Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್‌ನಲ್ಲಿ ನಾಗಪಂಚಮಿ ಸೇರಿದಂತೆ 9 ಪ್ರಮುಖ ಹಬ್ಬಗಳಿವೆ
ಶ್ರಾವಣ ಮಾಸದಿಂದ ಹಬ್ಬಗಳ ಸಡಗರ ಶುರುವಾಗುವುದು, ಅದರಲ್ಲೂ ಆಗಸ್ಟ್ ತಿಂಗಳಿನಲ್ಲಿ ಅಂತೂ ಸಾಲು-ಸಾಲು ಹಬ್ಬಗಳು. ನಾಗರ ಪಂಚಮಿ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ ಹೀಗೆ ಪ್ರಮುಖ ಹಬ್ಬಗಳ ಸಾಲೇ ನಮ್ಮ ಮುಂಂದಿದೆ, ಆದ್ದರಿಂದ ಆಗಸ್ಟ್ ತಿಂಗಳು ನಮ್ಮ ಸಂತೋಷ, ಸಂಭ್ರಮ ಹೆಚ್ಚಿಸಲಿದೆ. ಆಗಸ್ಟ್ ತಿಂಗಳಿನಲ್ಲಿ ಯಾವ ದಿನಾಂಕ ಯಾವ ಹಬ್ಬವಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ:
ನಾಗರ ಪಂಚಮಿ
ನಾಗರ ಪಂಚಮಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲಾ ಹಬ್ಬಗಳ ಮುನ್ನುಡಿಯಾಗಿ ನಾಗ ಪಂಚಮಿ ಹಬ್ಬ ಬರುತ್ತಿದೆ. ಈ ವರ್ಷ ನಾಗ ಪಂಚಮಿ ಹಬ್ಬವನ್ನು ಆಗಸ್ಟ್ 2ರಂದು ಆಚರಿಸಲಾಗುವುದು. ಈ ದಿನ ನಾಗ ಮೂರ್ತಿಗಳಿಗೆ ಹಾಲೆರೆದು ಪೂಜಿಸಲಾಗುವುದು.

ತುಳಸಿದಾಸ ಜಯಂತಿ: ಆಗಸ್ಟ್ 4
ಶ್ರೀರಾಮನ ಭಕ್ತನಾದ ತುಳಸಿದಾಸನ 525ನೇ ಜಯಂತಿಯನ್ನು ಆಗಸ್ಟ್ 4ರಂದು ಆಚರಿಸಲಾಗುವುದು. ಈ ದಿನ ತುಳಸಿದಾಸ ರಚಿಸದ ಕೀರ್ತನೆಗಳನ್ನು ಹಾಡಲಾಗುವುದು, ಹನುಮಾನ್ ಚಾಲೀಸ ಪಠಿಸಲಾಗುವುದು.
ಶ್ರಾವಣ ಪುತ್ರದಾ ಏಕಾದಶಿ
ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು. ಇದರಿಂದ ಮೋಕ್ಷ ಸಿಗಲಿದೆ ಎಂಬ ನಂಬಿಕೆ . ಈ ವರ್ಷ ಪುತ್ರದಾ ಏಕಾದಶಿಯನ್ನು ಆಗಸ್ಟ್ 8ರಂದು ಆಚರಿಸಲಾಗುವುದು.
ಪ್ರದೋಷ ವ್ರತ
ಪ್ರದೋಷ ವ್ರತ ಶಿವನಿಗೆ ಮೀಸಲಾದ ದಿನ. ಈ ದಿನ ಶಿವನ ಆರಾಧಿಸಿ ಅವನ ಕೃಪೆಗೆ ಪಾತ್ರರಾಗಲು ಭಕ್ತರು ವಿಸೇಷ ಪೂಜೆ, ರುದ್ರಾಭಿಷೇಕ ಮಾಡಿಸುತ್ತಾರೆ. ತಿಂಗಳಿನಲ್ಲಿ ಎರಡು ಪ್ರದೋಷ ವ್ರತವಿರುತ್ತದೆ. ಶ್ರಾವಣ ಮಾಸದಲ್ಲಿ ಅಂದರೆ ಆಗಸ್ಟ್ 9, ಆಗಸ್ಟ್ 24ಕ್ಕೆ ಪ್ರದೋಷ ವ್ರತವನ್ನು ಆಚರಿಸಲಾಗುವುದು.
ಶ್ರಾವಣ ಪೂರ್ಣಿಮಾ, ರಕ್ಷಾ ಬಂಧನ, ಗಾಯತ್ರಿ ಜಯಂತಿ
ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧವನ್ನು ಆಚರಿಸಲಾಗುವುದು, ಅಣ್ಣ-ತಂಗಿಯ ಸಂಬಂಧದ ಮಹತ್ವ ತಿಳಿಸುವ ಆಚರನೆ ಇದಾಗಿದೆ. ಈ ದಿನ ಗಾಯತ್ರಿ ಜಯಂತಿ, ಹಯಗ್ರೀವ ಜಯಂತಿ ಆಚರಿಸಲಾಗುವುದು. ಈ ವರ್ಷ ಆಗಸ್ಟ್ 11ರಂದು ಆಚರಿಸಲಾಗುವುದು.
ಭಾದ್ರಪದ ಸಂಕಷ್ಟಿ ಚತುರ್ಥಿ
ಪ್ರತಿ ತಿಂಗಳು ಸಂಕಷ್ಟಿ ಚತುರ್ಥಿ ಆಚರಣೆ ಮಾಡಲಾಗುವುದು. ಆದರೆ ಭಾದ್ರಪದ ಮಾಸದ ಸಂಕಷ್ಟಿ ಚತುರ್ಥಿಯನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಗುವುದು. ಸಂಕಷ್ಟಿ ಚತುರ್ಥಿ ಆಚರಣೆ ಮಾಡುವುದರಿಂದ ನಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಲಿದೆ. ಭಾದ್ರಪದ ಸಂಕಷ್ಟಿ ಚತುರ್ಥಿಯನ್ನು ಆಗಸ್ಟ್ 15ರಂದು ಆಚರಿಸಲಾಗುವುದು.
ಕೃಷ್ಣ ಜನ್ಮಾಷ್ಟಮಿ
ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 18 ಮತ್ತು ಮೊಸರು ಕುಡಿಕೆಯ ಕಾರ್ಯಕ್ರಮವನ್ನು ಆಗಸ್ಟ್ 19ರಂದು ಆಚರಿಸಲಾಗುವುದು.
ಗೌರಿ ಹಬ್ಬ
ಗೌರಿ ಹಬ್ಬವನ್ನ ಈ ವರ್ಷ ಆಗಸ್ಟ್ 30ರಂದು ಆಚರಿಸಲಾಗುವುದು, ಈ ದಿನ ಮಹಿಳೆಯರು ಉಪವಾಸವಿದ್ದು ಗಂಡ-ಮಕ್ಕಳ ಶ್ರೇಯಸ್ಸಿಗಾಗಿ ಈ ಹಬ್ಬವನ್ನು ಆಚರಿಸಲಾಗುವುದು.
ಗಣೇಶ ಅಥವಾ ವಿನಾಯಕ ಚತುರ್ಥಿ
ವಿನಾಯಕ ಚತುರ್ಥಿಯನ್ನು ಈ ವರ್ಷ ಆಗಸ್ಟ್ 31ರಂದು ಆಚರಿಸಲಾಗುವುದು. ವಿನಾಯಕ ಚತುರ್ಥಿಯನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯನ್ನಾಗಿ ಆಚರಿಸಲಾಗುವುದು.



Click it and Unblock the Notifications