Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬ್ಯಾಂಕಿನಲ್ಲಿ ₹7 ಸಾವಿರ ಕೋಟಿ ವಹಿವಾಟು ಇರುವ ಶ್ರೀಮಂತ ಗ್ರಾಮ: ಯಾವ ಜಿಲ್ಲೆಯಲ್ಲಿದೆ ಗೊತ್ತಾ?
ಹಳ್ಳಿಗಳೆಂದರೆ ಎಲ್ಲರ ತಲೆಯಲ್ಲು ನೆನಪಾಗೋದು ಚಿಕ್ಕ ಪುಟ್ಟ ಮನೆಗಳು, ಮಣ್ಣಿನ ದಾರಿ, ಒಂದು ಶಾಲೆ, ಒಂದೆರಡು ಅಂಗಡಿಗಳು ಹೀಗೆ ಸಾಮಾನ್ಯರ ಬದುಕು ನೋಡುವುದು ಹಳ್ಳಿಗಳಲ್ಲಿ ಅನ್ನೋದು ಎಲ್ಲರ ಆಲೋಚನೆಯಾಗಿರಲಿದೆ. ಭಾರತದ ಬಹುತೇಕ ಹಳ್ಳಿಗಳ ಕಲ್ಪನೆ ಇರೋದು ಕೂಡ ಇದೇ ರೀತಿಯಲ್ಲಿ. ಹಾಗೆ ಎಲ್ಲಾ ಹಳ್ಳಿಗಳು ನಮ್ಮ ಕಲ್ಪನೆಯಂತೆ ಇರುವುದಿಲ್ಲ.
ಕೆಲವು ಹಳ್ಳಿಗಳು ಬಹಳ ಮುಂದುವರೆದಿರುತ್ತವೆ. ಅದ್ರಲ್ಲೂ ನಗರಗಳನ್ನೇ ಮೀರಿಸುವಂತೆ ಬೆಳೆದಿರುವುದು ಕೂಡ ನಾವು ನೋಡಬಹುದು. ಇನ್ನು ಹಳ್ಳಿಗಳಲ್ಲಿ ಬದುಕುವವರು ನಿತ್ಯದ ಬದುಕು ಕಟ್ಟಿಕೊಳ್ಳಲು ಸಣ್ಣ ಪುಟ್ಟ ಕೆಲಸಗಳ ಮಾಡುವುದು ದಿನಕ್ಕೆ ಇಂತಿಷ್ಟು ಎನ್ನುವಂತೆ ಸಂಬಳ ಪಡೆಯುವುದು ನೋಡಬಹುದು.

ಆದ್ರೆ ಏಷ್ಯಾದಲ್ಲಿರುವ ಒಂದು ಹಳ್ಳಿ ಕಥೆ ಇದೆಕೆಲ್ಲಾ ತದ್ವಿರುದ್ದ ಎನ್ನಬಹುದು. ಏಕೆಂದರೆ ಈ ಹಳ್ಳಿಯಲ್ಲಿನ ಜನಜೀವನ ನೀವು ನೋಡಿದರೆ ನಿಜಕ್ಕೂ ಅಚ್ಚರಿಗೊಳಗಾಗುತ್ತೀರಿ. ಏಷ್ಯಾ ಎಂದ ಕೂಡಲೇ ಮುಂದುವರಿದ ದೇಶ ಚೀನಾದಲ್ಲೋ ಅಥವಾ ಜಪಾನ್‌ನಲ್ಲೋ ಇರುವ ಹಳ್ಳಯಲ್ಲ ಬದಲಿಗೆ ಈ ಹಳ್ಳಿ ಇರೋದು ನಮ್ಮ ಭಾರತದಲ್ಲಿ.
ಈ ಹಳ್ಳಿಯಲ್ಲಿನ ಜನರ ಜೀವನ ಅದೆಷ್ಟೋ ನಗರವಾಸಿಗಳಿಗಿಂತ ದುಪ್ಪಟ್ಟು ಚೆನ್ನಾಗಿದೆ. ಹಾಗೆ ಅತೀ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆ ಕೂಡ ಪಡೆದುಕೊಂಡಿದೆ. ಈ ಹಳ್ಳಿ ಇರೋದು ಗುಜರಾತ್‌ನಲ್ಲಿ. ಇಲ್ಲಿನ ಭುಜ್ ಜಿಲ್ಲೆಯಲ್ಲಿರುವ ಮಾದಪುರ್ ಎಂಬ ಹಳ್ಳಿ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಮಾದಪುರ್ ಎಂದು ಕರೆಯಲ್ಪಡುವ ಈ ಗ್ರಾಮವನ್ನು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಯಲಾಗಿದೆ. ಸುಮಾರು 32,000 ಜನಸಂಖ್ಯೆ ಹೊಂದಿರುವ ಮಾದಪುರ್ , ಹಲವು ವಿಚಾರಗಳಿಂದ ಗಮನಸೆಳೆಯುತ್ತದೆ. ಅಚ್ಚರಿಯ ವಿಚಾರ ಏನೆಂದರೆ ಈ ಗ್ರಾಮದ ವಿವಿಧ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ಠೇವಣಿ ಇಡಲಾಗಿದೆ.
ಈ ಒಂದೇ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿವೆ. ಮತ್ತಷ್ಟು ಶಾಖೆಗಳು ತೆರೆಯುವ ಸಾಧ್ಯತೆ ಕೂಡ ಇದೆ. ಇಲ್ಲಿನ ಎಲ್ಲಾ ಮನೆಯಲ್ಲೂ ಬ್ಯಾಂಕ್ ಖಾತೆಗಳಿವೆ, ಹಾಗೆ ಎಲ್ಲರೂ ಇಲ್ಲಿ ಉಳಿತಾಯ ಮಾಡಿರುವುದು ನೋಡಬಹುದು.
7 ಸಾವಿರ ಕೋಟಿ ಹಣ ಬ್ಯಾಂಕ್‌ನಲ್ಲಿರಲು ಕಾರಣವೇನು?
7 ಸಾವಿರ ಕೋಟಿ ಅಂದರೆ ಅದು ಕಡಿಮೆ ಮೊತ್ತವಲ್ಲ. ಭಾರತದ ಕೆಲ ಜಿಲ್ಲೆಯಲ್ಲೂ ಇಷ್ಟೊಂದು ಬ್ಯಾಂಕಿಂಗ್ ವಹಿವಾಟು ನಡೆಯದೆ ಇರಬಹುದು. ಆದ್ರೆ ಗುಜರಾತ್‌ನ ಈ ಗ್ರಾಮದಲ್ಲಿ ಇಷ್ಟು ಪ್ರಮಾಣದಲ್ಲಿ ಹಣವನ್ನು ಬ್ಯಾಂಕ್‌ನಲ್ಲಿ ಇಡಲಾಗಿದೆ. ಇದಕ್ಕೆ ಕಾರಣವಾಗಿರುವುದು ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು.
ಹೌದು ಈ ಗ್ರಾಮದಲ್ಲಿ ವಾಸವಿರುವ ಶೇ.65ರಷ್ಟು ಜನಸಂಖ್ಯೆ ಅನಿವಾಸಿ ಭಾರತೀಯರಾಗಿದ್ದಾರೆ. ಅವರಲ್ಲಿ ಬಹುತೇಕ ಕುಟುಂಬಗಳು ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಹಾಗೆ ವಿದೇಶದಿಂದಲೂ ಅವರ ಖಾತೆಗಳಿಗೆ ಹಣ ಸಂದಾಯವಾಗುತ್ತದೆ. ಹೀಗಾಗಿ ಇಲ್ಲಿ ಠೇವಣಿ ಹಣ ದುಪ್ಟಟ್ಟಾಗುತ್ತಲೇ ಇದೆ. ಇಲ್ಲನ 20 ಸಾವಿರ ಮನೆಗಳ ಪೈಕಿ 1,200 ಕುಟುಂಬಗಳು ವಿದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿಂದ ಅರಬ್, ಅಮೆರಿಕ, ಕೆನಡಾ, ಆಪ್ರಿಕನ್ ದೇಶಗಳಲ್ಲಿ ನೆಲೆಸಿರುವವರು ಹೆಚ್ಚಿದ್ದಾರೆ. ಅವರ ಎಲ್ಲಾ ವಹಿವಾಟು ಈ ಬ್ಯಾಂಕ್‌ಗಳ ಮೂಲಕ ನಡೆಯುತ್ತವೆ.
ವಿದೇಶಿ ನೆಲದಲ್ಲಿ ಉತ್ತಮ ಸಂಪಾದನೆಯು ಇಷ್ಟು ದೊಡ್ಡ ಮೊತ್ತವನ್ನು ಬ್ಯಾಂಕ್‌ನಲ್ಲಿ ಇಡಲು ಕಾರಣವಾಗಿದೆ. ಹಾಗೆ ಇಡೀ ಗ್ರಾಮವು ಅತ್ಯುನ್ನತ ಸೌಲಭ್ಯಗಳ ಹೊಂದಿದೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಬ್ಯಾಂಕ್ ಹೀಗೆ ಪ್ರತಿಯೊಂದು ವಿಚಾರವಾಗಿಯೂ ಈ ಗ್ರಾಮ ಮಾದರಿ ಎಂದು ಹೆಗ್ಗಳಿಕೆ ಪಡೆದುಕೊಂಡಿದೆ. ಹೀಗಾಗಿ ಇಲ್ಲಿ ನೆಲೆಸಿರುವ ಜನರು ಕೂಡ ಉತ್ತಮ ಜೀವನ ಶೈಲಿ ಹೊಂದಿದ್ದಾರೆ.



Click it and Unblock the Notifications
