Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಆಷಾಢ ಶುಕ್ರವಾರದಲ್ಲಿ ಚಾಮುಂಡೇಶ್ವರಿ ಪೂಜೆ ಹಾಗೂ ಲಕ್ಷ್ಮಿ ಪೂಜೆಯ ಮಹತ್ವವೇನು?
ಆಷಾಢ ಮಾಸ ಶುರುವಾಗಿದೆ, ಜುಲೈ 7ರಿಂದ ಶುರುವಾದ ಆಷಾಢ ಮಾಸ ಆಗಸ್ಟ್ 4ಕ್ಕೆ ಮುಕ್ತಾಯವಾಗಲಿದೆ. ಆಷಾಢ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಈ ಮಾಸದಲ್ಲಿ ಹಲವು ಧಾರ್ಮಿಕ ಕಾರ್ಯಗಳನ್ನು ಮಾಡಲಾಗುವುದು. ಪಿತೃ ತರ್ಪಣ, ವ್ರತಗಳಿಗೆ ತುಂಬಾನೇ ಪ್ರಾಮುಖ್ಯತೆ ಇದೆ, ಅದರಲ್ಲಿಯೂ ಆಷಾಢ ಶುಕ್ರವಾರವೆಂದರೆ ತುಂಬಾನೇ ವಿಶೇಷವಾಗಿದೆ:

ಆಷಾಢ ಶುಕ್ರವಾರ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ತಾಯಿ ಚಾಮುಂಡೇಶ್ವರಿ ತನ್ನ ಮಕ್ಕಳನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಆಕೆಯನ್ನು ನಂಬಿದ ಭಕ್ತರ ಬಲವಾದ ನಂಬಿಕೆ. ಪ್ರತಿ ಆಷಾಢ ಶುಕ್ರವಾರ ತಾಯಿ ಚಾಮುಂಡೇಶ್ವರಿ ಭಕ್ತ ಸಾಗರವೇ ಹರಿದು ಬರುತ್ತದೆ.
ಈಗಾಗಲೇ ಸಜ್ಜುಗೊಂಡಿದೆ ಚಾಮುಂಡಿ ಬೆಟ್ಟ
ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರದ ಪೂಜೆಗೆ ಯಾವುದೇ ವಿಶೇಷ ಪಾಸ್ ಇಲ್ಲ, ಎಲ್ಲರೂ ಸಾಮಾನ್ಯ ಸರತಿ ಸಾಲಿನಲ್ಲಿ ಹೋಗಿ ದೇವಿಯ ದರ್ಶನ ಪಡೆಯಬೇಕು, ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಅನುಮತಿ ಇರಲ್ಲ, ಉಚಿತ ಪಾಸ್ ಮೂಲಕವೇ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು. ಬೆಳಗ್ಗೆ 5ರಿಂದ ರಾತ್ರಿ 8ರವೆಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿ ದೇವಿಯ ದರ್ಶನ ಪಡೆಯಬಹುದಾಗಿದೆ.
ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೂ ಶ್ರೇಷ್ಠ
ಆಷಾಢ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡುವುದರಿಂದ ಧನ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುವುದು.
ಆಷಾಢದಲ್ಲಿ ಲಕ್ಷ್ಮಿ ಪೂಜೆಯನ್ನು ಆಷಾಢ ಶುಕ್ಲ ದಶಮಿಯಂದು ಲಕ್ಷ್ಮಿ ಪೂಜೆ ಪ್ರಾರಂಭಿಸಿ ಶ್ರಾವಣ ಮಾಸದ ಶುಕ್ಲ ದಶಮಿವರೆಗೆ ಲಕ್ಷ್ಮಿ ಪೂಜೆಯ ವ್ರತ ಕೈಗೊಳ್ಳುತ್ತಾರೆ.
ಈ ದಿನ ಸಾತ್ವಿಕ ಆಹಾರ ಮಾತ್ರ ತೆಗೆದುಕೊಳ್ಳಬೇಕು. ಶುಕ್ರವಾರದಂದು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಲಕ್ಷ್ಮಿ ಸಹಸ್ರನಾಮ ಪಠಿಸುವುದರಿಂದ ಒಳಿತಾಗುವುದು.
ಈ ದಿನ ಈ ಮಂತ್ರ ಪಠಣೆ ಮಾಡಿ
ಲಕ್ಷ್ಮೀ ಬೀಜ ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ
ಲಕ್ಷ್ಮೀರಾಗಚ್ಛಾಗಚ್ಚ
ಮಮ ಮಂದಿರೇ ತಿಷ್ಠ ತಿಷ್ಠ ಸ್ವಾಹಾ||
ಈ ವರ್ಷ ಆಷಾಢ ಶುಕ್ರವಾರದ ದಿನಾಂಕಗಳು
ಜುಲೈ 12
ಜುಲೈ 19
ಜುಲೈ 26
ಆಗಸ್ಟ್ 2



Click it and Unblock the Notifications
