Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸ್ವಪ್ನಶಾಸ್ತ್ರ ಪ್ರಕಾರ ಈ 7ಕನಸು ಬಿದ್ದರೆ ಯಾರ ಬಳಿ ಹೇಳಬೇಡಿ, ಅದರ ಫಲ ಹೋಗುತ್ತೆ
ನಾನಾ ರೀತಿಯ ಕನಸು ಬೀಳುತ್ತದೆ, ಕೆಲವೊಮ್ಮೆ ಎಚ್ಚರವಾದಾಗ ಏನು ಕನಸು ಬಿತ್ತು ಎಂಬುವುದೇ ನೆನಪಿಗೆ ಬರುವುದಿಲ್ಲ, ಆದರೆ ಕೆಲವೊಂದು ಕನಸು ತುಂಬಾನೇ ಚೆನ್ನಾಗಿ ನೆನಪಿರುತ್ತದೆ, ಅದನ್ನು ನನಗೆ ಹೀಗೆ ಕನಸು ಬಿದ್ದಿತ್ತು ಎಂದು ಯಾರ ಬಳಿಯಾದರೂ ಹಂಚಿಕೊಳ್ಳುತ್ತೇವೆ ಅಲ್ವಾ? ಆದರೆ ಈ ಕನಸು ಬಿದ್ದರೆ ಮಾತ್ರ ಯಾರ ಬಳಿಯೂ ಹಂಚಿಕೊಳ್ಳಬಾರದು ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ:

ನಾವು ಅಥವಾ ನಮಗೆ ಬೇಕಾದವರು ಸತ್ತಂತೆ ಕನಸು ಬಿದ್ದರೆ
ಜನನದ ಕನಸು ಕಾಣಬಾರದು ಆದರೆ ಸಾವು ಕನಸು ಬಿದ್ದರೆ ಶುಭ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ನಾವು ಸತ್ತು ಹೋದಂತೆ ಅಥವಾ ನಮಗೆ ತುಂಬಾ ಬೇಕಾದವರು ತೀರಿ ಹೋದರೆ ಜನನದ ಸುದ್ದಿ ಕೇಳುತ್ತದೆ ಎಂದು ಹೇಳಲಾಗುವುದು. ಆದರೆ ಈ ರೀತಿಯ ಕನಸು ಬಿದ್ದರೆ ನಾವು ಯಾರ ಬಳಿಯೂ ಹೇಳಬಾರದಂತೆ, ಹೇಳಿದರೆ ಆ ಕನಸಿನ ಶುಭ ಫಲ ಇಲ್ಲವಾಗುತ್ತೆ ಎಂದು ಹೇಳಲಾಗುವುದು.
ಕನಸಿನಲ್ಲಿ ಪೋಷಕರನ್ನು ಕಂಡರೆ
ಕನಸಿನಲ್ಲಿ ಪೋಷಕರನ್ನು ಕಂಡರೆ ಅದು ಶುಭದ ಸಂಕೇತ. ಅವರ ಜೊತೆ ನಾವು ಖುಷಿಯಿಂದ ಮಾತನಾಡುತ್ತಿರುವಂತೆ ಕನಸು ಕಂಡರೆ ಅದು ಶುಭದ ಸೂಚನೆ, ಅವರಿಗೆ ನೀರು ಕೊಡುವಂತೆ ಕಂಡರೆ ಇನ್ನೂ ಶುಭ, ಬದುಕಿನಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂಬುವುದರ ಸೂಚನೆಯಾಗಿದೆ. ತಂದೆ-ತಾಯಿ ಕನಸಿನಲ್ಲಿ ಬಂದರೆ ಪ್ರಗತಿಯಾಗಲಿದೆ ಎಂಬುವುದು ಸೂಚಿಸುತ್ತದೆ.
ದೇವರ ಕನಸು ಕಂಡರೆ
ದೇವರು ಕನಸಿನಲ್ಲಿ ಬಂದರೆ ಅದು ಶುಭ, ಆದರೆ ದೇವರ ಕನಸು ಬಿದ್ದರೆ ಯಾರ ಬಳಿಯೂ ಹೇಳಬೇಡಿ. ದೇವರು ಕನಸು ಬಿದ್ದರೆ ಅದು ಶುಭ ಸೂಚನೆಯಾಗಿದೆ, ನಮ್ಮ ಮನಸ್ಸಿನಲ್ಲಿ ಏನಾದರು ದುಃಖ, ನೋವಿದ್ದರೆ ಎಲ್ಲವೂ ದೂರಾಗಲಿದೆ ಎಂದು ಹೇಳಲಾಗುವುದು. ಆದರೆ ದೇವರು ಕನಸಿನಲ್ಲಿ ಬಿದ್ದರೆ ಅದನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ, ಅದು ಆ ಶುಭ ಫಲವನ್ನು ತಡೆಯುತ್ತದೆ.
ಹೂವಿನ ತೋಟ ಕನಸಿನಲ್ಲಿ ಬಿದ್ದರೆ
ಹೂವಿನ ತೋಟ ಕನಸಿನಲ್ಲಿ ಬಂದರೆ ಶುಭ ಎಂದು ಪರಿಗಣಿಸಲಾಗುವುದು. ಈ ರೀತಿಯ ಕನಸು ಸಂತೋಷ, ಸಮೃದ್ಧಿಯನ್ನು ತರುತ್ತದೆ ಎಂಬುವುದರ ಸೂಚನೆಯಾಗಿದೆ. ಹಾಗಾಗಿ ಹೂವಿನ ತೋಟ ಅಥವಾ ಹೂವುಗಳ ಕನಸು ಬಿದ್ದರೆ ಅದು ಶುಭ ಎಂದು ಪರಿಗಣಿಸಿ.
ಸಮುದ್ರದ ಕನಸು ಬಿದ್ದರೆ
ನೀವು ಏನೋ ಸಾಧನೆ ಮಾಡುವಿರಿ ಎಂಬುವುದನ್ನು ಸೂಚಿಸುತ್ತದೆ. ಈ ಕನಸು ನೀವು ದೊಡ್ಡ ವ್ಯಕ್ತಿಯಾಗುತ್ತೀರಿ ಎಂಬುವುದರ ಸೂಚನೆಯಾಗಿದೆ, ಹಾಗಾಗಿ ಇಂಥ ಕನಸು ಬಿದ್ದರೆ ಹೇಳಬೇಡಿ.
ಹೊಗೆಯಿಲ್ಲದ ಬೆಂಕಿಯ ಕನಸು ಬಿದ್ದರೆ
ನಿಮ್ಮ ಪಾಪ ಕರ್ಮಗಳು ದೂರಾಗಿದೆ, ಮೋಕ್ಷ ಸಿಗಲಿದೆ ಎಂಬುವುದನ್ನು ಸೂಚಿಸುತ್ತದೆ. ಆದರೆ ಹೊಗೆ ತುಂಬಿದ ಬೆಂಕಿ ಕಂಡರೆ ಅದು ಅಪಾಯದ ಸೂಚನೆಯೆಂದು ಹೇಳಲಾಗುವುದು.
ಚಿನ್ನದ ಕೊಡದಲ್ಲಿ ನೀರು
ನಿಮಗೆ ಚಿನ್ನ ಅಥವಾ ಚಿನ್ನದ ಕೊಡದಲ್ಲಿ ನೀರು ಕನಸಿನಲ್ಲಿ ಬಂದರೆ ಅದು ಶುಭದ ಸಂಕೇತವಾಗಿದೆ, ನಿಮ್ಮ ಸಂಪತ್ತು ವೃದ್ಧಿಸಲಿದೆ ಎಂಬುವುದನ್ನು ಸೂಚಿಸುತ್ತದೆ.



Click it and Unblock the Notifications
