಾವತಿ ಮಾಡಬೇಕಂತೆ. ಇದರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ.

ಗುರುವಾರ
ಗುರುವಾರವು ಕೂಡ ಯಾರಿಂದಲೂ ಸಾಲ ಪಡೆಯಬಾರದು. ಹಾಗೂ ಯಾರಿಗೂ ಸಾಲ ಕೊಡಬಾರದು. ಅಂತೂ ಇಂತೂ ಗುರುವಾರ ಸಾಲದ ವ್ಯವಹಾರಕ್ಕೆ ಕೈ ಹಾಕಲೇಬಾರದು. ಒಂದು ವೇಳೆ ಯಾರಾದರೂ ಒಬ್ಬ ವ್ಯಕ್ತಿ ನಿಮ್ಮಿದ ಲಕ್ಷಾಂತರ ರೂಪಾಯಿ ಪಡೆದಿದ್ದರೆ, ಅವನು ಅದನ್ನು ಬಹು ಬೇಗನೆ ತೀರಿಸೋದಿಲ್ಲ. ಅಥವಾ ಅದನ್ನು ಸಾಲವಾಗಿ ಹಾಗೆಯೇ ಉಳಿಸಿಕೊಳ್ಳುತ್ತಾನೆ.
ಸಾಲ ಪಡೆಯಲು ಹಾಗೂ ಸಾಲ ಕೊಡೋದಕ್ಕೆ ಗುರುವಾರ ಶುಭಕರ ದಿನವಲ್ಲ. ಒಂದು ವೇಳೆ ನೀವು ಗುರುವಾರ ಯಾರಿಗಾದರೂ ಸಾಲ ಕೊಟ್ಟರೂ ಅದು ವಾಪಾಸ್ಸ್ ಬರುತ್ತೆ ಅನ್ನೋ ನಂಬಿಕೆಯಿಲ್ಲ. ಈ ದಿನ ಸಣ್ಣ-ಪುಟ್ಟ ಸಾಲಗಾರರು ಮಾತ್ರವಲ್ಲ. ಲಕ್ಷಾಂತರ ರೂಪಾಯಿ ಸಾಲ ಪಡೆದವನು ನಿಮಗೆ ವಾಪಾಸ್ಸ್ ನೀಡೋದಿಲ್ಲ.
ಶನಿವಾರ
ಶನಿವಾರದ ದಿನವೂ ಯಾರಿಗೂ ಸಾಲ ನೀಡೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಬಹುದೊಡ್ಡ ನಷ್ಟ ಉಂಟಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಸಾಲ ಕೊಟ್ಟರೆ ನಿಮಗೆ ಆ ಹಣ ವಾಪಾಸ್ಸ್ ಸಿಗೋದು ಕಷ್ಟ. ಅಷ್ಟೇ ಯಾಕೆ, ಒಂದು ವೇಳೆ ನೀವು ಶನಿವಾರದ ದಿನ ಯಾರಿಂದಲಾದರೂ ಹಣವನ್ನು ಸಾಲವಾಗಿ ಪಡೆದರೆ ನೀವು ಆ ಹಣವನ್ನು ಅವರಿಗೆ ಮರು ಪಾವತಿ ಮಾಡೋದಿಲ್ಲ. ನೀವು ಆ ಹಣವನ್ನು ಕೊಡಬೇಕು ಅಂತ ಬಯಸಿದ್ರೂ ಕೂಡ ನಿಮ್ಮ ಕೈಯಿಂದ ಕೊಡೋದಕ್ಕೆ ಸಾಧ್ಯವಾಗೋದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವೇಳೆ ನಿಮಗೆ ಸಾಲ ಪಡೆದುಕೊಳ್ಳುವುದು ಅಗತ್ಯವಾಗಿದ್ದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಪಡೆದುಕೊಳ್ಳಿ. ಈ ದಿನಗಳಲ್ಲಿ ಸಾಲ ಪಡೆದುಕೊಂಡರೆ ನೀವು ಅದನ್ನು ಬೇಗನೇ ಮರು ಪಾವತಿ ಮಾಡುತ್ತೀರಿ. ಅಷ್ಟೇ ಅಲ್ಲದೇ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಅಮಾವಾಸ್ಯೆ ದಿನ
ನಿಮ್ಮ ಆಪ್ತರಿಗೆ ಹಣದ ಅವಶ್ಯಕತೆ ತುಂಬಾನೇ ಇದೆ. ನೀವು ಸಾಲ ಕೊಡಬೇಕು ಅಂತಾನೂ ಬಯಸಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಅಮಾವಾಸ್ಯೆ ದಿನ ಸಾಲ ಕೊಡೋದಕ್ಕೆ ಹೋಗಲೇಬೇಡಿ. ಅಮಾವಾಸ್ಯೆಯ ದಿನ ಋಣಾತ್ಮಕ ಶಕ್ತಿಗಳು ಹೆಚ್ಚಾಗಿರೋದ್ರಿಂದ ಆ ದಿನ ಸಾಲ ಕೊಟ್ಟರೆ ನಿಮ್ಮ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತಂತೆ. ಹೀಗಾಗಿ ಅಮಾವಾಸ್ಯೆಯ ದಿನ ತಪ್ಪಿಯೂ ಯಾರಿಗೂ ದುಡ್ಡು ಕೊಡೋದಕ್ಕೆ ಹೋಗಲೇಬೇಡಿ.
ಭದ್ರಕಾಲ
ಭದ್ರಕಾಲದ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದಂತೆ. ಭದ್ರಕಾಲವನ್ನು ಅಶುಭ ಗಳಿಗೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಏನೇ ಮಾಡಿದರೂ ಅದರಿಂದ ಸಂಘರ್ಷ ಹಾಗೂ ಜಗಳ ಸೃಷ್ಟಿಯಾಗುತ್ತಂತೆ. ಒಂದು ವೇಳೆ ನೀವು ಭದ್ರಕಾಲದಲ್ಲಿ ಹಣ ನೀಡಿದರೆ ನೀವು ಸಾಲದ ಹಣವನ್ನು ಮರಳಿ ಪಡೆಯುವುದೇ ಅನುಮಾನ. ಅಷ್ಟೇ ಅಲ್ಲದೇ, ಆ ವ್ಯಕ್ತಿಯ ಜೊತೆಗೆ ನಿಮ್ಮ ಸಂಬಂಧವು ಹಾಳಾಗುತ್ತದೆ.
ಸಂಜೆಯ ವೇಳೆ
ಸೂರ್ಯಾಸ್ತದ ಸಮಯದಲ್ಲಿ ನಾವು ಯಾರಿಗೂ ಸಾಲ ಕೊಡಬಾರದು ಹಾಗೂ ಯಾರಿಂದಲೂ ಸಾಲವನ್ನು ಪಡೆಯಬಾರದು. ಇದರ ಪರಿಣಾಮವಾಗಿ ನೀವು ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಸಾಲಗಾರರಾಗುತ್ತೀರಿ. ಹಣ ಮಾತ್ರವಲ್ಲ, ಸಂಜೆಯ ವೇಳೆ ಹಾಲು, ಮೊಸರು, ತುಪ್ಪ, ಎಣ್ಣೆ ಮತ್ತು ಉಪ್ಪನ್ನು ಯಾರಿಂದಲೂ ಸಾಲವಾಗಿ ಪಡೆದುಕೊಳ್ಳಬಾರದು.
ಕೆಲವೊಂದು ಸಲ ಮನುಷ್ಯ ತುಂಬಾನೇ ಕಷ್ಟ ಪಡುತ್ತಾನೆ. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ದುಡಿಯುತ್ತಾನೆ. ಆದರೂ ಕೂಡ ಆತನ ಕೈಯಿಂದ ಒಂಚೂರು ಹಣವನ್ನು ಉಳಿಸೋದಕ್ಕೆ ಸಾಧ್ಯವಾಗೋದಿಲ್ಲ. ಕೆಲವೊಂದು ಸಲ ಅದೃಷ್ಟ ಕೈ ಕೊಡುತ್ತದೆ. ಇನ್ನೂ ಕೆಲವು ಸಲ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ನಮ್ಮ ಆಸ್ತಿ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಸಾಲದ ವ್ಯವಹಾರ ಮಾಡುವಾಗ ತುಂಬಾನೇ ಜಾಗರೂಕರಾಗಿ ಇರಬೇಕು.



Click it and Unblock the Notifications
