Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಧಿಕಾರದಾಸೆಗೆ ಅಣ್ಣ-ತಮ್ಮರ ಮುಗಿಸಿದ ಔರಂಗಜೇಬ್..! ಸಹೋದರಿಯನ್ನು ಏನು ಮಾಡಿದ ಗೊತ್ತಾ?
ಔರಂಗಜೇಬ್, ಸದ್ಯ ಭಾರತದಲ್ಲಿ ಸುದ್ದಿಯಾಗುತ್ತಿರುವ ಹೆಸರು. ಮೊಘಲ್ ದೊರೆ ಭಾರತದ ನೆಲ ಆಳಿ ದಶಕಗಳು ಉರುಳಿದರು ಆತನ ಹೆಸರು ಈಗಲೂ ಕೇಳುತ್ತಿದೆ. ಅದೇ ದೊಡ್ಡ ಚರ್ಚೆ, ಗದ್ದಲಕ್ಕೂ ಕಾರಣವಾಗುತ್ತಿದೆ. ಈಗ ಔರಂಗಜೇಬ್‌ನ ಸಮಾಧಿ ಬಹಳ ಚರ್ಚೆಯಾಗುತ್ತಿದೆ. ಗಲಭೆಯ ಕೇಂದ್ರವಾಗಿ ಬೆಳೆದಿದೆ. ಔರಂಗಜೇಬ್ ಮೊಘಲರ ಕೊನೆಯ ದಕ್ಷ ಆಡಳಿತ ಎಂದು ಇತಿಹಾಸ ಹೇಳುತ್ತಿದೆ. ಆತನ ಆಳ್ವಿಕೆಯ ನಂತರ ಬಂದ ರಾಜರು ಸಾಮ್ರಾಜ್ಯ ಪಥನಕ್ಕೆ ಕಾರಣರಾದರು.
ಷಹಜಹಾನ್ ಪುತ್ರ ಔರಂಗಜೇಬ್ ರಾಜನ ಆಸ್ಥಾನಕ್ಕಾಗಿ ತನ್ನ ಸಹೋದರನನ್ನೇ ಕೊಲೆ ಮಾಡಿದ ಎಂದು ಇತಿಹಾಸ ಹೇಳುತ್ತೆ. ಹಾಗೆ ಆಕೆಯ ಮೂವರು ಸಹೋದರಿಯರು ಕೂಡ ಇದ್ದರೂ ಎಂದು ತಿಳಿದುಬಂದಿದೆ. ಆದ್ರೆ ಅವರೆಲ್ಲಾ ಏನಾದರು. ಔರಂಗಜೇಬ್ ಅವರನ್ನು ಏನು ಮಾಡಿದ ಎಂಬುದು ನಿಮಗೆ ಗೊತ್ತಾ? ಆತ ತನ್ನ ಮೂವರು ಸಹೋದರಿಯರನ್ನು ಸೆರೆಮನೆಗೆ ಅಟ್ಟಿದ್ದ ಮತ್ತು ಅವರಿಗೆ ಮದುವೆಯಾಗಲು ಅವಕಾಶ ನೀಡಲಿಲ್ಲವಂತೆ.

ಹಾಗಾದ್ರೆ ಈ ಔರಂಗಜೇಬ್‌ನ ಕಥೆ ಏನು? ತನ್ನ ಅಧಿಕಾರದ ಆಸೆ ಆತ ತನ್ನ ಕುಟುಂಬವನ್ನು ಏನು ಮಾಡಿದ ಅನ್ನೋದನ್ನು ತಿಳಿದುಕೊಳ್ಳೋಣ. ಔರಂಗಜೇಬನ ತಂದೆ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ನಿಂದ 14 ಮಕ್ಕಳನ್ನು ಪಡೆದಿದ್ದಳು. ಅದರಲ್ಲಿ 7ಕ್ಕು ಹೆಚ್ಚು ಮಕ್ಕಳು ಶೈಶವಾವಸ್ಥೆಯಲ್ಲಿ ಮರಣ ಹೊಂದಿದರು. ಹೀಗಾಗಿ ಉಳಿದಿದ್ದು ಬರೀ 7 ಮಂದಿ ಮಕ್ಕಳು ಮಾತ್ರ. ಅದರಲ್ಲೊಬ್ಬ ಈ ಔರಂಗಜೇಬ್.
ಷಹಜಹಾನ್‌ನನ್ನು ಆಗ್ರಾದಲ್ಲಿ ಬಂಧಿಸಿದ ನಂತರ ಔರಂಗಜೇಬ್ ಸಿಂಹಾಸನದ ಕನಸು ಕಂಡಿದ್ದ. ಆದ್ರೆ ಆತನ ಅಣ್ಣ ತಾರಾ ಶಿಕೋಹ್ ಇದಕ್ಕೆ ಅಡ್ಡಿಯಾಗಿದ್ದ. ಹೀಗಾಗಿ ಆತನ ಶಿರಚ್ಛೇದ ಮಾಡಿದ್ದ ಎಂಬ ಉಲ್ಲೇಖವಿದೆ. ಹಾಗೆ ಕಿರಿಯ ಸಹೋದರ ಮುರಾದ್ ಬಕ್ಸ್‌ನನ್ನು ಸೆರೆಮನೆಗೆ ಕಳುಹಿಸಿದ, ಆದ್ರೆ ಮತ್ತೋರ್ವ ಸಹೋದರ ಶಾ ಶುಜಾ ಆತನಿಂದ ತಪ್ಪಿಸಿಕೊಂಡು ಓಡಿ ಹೋದ. ಆತ ದೂರ ಮ್ಯಾನ್ಮಾರ್‌ಗೆ ಹೋಗಿ ನೆಲೆಸಿದ ಎಂದು ಹೇಳಲಾಗಿದೆ.
ಔರಂಗಜೇಬ್ ತಂದೆ ಆಡಳಿತ ನಡೆಸುವಾಗಲೇ ಆತ ಅಧಿಕಾರದ ಆಸೆ ಕಂಡಿದ್ದನಂತೆ. ಮೂವರು ಸಹೋದರರನ್ನು ಈ ರೀತಿಯಾಗಿ ಅಧಿಕಾರದಿಂದ ದೂರವಿಟ್ಟ ಆತ ಮೂವರು ಸಹೋದರಿಯರನ್ನು ಕೂಡ ಸರೆಮನೆಗೆ ಹಾಕುವ ಮೂಲಕ ಅವರನ್ನು ಅಧಿಕಾರ ಹಾಗೂ ಅರಮನೆಯಿಂದಲೇ ಅವರನ್ನು ಹೊರಗಿಟ್ಟಿದ್ದ.
ಷಹಜಹಾನ್ ಮತ್ತು ಮುಮ್ತಾಜ್ ದಂಪತಿಯ ಎರಡನೇ ಮಗು ಜಹಾನಾರಾ ಬೇಗಂ ಔರಂಗಜೇಬನ ಅಕ್ಕಳಾಗಿದ್ದಳು. ಷಹಜಹಾನ್ ಬಳಿಕ ಆಕೆಗೆ ಆಡಳಿತ ಅಥವಾ ಉತ್ತರಾಧಿಕಾರದ ಹಕ್ಕು ಇತ್ತು. ಇನ್ನು 1631 ರಲ್ಲಿ ಮುಮ್ತಾಜ್ ಮರಣದ ನಂತರ ಆಗ 17 ವರ್ಷದ ಯುವತಿಯಾಗಿದ್ದ ಜಹಾನಾರಾ ತನ್ನ ಒಡಹುಟ್ಟಿದವರನ್ನು ಮತ್ತು ತನ್ನ ಹೆಂಡತಿಯ ಮರಣದಿಂದ ಒತ್ತಡಕ್ಕೊಳಗಾಗಿದ್ದ ತನ್ನ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಳು.
ನಂತರ ಷಹಜಹಾನ್ ಅವಳಿಗೆ 'ಬಾದ್ಶಾ ಬೇಗಂ' (ಪ್ರಥಮ ಮಹಿಳೆ) ಎಂಬ ಬಿರುದನ್ನು ನೀಡಿದನು. ಅದು ಅವಳಿಗೆ ಅಧಿಕೃತ ಆದೇಶಗಳನ್ನು ಹೊರಡಿಸುವ ಅಧಿಕಾರ ಚಕ್ರವರ್ತಿಯ ಹೆಸರಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಮತ್ತು ಅನೇಕ ಪ್ರಮುಖ ವಿಷಯಗಳ ಬಗ್ಗೆ ಸ್ವಂತ ನಿರ್ಧಾರ ಪ್ರಕಟಿಸುವಂತಹ ವಿಶೇಷ ಅಧಿಕಾರ ನೀಡಿತು. ಹೀಗಾಗಿ ಷಹಜಹಾನ್ ಆಕೆಗೆ ಮಹಲ್‌ನ ಆಸ್ತಿಯನ್ನು ಅರ್ಧದಷ್ಟು ಭಾಗ ನೀಡಿದರು.
ಇನ್ನು ಈ ಜಹಾನಾರಳ ತಂಗಿ ರೋಷನಾಳ ಔರಂಗಜೇಬ್ ಪರವಾಗಿ ನಿಂತಿದ್ದ ಏಕೈಕ ಸಹೋದರಿ ಎಂದು ಹೇಳಲಾಗಿದೆ. ಆಕೆ ತನ್ನ ಹಿರಿಯ ಸಹೋದರ ತರಾ ಶಿಕೋಹ್, ವಿರುದ್ಧವಾಗಿದ್ದಳು. ಈ ತಾರಾ ಶಿಕೋಹ್ ಇಸ್ಲಾಂನ ವಿರುದ್ಧವಾಗಿದ್ದ, ಆತನಿಗೆ ಇಸ್ಲಾಂನಲ್ಲಿ ನಂಬಿಕೆ ಇರಲಿಲ್ಲವಂತೆ. 1657ರಲ್ಲಿ ಷಹಜಹಾನ್ ಆರೋಗ್ಯ ಹದಗೆಟ್ಟಾಗ ಶಿಕೋಹ್ ಕರೆದು ನಾಲ್ವರು ಸಹೋದರರು ಆಸ್ತಿ ಹಂಚಿಕೆ ಮಾಡಿಕೊಳ್ಳವಂತೆ ತಿಳಿಸಿದ್ದ, ಆದ್ರೆ ಔರಂಗಜೇಬ್ ಇದನ್ನು ನಿರಾಕರಿಸಿದ್ದನಂತೆ.
ಇನ್ನು ಔರಂಗಜೇಬ್‌ನ ಕೊನೆಯ ಸಹೋದರಿ ಗೌಹರ್ ಅರಾ ಮೊಘಲ್ ದೊರೆಗಳನ್ನು ಮತ್ತೆ ಒಂದು ಮಾಡಬೇಕು ಎಂಬ ಉದ್ದೇಶದಿಂದ ತನ್ನ ಸಹೋದರರ ವಿವಾಹವನ್ನು ಮೊಘಲ್ ದೊರೆಗಳ ಮಕ್ಕಳ ಜೊತೆ ಮಾಡಲು ಮುಂದಾದಳು. ತಾರಾ ಶಿಕೋಹ್‌ನ ಪುತ್ರ ಸಿಬಿಹಾರ್ ಶಿಕೋಹ್, ಔರಂಗಜೇಬ್‌ನ ಮಗಳು ಸುಭದುತ್ ಉನ್ ನಿಸಾಳ ವಿವಾಹ ಸಹ ಏರ್ಪಡಿಸಿದ್ದಳು ಎಂದು ತಿಳಿದುಬಂದಿದೆ. ಅಂತಿಮವಾಗಿ 1681 ರಲ್ಲಿ ಔರಂಗಜೇಬ್ ಮರಣ ಹೊಂದಿದ ನಂತರ ಅವರನ್ನು ದೆಹಲಿಯಲ್ಲಿ ಸಮಾಧಿ ಮಾಡಲಾಯಿತು.



Click it and Unblock the Notifications