Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಂಚನೆ ಕೇಸ್‌ನಲ್ಲಿ ಗಾಂಧಿ ಮರಿಮೊಮ್ಮಗಳಿಗೆ ಜೈಲು..! ಯಾರು ಈ ಆಶಿಶ್ ಲತಾ ಗೊತ್ತಾ?
ಮಹಾತ್ಮ ಗಾಂಧಿಯನ್ನು ಇಡೀ ವಿಶ್ವವೇ ಮಹಾತ್ಮ ಎಂದು ಕರೆದಿದೆ. ಅವರ ಆದರ್ಶಗಳನ್ನು ಇಂದಿಗೂ ಪಾಲಿಸುವುದು ನೋಡಬಹುದು. ಗಾಂಧಿ ತತ್ವಗಳು ಎಂದೆಂದಿಗೂ ಸರ್ವಕಾಲಿಕ ಸತ್ಯವಾಗಿವೆ. ಹಾಗೆ ಗಾಂಧೀಜಿ ತಮ್ಮ ಜೀವನದ ಉದ್ದಕ್ಕೂ ಸತ್ಯ, ಧರ್ಮ ಹಾಗೂ ಅಹಿಂಸೆಯನ್ನ ಪಾಲಿಸಿಕೊಂಡು ಅದನ್ನೇ ಇಡೀ ಜಗತ್ತಿಗೆ ಹಂಚಿದವರು. ಹೀಗಾಗಿಯೇ ಅವರು ಮಹಾತ್ಮ ಎನಿಸಿಕೊಂಡರು.
ಮಹಾತ್ಮ ಗಾಂಧಿಯವರನ್ನು ಇಂದಿಗೂ ಆದರ್ಶವಾಗಿ ಒಪ್ಪಿಕೊಂಡಿರುವ ಹಲವು ದೇಶಗಳಿವೆ. ಅವರ ಅಹಿಂಸಾತ್ಮಕ ಹೋರಾಟ ಇಂದಿಗೂ ದೊಡ್ಡ ಅಸ್ತ್ರವಾಗಿ ಬಳಸಲ್ಪಡುತ್ತಿದೆ.

ಆದ್ರೆ ಗಾಂಧಿ ಮರಿಮೊಮ್ಮಗಳು ಈಗ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವುದು ಎಲ್ಲರಿಗೂ ಆಘಾತ ತಂದಿದೆ. ಸತ್ಯ ಧರ್ಮದ ದಾರಿಯಲ್ಲಿ ನಡೆದಿದ್ದ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗಳು ಈಗ ವಂಚನೆ ಕೇಸ್‌ನಲ್ಲಿ ಜೈಲು ವಾಸ ಅನುಭಸುವಂತಾಗಿರುವುದು ಆಘಾತ ತಂದಿದೆ. 56 ವರ್ಷದ ಆಶಿಶ್ ಲತಾ ರಾಮ್‌ಗೋಬಿನ್ ಎಂಬಾಕೆಗೆ ದಕ್ಷಿಣಾ ಆಫ್ರಿಕಾದ ಡರ್ಬನ್ ವಿಶೇಷ ವಾಣಿಜ್ಯ ಅಪರಾಧ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿತ್ತು. ಈಗ ಅವರ ಶಿಕ್ಷೆ ರದ್ದು ಕೋರಿದ್ದ ಅರ್ಜಿ ಕೂಡ ವಜಾಗೊಂಡಿದೆ.
ಆಶಿಶ್ ಲತಾ ಅವರು 3.22 ಕೋಟಿ ವಂಚನೆ ಕೇಸ್‌ನಲ್ಲಿ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣಾ ಆಫ್ರಿಕಾದಲ್ಲೇ ನೆಲೆಸಿರುವ ಅವರು ಹಲವು ವರ್ಷಗಳಿಂದ ಈ ವಂಚನೆ ಕೇಸ್ ಎದುರಿಸುತ್ತಿದ್ದರು. ಈಗ ಈ ಪ್ರಕರಣದಲ್ಲಿ ತೀರ್ಪು ನೀಡಲಾಗಿತ್ತು. ಆದ್ರೆ 7 ವರ್ಷ ಶಿಕ್ಷೆಯ ಕುರಿತು ಮೇಲ್ಮನವಿ ಸಲ್ಲಿಸಲಾಗಿತ್ತು.
ಯಾರು ಈ ಆಶಿಶ್ ಲತಾ ರಾಮ್ ಗೋಬಿನ್?
ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗಳಾಗಿರುವ ಆಶಿಶ್ ಲತಾ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಲತಾ ರಾಮ್ ಗೋಬಿನ್ 2015 ರಲ್ಲಿ ಎಸ್‌ಆರ್ ಮಹಾರಾಜ್ ಎಂಬ ಉದ್ಯಮಿಯನ್ನು ವಂಚಿಸಿದ ಆರೋಪ ಹೊತ್ತಿದ್ದರು. ರಿಕಾ ಅಲೈಯನ್ಸ್ ಫುಟ್‌ವೇರ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯ ನಿರ್ದೇಶಕರಾಗಿರುವ ಮಹಾರಾಜ್ ಹಾಗೂ ಆಶಿಶ್ ಲತಾ ನಡುವೆ ವ್ಯಹವಾರದ ವಿಚಾರದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಫುಟ್‌ವೇರ್ ತಯಾರಿಕೆಯ ಸಲುವಾಗಿ ಭಾರತದಿಂದ ಲೆನಿನ್ ಆಮದು ಮಾಡಿಕೊಳ್ಳಲು ಆಶಿಶ್ ಹಣ ಪಡೆದಿದ್ದರು ಎಂದು ಹೇಳಾಲಾಗಿದೆ. ಆದರೆ ಸುಂಕದ ವಿಚಾರದಲ್ಲಿ ಆಶಿಶ್ ಹಾಗೂ ಮಹಾರಾಜ್ ನಡುವೆ ವೈಮನಸ್ಸು ಹಾಗೂ ದಾಖಲೆಗಳಲ್ಲಿ ನಕಲಿ ಸಹಿ ಹಾಕಿರುವ ಅನುಮಾನದಲ್ಲಿ ಮಹಾರಾಜ್ ದೂರು ನೀಡಿದ್ದರು, ಈ ಸಂಬಂಧ ಕೋರ್ಟ್ ವಿಚಾರಣೆ ನಡೆಸಿ 3.22 ಕೋಟಿ ರೂಪಾಯಿ ಪ್ರಕರಣದಲ್ಲಿ ನಕಲಿ ಸಹಿ ಹಾಕಲಾಗಿದೆ ಎಂದು ತೀರ್ಪು ನೀಡಿದೆ.
ಆಶಿಶ್ ಲತಾ ನಕಲಿ ಇನ್‌ವಾಯ್ಸ್‌ಗಳು ಮತ್ತು ಇಮೇಲ್‌ಗಳನ್ನು ಬಳಸಿಕೊಂಡು ಮಹಾರಾಜ್ ಅವರನ್ನು ವಂಚಿಸಿದ್ದಾರೆ ಎಂದು ದೃಢಪಡಿಸಿದರು. ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಲ್ಲದೆ, ಶಿಕ್ಷೆ ವಿಧಿಸಿದೆ. ಹಾಗೆ ಶಿಕ್ಷೆ ಸಂಬಂಧಿತ ಮೇಲ್ಮನವಿಯನ್ನು ಕೂಡ ನಿರಾಕರಿಸಿದೆ. ಇನ್ನು ಆಶಿಶ್ ಲತಾ ಅವರ ತಾಯಿ ಎಲಾ ಗಾಂಧಿ ದಕ್ಷಿಣಾ ಆಫ್ರಿಕಾದಲ್ಲಿ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡವರು. ಅವರಿಗೆ ದಕ್ಷಿಣಾ ಆಫ್ರಿಕಾ ಸರ್ಕಾರ ಹಾಗೂ ಭಾರತ ಸರ್ಕಾರ ಕೂಡ ಹಲವು ಸಾಮಾಜಿಕ ಕಳಕಳಿಗೆ ನೀಡುವ ಪಶಸ್ತಿ ಗೌರವ ನೀಡಿ ಪುರಸ್ಕರಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಹೆಸರು ಮಾಡಿದ್ದರು.
ಸಾಮಾಜಿಕ ಕಳಕಳಿ, ಶಾಂತಿ, ಸತ್ಯದಂತಹ ವಿಚಾರಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಕುಟುಂಬದ ಸದಸ್ಯರೊಬ್ಬರು ವಂಚನೆ ಪ್ರಕರಣಗಳಲ್ಲಿ ಜೈಲು ಸೇರಿರುವುದು ಆಘಾತ ಮೂಡಿಸಿದೆ. ಲತಾ ರಾಮ್‌ಗೋಬಿನ್ ಅವರು ಎನ್‌ಜಿಒ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಅಹಿಂಸೆಯಲ್ಲಿ ಭಾಗವಹಿಸುವ ಅಭಿವೃದ್ಧಿ ಉಪಕ್ರಮದ ಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದರು. ಹಾಗೆ ಅವರು ಮಾನವ ಹಕ್ಕುಗಳ ಕಾರ್ಯಕರ್ತೆಯೂ ಆಗಿದ್ದರೂ.



Click it and Unblock the Notifications
