Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸಂಪತ್ತಿಗಾಗಿ ಲಕ್ಷ್ಮೀ ದೇವಿಯ ಮಂತ್ರ ಪಠಿಸುವಾಗ ಈ ತಪ್ಪುಗಳು ಆಗದಿರಲಿ!
ದೇವರ ಪೂಜೆಯನ್ನು ಭಕ್ತಿಯಿಂದ ಮಾಡೋದ್ರಿಂದ ನಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿ ಸಿಗುತ್ತದೆ. ಅದೇ ರೀತಿ ನಮ್ಮ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಲೂ ಕೂಡ ವಿವಿಧ ರೀತಿಯ ಮಂತ್ರಗಳನ್ನು ಪಠಣೆ ಮಾಡಲಾಗುತ್ತದೆ. ಅದ್ರಲ್ಲೂ ಶುಕ್ರವಾರದ ದಿನ ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಜೊತೆಗೆ ಲಕ್ಷ್ಮೀಗೆ ಸಂಬಂಧ ಪಟ್ಟ ಮಂತ್ರಗಳನ್ನು ಹೇಳೋದ್ರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗಿ, ಸಂಪತ್ತು ಹೆಚ್ಚಾಗುತ್ತೆ ಎನ್ನುವ ನಂಬಿಕೆಯಿದೆ.
ಆದರೆ ಲಕ್ಷ್ಮೀ ಮಂತ್ರಗಳನ್ನು ಹೇಳುವಾಗ ಕೆಲವೊಂದು ವಿಧಾನಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮನಸ್ಸು ಶುದ್ಧವಿಲ್ಲದೇ ಲಕ್ಷ್ಮೀ ಮಂತ್ರವನ್ನು ಪಠಣೆ ಮಾಡಿದ್ರೆ ಏನು ಪ್ರಯೋಜನ ಆಗೋದಿಲ್ಲ. ಅಷ್ಟಕ್ಕು ಲಕ್ಷ್ಮೀ ಮಂತ್ರವನ್ನು ಪಠಣೆ ಮಾಡುವ ಸಂದರ್ಭದಲ್ಲಿ ಏನೆಲ್ಲಾ ಕ್ರಮಗಳನ್ನು ಪಾಲನೆ ಮಾಡಬೇಕು ಅನ್ನೋದನ್ನು ತಿಳಿಯೋಣ.

ಶುಕ್ರವಾರ ಲಕ್ಷ್ಮೀಯನ್ನು ಪೂಜಿಸೋದ್ರ ಮಹತ್ವವೇನು?
ಹಿಂದೂ ಪುರಾಣಗಳಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿಯನ್ನು ಶುಕ್ರವಾರದಂದು ಪೂಜಿಸಲಾಗುತ್ತದೆ. ಶುಕ್ರವಾರ ಲಕ್ಷ್ಮೀಯನ್ನು ಪೂಜಿಸೋದ್ರಿಂದ ಸದಾ ಲಕ್ಷ್ಮೀ ಮನೆಯಲ್ಲಿಯೇ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಶುಕ್ರವಾರದ ದಿನ ಶುಕ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿದ್ದು, ಈ ದಿನ ಪೂಜೆ ಸಲ್ಲಿಸೋದ್ರಿಂದ ಎಲ್ಲವೂ ಒಳ್ಳೆಯದಾಗುತ್ತೆ ಅಂತ ಹೇಳಲಾಗುತ್ತದೆ.
ಮಹಾಲಕ್ಷ್ಮೀಯ ಮಂತ್ರವನ್ನು ಯಾವ ರೀತಿ ಪಠಿಸಬೇಕು?
ಪ್ರಾಶಸ್ತ್ಯವಾದ ಜಾಗವನ್ನು ಆಯ್ದುಕೊಳ್ಳಿ!
ಲಕ್ಷ್ಮೀ ದೇವಿಯ ಮಂತ್ರವನ್ನು ಪಠಣೆ ಮಾಡುವ ಸಂದರ್ಭದಲ್ಲಿ ನಾವು ಸಂಪೂರ್ಣವಾಗಿ ದೇವಿಗೆ ಸಮರ್ಪಿತವಾಗಿ ಇರಬೇಕು. ಹೀಗಾಗಿ ಯಾವುದೇ ಗದ್ದಲ, ಗಲಾಟೆ ಇಲ್ಲದ ಜಾಗವನ್ನು ಹುಡುಕಿ ಅಲ್ಲಿ ಮಂತ್ರ ಪಠಣೆ ಮಾಡೋದಕ್ಕೆ ಕುಳಿತುಕೊಳ್ಳಿ.
ನಿಮ್ಮ ಮನಸ್ಸು ಪೂರ್ತಿ ಲಕ್ಷ್ಮೀ ದೇವಿಯ ಕಡೆಗೆ ಕೇಂದ್ರೀಕೃತವಾಗಿ ಇರಬೇಕು. ಅಂತ ಜಾಗದಲ್ಲಿ ಕುಳಿತು ದೀಪ ಹಚ್ಚಿ ಒಂದೇ ಮನಸ್ಸಿನಿಂದ ದೇವಿಯನ್ನು ಪ್ರಾರ್ಥಿಸಿ ಮಂತ್ರ ಪಠಣೆಯನ್ನು ಮಾಡೋದಕ್ಕೆ ಶುರು ಮಾಡಿ.
ನೀವು ಯಾವ ಉದ್ದೇಶಕ್ಕೆ ಪ್ರಾರ್ಥಿಸುತ್ತಿದ್ದೀರಿ ಎಂದು ನೆನಪಿಸಿಕೊಳ್ಳಿ!
ಲಕ್ಷ್ಮೀಯ ಮಂತ್ರ ಪಠಣಕ್ಕೆ ಕೂರುವ ಮೊದಲು ನಾವು ಯಾವ ಉದ್ದೇಶವನ್ನು ಇಟ್ಟುಕೊಂಡು ಪೂಜಿಸುತ್ತಿದ್ದೀವಿ ಎಂದು ಮನಸ್ಸಿನಲ್ಲಿಯೇ ನೆನಪಿಸಿಕೊಳ್ಳಿ. ನೀವೇನಾದರೂ ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುವ ಉದ್ದೇಶ ಹೊಂದಿದ್ದರೆ ಅದನ್ನು ನಿಮ್ಮ ಮನಸ್ಸಿನಲ್ಲಿ ದೃಶ್ಯೀಕರಿಸಿ ನಂತರ ಮಂತ್ರ ಪಠಣೆಗೆ ಕುಳಿತುಕೊಳ್ಳಿ. ಈ ರೀತಿ ಮಾಡೋದ್ರಿಂದ ನಿಮ್ಮ ಉದ್ದೇಶಗಳು ಈಡೇರುವ ಸಾಧ್ಯತೆಗಳು ಹೆಚ್ಚಿದೆ.
ಉಚ್ಛಾರಣೆ ಸ್ಪಷ್ಟವಾಗಿರಲಿ!
ನೀವು ಲಕ್ಷ್ಮೀಯ ಕುರಿತಾಗಿ ಮಂತ್ರವನ್ನು ಪಠಣೆ ಮಾಡುವ ಸಂದರ್ಭದಲ್ಲಿ ನಿಮ್ಮ ಉಚ್ಛಾರಣೆ ಸ್ಪಷ್ಟವಾಗಿ ಇರಬೇಕು. "ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ" ಎಂಬ ಮಂತ್ರವನ್ನು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಉಚ್ಛರಿಸಿ. ಕ್ರಮೇಣ ಕೊಂಚ ಮೆಲ್ಲಗೆ ಸ್ಪಷ್ಟವಾಗಿ ಹೇಳಿ. ಈ ಮಂತ್ರ ಒಟ್ಟು 108 ಬಾರಿ ಪುನರಾವರ್ತನೆಯಾಗುವಂತೆ ನೋಡಿಕೊಳ್ಳಿ.
ನೀವು ಮಂತ್ರವನ್ನು ಪಠಣೆ ಮಾಡುವಾಗ ಮಂತ್ರವು ನಿಮ್ಮ ಉಸಿರಿನೊಂದಿಗೆ ಸಿಂಕ್ ಆಗುವಂತೆ ನೋಡಿಕೊಳ್ಳಿ. ಆಳವಾಗಿ ಉಸಿರಾಡಿ ಒಳಗಿನಿಂದ ಮಂತ್ರವನ್ನು ಪೂರ್ಣವಾಗಿ ಉಚ್ಚರಿಸಿ ಹೊರಗೆ ಬಿಡಬೇಕು.
ಕೃತಜ್ಞತೆಯನ್ನು ಸಲ್ಲಿಸಿ
ನೀವು ಸಂಪತ್ತು ಹಾಗೂ ಸಮೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಬೇಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಆಕೆಗೆ ಮನಸ್ಸ್ ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಿ. ಇಷ್ಟು ದಿನ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನಿಮ್ಮ ರಕ್ಷಿಸಿದ್ದಕ್ಕಾಗಿ ಆಕೆಗೆ ಕೃತಜ್ಷತೆಯನ್ನು ಸಲ್ಲಿಸಿ. ನಂತರ ನಿಮ್ಮ ಈಗಿನ ಇಚ್ಛೆಯ ಬಗ್ಗೆ ಲಕ್ಷ್ಮೀ ದೇವಿಯ ಬಳಿ ಮನಸ್ಸ್ ಪೂರ್ವಕವಾಗಿ ಪ್ರಾರ್ಥಿಸಿಕೊಳ್ಳಿ.
ಶುಕ್ರವಾರದ ದಿನ ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ನಿಮ್ಮ ಬದುಕಿನಲ್ಲಿ ಎಲ್ಲವೂ ನೀವು ಅಂದುಕೊಂಡಂತೆ ನೆರವೇರುತ್ತದೆ. ಆದರೆ ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ಅಥವಾ ಮಂತ್ರಗಳನ್ನು ಪಠಣೆ ಮಾಡುವ ಸಂದರ್ಭದಲ್ಲಿ ಈ ಮೇಲಿನ ವಿಚಾರಗಳನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.



Click it and Unblock the Notifications

