Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಯುಪಿಐ ಪಾವತಿ ಮಾಡುವವರಿಗೆ ಹೊಸ ರೂಲ್: ಇಂದಿನಿಂದ ಹೊಸ ವಿಧಾನ! ಮರೆಯಾಗಲಿದೆ ಪಿನ್!
ನಾವೀಗ ಪ್ರತಿಯೊಂದು ವ್ಯವಹಾರಕ್ಕೂ ಹಣದ ಬದಲಾಗಿ ಯುಪಿಐ ಐಡಿ ಮೂಲಕ ಪಾವತಿಸುತ್ತೇವೆ. ಬಹುತೇಕ ಎಲ್ಲಾ ಕಡೆಗಳಲ್ಲು ಕ್ಯೂ ಆರ್ ಕೋಡ್ ಬಳಸಿಯೇ ಹಣ ಪಾವತಿಸುವುದು ರೂಢಿಯಾಗಿದೆ ಎಲ್ಲರೂ ಇದನ್ನೇ ಅನುಸರಿಸುವುದು ನೋಡಬಹುದು. ಇನ್ನು ಈ ಯುಪಿಐ ನಿಮ್ಮ ಚಿಲ್ಲರೆ ಸಮಸ್ಯೆಗಳ ಬಗೆಹರಿಸಿದೆ. ಹಾಗೆ ಯಾವಾಗಲು ಹಣವನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂಬ ತಲೆನೋವನ್ನು ದೂರ ಮಾಡಿದೆ.
ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಯಲ್ಲಿಯೂ ಯುಪಿಐ ಕ್ಯೂಆರ್ ಕೋಡ್ ಬಳಸುವುದು ನೋಡಬಹುದು. ಯುಪಿಐ ಬಹಳ ಸೇಫ್ ಎಂದು ಕೂಡ ಕರೆಯಲಾಗಿದೆ. ಹಾಗೆ ಯುಪಿಐ ಈಗ ಭಾರತ ಮಾತ್ರವಲ್ಲದೆ ಹಲವು ದೇಶದಲ್ಲಿಯೂ ಬಳಕೆಯಾಗುತ್ತಿದೆ. ಆದ್ರೆ ಯುಪಿಐ ಪಾವತಿಯಲ್ಲಿ ಪಿನ್ ಬಳಕೆ ಮಾಡುವುದು ಇಷ್ಟು ದಿನ ಕಡ್ಡಾಯವಾಗಿತ್ತು.

ಆದ್ರೆ ಈಗ ಯುಪಿಐ ಪಾವತಿಯಲ್ಲಿ ಪ್ರಮುಖ ಬದಲಾವಣೆಯನ್ನು ನೋಡಬಹುದು. ಪಾವತಿ ಮಾಡುವಾಗ ನಿಮ್ಮ ಪಿನ್ ನಮೂದಿಸುವುದು ಯಾವಾಗಲು ಕಿರಿ ಕಿರಿ ಉಂಟು ಮಾಡುತ್ತಿರಬಹುದು. ವಹಿವಾಟು ಮಾಡುವಾಗ ಪರಿಶೀಲನಾ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳ ತರಲು ಆರ್‌ಬಿಐ ಮುಂದಾಗಿದೆ. ಸದ್ಯ ಯುಪಿಐ ಬಳಕೆ ಮಾಡುವಾಗ ಈಗ ಪಿನ್ ಅಲ್ಲ ಬದಲಿಗೆ ಬಯೋಮೆಟ್ರಿಕ್ ಪರಿಶೀಲನೆ ಮಾಡಬೇಕಾಗುತ್ತದೆ.
UPI ಅನ್ನು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಹೊಸ ಬಯೋಮೆಟ್ರಿಕ್ ವೈಶಿಷ್ಟ್ಯವನ್ನು ಪ್ರದರ್ಶಿಸಲು ಯೋಜಿಸಿದೆ. ಇದರಿಂದ ನೀವು ಇನ್ನು ಮುಂದೆ ಯುಪಿಐ ಮೂಲಕ ಪಾವತಿ ಮಾಡಲು ಮುಂದಾದರೆ ಪಿನ್ ಬದಲಾಗಿ ಬಯೋಮೆಟ್ರಿಕ್ ಅಥವಾ ಫೇಶಿಯಲ್ ರೆಕಗ್ನಿಷನ್ ಮೂಲಕ ಪಾವತಿಗೆ ಮಾಡಬೇಕಾಗುತ್ತದೆ.
ಇಂದಿನಿಂದಲೇ ಈ ರೀತಿಯ ವ್ಯವಸ್ಥೆ ಜಾರಿಯಾಗುತ್ತಿದೆ. ಬಯೋಮೆಟ್ರಿಕ್ ದೃಢೀಕರಣವು ಭಾರತ ಸರ್ಕಾರದ ವಿಶಿಷ್ಟ ಗುರುತಿನ ವ್ಯವಸ್ಥೆ - ಆಧಾರ್‌ನಿಂದ ನಡೆಸಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಇದರರ್ಥ ದೃಢೀಕರಣ ಪ್ರಕ್ರಿಯೆಯು ಆಧಾರ್ ಚೌಕಟ್ಟಿನಡಿಯಲ್ಲಿ ಸಂಗ್ರಹವಾಗಿರುವ ಬಯೋಮೆಟ್ರಿಕ್ ಡೇಟಾವನ್ನು - ನಿರ್ದಿಷ್ಟವಾಗಿ ಫೇಶಿಯಲ್ ಹಾಗೂ ಬಯೋಮೆಟ್ರಿಕ್ ಅಥವಾ ಬೆರಳಚ್ಚುಗಳನ್ನು ಬಳಸಿಕೊಳ್ಳುತ್ತದೆ ಎಂದು ವರದಿಯಾಗಿದೆ.
ಈ ವಿನೂತನ ಪ್ರಕಾರದ ಯುಪಿಐ ಪಾವತಿ ವಿಧಾನದಿಂದ ವಿಶ್ವದ ಪ್ರಮುಖ ಪಾವತಿ ವಿಧಾನಗಳಲ್ಲಿ ಸುರಕ್ಷತಾ ಮಾನದಂಡಗಳ ಸಾಲಿನಲ್ಲಿ ಭಾರತ ತನ್ನ ಬದ್ಧತೆಯನ್ನು ತೋರಿಸಲಿದೆ. ಹಾಗೆ ಇದು ಪಿನ್ ನಮೂದಿಸಿ ಮಾಡುವಂತಹ ಪಾವತಿಗಿಂತಲೂ ಬಹಳ ಸುರಕ್ಷಿತ ಹಾಗೆ ಸುಲಭ ಎಂಬುದಾಗಿಯೂ ವಿವರಿಸಲಾಗಿದೆ.
ಈ ಬಯೋಮೆಟ್ರಿಕ್ ಪರಿಶೀಲನೆಯ ಪರಿಚಯವು ಪ್ರಸ್ತುತ ಪಿನ್ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿ ಕಂಡುಬರುತ್ತದೆ. ಇನ್ನು ಈ ಪಿನ್ ಬಳಕೆಯ ಪಾವತಿಗಳಲ್ಲಿ ಪ್ರಮುಖವಾಗಿ ವಂಚನೆ ಪ್ರಕರಣಗಳ ಕಡಿಮೆ ಮಾಡಲು ಈ ವಿನೂತನ ವ್ಯವಸ್ಥೆ ನೆರವಾಗಲಿದೆ ಎಂದು ವಿವರಿಸಲಾಗಿದೆ.
ಹಲವರು ತಮ್ಮ ಪಿನ್ ಮರೆಯುವುದು, ತಪ್ಪಾಗಿ ನಮೂದಿಸುವುದು, ಬೇರೆಯವರಿಗೆ ಪಿನ್ ಸಂಖ್ಯೆಗಳು ತಿಳಿದು ವಂಚನೆ ಮಾಡುವುದು ಸೇರಿ ಹಲವು ರೀತಿಯ ಪಿನ್ ಆಧಾರಿತ ವಂಚನೆಗಳ ಸಂಖ್ಯೆ ಕಡಿಮೆ ಮಾಡುವ ಗುರಿ ಸಹ ಹೊಂದಲಾಗಿದೆ. ಫೇಶಿಯಲ್ ರೆಕಗ್ನಿಷನ್ ಹಾಗೆ ಫಿಂಗರ್‌ಪ್ರಿಂಟ್ ವ್ಯವಸ್ಥೆಯನ್ನು ಹೊಂದಿಲ್ಲದ ಮೊಬೈಲ್ ಫೋನ್‌ಗಳು ಹಳೆಯ ಮಾದರಿಯನ್ನೇ ಬಳಸಲಿವೆ. ಇದು ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿನ ಪಾವತಿ ವಿಧಾನಕ್ಕೆ ಸಹಕಾರಿಯಾಗಲಿದೆ. ಅನಕ್ಷರಸ್ಥರು ಕೂಡ ಪಿನ್ ಸಂಖ್ಯೆಗಳ ನೆನಪಿನಲ್ಲಿಟ್ಟುಕೊಳ್ಳವುದು ಕಷ್ಟಪಡುತ್ತಾರೆ ಹಾಗೆ ಬಳಕೆಯೂ ಕಷ್ಟವಾಗಬಹುದು, ಆದ್ರೆ ಈಗ ಅವರು ತಮ್ಮ ಕೈ ಬೆರಳ ಅಚ್ಚಿನ ಸಹಾಯದಿಂದ ಈ ಪಾವತಿಯನ್ನು ಬಳಸಬಹುದು.



Click it and Unblock the Notifications