Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಈ ವರ್ಷ ಅಷ್ಟಮಿ-ನವಮಿ ತಿಥಿ ಒಂದೇ ದಿನ ಬಂದಿದೆ: ಯಾವ ದಿನ ನವರಾತ್ರಿ ಉಪವಾಸ ಮುರಿಯಬಹುದು
ನವರಾತ್ರಿಯ ಒಂಭತ್ತು ದಿನಗಳು ತುಂಬಾ ವಿಶೇಷವಾದದ್ದೇ, ಅದರಲ್ಲಿಯೂ ನವರಾತ್ರಿ 8ನೇ ಅಂದರಿ ಅಷ್ಟಮಿ, ನವಮಿಯೆಂದರೆ ಇನ್ನೂ ವಿಶೇಷ. ದುರ್ಗಾಷ್ಟಮಿಗೆ ಮಾಡುವ ಪೂಜೆ, ಹೋಮ, ಹವನಕ್ಕೆ ತುಂಬಾನೇ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ ಅಷ್ಟಮಿ, ನವಮಿ ದಿನದ ವಿಶೇಷವೇನು? ಈ ವರ್ಷ ಯಾವ ದಿನಗಳಲ್ಲಿ ಇದನ್ನು ಆಚರಿಸಲಾಗುವುದು, ಪೂಜಾ ಸಮಯವೇನು ಎಂಬ ಮಾಹಿತಿ ತಿಳಿಯೋಣ:

ಈ ವರ್ಷ ಅಷ್ಟಮಿ -ನವಮಿ ಒಂದೇ ದಿನ ಬಂದಿದೆ:
ಅಷ್ಟಮಿ ತಿಥಿ ಅಕ್ಟೋಬರ್ 10 ಮಧ್ಯಾಹ್ನ 12:30ರಿಂದ ಶುರುವಾಗುವುದು
ಅಕ್ಟೋಬರ್ 11 ಮಧ್ಯಾಹ್ನ 12:06ಕ್ಕೆ ಅಷ್ಟಮಿ ತಿಥಿ ಮುಕ್ತಾಯವಾಗಲಿದೆ.
ದುರ್ಗಾಷ್ಟಮಿ ದಿನದ ಮಹತ್ವವೇನು?
ಅಷ್ಟಮಿಯಂದು ನವ ಶಕ್ತಿಗಳನ್ನು ಆವಾಹನೆ ಮಾಡಿ ಪೂಜಿಸಲಾಗುವುದು.
ಕೆಲವು ಕಡೆ ಕುಮಾರಿ ಪೂಜೆ ಮಾಡಲಾಗುವುದು
ಅಷ್ಟಮಿ ದಿನ ದುರ್ಗೆಯ ಒಂಭತ್ತು ರೂಪಗಳನ್ನು ಆರಾಧಿಸಲಗುವುದು. ಚಿಕ್ಕ ಹೆಣ್ಮಕ್ಕಳನ್ನೇ ದೇವಿ ಸ್ವರೂಪವಾಗಿ ಪರಿಗಣಿಸಿ ಅವರ ಕಾಲು ತೊಳೆದು, ಕಾಲಿಗೆ ನಮಸ್ಕರಿಸಿ ಸಿಹಿತಿಂಡಿ, ಉಡುಗೊರೆಗಳನ್ನು ನೀಡಲಾಗುವುದು. ಮಹಾಷ್ಟಮಿಯಂದು ಸೋಡೋಪಚಾರ ಪೂಜೆಯ ಬಳಿಕ ದುರ್ಗಾ ಪೂಜೆ ಶುರುವಾಗುವುದು.
ನವರಾತ್ರಿ ಉಪವಾಸವನ್ನು ಯಾವಾಗ ಮುರಿಯಲಾಗುವುದು
ಈ ವರ್ಷ ಅಷ್ಟಮಿ ತಿಥಿ, ನವಮಿ ತಿಥಿ ಒಂದೇ ದಿನ ಬಂದಿರುವುದರಿಂದ ಉಪವಾಸವನ್ನು ನವೆಂಬರ್ 11ರಂದು ಮುರಿಯಲಾಗುವುದು, ನವಮಿ ತಿಥಿ ಅಂತ್ಯದ ಬಳಿಕ ಪಾರಣ ಸಮಯದಲ್ಲಿ ಉಪವಾಸವನ್ನು ಮಾಡಬಹುದು.
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 11 ಮಧ್ಯಾಹ್ನ 12:06ಕ್ಕೆ ಶುರು
ನವಮಿ ತಿಥಿ ಮುಕ್ತಾಯ: ಅಕ್ಟೋಬರ್ 12, 10:58ರವರೆಗೆ ಇದೆ.
ದುರ್ಗಾಷ್ಟಮಿ ವ್ರತದ ನಿಯಮಗಳು
ದುರ್ಗಾಷ್ಟಮಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವಿಯನ್ನು ಅಲಂಕರಿಸಿ, ದೇವಿ ಫೋಟೊಗೆ ಹೂವಿಗಳನ್ನು ಹಾಕಿ , ಹೊಸ ವಸ್ತ್ರ ಅರ್ಪಿಸಿ
ದೇವರಿಗೆ ದೀಪ ಹಚ್ಚಿ ಧೂಪ,, ಊದು ಬತ್ತಿ ಹಚ್ಚಿ
ನೈವೇದ್ಯವನ್ನು ಅರ್ಪಿಸಿ
ದೇವಿಯ ಮಂತ್ರಗಳನ್ನು ಹೇಳುತ್ತಾ ಪೂಜೆಯನ್ನು ಮಾಡಿ, ನಂತರ ಮಂಗಳಾರತಿ ಮಾಡಬೇಕು.
ಈ ದಿನ ಕೆಲವರು ನೀರು ಸಹ ಮುಟ್ಟದೆ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ.
ನವರಾತ್ರಿ ಉಪವಾಸ
ನವರಾತ್ರಿಯಲ್ಲಿ ಉಪವಾಸ ಮಾಡುವವರು ವ್ರತ ಅಹಾರಗಳನ್ನು ಮಾತ್ರ ಸೇವಿಸಸುತ್ತಾರೆ, ಅಲ್ಪ ಆಹಾರ ಸೇವನೆ ಮಾಡುತ್ತಾರೆ.
ಕಾಲುಗಳಿಗೆ ಚಪ್ಪಲಿ ಧರಿಸಲ್ಲ
ನೆಲದ ಅಥವಾ ಬರಿ ಚಾಪೆಯಲ್ಲಿ ಮಲಗುತ್ತಾರೆ.
ಯಾರಿಗೆ ಒಂಭತ್ತು ದಿನ ಉಪವಾಸ ಇರಲು ಸಾಧ್ಯವಿಲ್ಲವೋ ಅವರು ಮೊದ ಹಾಗೂ ಅಷ್ಟಮಿಯ ದಿನ ಉಪವಾಸ ಮಾಡುತ್ತಾರೆ.
ಈ ಬಾರಿ ಅಷ್ಟಮಿ ಬದಲಿಗೆ ನವಮಿಯಂದು ಉಪವಾಸ ಮಾಡಲಾಗುವುದು
ಒಂದು ತೊಟ್ಟು ನೀರು ಸೇವಿಸದೆ ಉಪವಾಸ ಮಾಡುವವರು ನವಮಿಯಂದು ಉಪವಾಸ ಮಾಡುತ್ತಾರೆ, ದಶಮಿಯಂದು ಅಂದರೆ ನವಮಿ ತಿಥಿ ಅಂತ್ಯವಾದ ಬಳಿಕ ಆಹಾರ ಸೇವನೆ ಮಾಡುತ್ತಾರೆ.
ದುರ್ಗಾಷ್ಟಮಿಯಂದು ಈ ಮಂತ್ರ ಪಠಣೆ ಮಾಡಿ
ಶೈಲ ಪುತ್ರಿ
ಹ್ರೀಂ ಶಿವಾಯೈ ನಮಃ
ಬ್ರಹ್ಮಚಾರಿಣಿ ಮಂತ್ರ
ಹ್ರೀಂ ಶ್ರೀ ಅಂಬಿಕಾಯೈ ನಮಃ
ಚಂದ್ರಘಂಟಾ
ಏಂ ಶ್ರೀ ಶಕ್ತಾಯೈ ನಮಃ
ಕೂಷ್ಮಾಂಡಾ ದೇವಿಯನ್ನು ಒಲಿಸಿಕೊಳ್ಳಲು
ಏಂ ಹ್ರೀ ದೇವ್ಯೈ ನಮಃ
ಸ್ಕಂದಮಾತಾ
ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ
ಕಾತ್ಯಾಯನಿ
ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ
ಕಾಳರಾತ್ರಿ
ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ
ಮಹಾಗೌರಿ
ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ
ಸಿದ್ಧಿದಾತ್ರಿ
ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ



Click it and Unblock the Notifications
