Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ನೇಹಿತನ ಫೂಲ್ ಮಾಡಲು ಹೋಗಿ ಯುವಕ ಸಾವು..! ಏಪ್ರಿಲ್ ಫೂಲ್ಸ್ ದಿನ ಆಗಿದ್ದೇನು.?
ಏಪ್ರಿಲ್ 1ನೇ ತಾರೀಖು ಅಂದ್ರೆ ನೆನಪಾಗೋದು ಮೂರ್ಖರ ದಿನ. ಚಿಕ್ಕವರಿಂದ ಹಿಡಿದು ಹಿರಿಯರು ಸಹ ಏಪ್ರಿಲ್ ಫೂಲ್ ದಿನದಂದು ಯಾರನ್ನಾದರು ಮೂರ್ಖರನ್ನಾಗಿ ಮಾಡಿ ತಮಾಷೆ ಮಾಡುತ್ತಾರೆ. ನಾವು ಸಹ ಚಿಕ್ಕವರಿದ್ದಾಗ ಇಂತಹ ಕುಚೇಷ್ಟೇಗಳ ಮೂಲಕ ಏಪ್ರಿಲ್ ಫೂಲ್ ದಿನ ಆಚರಿಸಿದ್ದು ನೆನಪಿಸಿಕೊಳ್ಳಬಹುದು.
ಇನ್ನು ಏಪ್ರಿಲ್ ಫೋಲ್ಸ್ ದಿನದಂದು ಬೇರೆಯವರನ್ನು ಮೂರ್ಖರನ್ನಾಗಿ ಮಾಡುವಾಗ ತಮ್ಮ ಜೀವಕ್ಕೆ ಇಲ್ಲವೆ ಇತರರ ಜೀವಕ್ಕೆ ಹಾನಿ ಮಾಡುವಂತಹ ಘಟನೆಗಳು ಸಹ ನಡೆದಿರುವುದನ್ನು ನಾವು ಕಾಣಬಹುದು. ಹಲವು ಬಾರಿ ತಮಾಷೆ ಮಾಡುವ ಭರದಿಂದ ಇದು ಜೀವಕ್ಕೂ ಹಾನಿ ಮಾಡುವ ಅಪಾಯಕಾರಿ ವಿಷಯವಾಗಿ ತಿರುಗುವುದುಂಟು.

ನಾವು ಮೇಲೆ ಹೇಳಿದ್ದಂತೆ ಇನ್ನು ಏಪ್ರಿಲ್ ಫೂಲ್ ಮಾಡಿ ಅವರೇ ಜೀವಕ್ಕೆ ಅಪಾಯ ತಂದುಕೊಳ್ಳುವ ಸಂಭವವೂ ಇದೆ. ಕೆಲವೊಂದು ಬಾರಿ ಬೇರೆಯವರನ್ನು ಮೂರ್ಖರನ್ನಾಗಿ ಮಾಡುವ ಭರದಲ್ಲಿ ಅವರ ಜೀವಕ್ಕೂ ಹಾನಿಯಾಗುವ ಅಪಾಯವಿರುತ್ತದೆ. ಹೀಗೆ ಏಪ್ರಿಲ್ ಫೂಲ್ಸ್ ದಿನದಂದು ಇಲ್ಲೊಂದು ದುರಂತ ನಡೆದಿದೆ. ಸ್ನೇಹಿತನ ಎದುರು ಏಪ್ರಿಲ್ ಫೋಲ್ ಮಾಡಲು ಹೋಗಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಏಪ್ರಿಲ್ 1ನೇ ತಾರೀಖಿನಂದು ಸ್ನೇಹಿತನಿಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ನಾಟಕವಾಡಲು ಹೋಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಸ್ನೇಹಿತರಿಗೆ ವೀಡಿಯೊ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಂತೆ ನಟಿಸುವಾಗ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಏಪ್ರಿಲ್ ಫೂಲ್ಸ್ ದಿನದ ತಮಾಷೆ ದುರಂತವಾಗಿ ಮಾರ್ಪಟ್ಟಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಅಭಿಷೇಕ್ ರಘುವಂಶಿ ತನ್ನ ಮನೆಯಲ್ಲಿದ್ದ, ಆದರೆ ಆತ ತನ್ನ ಸ್ನೇಹಿತನನ್ನು ಹೆದರಿಸಬೇಕು, ಏಪ್ರಿಲ್ ಫೂಲ್ ಮಾಡಬೇಕು ಎಂದುಕೊಂಡಿದ್ದ. ಇದಕ್ಕಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಾಟಕವಾಡಲು ಮುಂದಾಗಿದ್ದ. ಇದಕ್ಕೆ ತಯಾರಿ ಮಾಡಲು ಆತ ಒಂದು ತೆಗೆದುಕೊಂಡು ಫ್ಯಾನ್‌ಗೆ ಕಟ್ಟಿದ್ದ ಬಳಿಕ ಕೆಳಗೆ ಸ್ಟೂಲ್ ಒಂದನ್ನು ಇಟ್ಟು ಅದರ ಮೇಲೆ ನಿಂತು ಸ್ನೇಹಿತನಿಗೆ ವಿಡಿಯೋ ಕರೆ ಮಾಡಿದ್ದ.
ಆತನ ಕರೆ ಸ್ವೀಕರಿಸಿದ ಸ್ನೇಹಿತನ ಎದುರು ಅಭಿಷೇಕ್ ನಾಟಕವಾಡಲು ಆರಂಭಿಸಿದ್ದ, ಅಳುತ್ತಾ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ. ಜೊತೆಗೆ ನೇಣು ಕುಣಿಕೆಯನ್ನು ಕುತ್ತಿಗೆಗೆ ಹಾಕಿ ಅಳತೊಡಗಿದ್ದ. ಇದನ್ನು ಕಂಡ ಸ್ನೇಹಿತ ಸತ್ಯವೆಂದು ತಿಳಿದು ಆತನಿಗೆ ಕೆಳಗಿಳಿಯುವಂತೆ ಸೂಚಿಸುತ್ತಿದ್ದ. ಆದರೆ ಆತನ ಅದೃಷ್ಟ ಕೈಕೊಟ್ಟು ನಿಂತಿದ್ದ ಸ್ಟೂಲ್ ಅಲುಗಾಡಿತ್ತು.
ಉರುಳಿದ ಸ್ಟೂಲ್ ಕಗ್ಗಂಟಾದ ಕುಣಿಕೆ
ಈ ವೇಳೆ ಸ್ಟೂಲ್ ಮೇಲೆ ನಿಂತಿದ್ದ ಅಭಿಷೇಕ್ ಆಯತಪ್ಪಿದ್ದಾನೆ. ಇದರಿಂದ ಸ್ಟೂಲ್ ಅಲುಗಾಡಿ ಕೆಳಗೆ ಬಿದ್ದಿದ್ದು, ಆತನ ಕುತ್ತಿಗೆಯಲ್ಲಿದ್ದ ಕುಣಿಗೆ ಬಿಗಿಯ ತೊಡಗಿದೆ. ಆತ ಅದರಿಂದ ತಪ್ಪಿಸಿಕೊಳ್ಳಲು ಮತ್ತಷ್ಟು ಒದ್ದಾಡಿದಾಗ ಕುತ್ತಿಗೆಗೆ ಸುತ್ತಿದ್ದ ಹಗ್ಗ ಬಿಗಿಯಾಗಿದೆ. ಈ ವೇಳೆ ಉಸಿರುಗಟ್ಟಿ ಆತ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ರೂಮಿನೊಳಗಿದ್ದ ಅಭಿಷೇಕ್ ಮೃತದೇಹವನ್ನು ಆತನ ಸಹೋದರ ಮೊದಲು ನೋಡಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಮೂರ್ಖರ ದಿನದ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಬೇರೆಯವರನ್ನು ಮೂರ್ಖರನ್ನಾಗಿ ಮಾಡುವ ಆತನ ಆಲೋಚನೆಯೇ ಆತನ ಜೀವ ಕಸಿದುಬಿಟ್ಟಿದೆ. ಕೆಲ ಆಚರಣೆಗಳನ್ನು ನಮ್ಮ ಜೀವಕ್ಕೆ ಅಥವಾ ಬೇರೆಯವರ ಜೀವಕ್ಕೆ ಹಾನಿಯಾಗುವಂತೆ ಆಚರಿಸುವ ಕ್ರಿಯೆ ನಿಲ್ಲಬೇಕಿದೆ. ಇದಕ್ಕೆಲ್ಲ ಪೋಷಕರು ಇಲ್ಲವೆ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ.



Click it and Unblock the Notifications