Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಳದಿ ಮಾರ್ಗದ ಮೆಟ್ರೋದಲ್ಲೂ ಅಪರ್ಣಾ ಧ್ವನಿ: ಕ್ಯಾನ್ಸರ್ ನಡುವೆ ಧ್ವನಿ ನೀಡಿದ್ದರು ನಿರೂಪಕಿ!
ನಟಿ, ನಿರೂಪಕಿ ಹಾಗೆ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಅಪರ್ಣಾ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಕಳೆದ ವರ್ಷ ಜುಲೈನಲ್ಲಿ ಅವರು ಕ್ಯಾನ್ಸರ್ ಕಾರಣದಿಂದಾಗಿ ಮೃತಪಟ್ಟಿದ್ದರು. ಹಾಗೆ ಅವರ ಅಕಾಲಿಕ ಮರಣದಿಂದ ಚಿತ್ರರಂಗ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಶಾಕ್ ಆಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇತ್ತು ಎಂದು ತಿಳಿದುಬಂದಿತ್ತು.
ಸರ್ಕಾರದ ಯಾವುದೇ ಕಾರ್ಯಕ್ರಮಗಳಿರಲಿ ಅವರ ಸುಲಲಿತ ಕನ್ನಡದ ನಿರೂಪಣೆ ಮಾಡುವ ಮೂಲಕ ಬರೀ ಕನ್ನಡದಲ್ಲಿ ನಿರೂಪಣೆ ನಡೆಸಿಕೊಡುತ್ತಿದ್ದರು. ಹಾಗೆ ಅವರ ಕನ್ನಡ ಕಿವಿಗಳಿಗೆ ಇಂಪು ನೀಡುತ್ತಿದ್ದವು. ಹಾಗೆ ಮಜಾ ಟಾಕಿಸ್ ರಿಯಾಲಿಟಿ ಶೋನಲ್ಲಿಯೂ ಅವರು ವರ ಲಕ್ಷ್ಮಿಯಾಗಿ ಮನೆ ಮನೆಯ ಮಾತಾಗಿದ್ದರು. ಹಾಗೆ ನಿರೂಪಣಾ ಶೈಲಿಯಿಂದಲೇ ಅವರು ಎಲ್ಲರ ಗಮನ ಸೆಳೆದಿದ್ದರು.

ಹಾಗೆ ಅವರು ಬೆಂಗಳೂರು ಮೆಟ್ರೋಗೂ ಕೂಡ ತಮ್ಮ ಧ್ವನಿ ನೀಡಿದ್ದರು. ಇಂದಿಗೂ ಬೆಂಗಳೂರು ಮೆಟ್ರೋದ ಎಲ್ಲಾ ಮಾರ್ಗದಲ್ಲೂ ಕನ್ನಡದಲ್ಲಿ ಅವರ ಧ್ವನಿ ಕೇಳುಬರುತ್ತದೆ. ಆದ್ರೆ ಈಗ ಹೊಸದಾಗಿ ಹಳದಿ ಮಾರ್ಗ ಕೂಡ ಆರಂಭಗೊಂಡಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಆಗಮಿಸಿ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದಾರೆ.
ಹಳದಿ ಮಾರ್ಗದಲ್ಲು ಅಪರ್ಣಾ ಧ್ವನಿ
ಈಗ ನೂತನ ಮಾರ್ಗದಲ್ಲಿ ಸಂಚರಿಸುತ್ತಿರುವ ಮೆಟ್ರೋದಲ್ಲೂ ಕೂಟ ಅಪರ್ಣಾ ಅವರ ಧ್ವನಿ ಕೇಳಿಬರುತ್ತಿದೆ. ಹೌದು ಇದು ಎಐ ತಂತ್ರಜ್ಞಾನದಿಂದ ಮಾಡಲಾದ ಧ್ವನಿಯಲ್ಲ ಬದಲಿಗೆ ಅಪರ್ಣಾ ಅವರ ನೈಜ ಧ್ವನಿಯನ್ನೇ ಈಗ ಹಳದಿ ಮಾರ್ಗಕ್ಕೆ ಬಳಸಲು ಬಿಎಂಆರ್‌ಸಿಎಲ್ ರೆಡಿಯಾಗಿದೆ. ಅವರು ಮೃತಪಟ್ಟ ಬಳಿಕವೂ ಆ ಧ್ವನಿಯಲ್ಲೇ ವಿವರಿಸಲು ಮುಂದಾಗಲಾಗಿದೆ. ಈಗ ಹಳದಿ ಮಾರ್ಗದಲ್ಲೂ ಅವರ ಧ್ವನಿ ಕೇಳಿ ಪ್ರಯಾಣಿಕರು ಕೂಡ ಥ್ರಿಲ್ ಆಗಿದ್ದಾರೆ.
ಕ್ಯಾನ್ಸರ್ ನಡುವೆಯೂ ಧ್ವನಿ ನೀಡಿದ್ದ ಅಪರ್ಣಾ
ಈ ಹಿಂದೆ ಹಸಿರು ಹಾಗೂ ನೇರಳೆ ಮಾರ್ಗದಲ್ಲಿನ ಮೆಟ್ರೋಗೆ ಅಪರ್ಣಾ ಅವರ ಧ್ವನಿ ನೀಡಲಾಗಿತ್ತು. ಈ ಕುರಿತಾಗಿ ಖುದ್ದು ಅಪರ್ಣಾ ಅವರೇ ಸಂತಸ ಹಂಚಿಕೊಂಡಿದ್ದರು. ಹಾಗೆ ಹಳದಿ ಮಾರ್ಗದ ನಿರ್ಮಾಣ ಹಂತದಲ್ಲಿದ್ದಾಗಲೇ ಅಪರ್ಣಾ ಅವರ ಧ್ವನಿ ನೀಡಬೇಕು ಎಂದು ಬಿಎಂಆರ್‌ಸಿಎಲ್ ನಿರ್ಧರಿಸಿತ್ತು. ಹೀಗಾಗಿ ಕ್ಯಾನ್ಸರ್ ನಡುವೆಯೂ ಅಪರ್ಣಾ ಅವರು ಹಳದಿ ಮಾರ್ಗಕ್ಕೆ ಧ್ವನಿ ನೀಡಿದ್ದರು. ಆದ್ರೆ ಇದೇ ಧ್ವನಿ ಬಳಸಬೇಕೆ ಬೇಡವೇ ಎಂಬ ಕುರಿತು ಚರ್ಚೆ ನಡೆದಿತ್ತು. ಆದ್ರೆ ಅಪರ್ಣಾ ಅವರ ಸೇವೆ ನೆನೆಯುವ ಉದ್ದೇಶದಿಂದ ಈಗ ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲೂ ಕೂಡ ಅವರ ಧ್ವನಿ ಕೇಳಿಬರುತ್ತಿದೆ.
ಅಪರ್ಣಾ ಅವರು ಕ್ಯಾನ್ಸರ್ ನಡುವೆಯೇ ಧ್ವನಿ ನೀಡಿದ್ದರು. ಈ ಮಾರ್ಗ ಪ್ರಯಾಣಿಕರಿಗೆ ತೆರೆದುಕೊಳ್ಳುವ ವರ್ಷಕ್ಕೂ ಮೊದಲೇ ಬಿಎಂಆರ್‌ಸಿಎಲ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿತ್ತು. ಸದ್ಯ ಈಗ ಪ್ರಯಾಣಿಕರಿಗೆ ಅಪರ್ಣಾ ಧ್ವನಿ ಕೇಳಿ ಅಚ್ಚರಿಗೊಳಗಾಗಿದ್ದಾರೆ. ಹಾಗೆ ಅವರ ಧ್ವನಿ ಮತ್ತಷ್ಟು ಕಾಲ ಜನರ ನಡುವೆ ಶಾಶ್ವತವಾಗಿ ಉಳಿಯಲಿದೆ. ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್ಗಳಿಗೆ ಅಪರ್ಣಾ ಅವರ ಧ್ವನಿ ಕೇಳಿಬರಲಿದೆ.
ಶ್ವಾಸಕೋಶ ಕ್ಯಾನ್ಸರ್ ಕುರಿತ ಮಾಹಿತಿ!
ಶ್ವಾಸಕೋಶ ಕ್ಯಾನ್ಸರ್ ಈಗ ವಿಶ್ವದೆಲ್ಲೆಡೆ ಹೆಚ್ಚಾಗಿ ಕಾಣಿಸುತ್ತಿರುವ ಕ್ಯಾನ್ಸರ್ ವಾಯು ಮಾಲಿನ್ಯ, ಧೂಮಪಾನ, ಕಲುಶಿತ ಗಾಳಿ ಸೇರಿ ಹಲವು ಕಾರಣಗಳಿಂದ ಉಂಟಾಗಲಿದೆ. ಈ ಕ್ಯಾನ್ಸರ್ 3 ಹಂತಗಳಲ್ಲಿ ಕಾಡಬಹುದು. ಹಾಗೆ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆಯನ್ನೇ ಇಲ್ಲಿಯೂ ಹೇಳಲಾಗುತ್ತದೆ.
ಸರ್ಜರಿ, ಕೀಮೋಥೆರಪಿ, ರೇಡಿಯೋಥೆರಪಿ, ಇಮ್ಯೋನೋಥೆರಪಿ, ಲೇಸರ್ ಥೆರಪಿ, ಎಂಡೋಸ್ಕೋಪಿಕ್ ಸ್ಟಂಟ್ ಪ್ಲೇಸ್‌ಮೆಂಟ್ ಚಿಕಿತ್ಸೆ ನೀಡಲಾಗುತ್ತದೆ.



Click it and Unblock the Notifications